ಈಕೆ ದೇವಾಲಯದಲ್ಲಿ ಏನು ಮಾಡಿದಳು ಗೊತ್ತೇ? ಕೇಳಿದರೆ ಅಚ್ಚರಿ ಪಡುವಿರಿ!

By: Deepu
Subscribe to Boldsky

ಸಾಂಪ್ರದಾಯಿಕ ದೇಶಗಳಲ್ಲಿ ಕೆಲವೊಂದು ವಿಚಾರಗಳನ್ನು ಈಗಲೂ ಒಪ್ಪಿಕೊಳ್ಳುವುದಿಲ್ಲ. ಇದರಲ್ಲಿ ಪ್ರಮುಖವಾಗಿ ನಗ್ನತೆ ಹಾಗೂ ಅದಕ್ಕೆ ಸಂಬಂಧಪಟ್ಟ ವಿಚಾರಗಳು. ಯುರೋಪಿನ ಕೆಲವೊಂದು ದೇಶಗಳಲ್ಲಿ ನಗ್ನತೆ ಬಗ್ಗೆ ಹೆಚ್ಚು ಸಮಸ್ಯೆಯಿಲ್ಲ. ಕಲಾವಿದರು ಇದನ್ನು ಒಂದು ಕಲೆಯೆಂದು ಭಾವಿಸಿದ್ದಾರೆ. ಆದರೆ ಇತರ ಕೆಲವು ದೇಶಗಳಲ್ಲಿ ನಗ್ನತೆ ಬಗ್ಗೆ ಮಾತನಾಡಲು ಹೆದರುವರು. ನಗ್ನತೆ ಪ್ರದರ್ಶಿಸುವ ಹೆಚ್ಚಿನ ಕಲಾವಿದರು ಸಮಸ್ಯೆ ಎದುರಿಸಿರುವುದನ್ನು ನಾವು ನೋಡಿದ್ದೇವೆ.

ಕಲೆ ಅರ್ಥ ಮಾಡಿಕೊಳ್ಳದೆ ಇರುವುದರಿಂದ ಹೀಗೆ ಆಗುವುದಿದೆ. ಬೆಲ್ಜಿಯಂನ ರೂಪದರ್ಶಿ ಮರಿಸಾ ಪೇಪೆನ್ ಮತ್ತು ಆಕೆಯ ಛಾಯಾಗ್ರಾಹಕ ಈಜಿಪ್ಟ್ ನ ದೇವಾಲಯಗಳಲ್ಲಿ ನಗ್ನ ಫೋಟೋ ತೆಗೆಯುತ್ತಿದ್ದ ವೇಳೆ ಸಿಕ್ಕಿಬಿದ್ದು ಜೈಲು ವಾಸ ಅನುಭವಿಸುತ್ತಾ ಇದ್ದಾರೆ. ಮುಕ್ತ ಮನೋಭಾವ ಮತ್ತು ಕಾಡು ಹೃದಯದ ಅಭಿವ್ರಯಕ್ತಿಯೆಂದು ರೂಪದರ್ಶಿ ತನ್ನನ್ನು ವರ್ಣಿಸಿದ್ದಾಳೆ. ಆದರೆ ನಗ್ನ ಫೋಟೋ ತೆಗೆಯುತ್ತಿದ್ದ ಇವರನ್ನು ಭದ್ರತಾ ಸಿಬ್ಬಂದಿ ಹಿಡಿದರು. ಮುಂದೆ ಏನಾಯಿತು ಎಂದು ತಿಳಿಯುವ ಕಾತರ ಕಡಿಮೆ ಮಾಡಲು ಓದುತ್ತಾ ಸಾಗಿ.... 

ಲಂಚ ಕೊಟ್ಟು ಬಾಯಿ ಮುಚ್ಚಿಸಲು ಪ್ರಯತ್ನ!

ಲಂಚ ಕೊಟ್ಟು ಬಾಯಿ ಮುಚ್ಚಿಸಲು ಪ್ರಯತ್ನ!

ಗಿಜಾದ ದೇವಾಲಯಗಳಲ್ಲಿ ಪಹರೆ ಕಾಯುತ್ತಿದ್ದ ಯುವಜನರಿಗೆ ಅವರು ಲಂಚ ನೀಡಲು ಪ್ರಯತ್ನಿಸಿದರು. ಆದರೆ ಅವರ ಪ್ರಸ್ತಾವ ನಿರಾಕರಿಸಿದ ಭದ್ರತಾ ಸಿಬ್ಬಂದಿಗಳು ಜೈಲಿಗೆ ಅಟ್ಟಿದರು. ಪೇಪೆನ್ ನಗ್ನ ಚಿತ್ರಕ್ಕೆ ಫೋಸ್ ನೀಡುತ್ತಿದ್ದ ವೇಳೆ ನಾಲ್ಕು ಮಂದಿ ಭದ್ರತಾ ಸಿಬ್ಬಂದಿ ಇದನ್ನು ನೋಡಿದ್ದರು.

Image Source - Instagram

ನೀಲಿಚಿತ್ರ ತೆಗೆಯುತ್ತಿದ್ದಾರೆಂದು ತಪ್ಪು ಅರ್ಥ ಮಾಡಿಕೊಂಡರು!

ನೀಲಿಚಿತ್ರ ತೆಗೆಯುತ್ತಿದ್ದಾರೆಂದು ತಪ್ಪು ಅರ್ಥ ಮಾಡಿಕೊಂಡರು!

ರೂಪದರ್ಶಿಯು ನಗ್ನವಾಗಿ ಕೆಲವು ಭಂಗಿಗಳಲ್ಲಿ ಫೋಸ್ ನೀಡುತ್ತಿದ್ದ ಕಾರಣದಿಂದ ಭದ್ರತಾ ಸಿಬ್ಬಂದಿ ಇವರು ನೀಲಿ ಚಿತ್ರ ತಯಾರಿಸುತ್ತಿದ್ದಾರೆಂದು ತಪ್ಪಾಗಿ ಅರ್ಥ ಮಾಡಿಕೊಂಡರು. ಅವರು ಕ್ಯಾಮೆರಾದಲ್ಲಿನ ಚಿತ್ರಗಳನ್ನು ಡಿಲೀಟ್ ಮಾಡಿದ ಬಳಿಕ ಭದ್ರತಾ ಸಿಬ್ಬಂದಿ ಕೈಗೆ ಕ್ಯಾಮರಾ ನೀಡಿದರು.

Image courtesy- Instagram

ಒಂದು ರಾತ್ರಿ ಜೈಲಾಯಿತು!

ಒಂದು ರಾತ್ರಿ ಜೈಲಾಯಿತು!

ಒಂದು ರಾತ್ರಿ ಅವರಿಗೆ ಜೈಲು ಶಿಕ್ಷೆ ನೀಡಲಾಯಿತು. ಇದೇ ವೇಳೆ ಅವರು ತಮ್ಮ ಹೇಳಿಕೆ ಕೂಡ ಬದಲಾಯಿಸಬೇಕಾಯಿತು. ಯಾಕೆಂದರೆ ದೇವಸ್ಥಾನದಲ್ಲಿ ನಗ್ನ ಚಿತ್ರ ತೆಗೆಯುತ್ತಿದ್ದರು ಎಂದರೆ ನಿಜವಾಗಿಯೂ ಅವರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಆದರೆ ಅಶ್ಲೀಲ ಬಟ್ಟೆಯಲ್ಲಿ ಫೋಟೋ ತೆಗೆಯುತ್ತಿದ್ದರು ಎಂದು ಹೇಳಲಾಯಿತು.

ಅವರನ್ನು ಬಿಡುಗಡೆ ಮಾಡಲಾಯಿತು

ಅವರನ್ನು ಬಿಡುಗಡೆ ಮಾಡಲಾಯಿತು

ಅವರಿಬ್ಬರು ತಮ್ಮ ದೇಶಕ್ಕೆ ತೆರಳಿದ ಕೂಡಲೇ ಈಜಿಪ್ಟ್ ನ ದೇವಾಲಯಗಳಲ್ಲಿ ತೆಗೆದಿದ್ದ ನಗ್ನ ಚಿತ್ರಗಳನ್ನು ಮರಳಿ ಪಡೆದುಕೊಂಡರು. ಎಲ್ಲಾ ಚಿತ್ರಗಳು ಮರಳಿ ಸಿಕ್ಕಿರುವುದು ಅವರ ಅದೃಷ್ಟ. ಮರಿಸಾ ಪಪೇನ್ ಮತ್ತು ಜೆಸ್ಸೆ ವಾಲ್ಕರ್ ಇದನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ.

Image courtesy- Instagram

English summary

belgian-nude-model-marisa-papen-revealed-she-was-forced-to-spend-in-jail

Nudity is considered to be an art, but this is hardly understood by many, as most of the times, the nude artists run into trouble for being nude and showcasing nudity. A similar incident happened when a Belgian-based model Marisa Papen and her photographer were jailed for clicking nude pictures in Egyptian temples. The model described herself as being a 'free-spirited and wild-hearted expressionist'; and this was a piece of art they were creating when they were caught by the security guards. Check out on what happened...
Subscribe Newsletter