Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಸಾಯುವ ಮೊದಲು ಹೆತ್ತ ತಾಯಿಯ ಬದುಕಿಸಿದ ಪುಟ್ಟ ಬಾಲಕ
ಸಂಬಂಧಗಳೊಂದಿಗೆ ನಾವು ತುಂಬಾ ಭಾವನಾತ್ಮಕವಾಗಿ ಬೆಸೆದುಕೊಂಡು ಬಿಟ್ಟಿರುತ್ತೇವೆ. ನಾವು ತುಂಬಾ ಹತ್ತಿರವಾಗಿರುವವರಿಗೆ ಏನೇ ಆದರೂ ನಮ್ಮಿಂದ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ತುಂಬಾ ಪ್ರೀತಿಯ ವ್ಯಕ್ತಿಯೊಬ್ಬರು ಜೀವನದ ಕೊನೆಯ ಘಟ್ಟದಲ್ಲಿ ಇರುವಂತಹ ಪರಿಸ್ಥಿತಿಯನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಾಗಲ್ಲ. ಯಾಕೆಂದರೆ ಆ ಬಂಧನದ ಬೆಸುಗೆ ಆ ರೀತಿಯಲ್ಲಿರುವುದು.
ಅದೇ ನೀವು ಜೀವನದ ಕೊನೇ ದಿನಗಳನ್ನು ಎನಿಸುತ್ತಿದ್ದರೆ ಆಗ ನೀವು ನಿಮ್ಮ ಪ್ರೀತಿಪಾತ್ರರಿಗೆ ಒಳ್ಳೆಯದಾಗಲಿ ಎಂದೇ ಬಯಸುತ್ತೀರಿ. ಆ ಬಾಲಕನ ಸ್ಥಿತಿ ಕೂಡ ಅದೇ ಆಗಿತ್ತು. ಮೆದುಳಿನ ನಿಷ್ಕ್ರೀಯತೆಯಿಂದ ಜೀವನದ ಕೊನೆಯ ಘಟ್ಟದಲ್ಲಿದ್ದ ಆ ಹುಡುಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಾಯಿಗೆ ಕಿಡ್ನಿ ನೀಡಲು ಇಚ್ಛಿಸಿದ. ಮುಂದಿನದನ್ನು ಓದುವಾಗ ನಿಮ್ಮ ಕಣ್ಣುಗಳು ತೇವವಾಗದೆ ಇರದು...
ಚೆನ್ ಕ್ಸಿಯೊಟಿಯನ್ ಗೆ ಮೆದುಳಿನ ಗಡ್ಡೆ ಕಾಣಿಸಿಕೊಂಡಾಗ ಆತನಿಗೆ ಕೇವಲ ಐದರ ಹರೆಯ ಬಾಲಕನ ಮೆದುಳಿನಲ್ಲಿ ಗಡ್ಡೆ ಕಂಡುಬಂದಾಗ ಆತನಿಗೆ ಕೇವಲ ಐದರ ಹರೆಯ. ವೈದ್ಯರು ಆತ ಚೇತರಿಸಿಕೊಳ್ಳಬಹುದೆಂದು ಹೇಳಿದ್ದರೂ ಬಾಲಕನಿಗೆ ಆ ಅದೃಷ್ಟವಿರಲಿಲ್ಲ. ಗಡ್ಡೆ ಮತ್ತೆ ಕಾಣಿಸಿಕೊಂಡಿತು. ದೇವರು ಕಷ್ಟ ಕೊಟ್ಟವರಿಗೆ ಕೊಡುತ್ತಾನೆ ಎನ್ನುವಂತೆ ಆತನ ತಾಯಿ ಝುಯು ಲೂ(34)ಗೆ ಕಿಡ್ನಿಯ ಸಮಸ್ಯೆ ಕಾಣಿಸಿಕೊಂಡಿತು.....

ಆತ ಹದಿಹರೆಯಕ್ಕೆ ಕಾಲಿಡುವುದಿಲ್ಲವೆಂದು ವೈದ್ಯರು ಹೇಳಿದರು....
ದೇವರು ಕೊಟ್ಟ ಕಷ್ಟಗಳೆಲ್ಲವನ್ನೂ ಸ್ವೀಕರಿಸಿ ಮುನ್ನಡೆದ ತಾಯಿ ಮಗ ಮುಂದಿನ ಎರಡು ವರ್ಷ ಕಾಲ ಎಲ್ಲವನ್ನೂ ದಿಟ್ಟತನದಿಂದ ಎದುರಿಸಿದರು. ಗಡ್ಡೆ ಮೆದುಳಿನ ಸಂಪೂರ್ಣ ಭಾಗಕ್ಕೆ ಹರಡಿದ ಕಾರಣ ಬಾಲಕ ಕಣ್ಣ ದೃಷ್ಟಿಯನ್ನೇ ಕಳಕೊಳ್ಳ ಬೇಕಾಯಿತು. ಬಾಲಕನಿಗೆ ತಾನು ಬದುಕುವುದಿಲ್ಲವೆಂದು ಖಚಿತವಾಗಿತ್ತು. ಅದಕ್ಕೆ ಆತ ತಾಯಿಯ ಜೀವ ಉಳಿಸಲು ಬಯಸಿದ.

ಅವರಿಬ್ಬರಿಗೂ ವೈದ್ಯಕೀಯ ನೆರವು ಬೇಕಾಯಿತು..
ಸಮಯ ಹಾಗೂ ರೋಗವು ತನ್ನ ತೀವ್ರತೆ ಪಡೆಯುತ್ತಿರುವಂತೆ ತಾಯಿ ಮತ್ತು ಮಗನಿಗೆ ಪದೇ ಪದೇ ವೈದ್ಯಕೀಯ ನೆರವು ಬೇಕಾಯಿತು. ತಾಯಿಗೆ ಡಯಾಲಿಸಿಸ್ ಮಾಡಬೇಕಾದರೆ, ಹುಡುಗನಿಗೆ ಸಂಪೂರ್ಣ ಆರೈಕೆ ಬೇಕಿತ್ತು.

ಬಾಲಕನ ಅಜ್ಜಿಯ ಅಭಿಪ್ರಾಯ ಕೇಳಿದರು
ಬಾಲಕನ ಆರೋಗ್ಯ ಸ್ಥಿತಿ ತೀವ್ರ ಹದಗೆಡುತ್ತಿರುವ ಕಾರಣ ವೈದ್ಯರು ಬಾಲಕನ ಅಜ್ಜಿ ಲು ಯುನಾಕ್ಸಿ ಅಭಿಪ್ರಾಯ ಕೇಳಿದರು. ವೈದ್ಯರು ನನ್ನ ಅಭಿಪ್ರಾಯ ಕೇಳಿದರು. ಅದು ಆತನ ಅಜ್ಜಿ ಎನ್ನುವ ಕಾರಣಕ್ಕಾಗಿ ಅಲ್ಲ. ಯಾಕೆಂದರೆ ಈ ವಿಚಾರದ ಸೂಕ್ಷ್ಮತೆಯಿಂದಾಗಿ ಎಂದು ಆಕೆ ಹೇಳಿದಳು.

ವೈದ್ಯರು ಆಕೆಗೆ ಹೇಳಿರುವುದು
ಮೊಮ್ಮಗ ಬದುಕುಳಿಯುವುದಿಲ್ಲ. ಆದರೆ ಆತನ ಕಿಡ್ನಿಗಳನ್ನು ತಾಯಿಗೆ ನೀಡಬಹುದು ಮತ್ತು ಇತರ ಎರಡು ಜೀವಗಳನ್ನು ರಕ್ಷಿಸಬಹುದು ಎಂದು ವೈದ್ಯರು ಹೇಳಿರುವುದಾಗಿ ಆಕೆ ತಿಳಿಸಿದಳು. ಇದರ ಬಗ್ಗೆ ಬಾಲಕನ ತಾಯಿಯೊಂದಿಗೆ ತಾನು ಚರ್ಚೆ ಮಾಡಿದೆ ಮತ್ತು ಆಕೆ ಸ್ಪಷ್ಟವಾಗಿ ಇದಕ್ಕೆ ನಿರಾಕರಿಸಿದಳು. ಇದರ ಬಳಿಕ ಆಕೆ ಈ ಬಗ್ಗೆ ಪ್ರಗತಿ ಕಾಣುವ ಬಗ್ಗೆ ಯೋಚಿಸಲಿಲ್ಲ.

ಪುಟ್ಟ ಹುಡುಗ ಎಲ್ಲಾ ಮಾತುಕತೆ ಕೇಳಿದ. ಮುಂದೆ ಏನಾಯಿತು...
ಈ ವಿಚಾರದ ಬಗ್ಗೆ ಪುಟ್ಟ ಹುಡುಗ ಚೆನ್‌ಗೆ ತಿಳಿಯಿತು ಮತ್ತು ಆತ ತನ್ನ ಕಿಡ್ನಿ ತೆಗೆದು ತಾಯಿಯನ್ನು ರಕ್ಷಿಸಬೇಕೆಂದು ಹೇಳಿದ. ಕೋಶಗಳು ಸರಿಯಾಗಿ ಹೊಂದಾಣಿಕೆಯಾಗುವ ಕಾರಣ ಬಾಲಕ ಸತ್ತ ಕೂಡಲೇ ಆತನನ್ನು ಆಪರೇಷನ್ ಕೊಠಡಿಗೆ ಕೊಂಡುಹೋಗಿ ಅಲ್ಲಿ ಆತನ ಕಿಡ್ನಿಯನ್ನು ತಾಯಿಗೆ ಮತ್ತು ಯಕೃತ್‌ನ್ನು ಬೇರೆ ಇಬ್ಬರಿಗೆ ನೀಡಲಾಗುವುದು ಎಂದು ವೈದ್ಯರು ದೃಢಪಡಿಸಿದರು. ಈ ಮೂಲಕ ಪುಟ್ಟ 7ರ ಹರೆಯದ ಚೆನ್ ಮೂರು ಜೀವಗಳನ್ನು ಉಳಿಸಿದ.

ವೈದ್ಯಕೀಯ ತಂಡ ಬಾಲಕನಿಗಾಗಿ ದೀರ್ಘ ಪ್ರಾರ್ಥಿಸಿತು...
ಯುವ ಚೆನ್ ಗೆ ಗೌರವ ಅರ್ಪಿಸುವ ಸಲುವಾಗಿ ವೈದ್ಯಕೀಯ ತಂಡವು ಆಪರೇಷನ್ ಗೆ ಮೊದಲು ಬಾಲಕನಿಗಾಗಿ ಪ್ರಾರ್ಥನೆ ಸಲ್ಲಿಸಿತು. ಈ ಘಟನೆ ನಡೆದಾಗ ಆಸ್ಪತ್ರೆಯಲ್ಲಿದ್ದವರ ಕಣ್ಣುಗಳು ನೀರಿನಿಂದ ತುಂಬಿದ್ದವು. ಇಂತಹ ಸ್ಫೂರ್ತಿದಾಯಕ ಕಥೆಗಳನ್ನು ಓದಲು ನೀವು ಬಯಸುವಿರಾದರೆ ಕಮೆಂಟ್ ಸೆಕ್ಷನ್ ನಲ್ಲಿ ಅಭಿಪ್ರಾಯ ತಿಳಿಸಿ.



Click it and Unblock the Notifications