For Quick Alerts
ALLOW NOTIFICATIONS  
For Daily Alerts

ಕಾರು ಚಲಾಯಿಸುತ್ತಿರುವಾಗಲೇ ಮಗುವಿಗೆ ಜನ್ಮ ನೀಡಿದಳು!

By Deepu
|

ಗರ್ಭಿಣಿ ಮಹಿಳೆಯರಿಗೆ 9 ತಿಂಗಳು ಪೂರ್ತಿಯಾದ ಬಳಿಕ ಅವರ ಹೆರಿಗೆ ಯಾವಾಗ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಹೆರಿಗೆ ಬಗ್ಗೆ ವೈದ್ಯರು ದಿನಾಂಕ ನೀಡಿದರೂ ಕೆಲವರು ಇದಕ್ಕೆ ಮೊದಲೇ ಮಗುವಿಗೆ ಜನ್ಮ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಬಸ್ಸು, ಕಾರು ಮತ್ತು ರೈಲಿನಲ್ಲಿ ಹೆರಿಗೆಯಾದ ಸುದ್ದಿ ಕೇಳಿದ್ದೇವೆ ಮತ್ತು ಪತ್ರಿಕೆಗಳಲ್ಲಿ ಓದಿದ್ದೇವೆ.

ರಾಲಿನ್ ಸ್ಕರ್ರಿ ಎಂಬಾಕೆ ತನ್ನ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಯಾವುದೇ ರೀತಿಯ ವೈದ್ಯಕೀಯ ನೆರವು ಇಲ್ಲದೆ ಆಕೆ ಮಗುವಿಗೆ ಜನ್ಮ ನೀಡಿರುವಳು. ಈ ಹೆರಿಗೆಯ ಅತ್ಯಂತ ವಿಶೇಷವೆಂದರೆ ಮಗು ಯಾವುದೇ ತೊಂದರೆಯಿಲ್ಲದೆ ಗರ್ಭಕವಚದಲ್ಲಿ ಇರುವುದು. ಆಕೆಯ ಹೆರಿಗೆಯ ಬಗ್ಗೆ ಓದಲು ಬೋಲ್ಡ್ ಸ್ಕೈ ಈ ಲೇಖನ ನಿಮ್ಮ ಮುಂದಿಟ್ಟಿದೆ....

ಆಕೆ ಗರ್ಭಧಾರಣೆಯ 29ನೇ ವಾರದಲ್ಲಿದ್ದಳು

ರಾಲಿನ್ ಸ್ಕರ್ರಿ ಗರ್ಭಧಾರಣೆಯ 29ನೇ ವಾರದಲ್ಲಿದ್ದಾಗಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆಗೆ ತುಂಬಾ ಸಮಯವಿದ್ದರೂ ಆಕೆಗೆ ಹೆರಿಗೆ ನೋವು ಕಾಣಿಸಿದೆ ಮತ್ತು ಮಗು ಹೊರಜಗತ್ತಿಗೆ ಬರಲು ತಯಾರಾಗಿತ್ತು.

ಸ್ನೇಹಿತರ ಮನೆಯಲ್ಲಿ ದೊಡ್ಡ ಮಗುವನ್ನು ಬಿಟ್ಟಳು

ಸ್ನೇಹಿತರ ಮನೆಯಲ್ಲಿ ದೊಡ್ಡ ಮಗುವನ್ನು ಬಿಟ್ಟಳು

ರಾಲಿನ್ ಸ್ಕರ್ರಿ ತನಗೆ ಹೆರಿಗೆ ಬೇನೆ ಕಾಣಿಸಿಕೊಂಡ ತಕ್ಷಣ ದೊಡ್ಡ ಮಗನನ್ನು ಸುಮಾರು ಬೆಳಗ್ಗೆ ಸುಮಾರು 11.22 ಗಂಟೆಗೆ ಸ್ನೇಹಿತರ ಮನೆಯಲ್ಲಿ ಬಿಟ್ಟಳು ಮತ್ತು ಆಸ್ಪತ್ರೆಗೆ ಪ್ರಯಾಣಿಸಿದಳು. ಆಸ್ಪತ್ರೆಗೆ ಪ್ರಯಾಣಿಸುತ್ತಿರುವ ವೇಳೆ ಆಕೆಗೆ ಹೆರಿಗೆ ನೋವು ತೀವ್ರವಾಗಿ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದಳು.

ಆದರೂ ಆಸ್ಪತ್ರೆ ತನಕ ಕಾರು ಚಲಾಯಿಸಿದಳು!

ಆದರೂ ಆಸ್ಪತ್ರೆ ತನಕ ಕಾರು ಚಲಾಯಿಸಿದಳು!

ಮಗುವಿನ ಜನ್ಮ ನೀಡಲು ರಾಲಿನ್ ತನ್ನ ಪ್ಯಾಂಟ್ ತೆಗೆದಳು. ಮಗುವಿನ ತಲೆ ಹೊರಗಡೆ ಬರುತ್ತಿದೆ ಎಂದು ಭಾವಿಸುತ್ತಾ ಇರುವಂತೆ ಮಗು ಹೊರಗೆ ಬಂದಾಗಿತ್ತು. ಮಗು ಗರ್ಭಕವಚದೊಂದಿಗೆ ಹೊರಗೆ ಬಂದಿತ್ತು ಮತ್ತು ಅದಕ್ಕೆ ಯಾವುದೇ ರೀತಿ ಹಾನಿಯಾಗಿರಲಿಲ್ಲ.

ಇನ್ ಸ್ಟಾ ಗ್ರಾಮ್ ಲ್ಲಿ ಆಕೆ ಹೇಳಿದಂತೆ....

ಇನ್ ಸ್ಟಾ ಗ್ರಾಮ್ ಲ್ಲಿ ಆಕೆ ಹೇಳಿದಂತೆ....

ಸುಮಾರು 45 ನಿಮಿಷಗಳ ಕಾಲ ಇದ್ದ ಹೆರಿಗೆ ನೋವು ಹೆಚ್ಚಾದಾಗ ಬೇರೆ ದಾರಿಯಿಲ್ಲದೆ ನಾನು ಮಗುವಿಗೆ ಜನ್ಮ ನೀಡಲು ಪ್ರಯತ್ನಿಸಿದೆ ಎಂದು ಆಕೆ ತನ್ನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾಳೆ.

ಮತ್ತಷ್ಟು....

ಮತ್ತಷ್ಟು....

ಮೊದಲಿಗೆ ಮಗು ಅಳುತ್ತಾ ಇರಲಿಲ್ಲ. ಮಗು ಆರೋಗ್ಯವಾಗಿರಲಿ ಎಂದು ನಾನು ಪ್ರಾರ್ಥಿಸಿದೆ. ಹೆಬ್ಬೆರಳಿನಿಂದ ಮಗುವಿನ ಮುಖವನ್ನು ಉಜ್ಜಿದ ವೇಳೆ ಮಗು ತನ್ನ ಕಾಲು ಹಾಗೂ ಕೈಗಳನ್ನು ಮುಖದ ಕಡೆಗೆ ಎತ್ತಿಕೊಂಡಿತು. ಇದರಿಂದ ಮಗು ಸುರಕ್ಷಿತವಾಗಿದೆ ಎಂದು ತಿಳಿಯಿತು ಎನ್ನುತ್ತಾಳೆ ಆಕೆ. ಇಂತಹ ಕೆಲವೊಂದು ಘಟನೆಗಳಿಂದ ಪವಾಡಗಳು ನಡೆಯುತ್ತದೆ ಎಂದು ನಮಗೆ ಅರ್ಥವಾಗುತ್ತದೆ. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ವಿಭಾಗದಲ್ಲಿ ಬರೆಯಿರಿ.

Image Courtesy

English summary

Beautiful Birth Of A Baby With The Amniotic Sac Intact

When a woman is in her 9th month of pregnancy, there are possibilities of expecting the baby at any point of time and as a would-be mother, one needs to be totally ready for any kind of an emergency. This is what happened in the case of a woman named Raelin Scurry. She delivered the baby in her own car without any assistance. The most beautiful part of this birth is that the baby was still in the amniotic sac, which was completely intact. Check out on what exactly happened in her case...
X
Desktop Bottom Promotion