ಇವಳು 6 ಕೆ.ಜಿ ತೂಕವಿರುವ ಮಗುವಿಗೆ ಜನ್ಮ ನೀಡಿದ ಮಹಾನ್ ತಾಯಿ

By: Divya Pandith
Subscribe to Boldsky

ತಾಯಿಯ ಮಡಿಲಲ್ಲಿ ಮಗುವಿನ ಹುಟ್ಟು ಹಾಗೂ ಅದರ ಆರೈಕೆ ಪ್ರಕೃತಿಯ ಒಂದು ಅದ್ಭುತ ಕೊಡುಗೆ. ಪ್ರಪಂಚಕ್ಕೆ ತನ್ನಂತೆ ಹೋಲುವ ಇನ್ನೊಂದು ಮಗುವನ್ನು ಸೃಷ್ಟಿಸುವ ಸಾಮಥ್ರ್ಯ ಇರುವುದು ಒಂದು ಹೆಣ್ಣಿಗೆ ಎನ್ನುವುದು ಸಹ ಅಷ್ಟೇ ವಿಶೇಷವಾದ್ದು. ಹಾಗಾಗಿ ಪ್ರತಿಯೊಂದು ತಾಯಿಯು ತನ್ನ ಮಡಿಲಲ್ಲಿ ಮಗುವನ್ನು ಹೊತ್ತಿರುವಾಗ ವಿಶೇಷವಾದ ಕಾಳಜಿ ಮತ್ತು ಆರೋಗ್ಯದ ಪಾಲನೆ ಮಾಡಬೇಕು.

ಆಕೆ ಸೇವಿಸುವ ಆಹಾರದ ಗುಣಮಟ್ಟ ಹಾಗೂ ಪ್ರಮಾಣವು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲದೆ ತಾಯಿಯ ಆರೋಗ್ಯದಲ್ಲಾಗುವ ಏರು ಪೇರುಗಳು ಸಹ ಮಗುವಿನ ಮೇಲೆ ಗಣನೀಯ ಪರಿಣಾಮ ಬೀರುವುದು. ಹೌದು, ಇಂತಹ ತೊಂದರೆಯಿಂಲೋ ಅಥವಾ ಪ್ರಕೃತಿಯ ಸೃಷ್ಟಿಯೋ ಗೊತ್ತಿಲ್ಲ. ಇಲ್ಲೊಬ್ಬ ಮಹಿಳೆ 6 ಕೆ.ಜಿ ತೋಕ ಇರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

baby

ಸಾಮಾನ್ಯವಾಗಿ ಹೆರಿಗೆ ನೋವು ಹಾಗೂ ಪ್ರಸವದ ಸಂದರ್ಭ ಎಂದರೆ ತಾಯಿಗೆ ಸಹಿಸಲಾಗದಷ್ಟು ನೋವುಂಟಾಗುತ್ತದೆ. ಅದರಲ್ಲೂ ಮಗು ಸಾಮಾನ್ಯ ಬೆಳವಣಿಗೆಗಿಂತ ದುಪ್ಪಟ್ಟು ಬೆಳವಣಿಗೆ ಹೊಂದಿದೆ ಹಾಗೂ ಅದರ ಪ್ರಸವ ಪ್ರಕೃತಿ ದತ್ತವಾಗಿಯೇ ಆಗುತ್ತದೆ ಎಂದಾದರೆ ಆ ತಾಯಿಗೆ ಅದೆಷ್ಟು ನೋವುಂಟಾಗಿರುತ್ತದೆ ಅಲ್ಲವಾ? ನಿಮಗೂ ಈ ವಿಚಾರ ಒಂದು ಕುತೂಹಲ ಎನಿಸಿದರೆ ಮುಂದಿರುವ ಅದ್ಭುತ ವಿಚಾರದ ಕುರಿತು ಓದಿ...

baby

ಅವಳು ನಾಲ್ಕು ಮಕ್ಕಳ ತಾಯಿ

ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿರುವ ಕ್ರಿಸ್ಸಿ ಕಾರ್ಬಿಟ್ ಎನ್ನುವ ಮಹಿಳೆ ಇದೀಗ 6 ಕೆ.ಜಿ. ತೂಕ ಇರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಈಕೆಗೆ ದೇವರು ಕರುಣಿಸಿದ ಖಷಿಯ ಮೂಟೆಯಂತೆ. ಇವಳ ಹೆರಿಗೆಯ ಸಂದರ್ಭದಲ್ಲಿ ಮಗುವನ್ನು ಎಳೆದು ತೆಗೆಯುವಾಗ ವೈದ್ಯರಿಗೆ ಮತ್ತು ಶುಶ್ರೂಷಕರಿಗೆ ಆಶ್ಚರ್ಯವನ್ನುಂಟು ಮಾಡಿತ್ತಂತೆ.

baby

ವೈದ್ಯರು ವಿಸ್ಮಯಗೊಂಡರು!

ಕ್ರಿಸ್ ಕಾರ್ಬಿಟ್ ಹೇಳುವ ಪ್ರಕಾರ ವೈದ್ಯರು ಮತ್ತು ದಾದಿಯರಿಗೆ ಒಂದು ಆಶ್ಚರ್ಯಕರ ಸಂಗತಿಯಾಗಿತ್ತು. ಅದನ್ನು ನೆನೆಸಿಕೊಂಡರೆ ನಗು ಬರುತ್ತದೆ. ಏಕೆಂದರೆ ಪ್ರಸವದ ಸಮಯದಲ್ಲಿ ಮಗುವನ್ನು ತೆಗೆಯುವಾಗ ವೈದ್ಯರಿಗೆ ಮತ್ತು ದಾದಿಯರಿಗೆ ಅಂಬೆಗಾಲಿಡುವ ಮಗುವಂತೆ ಕಂಡಿತು. ಅದು ಅವರ ಅದ್ಭುತ ಹಾಗೂ ಆಶ್ಚರ್ಯಕರ ಸನ್ನಿವೇಶವನ್ನು ಸೃಷ್ಟಿಸಿತ್ತಂತೆ.

ಗಾತ್ರದಲ್ಲಿ ಇಮ್ಮಡಿ

ಸಾಮಾನ್ಯ ಮಗು 2.5 ರಿಂದ 3.5ರ ತೂಕದಲ್ಲಿರುತ್ತದೆ. ಆದರೆ ಈಕೆಯ ಮಗು 13 ಪೌಂಡ್ ಮತ್ತು 5 ಔನ್ಸ್ ಗಳಷ್ಟಿತ್ತು. ಅಂದರೆ 6.ಕೆ.ಜಿ ತೂಕವನ್ನು ಹೊಂದಿತ್ತು. ಇದು ಸಾಮಾನ್ಯ ಶಿಶುಗಿಂತ 2 ಪಟ್ಟು ಹೆಚ್ಚಿತ್ತು.

pregnant women

ತನ್ನ ಅನುಭವ ಹೀಗೆ ಬಿಚ್ಚಿಟ್ಟಳು...

ಆಕೆ ತನ್ನ ಅನುಭವದ ಬಗ್ಗೆ ಹೀಗೆ ಪ್ರಕಟಿಸಿಕೊಂಡಿದ್ದಳು... ನನ್ನ ಪ್ರಸವದ ನಂತರ ಮಗುವನ್ನು ತಂದು ನನಗೆ ತೋರಿಸುತ್ತಾ, 13 ಪೌಂಡ್ ಇದೆ ಎಂದು ಹೇಳಿದಾಗ ನನಗೆ ಮಗುವನ್ನು ನೋಡಿ, ನನ್ನ ಹೊಟ್ಟೆಯಿಂದ ಅಂಬೆಗಾಲಿಡುವ ಮಗು ಹೊರ ಬಂದಿದೆಯೇ ಎನ್ನುವ ಆಶ್ಚರ್ಯ ಉಂಟಾಗಿತ್ತು.

baby

ಉಡುಪುಗಳ ತೊಂದರೆ

ಇದು ನವಜಾತ ಶಿಶುವಾದರೂ ತೂಕ ಹೆಚ್ಚಿರುವುದರಿಂದ ನವಜಾತ ಶಿಶುವಿಗೆ ತೊಡಿಸುವಂತಹ ಬಟ್ಟೆಗಳನ್ನು ತೊಡಿಸಲು ಸಾಧ್ಯವಾಗುತ್ತಿಲ್ಲ. ಆಕೆಗೆ ಹೊಂದಿಕೆ ಆಗುವ ಬಟ್ಟೆಗಳು ಸಿಗುವುದು ಕಷ್ಟವಾಗಿದೆ. ಆರು ತಿಂಗಳ ಮಗುವಿನ ಉಡುಗೆ ಸರಿಹೊಂದುವಂತಿದೆ. ಈ ಅಪರೂಪದ ಸೃಷ್ಟಿಗೆ ಆಶ್ಚರ್ಯ ವ್ಯಕ್ತ ಪಡಿಸುವುದರೊಂದಿಗೆ ತಾಯಿ ಮತ್ತು ಮಗುವಿನ ಮುಂದಿನ ಜೀವನ ಆರೋಗ್ಯಕರವಾಗಿರಲಿ ಎಂದು ಬಯಸೋಣ...

Image Source

English summary

Baby Who Weighed 6 Kg At The Time Of Birth!

Can you imagine the pain a woman goes through during her labour? To deliver a baby over 3 kg, almost can kill the woman with pain, but have you imagined what a mum goes through when the baby is a little more bigger than expected? Well, this is something that happened to a woman who gave birth to a baby who weighed a whopping 6 kg at the time of her birth!
Subscribe Newsletter