For Quick Alerts
ALLOW NOTIFICATIONS  
For Daily Alerts

  ಪ್ರತಿಯೊಬ್ಬ ಭಾರತೀಯನೂ ತಿಳಿದಿರಲೇಬೇಕಾದ 10 ಸಂಗತಿಗಳು

  By Arshad
  |

  ನಮಗೆಲ್ಲಾ ಇಂದು ಸ್ವತಂತ್ರ ದಿನಾಚರಣೆ ಎಂದರೆ ಒಂದು ರಜಾದಿನವೇ ಹೊರತು ಕಷ್ಟಪಟ್ಟು ಪಡೆದ ಸ್ವಾತಂತ್ರ್ಯದ ಬಗ್ಗೆ ಹೆಚ್ಚಿನ ಕಾಳಜಿಯೇ ಇಲ್ಲ. ಏಕೆಂದರೆ ಇಂದು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪ್ರಮೇಯವೇ ಇಲ್ಲದಾಗಿದ್ದು ನಮ್ಮ ದೇಶಭಕ್ತಿ ಆಗಸ್ಟ್ ತಿಂಗಳಲ್ಲಿ ಭುಗಿಲೇಳುತ್ತದೆ, ಅದೂ ಕೇವಲ ಸಾಮಾಜಿಕ ತಾಣಗಳಲ್ಲಿ ತೋರಿಕೆಗಾಗಿ ಅಥವಾ ನಮ್ಮ ಸುತ್ತಮುತ್ತಲಿನವರು ಆಚರಿಸುತ್ತಿದ್ದು ಅವರಿಗೆ ನಾವು ಕಡಿಮೆ ಆಗಬಾರದೆಂಬ ಕಾರಣಕ್ಕೆ ಅಥವಾ ಅನಿವಾರ್ಯ ಒತ್ತಡಗಳಿಂದಾಗಿಯೇ ಹೊರತು ಮನಃಪೂರ್ವಕವಾಗಿ ಸ್ವಾತಂತ್ರ್ಯವನ್ನು ಆಚರಿಸುವವರು ಅತಿ ಕಡಿಮೆ. 

  ಅಚ್ಚರಿಯ ಕೂಪಕ್ಕೆ ತಳ್ಳುವ ಸಂಗತಿಗಳು! ಹೀಗೂ ಉಂಟೇ?

  ಆಗಸ್ಟ್ ಬರುತ್ತಿದ್ದಂತೆಯೇ ನಮ್ಮ ಸಾಮಾಜಿಕ ತಾಣಗಳೆಲ್ಲಾ ತ್ರಿವರ್ಣದಿಂದ ಮಿಂಚತೊಡಗುತ್ತವೆ. ದೇಶಭಕ್ತಿ ಮೆರೆಯುವ ಯಾವುದೇ ಸಂದೇಶವಾದರೂ ಸರಿ, ಇದನ್ನು ಓದದೇ ಮುಂದಕ್ಕೆ ಫಾರ್ವರ್ಡ್ ಮಾಡಿ ಪುಕ್ಕಟೆಯಾಗಿ ದೇಶಭಕ್ತಿಯ ಪಟ್ಟ ಪಡೆಯುತ್ತೇವೆ. ವಾಸ್ತವವಾಗಿ ಭಾರತದ ಬಗ್ಗೆ ಈ ದೇಶಭಕ್ತಿ ಪ್ರಕಟಿಸುವವರಿಗೆ ಹೆಚ್ಚೇನೂ ಗೊತ್ತೇ ಇಲ್ಲ! ಎಷ್ಟೋ ಜನರಿಗೆ ರಾಷ್ಟ್ರಧ್ವಜವನ್ನು ಸೂರ್ಯಾಸ್ತಕ್ಕೂ ಮುನ್ನ ಕಡ್ಡಾಯವಾಗಿ ಇಳಿಸಬೇಕೆಂದೂ ಗೊತ್ತಿಲ್ಲ.  

  ವಿಶ್ವಕ್ಕೆ ಶಾಕ್ ನೀಡುವ ಭಾರತೀಯ ಸಂಪ್ರದಾಯಗಳು!

  ಭಾರತದ ಬಗ್ಗೆ ಹೆಮ್ಮೆಪಡಬೇಕಾದ ಎಷ್ಟೋ ವಾಸ್ತವಗಳು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತೇ ಇಲ್ಲ! ದಿನಕ್ಕೊಂದು ವಾಸ್ತವಾಂಶವನ್ನು ಅರಿಯುತ್ತಾ ಹೋದರೂ ಎಲ್ಲಾ ವಾಸ್ತವಾಂಶಗಳನ್ನು ಅರಿಯಲು ಹತ್ತು ವರ್ಷಗಳೇ ಬೇಕಾಗಬಹುದು! ಇವುಗಳಲ್ಲಿ ಪ್ರಮುಖವಾದುದನ್ನು ಇಂದು ಸಂಗ್ರಹಿಸಲಾಗಿದ್ದು ಇವುಗಳನ್ನು ಕಡ್ಡಾಯವಾಗಿ ಅರಿತುಕೊಂಡು ನಿಜವಾದ ದೇಶಾಭಿಮಾನವನ್ನು ಮೆರೆಯಬಹುದು....

  ಅಚ್ಚರಿಯ ವಾಸ್ತವಾಂಶ #1

  ಅಚ್ಚರಿಯ ವಾಸ್ತವಾಂಶ #1

  ವಿಶ್ವದಲ್ಲಿಯೇ ಅತಿ ಹೆಚ್ಚು ಜನರು ಒಂದೇ ಕಡೆ ಸೇರುವ ಸ್ಥಳವೆಂದರೆ ಉತ್ತರ ಪ್ರದೇಶದ ಅಲಹಾಬಾದ್. ಕುಂಭಮೇಳ ಎಂಬ ಈ ಮಹಾಮೇಳದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಒಂದೆಡೆ ಸೇರುತ್ತಾರೆ. ಆದರೆ 2013ರಲ್ಲಿ ಸುಮಾರು ಹನ್ನೆರಡು ಕೋಟಿ ಜನರು ಆಗಮಿಸಿರುವುದು ಒಂದು ದಾಖಲೆಯಾಗಿದೆ.

  ಅಚ್ಚರಿಯ ವಾಸ್ತವಾಂಶ #2

  ಅಚ್ಚರಿಯ ವಾಸ್ತವಾಂಶ #2

  ವಿಶ್ವದಲ್ಲಿಯೇ ಅತಿ ಹೆಚ್ಚು ಸಸ್ಯಾಹಾರಿ ವ್ಯಕ್ತಿಗಳಿರುವ ದೇಶ ನಮ್ಮದು. ಇದರಲ್ಲಿ ಹೆಚ್ಚಿನವರು ಧಾರ್ಮಿಕ ಕಟ್ಟುಪಾಡಿಗೆ ಒಳಗಾದರೆ ಉಳಿದವರು ಸ್ವ ಇಚ್ಛೆಯಿಂದ ಸಸ್ಯಾಹಾರವನ್ನು ನೆಚ್ಚಿಕೊಂಡಿದ್ದಾರೆ. ಕಾರಣವೇನೇ ಇರಲಿ, ಸಸ್ಯಾಹಾರಿಗಳ ಸಂಖ್ಯೆಗೆ ಭಾರತೀಯರನ್ನು ಸರಿಗಟ್ಟುವ ದೇಶ ಈ ವಿಶ್ವದಲ್ಲಿಯೇ ಇಲ್ಲ.

  ಅಚ್ಚರಿಯ ವಾಸ್ತವಾಂಶ #3

  ಅಚ್ಚರಿಯ ವಾಸ್ತವಾಂಶ #3

  ಕಬ್ಬಿನ ರಸದಿಂದ ಸಿಹಿಯಾದ ಬೆಲ್ಲವನ್ನು ಬೇರ್ಪಡಿಸುವ ವಿದ್ಯೆಯನ್ನು ವಿಶ್ವದಲ್ಲಿ ಪ್ರಥಮವಾಗಿ ಕಂಡುಕೊಂಡವರು ಭಾರತೀಯರು. ವಿಶ್ವದ ಇತರ ಎಲ್ಲಾ ದೇಶಗಳೂ ಭಾರತದ ಈ ಕ್ರಮವನ್ನೇ ಅನುಸರಿಸಿ ಇಂದಿಗೂ ಸಕ್ಕರೆಯನ್ನು ತಯಾರಿಸುತ್ತಿದ್ದಾರೆ. ನಮ್ಮ ಪೂರ್ವಜರೆಷ್ಟು ಕ್ರಿಯಾತ್ಮಕರಿದ್ದಿರಬಹುದು ಯೋಚಿಸಿ.

  ಅಚ್ಚರಿಯ ವಾಸ್ತವಾಂಶ #4

  ಅಚ್ಚರಿಯ ವಾಸ್ತವಾಂಶ #4

  ಇಂದು ವಿವಿಧ ಬಗೆಯ ಶಾಂಪೂಗಳು ಮಾರುಕಟ್ಟೆಯನ್ನು ಆವರಿರಬಹುದು. ಆದರೆ ವಿಶ್ವದಲ್ಲಿ ಪ್ರಥಮವಾಗಿ ಕೂದಲಿಗೆ ಶಾಂಪೂ ಬಳಸುವುದನ್ನು ಪರಿಚಯಿಸಿದಾಗ ಪಾಶ್ಚಿಮಾತ್ಯ ದೇಶಗಳಿಗೆ ಕೂದಲನ್ನು ತೊಳೆಯುವ ಶಾಂಪೂ ಎಂಬ ವಸ್ತುವಿದ್ದಿದ್ದೇ ಗೊತ್ತಿರಲಿಲ್ಲ. ಇಂದು ನಿಮ್ಮ ಕೂದಲು ರೇಶ್ಮೆಯಂತೆ ನುಣುಪಾಗಿದ್ದರೆ ಇದರ ಶ್ರೇಯ ನಮ್ಮ ಹಿರಿಯರಿಗೆ ಸಲ್ಲಬೇಕು.

  ಅಚ್ಚರಿಯ ವಾಸ್ತವಾಂಶ #5

  ಅಚ್ಚರಿಯ ವಾಸ್ತವಾಂಶ #5

  ವೈಜ್ಞಾನಿಕವಾಗಿ ಬಳಸಬಹುದಾದ ಅತ್ಯಂತ ಸೂಕ್ತ ಭಾಷೆ ಎಂದರೆ ಸಂಸ್ಕೃತ. ಬೇರೆ ಭಾಷೆಯ ಪದಗಳನ್ನು ಇನ್ನೊಂದು ಭಾಷೆಯಲ್ಲಿ ಬರೆಯಲು ಅಥವಾ ಉಚ್ಛರಿಸಲು ಪೂರ್ಣವಾಗಿ ಸಾಧ್ಯವಿಲ್ಲ. ಉದಾರಣೆಗೆ ಇಂಗ್ಲಿಷಿನ GOD ಪದವನ್ನು ಕನ್ನಡದಲ್ಲಿ ಗಾಡ್ ಅಥವಾ ಗೋಡ್ ಎಂದೇ ಬರೆಯಬೇಕೇ ವಿನಃ ಇಂಗ್ಲಿಷ್ ಪದದಂತೆಯೇ ಬರೆಯಲು ಸಾಧ್ಯವಿಲ್ಲ. ಆದರೆ ಇದು ಸಂಸ್ಕೃತದಲ್ಲಿ ಬರೆಯಲೂ (orthography) ಉಚ್ಛರಿಸಲೂ (Phonography) ಸಾಧ್ಯವಿದೆ.

  ಅಚ್ಚರಿಯ ವಾಸ್ತವಾಂಶ #6

  ಅಚ್ಚರಿಯ ವಾಸ್ತವಾಂಶ #6

  ವಿಮಾನವನ್ನು ಕಂಡು ಹಿಡಿದವರು ರೈಟ್ ಸಹೋದರರು ಎಂದು ದಾಖಲೆಯಲ್ಲಿ ಬರೆದಿದೆ. ಆದರೆ ಇದು ಅಪ್ಪಟ ಸುಳ್ಳು. ಏಕೆಂದರೆ ಋಗ್ವೇದದಲ್ಲಿ ವಿವರಿಸಿದ ಪ್ರಕಾರ ಶಿವಕರ್ ಬಾಪೂಜಿ ತಲ್ಪಾಡೆ ಎಂಬುವರು ವಿಮಾನವನ್ನು ತಯಾರಿಸಿ ಎಷ್ಟೋ ಹಿಂದೆಯೇ ಹಾರಿಸಿದ್ದರು. ಈ ಮಾಹಿತಿ ದಾಖಲಾಗಿರಲಿಲ್ಲ ಎಂಬ ಮಾತ್ರಕ್ಕೇ ಮಾಹಿತಿ ದಾಖಲಿಸಿದ ರೈಟ್ ಸಹೋದರರು ಮೊದಲಿಗರಾಗುವುದಿಲ್ಲ.

  ಅಚ್ಚರಿಯ ವಾಸ್ತವಾಂಶ #7

  ಅಚ್ಚರಿಯ ವಾಸ್ತವಾಂಶ #7

  ವಿಶ್ವದ ದಾಖಲೆಗಳನ್ನೆಲ್ಲಾ ಸಂಗ್ರಹಿಸುತ್ತಾ ಹೋಗುವ ಗಿನ್ನಿಸ್ ದಾಖಲೆಯಲ್ಲಿ ಪ್ರತಿ ವರ್ಷ ಹೊಸ ದಾಖಲೆಗಳನ್ನು ದಾಖಲಿಸುವಲ್ಲಿ ಭಾರತ ಮೂರನೇ ಸ್ಥಾನ ಪಡೆದಿದೆ. ಮೊದಲೆರಡು ಸ್ಥಾನಗಳನ್ನು ಅಮೇರಿಕಾ ಹಾಗೂ ಬ್ರಿಟನ್ ದೇಶಗಳು ಪಡೆದಿವೆ.

  ಅಚ್ಚರಿಯ ವಾಸ್ತವಾಂಶ #8

  ಅಚ್ಚರಿಯ ವಾಸ್ತವಾಂಶ #8

  ನಮ್ಮ ದೇಶದಲ್ಲಿ ನಿಜವಾಗಿಯೂ ತೆರಿಗೆ ಪಾವತಿಸುವವರು ಕೇವಲ 3% ಮಾತ್ರ! ಇದು ಅಚ್ಚರಿಯ ಮಾಹಿತಿಯಾದರೂ ಕರಾಳ ವಾಸ್ತವವೂ ಆಗಿದೆ. ಏಕೆಂದರೆ ಭಾರತದಲ್ಲಿ ಕೃಷಿಗೆ ತೆರಿಗೆ ಇಲ್ಲ. ಭಾರತದ ಬಹುತೇಕ ವ್ಯಕ್ತಿಗಳು ಕೃಷಿಯನ್ನು ಅವಲಂಬಿಸಿದೆ. ಉಳಿದವರು ಚಿಕ್ಕ ಚಿಕ್ಕ ಊರುಗಳಲ್ಲಿ ಸಾಧಾರಣ ಕೆಲಸವನ್ನು ಮಾಡುತ್ತಾ ದಿನಗೂಲಿಯನ್ನು ನಗದು ರೂಪದಲ್ಲಿ ಪಡೆಯುತ್ತಿದ್ದು ಇವರಿಂದ ತೆರಿಗೆ ಪಡೆಯುವುದೂ ಸುಲಭಸಾಧ್ಯವಲ್ಲ.

  ಅಚ್ಚರಿಯ ವಾಸ್ತವಾಂಶ #9

  ಅಚ್ಚರಿಯ ವಾಸ್ತವಾಂಶ #9

  ಭಾರತದಲ್ಲಿ ಕೇವಲ ಆನೆಗಳಿಗಾಗಿಯೇ ಒಂದು ಸೌಂದರ್ಯ ಮಳಿಗೆ ಅಥವಾ ಸ್ಪಾ ಇದೆ. ಇಲ್ಲಿ ಅನೆಗಳಿಗೆ ವಿಶೇಷವಾಗ ಆರೈಕೆ ಮತ್ತು ಸೇವೆಯನ್ನು ನೀಡಲಾಗುತ್ತದೆ. "ಪುನ್ನತ್ತೂರು ಕೊಟ್ಟ ಎಲಿಫ್ಯಾಂಟ್ ಯಾರ್ಡ್ ರೆಜುವಿನೇಶನ್ ಸೆಂಟರ್" ಎಂಬ ಹೆಸರಿನ ಈ ಸ್ಪಾ ಕೇರಳದಲ್ಲಿದೆ.

  ಅಚ್ಚರಿಯ ವಾಸ್ತವಾಂಶ #10

  ಅಚ್ಚರಿಯ ವಾಸ್ತವಾಂಶ #10

  ವಿಶ್ವದ ಅತ್ಯಂತ ಹೆಚ್ಚಿನ ರೈಲ್ವೇ ಮಾರ್ಗವನ್ನು ಹೊಂದಿರುವ ದೇಶ ಭಾರತವಾಗಿದ್ದು ಪ್ರತಿದಿನ 2.3 ಕೋಟಿ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಅಂದರೆ ಸರಿಸುಮಾರು ಆಸ್ಟ್ರೇಲಿಯಾದ ಜನಸಂಖ್ಯೆಗೆ ಹತ್ತು ಲಕ್ಷ ಕಡಿಮೆ. ಈ ತರಹದ ಅಚ್ಚರಿಯ ಮಾಹಿತಿಗಳು ನಿಮ್ಮಲ್ಲೂ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

  English summary

  awesome-india-facts-you-shouldnt-miss

  All throughout the year, we Indians do not realise the importance of living in a free nation. It is only during the month of August, all the 'desh bhakti' arises! Until then, we are usually busy posting stuff online and sharing unwanted data on our social networks.Since the feeds on our social sites are filled with patriotic things that we do not think twice before sharing, we're here to make you realise that there is a lot to know about our own nation and August is not the only month in which you have to share these details to make people acknowledge the beauty of our nation!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more