ಸುಖ, ನೆಮ್ಮದಿ, ಯಶಸ್ಸು ನಿಮ್ಮದಾಗಬೇಕೇ? ಈ ತಪ್ಪುಗಳನ್ನು ಮಾಡದಿರಿ!

By Arshad
Subscribe to Boldsky

ಕೆಲವರು ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಸುಖ ಪಡೆಯಲು ಅಸಮರ್ಥರಾಗುತ್ತಾರೆ. ಕೆಲವರು ಪಡುವ ಕಷ್ಟಕ್ಕೆ ತಕ್ಕ ಸುಖವನ್ನು ಹೊಂದುತ್ತಾ ಬರುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ನಮ್ಮ ಕೆಲವು ಅಭ್ಯಾಸಗಳು ಇದಕ್ಕೆ ನೇರವಾಗಿ ಕಾರಣವಾಗುತ್ತವೆ. ಕೆಲವು ಅಭ್ಯಾಸಗಳು ದುಷ್ಟಶಕ್ತಿಯನ್ನು ಹತ್ತಿರ ಮಾಡುವ ಮೂಲಕ ಜೀವನದ ಗತಿಯಲ್ಲಿ ಅಡ್ಡಿಯುಂಟುಮಾಡುತ್ತವೆ.

ಜ್ಯೋತಿಷಿಗಳೂ ಈ ವಿಷಯವನ್ನು ಅನುಮೋದಿಸಿ ಈ ಅಭ್ಯಾಸಗಳ ಮೂಲಕ ಗ್ರಹಗತಿಗಳ ದುಷ್ಪರಿಣಾಮಗಳಿಗೆ ತುತ್ತಾಗಲು ಕಾರಣವಾಗುತ್ತವೆ ಎಂದು ತಿಳಿಸುತ್ತಾರೆ. ಆದ್ದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ ನೀವು ಕೆಲವೊಂದು ಬದಲಾವಣೆಗಳನ್ನು ಅನುಸರಿಸಬೇಕು ಹಾಗೂ ಮನೆಯ ಸದಸ್ಯರೆಲ್ಲರೂ ಇದನ್ನು ಅನುಸರಿಸುವಂತೆ ಮಾಡುವ ಮೂಲಕ ಮನೆಯಲ್ಲಿ ಶಾಂತಿ ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯಬಹುದು. ಬನ್ನಿ, ಈ ಕ್ರಮಗಳು ಯಾವುವು ಎಂಬುದನ್ನು ನೋಡೋಣ... 

ಸ್ನಾನದ ಬಳಿಕ ಬಾತ್‌ರೂಮ್ ಅಶುಚಿಯಾಗಿಯೇ ಬಿಡುವುದು

ಸ್ನಾನದ ಬಳಿಕ ಬಾತ್‌ರೂಮ್ ಅಶುಚಿಯಾಗಿಯೇ ಬಿಡುವುದು

ಯಾವ ಸ್ಥಾನದಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆಯೋ ಆ ಸ್ಥಳದಲ್ಲಿ ಚಂದ್ರ ಪೋಷಕನಾಗಿರುತ್ತಾನೆ. ಸ್ನಾನಗೃಹದಲ್ಲಿ ಅಗತ್ಯಕ್ಕೂ ಹೆಚ್ಚು ನೀರನ್ನು ಬಳಸುವುದು, ನಲ್ಲಿಯ ನೀರನ್ನು ವ್ಯರ್ಥವಾಗಿ ಹೋಗಬಿಡುವುದು, ಸ್ನಾನಗೃಹದಲ್ಲಿ ನಲ್ಲಿ ಅಥವಾ ನೀರು ಹಾಯುವ ಯಾವುದೇ ಪೈಪಿನಲ್ಲಿ ನೀರು ತೊಟ್ಟಿಕ್ಕುವುದು, ನೆಲ ಸದಾ ತೇವವಾಗಿರುವುದು ಮೊದಲಾದವೆಲ್ಲಾ ದುರಾದೃಷ್ಟದ ಸಂಕೇತವಾಗಿದೆ. ಈ ಸ್ಥಳದಲ್ಲಿ ಚಂದ್ರನ ಪ್ರಭಾವ ಕನಿಷ್ಠವಾಗಿರುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿದರೆ, ಯಶಸ್ಸು ನಿಮ್ಮ ಹಿಂದೆಯೇ ಬರಲಿದೆ!

ಸ್ನಾನದ ಬಳಿಕ ಬಾತ್‌ರೂಮ್ ಅಶುಚಿಯಾಗಿಯೇ ಬಿಡುವುದು

ಸ್ನಾನದ ಬಳಿಕ ಬಾತ್‌ರೂಮ್ ಅಶುಚಿಯಾಗಿಯೇ ಬಿಡುವುದು

ಅಂದರೆ ಮನಸ್ಸು ಚಂಚಲವಾಗುತ್ತದೆ. ಇದರಿಂದ ನಿಮ್ಮ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಕುಂದುತ್ತದೆ ಹಾಗೂ ನಿಮ್ಮ ಮನೋಭಾವ ಪದೇಪದೇ ಬದಲಾಗುತ್ತಾ ಇರುತ್ತದೆ. ಆದ್ದರಿಂದ ಪ್ರತಿ ಸ್ನಾನದ ಬಳಿಕ ನಿಮ್ಮ ಸ್ನಾನಗೃಹವನ್ನು ಸ್ವಚ್ಛವಾಗಿರಿಸುವುದು, ನೀರು ಪೋಲಾಗದಂತೆ ನೋಡಿಕೊಳ್ಳುವುದು, ಆಗಾಗ ಇಡಿಯ ಸ್ನಾನಗೃಹವನ್ನು ಪೂರ್ಣವಾಗಿ ತೊಳೆದು ಕ್ರಿಮಿಗಳಿಲ್ಲದಂತೆ ಸ್ವಚ್ಛಗೊಳಿಸುವುದು ಪ್ರಥಮ ಆದ್ಯತೆಯಾಗಬೇಕು.

ಏರು ಧ್ವನಿಯಲ್ಲಿ ಮಾತನಾಡಬೇಡಿ

ಏರು ಧ್ವನಿಯಲ್ಲಿ ಮಾತನಾಡಬೇಡಿ

ಎಲ್ಲಿಯವರೆಗೆ ದೊಡ್ಡ ಗುಂಪಿನ ಜನತೆಯನ್ನು ಉದ್ದೇಶಿಸಿ ಮಾತನಾಡಲು ದೊಡ್ಡದನಿಯ ಅಗತ್ಯವಿಲ್ಲವೋ, ಅಲ್ಲಿಯವರೆಗೆ ಎದುರಿನವರಿಗೆ ಕೇಳುವಷ್ಟು ದನಿಯಲ್ಲಿ ಮಾತ್ರವೇ ಮಾತನಾಡಬೇಕು. ಶಾಸ್ತ್ರಗಳ ಪ್ರಕಾರ ಸೌಮ್ಯವಾದ ಹಾಗೂ ಮೃದುವಾದ ಮಾತುಗಳನ್ನು ಆಡುವ ಮೂಲಕ ಸರಸ್ವತಿ ದೇವಿಯ ಕೃಪೆಗೆ ಪಾತ್ರರಾಗಬಹುದು. ಶಾಸ್ತ್ರಗಳ ಪ್ರಕಾರ ಇನ್ನೊಬ್ಬರ ಬಗ್ಗೆ ಒಳಗೊಳಗೇ ಆಡುವ ಗುಸುಗುಸು ಅಥವಾ ಗಾಸಿಪ್ ಸಹಾ ಕೆಟ್ಟ ಚಾಳಿಯಾಗಿದೆ.

ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿಡಿ

ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿಡಿ

ಶಾಸ್ತ್ರಗಳ ಪ್ರಕಾರ ದೇವಿ ಅನ್ನಪೂರ್ಣೆ ಕೇವಲ ಸ್ವಚ್ಛ ಅಡುಗೆಮನೆಯಲ್ಲಿ ಮಾತ್ರವೇ ನೆಲೆಸುತ್ತಾಳೆ. ಇದರಿಂದ ಈ ಮನೆಯಲ್ಲಿ ಎಂದಿಗೂ ಆಹಾರದ ಕೊರತೆಯುಂಟಾಗದು. ಅಲ್ಲದೇ, ಜ್ಯೋತಿಷ್ಯಾಸ್ತ್ರದ ಪ್ರಕಾರ ಶುಚಿಯಾಗಿಲ್ಲದ ಅಡುಗೆ ಕೋಣೆ ಮಂಗಳ ದೋಷವನ್ನು ಸೃಷ್ಟಿಸುತ್ತದೆ. ಆದ್ದರಿಂದ ಪ್ರತಿದಿನವೂ, ವಿಶೇಷವಾಗಿ ರಾತ್ರಿಯ ಊಟದ ಬಳಿಕ ಎಲ್ಲಾ ತಟ್ಟೆಗಳನ್ನು ತೊಳೆದಿಡುವುದು, ತೆರೆದ, ಬಳಸಿದ ಪಾತ್ರೆ, ಡಬ್ಬಿಗಳನ್ನು ಮುಚ್ಚಿ ಸೂಕ್ತಸ್ಥಳದಲ್ಲಿಟ್ಟು ಬಾಗಿಲಿದ್ದರೆ ಮುಚ್ಚುವುದು, ಆಹಾರವಸ್ತುಗಳ ಡಬ್ಬಿ, ಚೀಲಗಳನ್ನು ಕೀಟಗಳು ನುಸುಳದಂತೆ ಭದ್ರಪಡಿಸುವುದು ಅಗತ್ಯವಾಗಿದೆ.

ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿಡಿ

ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿಡಿ

ಒಂದು ವೇಳೆ ಪಾತ್ರೆಗಳು ತೆರೆದ ಸ್ಥಳದಲ್ಲಿದ್ದು ಧೂಳು ಕುಳಿತಿದ್ದರೆ, ಇವನ್ನು ಇಂದಿನ ದಿನ ಬಳಸದೇ ಇದ್ದರೂ ಇದರ ಮೇಲಿನ ಧೂಳು ಹೋಗುವಂತೆ ಕೇವಲ ನಲ್ಲಿಯ ಕೆಳಗೆ ಹಿಡಿದು ಧೂಳು ನಿವಾರಿಸಿ ಮತ್ತೆ ಸ್ವಸ್ಥಾನದಲ್ಲಿರಿಸಬೇಕು. ಎಂದಿಗೂ ಸ್ವಚ್ಛಗೊಳಿಸುವ ಕೆಲಸವನ್ನು ನಾಳೆಗೆ ಬಾಕಿ ಇರಿಸಬಾರದು.

ತಡರಾತ್ರಿಯವರೆಗೆ ಎಚ್ಚರಿರಬೇಡಿ

ತಡರಾತ್ರಿಯವರೆಗೆ ಎಚ್ಚರಿರಬೇಡಿ

ಇಂದಿನ ದಿನಗಳಲ್ಲಿ ತಡರಾತ್ರಿಯವರೆಗೆ ಮನರಂಜನೆಗಾಗಿ ಸಮಯವನ್ನು ವ್ಯಯಿಸಿ ತಡರಾತ್ರಿ ಮಲಗುವುದು ಸಾಮಾನ್ಯವಾಗಿಬಿಟ್ಟಿದೆ.

ತಡರಾತ್ರಿಯವರೆಗೆ ಎಚ್ಚರಿರಬೇಡಿ

ತಡರಾತ್ರಿಯವರೆಗೆ ಎಚ್ಚರಿರಬೇಡಿ

ಎಲ್ಲಿಯವರೆಗೆ ವೈದ್ಯಕೀಯ ಅಥವಾ ಅನಿವಾರ್ಯವಾದ ಕಾರಣಗಳಿಲ್ಲದೇ ಇದ್ದರೆ ರಾತ್ರಿ ಮಲಗುವುದನ್ನು ತಡಮಾಡಿದಷ್ಟೂ ಹೆಚ್ಚು ಚಂದ್ರನ ದೋಷ ನಿಮ್ಮ ಜಾತಕವನ್ನು ಬಾಧಿಸುತ್ತದೆ. ಇದರಿಂದ ಮಾನಸಿಕ ತೊಂದರೆಗಳು ಹಾಗೂ ಸರಿಯಾದ ನಿರ್ಧಾರಕ್ಕೆ ಬರಲಾರದೇ ಇರುವ ಸಂದಿಗ್ಧತೆ ಎದುರಾಗುತ್ತದೆ.

ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

ವಿಷಾದಭಾವನೆಯ ಚಿತ್ರಗಳನ್ನು ತೂಗುಹಾಕುವುದು

ವಿಷಾದಭಾವನೆಯ ಚಿತ್ರಗಳನ್ನು ತೂಗುಹಾಕುವುದು

ನಿಮ್ಮ ಮನೆಯಲ್ಲಿ ವಿಷಾದವನ್ನು ಸೂಸುವ ಯಾವುದೇ ಚಿತ್ರವನ್ನು ತೂಗುಹಾಕಬೇಡಿ. ಯುದ್ದ, ಹಿಂಸೆ, ಅಳುತ್ತಿರುವ ಮಗು ಅಥವಾ ಹೃದಯವನ್ನು ಕಲಕುವ ಯಾವುದೇ ದೃಶ್ಯವನ್ನು ಪ್ರದರ್ಶಿಸಬೇಡಿ. ಒಂದು ವೇಳೆ ಇದ್ದರೆ ತಕ್ಷಣ ನಿವಾರಿಸಿ. ವಾಸ್ತುವಿನ ಪ್ರಕಾರ ಇದು ಆ ಕೋಣೆಗೆ ದೋಷವನ್ನುಂಟುಮಾಡುತ್ತದೆ. ಈ ಚಿತ್ರಗಳೇನಿದ್ದರೂ ವಸ್ತುಸಂಗ್ರಹಾಲಯಕ್ಕೆ ಮೀಸಲೇ ಹೊರತು ಮನೆಗಲ್ಲ.

'ಯಶಸ್ಸು, ಸಮೃದ್ಧಿ, ಏಳಿಗೆಗಾಗಿ'-ಈ ಸಿಂಪಲ್ ಟಿಪ್ಸ್ ಅನುಸರಿಸಿ

ತಟ್ಟೆಯಲ್ಲಿ ಆಹಾರ ಉಳಿಸಬೇಡಿ

ತಟ್ಟೆಯಲ್ಲಿ ಆಹಾರ ಉಳಿಸಬೇಡಿ

ಮೊದಲನೆಯದಾಗಿ ಎಲ್ಲರೂ ತಿಳಿದುಕೊಳ್ಳಬೇಕಾದುದೆಂದರೆ ಆಹಾರವನ್ನೆಂದೂ ಪೋಲು ಮಾಡಬಾರದು. ನಿಮಗೆ ಎಷ್ಟು ಅಗತ್ಯವೆನಿಸುತ್ತದೆಯೋ ಅದಕ್ಕಿಂತ ಕೊಂಚ ಕಡಿಮೆಯೇ ಬಡಿಸಿ.

ತಟ್ಟೆಯಲ್ಲಿ ಆಹಾರ ಉಳಿಸಬೇಡಿ

ತಟ್ಟೆಯಲ್ಲಿ ಆಹಾರ ಉಳಿಸಬೇಡಿ

ಒಂದು ವೇಳೆ ಅನಿವಾರ್ಯ ಕಾರಣಗಳಿಂದ ನಿಮ್ಮ ತಟ್ಟೆಯಲ್ಲಿ ಕೊಂಚ ಆಹಾರ ಉಳಿದೇ ಹೋದರೆ ಮತ್ತು ಇದನ್ನು ತಿನ್ನಲು ಸಾಧ್ಯವಾಗದೇ ಇದ್ದರೆ ಮಾತ್ರ ಈ ಆಹಾರವನ್ನು ದನಕರುಗಳಿಗೆ ನೀಡಬಹುದು ಅಥವಾ ಹಸಿ ಕಸದ ಬುಟ್ಟಿಗೆ ಸೇರಿಸಬಹುದು. ಆದರೆ ತಟ್ಟೆಯಲ್ಲಿ ಮಾತ್ರ ಉಳಿಸಕೂಡದು. ಜ್ಯೋತಿಶ್ಯಾಸ್ತ್ರದ ಪ್ರಕಾರ ಇದರಿಂದ ಶನಿಯ ಪ್ರಭಾವದಿಂದ ರಕ್ಷಣೆ ಪಡೆಯಬಹುದು.

For Quick Alerts
ALLOW NOTIFICATIONS
For Daily Alerts

    English summary

    Avoid this Common Lifestyle Mistakes If You Want To Succeed In Life

    There are certain habits according to Vastu that always attract and nurtures bad cosmic energy, thus creating obstacles in a person's life. Even astrologers agree that these things lead to malefic planetary influence. So if you wish to succeed in life, there is one mantra you should always follow and encourage others in your home to do the same.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more