For Quick Alerts
ALLOW NOTIFICATIONS  
For Daily Alerts

ಮುಂಜಾನೆ ಇದನ್ನು ಕೇಳಿ ನಿದ್ದೆಯಿಂದ ಎದ್ದರೆ ಅಂದು ನಿಮಗೆ ಅದೃಷ್ಟದ ದಿನ!

By Manu
|

ನಮ್ಮ ಭವಿಷ್ಯ ಮತ್ತು ಅದೃಷ್ಟಗಳು ನಾವು ಮಾಡುವ ಕೆಲಸ-ಕಾರ್ಯ, ನೀತಿ-ನಿಯಮ, ಸತ್ಯ-ಸುಳ್ಳುಗಳ ಮೇಲೆ ನಿಂತಿರುತ್ತದೆ. ನಮಗೆ ಒಳ್ಳೆಯದಾಗಬೇಕು, ಅದೃಷ್ಟಗಳು ನಮ್ಮ ಪಾಲಾಗಬೇಕು, ಬಯಸಿದ ಬಯಕೆ ಈಡೇರಬೇಕು, ಸದಾ ಖುಷಿಯಲ್ಲಿರಬೇಕು ಎಂದು ಮನಸ್ಸು ಬಯಸುವುದು ಸಾಮಾನ್ಯ. ಇಂತಹ ಬಯಕೆಗಳು ಈಡೇರಬೇಕಾದರೆ ಕೆಲವು ಕಾರ್ಯಗಳನ್ನು ಮಾಡಬೇಕು. ಆಗಲೇ ನಮ್ಮ ಬದುಕು ಸಾರ್ಥಕ ಎನಿಸಿಕೊಳ್ಳುತ್ತದೆ.

ದೈನಂದಿನ ಕಾರ್ಯ ಶುಭಕರ ರೀತಿಯಲ್ಲಿ ಆರಂಭವಾಗಿ ಮುಕ್ತಾಯಗೊಳ್ಳಬೇಕು ಎಂಬುದಾದರೆ, ಮಲಗುವ ಮುನ್ನ ಹಾಗೂ ಬೆಳಗ್ಗೆ ಏಳುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. ವಾಸ್ತು ಪ್ರಕಾರವಾಗಿ ಇದನ್ನು ಅನುಸರಿಸಿದರೆ ಧನಾತ್ಮಕ ಶಕ್ತಿಯು ನಮ್ಮನ್ನು ಆಕರ್ಷಿಸುವ ಮೂಲಕ ಅದೃಷ್ಟವನ್ನು ಹೆಚ್ಚಿಸುತ್ತದೆ. ಕೆಲವು ದಿನದ ಹಿಂದೆ ರಾತ್ರಿ ಮಲಗುವಾಗ ಅನುಸರಿಸಬೇಕಾದ ನಿಯಮಗಳ ಪರಿಚಯ ಮಾಡಿಕೊಂಡಿದ್ದೇವೆ. ಇದೀಗ ಮುಂಜಾನೆ ಏಳುವ ಪರಿ ಹಾಗೂ ಅದೃಷ್ಟದ ಬಗ್ಗೆ ತಿಳಿಯೋಣ...

ಈ ಸಂಗತಿಗಳನ್ನು ನೆನಪಿಡಿ....

ಈ ಸಂಗತಿಗಳನ್ನು ನೆನಪಿಡಿ....

ಋಣಾತ್ಮಕ ಫೋಟೋ ಅಥವಾ ದೃಶ್ಯಾವಳಿಗಳನ್ನು ನೋಡಬಾರದು. ಯುದ್ಧದ ಚಿತ್ರ ಅಥವಾ ಮಹಾಭಾರತದ ಯುದ್ಧದ ಸನ್ನಿವೇಶ ಅಥವಾ ಇನ್ಯಾವುದೇ ಬಗೆಯ ಚಿತ್ರಗಳಾಗಿರಲಿ, ಅವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಅಷ್ಟೇ ಅಲ್ಲದೆ ತಮ್ಮ ಬೇಟಿಗೆ ಕಾಯುತ್ತಿರುವಂತಹ ಚಿತ್ರವಿರುವ ಮತ್ತು ಬೇಟೆ ಸಿಕ್ಕಿದ ಬಳಿಕ ಅದನ್ನು ಆನಂದಿಸುವಂತಹ ವರ್ಣಚಿತ್ರಗಳನ್ನು ಕಡೆಗಣಿಸಿ. ಇದು ಸಂಬಂಧದಲ್ಲಿ ಹಿಂಸೆಯನ್ನು ಉಂಟು ಮಾಡುವುದು. ಇಂತಹ ಯಾವುದೇ ವರ್ಣಚಿತ್ರಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಈಗಲೇ ತೆಗೆದುಹಾಕಿ.

ಬೆಡ್‌ರೂಮ್‌ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ!

ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು

ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಾರದು. ಹಾಗೊಮ್ಮೆ ಕನ್ನಡಿ ಎದ್ದಾಗ ಮುಖಕ್ಕೆ ಕಾಣುವಂತೆಯೇ ಇದ್ದರೆ ಅದಕ್ಕೆ ಒಂದು ಬಟ್ಟೆಯ ಕವರ್ ಮಾಡಿ ಮುಚ್ಚಿಡಿ.

ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?

ದೇವಸ್ಥಾನದ ಘಂಟೆಯ ಶಬ್ದ

ದೇವಸ್ಥಾನದ ಘಂಟೆಯ ಶಬ್ದ

ಮುಂಜಾನೆ ಏಳುವಾಗ ದೇವಸ್ಥಾನದ ಘಂಟೆಯ ಶಬ್ದವನ್ನು ಕೇಳಿ ಎಚ್ಚಗೊಳ್ಳುವುದು ಒಳ್ಳೆಯದು. ಘಂಟೆಯನ್ನು ಮಂಗಳಕರ ಎಂದು ಭಾವಿಸಲಾಗುತ್ತದೆ.

ನವಿಲಿನ ಕೂಗು

ನವಿಲಿನ ಕೂಗು

ನವಿಲಿನ ಕೂಗಿನಿಂದ ಎಚ್ಚರವಾದರೆ ಅದನ್ನು ಅದೃಷ್ಟ ಎಂದು ಪರಿಗಣಿಸಲಾಗುವುದು.

ಶಂಖದ ಧ್ವನಿ

ಶಂಖದ ಧ್ವನಿ

ಶಂಖದ ಧ್ವನಿ ಶುಭಕರವಾದದ್ದು. ಇದರಲ್ಲಿ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ ಎನ್ನುವ ನಂಬಿಕೆಯಿದೆ. ಇದರ ಶಬ್ಧದಿಂದ ಎಚ್ಚರವಾದರೆ ಅದು ಅದೃಷ್ಟದ ಸೂಚನೆ ಎನ್ನಲಾಗುವುದು.

ಹಾಲು ಕುದಿಯುವುದನ್ನು ನೋಡಿದರೆ

ಹಾಲು ಕುದಿಯುವುದನ್ನು ನೋಡಿದರೆ

ಎದ್ದ ತಕ್ಷಣ ಹಾಲು ಕುದಿಯುವುದನ್ನು ನೋಡಿದರೆ ಅಂದಿನ ದಿನ ಶುಭಕರವಾಗಿ ನಡೆಯುವುದು ಎನ್ನುವ ನಂಬಿಕೆ ಇದೆ.

English summary

Avoid Doing These Things Right After Waking Up In The Morning

Two most basic things that everyone should know is- how to settle in the bed for a good night's sleep and what to do just after waking up to have an absolutely faboulous morning. Actually, the tips described here come from Vastu Shastra, and accordingly doing these things boosts your luck by attracting positive energy towards you...
Story first published: Saturday, July 1, 2017, 19:22 [IST]
X
Desktop Bottom Promotion