ಈ ಬಾಲಕಿ ಕಣ್ಣು ಮುಚ್ಚಿಕೊಂಡೇ ಓದಬಲ್ಲಳು - ಈಕೆಯಲ್ಲಿದೆ ಮೂರನೆಯ ಕಣ್ಣು!

By: Arshad
Subscribe to Boldsky

ಚಿಕ್ಕಂದಿನಲ್ಲಿ ಓದಿದ್ದ ಕಾಲ್ಪನಿಕ ಕಥೆಗಳಲ್ಲಿ ಬರುವ ಕಥಾನಾಯಕನಿಗಿರುವ ಅದ್ಭುತ ಶಕ್ತಿಗಳಲ್ಲಿ ಕೆಲವಾದರೂ ನಮಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕನಿಷ್ಟ ಒಂದು ಬಾರಿಯಾದರೂ ನಮಗೆಲ್ಲಾ ಅನ್ನಿಸಿಯೇ ಇರುತ್ತದೆ. ಇಂದು ನಮ್ಮೊಡನಿರುವ ಗಾರುಡಿಗರು ಅಥವಾ ಮ್ಯಾಜಿಶಿಯನ್ನರು ತಮ್ಮ ಕೈಚಳಕದಿಂದ ತಮ್ಮಲ್ಲಿ ವಿಶೇಷ ಶಕ್ತಿ ಎಂದು ತೋರಿಸಿದರೂ ಇದು ಅತಿಮಾನುಷ ಶಕ್ತಿಯಲ್ಲ. ಆದರೆ ಈ ಜಗತ್ತಿನಲ್ಲಿ ಕೆಲವು ವ್ಯಕ್ತಿಗಳಲ್ಲಿ ಕೆಲವೊಂದು ಅಗೋಚರ ಶಕ್ತಿಗಳಿದ್ದು ಇವುಗಳಿಂದ ಇವರು ಇತರರಿಗೆ ಅಸಾಧ್ಯವಾಗುವಂತಹ ಕೆಲಸಗಳನ್ನು ಮಾಡುತ್ತಾರೆ.

ಪೋಲ್ಯಾಂಡಿನ ಮಿರೋಸ್ಲಾವ್ ಮಗೋಲಾ ಎಂಬುವರು ತಮ್ಮ ಮನಃಶಕ್ತಿಯಿಂದ ವಸ್ತುಗಳನ್ನು ಮುಟ್ಟದೇ ಚಲಿಸುವಂತೆ ಮಾಡಬಲ್ಲರು. ನಮ್ಮ ಭಾರತ ಮೂಲದ ಕಿಶೋರಿಯೊಬ್ಬಳು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪುಸ್ತಕದ ವಾಕ್ಯಗಳನ್ನು ಓದಬಲ್ಲಳು. ಈ ಶಕ್ತಿಯನ್ನು ತನ್ನ ಮೂರನೆಯ ಕಣ್ಣಿನಿಂದ ಸಾಧಿಸುತ್ತಿದ್ದೇನೆ, ಈ ಕಾರಣದಿಂದಾಗಿ ತಾನು 'ಮಾ ಯೋಗಮಾತೆ'ಯಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾಳೆ. ಈಕೆ ಹೇಳುತ್ತಿರುವುದರಲ್ಲಿ ಬೊಗಳೆಯಿಲ್ಲ ಎಂಬುದನ್ನು ಈಕೆಯ ವೀಡಿಯೋ ನೋಡಿಯೇ ನಿರ್ಧರಿಸಬಹುದು. ತನ್ನ ವಿಶಿಷ್ಟ ಶಕ್ತಿಯಿಂದ ವಿಶ್ವವವನ್ನೇ ಬೆರಗುಗೊಳಿಸುತ್ತಿರುವ ಈಕೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮ ಮುಂದಿಡಲಾಗಿದೆ....

ಅಷ್ಟಕ್ಕೂ ’ಮಾ ಯೋಗಮಾತೆ’ಯಾಗಿರುವ ಕಿಶೋರಿ ಯಾರು?

ಅಷ್ಟಕ್ಕೂ ’ಮಾ ಯೋಗಮಾತೆ’ಯಾಗಿರುವ ಕಿಶೋರಿ ಯಾರು?

ಈಕೆ ಇನ್ನೂ ಒಂಬತ್ತು ವರ್ಷದ ಪುಟ್ಟ ಬಾಲಕಿಯಾಗಿದ್ದು ಅಮೇರಿಕಾದ ಉತ್ತರ ಕ್ಯಾರೋಲೀನಾ ರಾಜ್ಯದ ನಿವಾಸಿಯಾಗಿದ್ದಾಳೆ. ತನಗೆ ಅಗೋಚರ ಕಣ್ಣು ಅಥವಾ ಮೂರನೆಯ ಕಣ್ಣೊಂದು ಇದ್ದು ಎರಡು ಕಣ್ಣುಗಳನ್ನು ಮುಚ್ಚಿದ್ದರೂ ಈ ಕಣ್ಣಿನಿಂದ ಸ್ಪಷ್ಟವಾಗಿ ನೋಡಬಲ್ಲೆ ಎಂದು ಹಾಗೂ ಪುಸ್ತಕದ ವಾಕ್ಯಗಳನ್ನು ಓದಬಲ್ಲೆ ಎಂದು ಹೇಳಿಕೊಂಡಿದ್ದಾಳೆ. ಆದರೆ ಈ ಶಕ್ತಿ ತನಗೆ ದೈವದತ್ತವಾಗಿ ಬಂದದ್ದಲ್ಲ, ನಾನೇ ಸ್ವತಃ ಕಲಿತುಕೊಂಡಿದ್ದು ಎಂದೇ ಹೇಳಿಕೊಳ್ಳುತ್ತಿದ್ದಾಳೆ.

ಕಣ್ಣು ಮುಚ್ಚಿಕೊಂಡು ಓದಲು ಹೇಗೆ ಸಾಧ್ಯ?

ಕಣ್ಣು ಮುಚ್ಚಿಕೊಂಡು ಓದಲು ಹೇಗೆ ಸಾಧ್ಯ?

ಈಕೆ ಭಾರತಕ್ಕೆ ಬಂದಿದ್ದಾಗ ಒಂದು ಗುರುಕುಲದಲ್ಲಿ ನಡೆಸಿದ ಅಭ್ಯಾಸದ ಕಾರಣದಿಂದ ಈ ಶಕ್ತಿಯನ್ನು ಪಡೆಯಲು ಸಾಧ್ಯವಾಗಿತ್ತು. ಗುರುಕುಲದಲ್ಲಿರುವ ಗುರು ನಿತ್ಯಾನಂದರವರು ಈ ಶಕ್ತಿಯ ಬಗ್ಗೆ ಆಕೆಗೆ ಶಿಕ್ಷಣ ನೀಡಿದ್ದರು.

ಈಕೆಯ ಶಕ್ತಿಗಳಲ್ಲಿ ಇನ್ನೇನೇನಿದೆ?

ಈಕೆಯ ಶಕ್ತಿಗಳಲ್ಲಿ ಇನ್ನೇನೇನಿದೆ?

ಪ್ರಾರಂಭದಲ್ಲಿ ಈಕೆ ಕೇವಲ ಸಭೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಲೆಂದು ಮಾಡುತ್ತಿದ್ದ ಕೈಚಳವೆಂದೇ ಜನರು ತಿಳಿದಿದ್ದರು. ಆದರೆ ಈಕೆ ತನ್ನ ನಿಜವಾದ ಶಕ್ತಿಯನ್ನು ಯಾವಾಗ ಪ್ರಕಟಿಸಲು ತೊಡಗಿದಳೋ ಆಗ ನೆರೆದಿದ್ದ ಅಷ್ಟೂ ಜನರು ಅವಾಕ್ಕಾಗಿದ್ದರು. ಈಕೆ ಕಣ್ಣು ಮುಚ್ಚಿಕೊಂಡೇ ಓದುವುದು ಮಾತ್ರವಲ್ಲ, ಆಟವಾಡುವುದು, ಚಿತ್ರ ಬಿಡಿಸುವುದು ಮೊದಲಾದ ಚಟುವಟಿಕೆಗಳನ್ನೂ ಸುಲಲಿತವಾಗಿ ನಡೆಸುತ್ತಾಳೆ. ಅಷ್ಟೇ ಅಲ್ಲ, ಜನನಿಬಿಡ ಸ್ಥಳದಲ್ಲಿ ಡಾಜ್ ಕಾರುಗಳ ನಡುವೆ ಎಲ್ಲರಂತೆ ಬೈಸಿಕಲ್ ಒಂದನ್ನು ಸವಾರಿ ಮಾಡುತ್ತಾಳೆ.

ಒಂದು ಸಭೆಯಲ್ಲಿ ಈ ಚಮತ್ಕಾರವನ್ನೂ ತೋರಿಸಿದಳು

ಒಂದು ಸಭೆಯಲ್ಲಿ ಈ ಚಮತ್ಕಾರವನ್ನೂ ತೋರಿಸಿದಳು

ಒಂದು ಸಾರ್ವಜನಿಕ ಸಭೆಯಲ್ಲಿ ಈಕೆ ಮುಚ್ಚಿದ್ದ ಕಣ್ಣುಗಳಿಂದ ಪುಸ್ತಕದ ಕೆಲವು ವಾಕ್ಯಗಳನ್ನು ಓದಿದ್ದಳು. ಇದರ ಬಳಿಕ ಟಿಕ್-ಟ್ಯಾಕ್ ಎಂಬ ಆಟವನ್ನೂ, ಪ್ಲಾಸ್ಟಿಕ್ಕಿನ ಉದ್ದಿನವಡೆಯಂತಹ ಡೋನಟ್ ಗಳನ್ನು ಜೋಡಿಸುವ ಆಟವನ್ನೂ ಆಡಿ ತೋರಿಸಿದಳು. ಈಕೆಯ ತಾಯಿಯ ಹೇಳಿಕೆಯ ಪ್ರಕಾರ ಈಕೆ ತನ್ನಲ್ಲಿರುವ ವಿಶೇಷ ಶಕ್ತಿಯನ್ನು ಅರಿತುಕೊಳ್ಳುವ ಮುನ್ನ ಎಲ್ಲರಂತೆ ಸರ್ವೇ ಸಾಮಾನ್ಯ ಬಾಲಕಿಯಾಗಿದ್ದು ಈ ಶಕ್ತಿ ತನ್ನಲ್ಲಿರುವುದನ್ನು ಮನಗಂಡ ಬಳಿಕ ಹೆಚ್ಚು ಧನಾತ್ಮಕ ಹಾಗೂ ಆತ್ಮವಿಶ್ವಾಸವುಳ್ಳ ವ್ಯಕ್ತಿಯಾಗಿದ್ದಾಳೆ.

ಈ ಶಕ್ತಿ ನಿಜವಾದುದೇ ಅಥವಾ ಕಪಟವೇ?

ಈ ಶಕ್ತಿ ನಿಜವಾದುದೇ ಅಥವಾ ಕಪಟವೇ?

ಹಲವಾರು ವೀಡಿಯೋಗಳಲ್ಲಿ ಈಕೆಯ ಅದ್ಭುತ ಪ್ರತಿಭೆ ಪ್ರಕಟಗೊಂಡಿದ್ದು ವಿಶ್ವದಾದ್ಯಂತ ಜನರು ಸಾಮಾಜಿಕ ತಾಣಗಳ ಮೂಲಕ ನೋಡಿ ಚಕಿತಗೊಂಡಿದ್ದಾರೆ. ಆದರೂ, ಕೆಲವರಿಗೆ ಈ ವಿಡಿಯೋಗಳ ಮೇಲೇ ಅನುಮಾನವಿದ್ದು ಈಕೆಯ ಪ್ರತಿಭೆ ಕಪಟವೂ ಇರಬಹುದೆಂಬ ಗುಮಾನಿಯೂ ಹರಡಿದೆ.

ನಮ್ಮ ಅಭಿಪ್ರಾಯ

ಇದು ನಿಜವೋ ಅಥವಾ ಹಣ ಮಾಡಲು ಜನರನ್ನು ಮರಳುಮಾಡುವ ತಂತ್ರವೋ ಎಂದು ನಮಗೂ ಅನುಮಾನವಿದೆ. ಸಧ್ಯಕ್ಕೆ ಈ ಬಾಲಕಿಯ ನಿಜನಾಮಧೇಯದ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಹಾಗೂ ಆಕೆಯ ಕುಟುಂಬದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲದಿರುವುದು ಅನುಮಾನಾಸ್ಪದವಾಗಿದೆ. ಒಂದು ವೇಳೆ ಶಕ್ತಿ ನಿಜವೇ ಆಗಿದ್ದರೆ ಕೇವಲ ವಿಡಿಯೋಗಳಲ್ಲಿ ಮಾತ್ರವೇ ಏಕೆ ಈಕೆ ಕಾಣಿಸಿಕೊಳ್ಳಬೇಕು? ಎಂಬುದೂ ಇನ್ನೊಂದು ತರ್ಕವಾಗಿದೆ. ಈ ಸತ್ಯಾಸತ್ಯತೆಗಳ ವೈಜ್ಞಾನಿಕ ವಿವರಣೆಯ ಹೊರತಾಗಿ ಇದು ಅಪ್ಪಟ ನಿಜ ಎಂದು ಹೇಳಲು ಸಾಧ್ಯವಿಲ್ಲ. ಆದರೂ, ಕೆಳಗಿನ ವಿಡಿಯೋ ನೋಡಿ ಇದು ನಿಜವೋ, ನಿಜವಾಗಿಯೂ ಆಕೆಯಲ್ಲಿ ಈ ಅಗೋಚರ ಶಕ್ತಿ ಇದೆಯೇ ಎಂಬುದನ್ನು ನೀವೇ ನೋಡಿ. ಈಕೆಗೆ ಓದಲು ಸಾಧ್ಯವಾದರೆ ನಿಮಗೂ ಏಕೆ ಸಾಧ್ಯವಾಗಲಾರದು? ಪ್ರಯತ್ನಿಸಿ....

English summary

yogamaatha-the-girl-with-third-eye

We all wish to have super powers and what if we were blessed with any of it? Sounds interesting, right? There are many ways as to how one can fool others about their super natural powers by just tricking the other person. But do you know that there is a little girl out there who has superpowers and she calls herself as Ma Yogamaatha? She claims to read while she is blind-folded and when you witness the video of her superpowers, you would be shocked as we are too!
Please Wait while comments are loading...
Subscribe Newsletter