For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ನೋಡಿ ಈ ರಾಶಿಯವರು ತುಂಬಾನೇ ಸುಳ್ಳು ಹೇಳುತ್ತಾರಂತೆ!

  By Deepu
  |

  ಪ್ರತಿಯೊಬ್ಬರು ಒಂದಲ್ಲಾ ಒಂದು ಬಾರಿ ಸುಳ್ಳು ಹೇಳುತ್ತಾರೆ. ಕೆಲವು ಬಾರಿ ಒಳ್ಳೆಯ ಕೆಲಸಕ್ಕೆ ಹೇಳಿದರೆ ಇನ್ನೂ ಕೆಲವು ಬಾರಿ ಇನ್ಯಾವುದೋ ವಿಚಾರವನ್ನು ಮರೆಮಾಚುವ ಸಂಗತಿಗಾಗಿರಬಹುದು. ಕೆಲವರು ಹೇಳುವ ಸುಳ್ಳು ಅದು ಸುಳ್ಳೆಂದೇ ಅನಿಸುವುದಿಲ್ಲ. ನಿಜವೆಂದೇ ನಂಬಿ ಬಿಡುತ್ತೇವೆ. ಕೆಲವರಿಗೆ ಸುಳ್ಳು ಹೇಳಲು ತಿಳಿಯುವುದಿಲ್ಲ.

  ಅವರು ಸುಳ್ಳು ಹೇಳುತ್ತಿದ್ದರೆ ಅದು ಸುಳ್ಳೆಂದು ಎಲ್ಲರಿಗೂ ತಿಳಿದುಬಿಡುತ್ತದೆ. ಮನುಷ್ಯನ ವ್ಯಕ್ತಿತ್ವ ಮತ್ತು ಮಾತುಗಳು ಅವರವರ ರಾಶಿಚಕ್ರದ ಅನುಗುಣವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ಯಾವ ರಾಶಿಯವರು ಎಂತಹ ಬಗೆಯ ಸುಳ್ಳನ್ನು ಹೇಳುತ್ತಾರೆ. ಅದು ಎಷ್ಟರ ಮಟ್ಟಿಗೆ ನಿಜ ಎನ್ನುವ ಹಾಗಿರುತ್ತದೆ ಎನ್ನುವುದನ್ನು ನೀವು ಅರಿಯಬೇಕೆಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಓದಿ...

  ದಯವಿಟ್ಟು ಗಮನಿಸಿ: ಈ ಲೇಖನವನ್ನು ಯಾರ ಕುರಿತಾಗಿಯೂ, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುವ ಯಾವುದೇ ಉದ್ದೇಶದಿಂದ ಬರೆಯಲಾಗಿಲ್ಲ. ಜ್ಯೋತಿಷ್ಯಾಸ್ತ್ರ ಅಪ್ರಾಮಾಣಿಕತೆ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಮಾತ್ರ ಇದ್ದುದನ್ನು ಇದ್ದ ಹಾಗೇ ಹೇಳುವ ಪ್ರಯತ್ನ. ಒಂದು ವೇಳೆ ನಿಮ್ಮ ಜನ್ಮರಾಶಿ ಕೆಳಗೆ ಸೂಚಿಸಿರುವ ರಾಶಿಫಲದಲ್ಲಿದ್ದು ಇದರ ಮಾಹಿತಿಗಳು ನಿಮ್ಮ ಬಗ್ಗೆ ಸತ್ಯವಾಗಿದ್ದರೆ ನಮಗೆ ಖಂಡಿತಾ ತಿಳಿಸಿ. ಬನ್ನಿ ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಪ್ರಮುಖ ರಾಶಿಗಳ ಬಗ್ಗೆ ಅರಿಯೋಣ..

  ಮೇಷ

  ಮೇಷ

  ಇವರು ಸಾಮಾನ್ಯವಾಗಿ ಸುಳ್ಳು ಹೇಳುವುದಿಲ್ಲ. ಪ್ರತಿಯೊಬ್ಬರನ್ನು ಮುಖಾಮುಖಿಯಾಗಿ ಎದುರಿಸುವ ವಿಶ್ವಾಸ ಅವರಿಗಿರುತ್ತದೆ. ಜೊತೆಗೆ ಅವರು ಯಾರಿಗೂ ಭಯ ಪಡುವುದಿಲ್ಲ. ಹಾಗೊಮ್ಮೆ ಅವರು ಸುಳ್ಳು ಹೇಳುತ್ತಾರೆ ಎಂದಾದರೆ ಅದು ಯಾರನ್ನೋ ಉಳಿಸುವ ಉದ್ದೇಶವಾಗಿರುತ್ತದೆ. ಈ ರಾಶಿಯ ಜನರು ಕೊಂಚ ಸೋಮಾರಿಗಳಾಗಿದ್ದು ತಮ್ಮ ಕಾರ್ಯಗಳಿಗೆ ಎಲ್ಲಿಯವರೆಗೆ ಅಂತಿಮ ಕರೆ ಬರುವುದಿಲ್ಲವೋ ಅಲ್ಲಿಯವರೆಗೆ ಮುಂದೂಡುವ ಅಭ್ಯಾಸದವರಾಗಿರುತ್ತಾರೆ. ಒಂದು ವೇಳೆ ಸುಳ್ಳು ಹೇಳುವ ಸಂದರ್ಭ ಬಂದರೆ ಸಮಯಕ್ಕೊಂದು ಸುಳ್ಳು ಹೇಳಲು ಸಾಧ್ಯವಾದರೂ ಇದರ ಪರಿಣಾಮಗಳನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆ ಇವರಿಗಿರುವುದಿಲ್ಲ. ಆದ್ದರಿಂದ ಇನ್ನೊಂದು ಸುಳ್ಳು ಹೇಳಿ ಗೋಜಲಾಗಿಸಿ ಒಟ್ಟಾರೆ ತಮ್ಮ ಕೆಲಸವಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ ತಮ್ಮ ಕೆಲವನ್ನು ಮಾತ್ರ ಅರ್ಧಂಬರ್ಧ ಮಾಡದೇ ಪೂರ್ಣಗೊಳಿಸುವ ಜಾಯಾಮಾನ ಇವರದ್ದು. ಪ್ರಾಮಾಣಿಕತೆಯ ವಿಷಯ ಬಂದರೆ ಇವರು ಅತ್ಯಂತ ಪ್ರಾಮಾಣಿಕರಾಗಿದ್ದು ಸದಾ ಸಹಾಯ ಮಾಡುವವರೂ ಆಗಿರುತ್ತಾರೆ.

  ವೃಷಭ

  ವೃಷಭ

  ಇವರಿಗೆ ಸುಳ್ಳು ಹೇಳಲು ಇಂತಹದ್ದೇ ಎನ್ನುವ ಯಾವುದೇ ಕಾರಣಗಳಿರುವುದಿಲ್ಲ. ತುಂಬಾ ಸರಳ ವಿಚಾರಕ್ಕೂ ಸುಳ್ಳು ಹೇಳುವ ಸಾಧ್ಯತೆಗಳಿವೆ. ಕೆಲವೊಮ್ಮೆ ಇವರು ಹೇಳುವ ಸುಳ್ಳು ಇತರರಿಗೆ ನೋವುಂಟಾಗುವ ಸಾಧ್ಯತೆ ಇರುತ್ತದೆ.

  ಮಿಥುನ

  ಮಿಥುನ

  ಇವರು ಒಬ್ಬ ಉತ್ತಮ ಸುಳ್ಳುಗಾರರು ಎಂದು ಹೇಳಬಹುದು. ಇವರು ಎಲ್ಲವನ್ನು ನಿಜ ಹೇಳುವುದಿಲ್ಲ. ಕೆಲವು ಸಂದರ್ಭದಲ್ಲಿ ಇವರು ಸತ್ಯವನ್ನು ಹೇಳುತ್ತಾರೆ. ಸಾಮಾನ್ಯವಾಗಿ ಈ ವರ್ಗದ ಜನರು ದ್ವಂದ್ವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಇದೇ ಇವರನ್ನು ಅತಿ ದೊಡ್ಡ ಸುಳ್ಳುಗಾರನಾಗಿಸಿದೆ. ಈ ಅಭ್ಯಾಸದಿಂದ ಇವರು ಸಂದರ್ಭಕ್ಕನುಸಾರವಾಗಿ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಸುಳ್ಳು ಹೇಳುವ ಪ್ರಮಾಣ ಇವರಲ್ಲಿ ಹೆಚ್ಚು.

  ಕಟಕ

  ಕಟಕ

  ಇವರು ಎಲ್ಲಾ ಸಂದರ್ಭದಲ್ಲೂ ಸುಳ್ಳನ್ನು ಹೇಳುವುದಿಲ್ಲ. ಕೆಲವು ಸೂಕ್ತ ಸಮಯ ಅಥವಾ ಅಂದರ್ಭಗಳು ಒದಗಿ ಬಂದರೆ ಸುಳ್ಳನ್ನು ಹೇಳುವುರು. ಅನಿವಾರ್ಯತೆ ಇದೆ ಎನ್ನುವ ಸಂದರ್ಭದಲ್ಲಿ ಇವರು ಸುಳ್ಳನ್ನು ಹೇಳುವರು. ಏಡಿಯ ಶರೀರ ಹೇಗೆ ಹೊರಗೆ ದೃಢವಾಗಿದ್ದು ಒಳಗಡೆಯಿಂದ ಮೆತ್ತರಿಗುತ್ತದೆಯೋ, ಅಂತೆಯೇ ಈ ರಾಶಿಯ ಜನರು ಇತರರು ತಿಳಿದಿರುವುದಕ್ಕಿಂತಲೂ ಹೆಚ್ಚು ಮೃದುವಾಗಿರುತ್ತಾರೆ. ಸ್ವಭಾವತಃ ಇವರು ಒಳ್ಳೆಯವರಾಗಿದ್ದು ಇತರರ ಏಳ್ಗೆಯಲ್ಲಿಯೇ ತಮ್ಮ ಏಳ್ಗೆಯನ್ನು ಕಾಣುತ್ತಾರೆ. ಆದ್ದರಿಂದ ಕೇವಲ ಇತರರಿಗೆ ಒಳ್ಳೆಯದಾಗುವುದಿದ್ದರೆ ಮಾತ್ರ ಇವರು ಸುಳ್ಳು ಹೇಳುತ್ತಾರೆ. ಸಮಯ ಮತ್ತು ಸಂದರ್ಭ ನೋಡಿ ಇವರು ಸುಳ್ಳುಗಳನ್ನು ಹೇಳುತ್ತಾರಾದರೂ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲದೇ ಕೇವಲ ಪರಿಸ್ಥಿತಿ ನಿಭಾಯಿಸುವುದಾಗಿರುತ್ತದೆ.

  ಸಿಂಹ

  ಸಿಂಹ

  ಇವರು ಹೆಚ್ಚಾಗಿ ಸುಳ್ಳು ಹೇಳುವುದಿಲ್ಲ. ಆದರೆ ಸತ್ಯವನ್ನು ಉತ್ಪ್ರೇಕ್ಷೆ ಮಾಡುತ್ತಾರೆ. ಹೇಳಿದಂತೆ ಮಾಡುವ ಪ್ರವೃತ್ತಿ ಇವರದ್ದಾಗಿರುತ್ತದೆ. ಇವರು ಸತ್ಯವಂತರು ಹಾಗೂ ವಿಶಿಷ್ಟ ವ್ಯಕ್ತಿಗಳು ಎಂದು ಪರಿಗಣಿಸಬಹುದು. ಇವರು ತಮ್ಮನ್ನು ತಾವು ಜಟಿಲ ಸ್ಥಿತಿಯಿಂದ ಹೊರತರುವ ಪ್ರಯತ್ನವನ್ನು ಮಾಡುತ್ತಾರೆ. ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುವ ಇವರು ಧೈರ್ಯವಂತರೂ ನೇರ ನಡವಳಿಕೆಯ ಸ್ವಭಾವದವರೂ ಆಗಿರುತ್ತಾರೆ. ಸ್ಪರ್ಧೆಗೆ ಸದಾ ಸಿದ್ಧರಿರುವ ಇವರು ಸ್ಪರ್ಧೆಯಲ್ಲಿ ಗೆಲ್ಲಲು ಸತ್ಯದ ಭಂಡಾರ ಖಾಲಿಯಾದರೆ ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ. ಇತರರು ತಮ್ಮ ಜೀವನದಲ್ಲಿ ನಾಟಕವಾಡುವುದನ್ನು, ಸುಳ್ಳು ಹೇಳುವುದನ್ನು ಸಹಿಸದ ಇವರು ಆ ವ್ಯಕ್ತಿಗಳ ಸಂಗವನ್ನೇ ಬಿಟ್ಟುಬಿಡುತ್ತಾರೆ. ವ್ಯಂಗ್ಯವೆಂದರೆ ಇದೇ ಸುಳ್ಳುಗಳನ್ನು ಇವರೇ ಹೇಳಿ ಎದುರಿನವರು ತಮ್ಮೊಂದಿಗೆ ಸ್ನೇಹದಿಂದಿರಬೇಕೆಂದು ಬಯಸುತ್ತಾರೆ.

  ಕನ್ಯಾ

  ಕನ್ಯಾ

  ಇವರು ಸುಳ್ಳು ಹೇಳುವುದನ್ನು ದ್ವೇಷಿಸುತ್ತಾರೆ. ಬೇರೆಯವರನ್ನು ಉಳಿಸುವ ಉದ್ದೇಶಕ್ಕೆ ಕೆಲವು ಬಾರಿ ಸುಳ್ಳು ಹೇಳಬಹುದು. ಆದರೆ ತಪ್ಪು ಮಾಡಿರುವುದಕ್ಕೆ ಬಹಳ ಚಿಂತೆ ಮಾಡುತ್ತಾರೆ. ಹಾಗೂಮ್ಮೆ ಇವರು ಸುಳ್ಳು ಹೇಳಿದರೆ ಅವರ ಮುಖದ ಭಾವನೆಯಲ್ಲಿ ತಿಳಿದುಕೊಳ್ಳಬಹುದು. ಇವರು ಸುಳ್ಳು ಹೇಳುವಾಗ ಹೆಚ್ಚು ಭಯ ಪಡುತ್ತಾರೆ.

  ತುಲಾ

  ತುಲಾ

  ಇವರು ಜೀವನದಲ್ಲಿ ನಿಷ್ಕಪಟರಾಗಿರುತ್ತಾರೆ. ಇವರು ಚಿಕ್ಕ ಪುಟ್ಟ ವಿಚಾರಕ್ಕೆ ಸುಳ್ಳು ಹೇಳುವುದನ್ನು ದ್ವೇಷಿಸುತ್ತಾರೆ. ಅನಿವಾರ್ಯತೆಯ ಸಂದರ್ಭದಲ್ಲಿ ಇವರು ಸುಳ್ಳನ್ನು ಹೇಳಬಹುದು. ಸುಳ್ಳು ಹೇಳುವಾಗ ಅವರಿಗೆ ಮಾನಸಿಕವಾಗಿ ಬೇಸರ ಉಂಟಾಗುತ್ತಿರುತ್ತದೆ.

  ವೃಶ್ಚಿಕ

  ವೃಶ್ಚಿಕ

  ಇವರು ಅತ್ಯಂತ ಸುಳ್ಳುಗಾರರು. ನಿಜವನ್ನು ಹೇಳಿದರೆ ನೈಜ ಜೀವನಕ್ಕೆ ಚ್ಯುತಿ ಉಂಟಾಗುವುದು ಎಂದು ಇವರು ಭಾವಿಸುತ್ತಾರೆ. ಇವರು ಹೇಳುವ ಸುಳ್ಳುಗಳು ಕೇಳುಗರಿಗೆ ಸುಳ್ಳೆಂದು ಅನಿಸದು. ಅಷ್ಟು ನಿಜ ಸಂಗತಿ ಎನ್ನುವ ಹಾಗೆ ಸುಳ್ಳನ್ನು ಹೇಳುತ್ತಾರೆ. ಈ ರಾಶಿಯ ಜನರು ಅತಿ ತೀಕ್ಷ್ಣಮತಿಗಳಾಗಿದ್ದಾರೆ. ಇವರನ್ನು ಬೇರೆಯವರು ನಿಯಂತ್ರಿಸುವುದು ಇವರಿಗೆ ಇಷ್ಟವಿಲ್ಲ. ಬಲ ಮತ್ತು ಪ್ರಾಬಲ್ಯತೆಯನ್ನು ಹೊಂದಲು ಇಷ್ಟಪಡುವ ಇವರು ಇದಕ್ಕಾಗಿ ಯಾವ ಬಗೆಯಲ್ಲಿ ತಮ್ಮ ಮಾತುಗಳಲ್ಲಿ ಸುಳ್ಳುಗಳನ್ನು ಪೋಣಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ. ಈ ಸುಳ್ಳುಗಳ ಸರಮಾಲೆಯಲ್ಲಿ ಸಿಲುಕಿದವರು ಈ ಗೋಜಲನ್ನು ಅರ್ಥ ಮಾಡುವಷ್ಟರಲ್ಲಿ ಆಗಲೇ ಬಲೆಗೆ ಬಿದ್ದಾಗಿರುತ್ತದೆ. ಸುಳ್ಳು ಎಂದು ಗೊತ್ತಿರುವ ಜಾಹೀರಾತುಗಳನ್ನು ನೋಡಿ ನಾವು ಉತ್ಪನ್ನಗಳನ್ನು ಕೊಳ್ಳುವುದಿಲ್ಲವೇ ಹಾಗೇ. ಅಂತೆಯ ಇವರ ನಿರ್ಯಣಗಳು ಚಂಚಲವಾಗಿದ್ದು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತವೆ.

  ಧನು

  ಧನು

  ಇವರು ಸುಳ್ಳನ್ನು ಸುಂದರವಾಗಿ ಹೇಳುತ್ತಾರೆ. ಸತ್ಯ ಹೇಳಿದರೆ ಕೆಟ್ಟದ್ದಾಗುತ್ತದೆ ಎನ್ನುವ ಉದ್ದೇಶ ಇವರದ್ದಾಗಿರುವುದು. ಇವರು ಹಲವಾರು ಸಂದರ್ಭದಲ್ಲಿ ಸುಲಭವಾಗಿ ಸುಳ್ಳನ್ನು ಹೇಳುತ್ತಾರೆ. ಎಂತಹ ಸಂದರ್ಭದಲ್ಲಾದರೂ ಸುಳ್ಳನ್ನು ಸುಲಭವಾಗಿ ಹೇಳಿ ಹೊರ ಬರುತ್ತಾರೆ. ಈ ರಾಶಿಯ ಜನರು ಸಾಮಾನ್ಯವಾಗಿ ಸಂತೋಷ ಸ್ವಭಾವದವರಾಗಿದ್ದು ಈ ಕ್ಷಣವನ್ನು ಈಗಲೇ ಅನುಭವಿಸುವ ಆತುರದಲ್ಲಿರುತ್ತಾರೆ. ಇವರಿಗೆ ಸಾಹಸವೆಂದರೆ ಅಚ್ಚುಮೆಚ್ಚಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಹೇಳಬೇಕಾಗಿ ಬಂದಲ್ಲಿ ಯಾವ ಹಿಂಜರಿಕೆಯನ್ನೂ ತೋರದೇ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಮೂಲಕ ತಮ್ಮ ದಾರಿಯನ್ನು ಸುಗಮವಾಗಿಸಿಕೊಳ್ಳುತ್ತಾರೆ.

  ಮಕರ

  ಮಕರ

  ಇವರ ಕುತ್ತಿಗೆಗೆ ಬಂದಂತಹ ಸಂದರ್ಭದಲ್ಲಿ ಮಾತ್ರ ಇವರು ಸುಳ್ಳನ್ನು ಹೇಳುತ್ತಾರೆ. ಕುಟುಂಬ ಮತ್ತು ಸ್ನೇಹಿತರನ್ನು ರಕ್ಷಿಸುವ ಸಂದರ್ಭದಲ್ಲಿ ಸರಾಗವಾಗಿ ಸುಳ್ಳು ಹೇಳಬಲ್ಲರು. ಹಾಗಂತ ಸುಳ್ಳು ಹೇಳುವುದು ಅವರ ತಕ್ಷಣದ ಪ್ರತಿಕ್ರಿಯೆ ಆಗಿರುವುದಿಲ್ಲ.

  ಕುಂಬ

  ಕುಂಬ

  ಇವರು ಬೇಕೆಂದುಕೊಂಡಿದ್ದು ದೊರೆಯದೆ ಇರುವ ಸಂದರ್ಭದಲ್ಲಿ ಸುಳ್ಳಿನ ಪ್ರಯೋಗ ಮಾಡುತ್ತಾರೆ. ಕೆಲವು ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಇವರು ಸುಳ್ಳನ್ನು ಹೇಳುವರು. ಉಳಿದ ಸಂದರ್ಭದಲ್ಲಿ ಆದಷ್ಟು ಸತ್ಯದಿಂದ ಇರಲು ಬಯಸುತ್ತಾರೆ.

  ಮೀನ

  ಮೀನ

  ಇವರು ಸುಳ್ಳು ಹೇಳುವುದು ಕಡಿಮೆ. ಹಾಗೊಮ್ಮೆ ಸುಳ್ಳು ನುಡಿದರೆ ಸುಳ್ಳು ಮತ್ತು ಸತ್ಯಗಳ ನಡುವೆ ಯಾವುದು ನಿಜ? ಎಂದು ಅರಿಯುವುದು ಕಷ್ಟ. ಇವರಿಗೆ ಕೆಲವು ಸಂದರ್ಭದಲ್ಲಿ ಸುಳ್ಳು ಹೇಳಬೇಕು ಎಂದು ಎನಿಸಿದರೆ ಸರಾಗವಾಗಿ ಸುಳ್ಳು ಹೇಳುತ್ತಾರೆ. ಅದು ವ್ಯಂಗ್ಯತೆಯನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಅಲದೆ ಕೆಲವೊಮ್ಮೆ ಈ ವರ್ಗದ ಜನರು ದ್ವಂದ್ವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಇದೇ ಇವರನ್ನು ಅತಿ ದೊಡ್ಡ ಸುಳ್ಳುಗಾರನಾಗಿಸಿದೆ. ಈ ಅಭ್ಯಾಸದಿಂದ ಇವರು ಸಂದರ್ಭಕ್ಕನುಸಾರವಾಗಿ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಸುಳ್ಳು ಹೇಳುವ ಪ್ರಮಾಣ ಇವರಲ್ಲಿ ಹೆಚ್ಚು.

  English summary

  Are you a compulsive liar? Your Zodiac sign has the answer

  We all lie once in a while. Sometimes, we lie to save our skin and sometimes we lie so that some else does not get hurt. However, when it comes to Zodiac signs too, there are some signs that are prone to lying more than the others. Is your zodiac sign one of them? Read on to know more...
  Story first published: Monday, December 11, 2017, 15:15 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more