For Quick Alerts
ALLOW NOTIFICATIONS  
For Daily Alerts

ಹಣೆಗೆ ತಿಲಕವನ್ನಿಡಲು ಯಾವ ಬೆರಳನ್ನು ಬಳಸಬೇಕು?

By Lekhaka
|

ಹಿಂದಿನ ಕಾಲದಲ್ಲಿ ರಾಜರು ಯುದ್ಧಕ್ಕೆ ಹೊರಡುವಂತಹ ಸಂದರ್ಭದಲ್ಲಿ ಅವರಿಗೆ ಆರತಿ ಬೆಳಗಿ ಹಣೆಗೆ ಕುಂಕುಮವಿಟ್ಟು ಕಳಿಸಿಕೊಡಲಾಗುತ್ತಾ ಇತ್ತು. ಯಾವುದೇ ಮಹತ್ಕಾರ್ಯಕ್ಕೆ ಹೋಗುವ ಮೊದಲು ಆರತಿ ಬೆಳಗಿ ಹೋಗುತ್ತಿರುವ ವ್ಯಕ್ತಿಯ ಹಣೆಗೆ ತಿಲಕವಿಟ್ಟರೆ ತುಂಬಾ ಒಳ್ಳೆಯದು ಎಂದು ಹಿಂದೂ ಸಂಪ್ರದಾಯದ ನಂಬಿಕೆ.

ಹಣೆಗೆ ತಿಲಕವಿಟ್ಟುಕೊಳ್ಳುವುದರಿಂದ ಅದೃಷ್ಟವು ಬರುವುದು ಎಂದು ನಂಬಲಾಗಿದೆ. ಆದರೆ ತಿಲವಿಡಲು ಕೈಯ ಬೇರೆ ಬೇರೆ ಬೆರಳುಗಳನ್ನು ಬಳಸಿದರೆ ಅದಕ್ಕೆ ತನ್ನದೇ ಆಗಿರುವ ಮಹತ್ವವಿದೆ. ಯಾವ್ಯಾವ ಬೆರಳುಗಳಿಂದ ತಿಲಕವಿಟ್ಟರೆ ಯಾವ ಮಹತ್ವವಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಮಧ್ಯದ ಬೆರಳು

ಮಧ್ಯದ ಬೆರಳು

ಮಧ್ಯದ ಬೆರಳನ್ನು ಬಳಸಿಕೊಂಡು ತಿಲಕವಿಟ್ಟುಕೊಂಡರೆ ಅದರಿಂದ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಬರುವುದು ಎಂದು ನಂಬಲಾಗಿದೆ. ಹಿಂದೂ ಪುರಾಣಗಳ ಪ್ರಕಾರ ಶನಿಯು ಮಧ್ಯ ಬೆರಳಿನ ಕೆಳಭಾಗದಲ್ಲಿರುವನು. ಆತ ನಮ್ಮ ಜೀವನದ ರಕ್ಷಕ ಮತ್ತು ಮಧ್ಯದ ಬೆರಳನ್ನು ಬಳಸಿಕೊಂಡು ತಿಲಕವಿಟ್ಟರೆ ಆತ ಜಾಗೃತಗೊಳ್ಳುತ್ತಾನೆ ಎಂದು ನಂಬಲಾಗಿದೆ. ಹೀಗೆ ಮಾಡಿದರೆ ನಿಮಗೆ ಜೀವನದಲ್ಲಿ ಒಳ್ಳೆಯ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಸಿಗುವುದು.

ಉಂಗುರದ ಬೆರಳು

ಉಂಗುರದ ಬೆರಳು

ನಿಮಗೆ ತುಂಬಾ ಶಾಂತಿಯುತ ಜೀವನ ಬೇಕೆಂದೆನಿಸಿದರೆ ಆಗ ನೀವು ಉಂಗುರದ ಬೆರಳನ್ನು ಬಳಸಿಕೊಂಡು ತಿಲಕವನ್ನಿಡಬೇಕು. ಶನಿಯು ಮಧ್ಯದ ಬೆರಳಿನ ಕೆಳಭಾಗದಲ್ಲಿದ್ದರೆ ಸೂರ್ಯನು ಉಂಗುರ ಬೆರಳಿನ ಕೆಳಭಾಗದಲ್ಲಿದ್ದಾನೆ. ವೇದಗಳ ಪ್ರಕಾರ ಉಂಗುರ ಬೆರಳಿನಿಂದ ತಿಲಕವನ್ನಿಟ್ಟರೆ ಆಗ ಹಣೆಯಲ್ಲಿರುವ ಆಗ್ಯ ಚಕ್ರವು ಜಾಗೃತವಾಗುವುದು. ಇದರಿಂದ ದೇವ ದೇವತೆಗಳಿಗೆ ತಿಲಕವನ್ನಿಡುವಾಗ ಉಂಗುರದ ಬೆರಳನ್ನು ಬಳಸಿಕೊಳ್ಳುತ್ತೇವೆ.

ಹೆಬ್ಬೆರಳು

ಹೆಬ್ಬೆರಳು

ಶುಕ್ರ ಗ್ರಹವು ಹೆಬ್ಬೆರಳಿನ ಕೆಳಭಾಗದಲ್ಲಿ ನೆಲೆಯಾಗಿದ್ದಾನೆ ಎಂದು ವೇದಗಳು ಹೇಳುತ್ತವೆ. ಹೆಬ್ಬೆರಳನ್ನು ಬಳಸಿಕೊಂಡು ತಿಲಕವನ್ನಿಟ್ಟರೆ ಅದರಿಂದ ಒಳ್ಳೆಯ ಆರೋಗ್ಯ ಮತ್ತು ಸಂಪತ್ತು ಸಿಗುವುದು. ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಇದ್ದರೆ ಆಗ ಹೆಬ್ಬೆರಳನ್ನು ಬಳಸಿಕೊಂಡು ಪೀಡಿತರ ಹಣೆಗೆ ಗಂಧದ ತಿಲಕವನ್ನಿಟ್ಟರೆ ಬೇಗನೆ ಒಳ್ಳೆಯ ಆರೋಗ್ಯ ಮರಳಿ ಬರುವುದು.

ತೋರು ಬೆರಳು

ತೋರು ಬೆರಳು

ಮೋಕ್ಷ ಪಡೆಯಬೇಕೆಂಬ ಆಸೆಯು ನಿಮ್ಮಲ್ಲಿ ಇದ್ದರೆ ಆಗ ನೀವು ಯಾವುದೇ ವ್ಯಕ್ತಿಗೂ ತೋರುಬೆರಳಿನಿಂದ ಹಣೆಗೆ ತಿಲಕವನ್ನು ಇಡಬಾರದು. ಯಾಕೆಂದರೆ ಇದು ಆತನ ಭೂಮಿ ಮೇಲೆ ಪಯಣದ ಅಂತ್ಯವೆಂದು ಅರ್ಥ. ವ್ಯಕ್ತಿಯೊಬ್ಬ ಮೃತಪಟ್ಟಿರುವಾಗ ಮಾತ್ರ ಆತನ ಹಣೆಗೆ ತೋರುಬೆರಳಿನಿಂದ ತಿಲಕವನ್ನು ಇಡಬೇಕು. ಇದರಿಂದ ಆತ ಜೀವನ ಮತ್ತು ಸಾವಿನ ಚಕ್ರವನ್ನು ಭೇದಿಸಿ ಮೋಕ್ಷವನ್ನು ಪಡೆಯಲಿ ಎನ್ನುವುದು ಅರ್ಥ. ಇದರಿಂದ ತಿಲಕವನ್ನಿಡುವಾಗ ಸರಿಯಾದ ಬೆರಳುಗಳನ್ನು ಬಳಸಿ.

ಹಣೆಯ ಮೇಲೆ ಧರಿಸುವ ಸಿ೦ಧೂರ ತಿಲಕ

ಹಣೆಯ ಮೇಲೆ ಧರಿಸುವ ಸಿ೦ಧೂರ ತಿಲಕ

ಜನಪ್ರಿಯ ನ೦ಬಿಕೆಗಳ ಪ್ರಕಾರ, ಸಿ೦ಧೂರ ಅಥವಾ ಕು೦ಕುಮವು ಭಗವತಿಯಾದ ಪಾರ್ವತಿ ಅಥವಾ ಸತಿಯ ಸ೦ಕೇತವಾಗಿದೆ. ಹಿ೦ದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷರಾಶಿಯ ಮನೆಯು ಹಣೆಯ ಮೇಲಿದೆ. ಮೇಷ ರಾಶಿಯ ಅಧಿದೇವತೆಯು ಮ೦ಗಳನಾಗಿದ್ದಾನೆ. ಮ೦ಗಳನ ಬಣ್ಣವು ಕೆ೦ಪು ಆದ್ದರಿ೦ದ, ಅದನ್ನು ಮ೦ಗಳಕರವೆ೦ದು ನ೦ಬಲಾಗುತ್ತದೆ. ಮ೦ಗಳವು ಸೌಭಾಗ್ಯ ಅಥವಾ ಅದೃಷ್ಟದ ಸ೦ಕೇತವು. ಆದ್ದರಿ೦ದ, ಕೆ೦ಪು ಬಣ್ಣವು ಒಳ್ಳೆಯ ಅದೃಷ್ಟದಾಯಕವೆ೦ದು ನ೦ಬಲಾಗಿದೆ.

ಹಣೆಯ ಮೇಲೆ ಧರಿಸುವ ತಿಲಕ

ಹಣೆಯ ಮೇಲೆ ಧರಿಸುವ ತಿಲಕ

ಲಯಕರ್ತನಾದ ಭಗವಾನ್ ಶಿವನ ಮೂರನೆಯ ಕಣ್ಣು ಇರುವ ಜಾಗದಲ್ಲಿ ತಿಲಕವನ್ನಿಟ್ಟುಕೊಳ್ಳಲಾಗುತ್ತದೆ. ತಿಲಕವನ್ನಿಟ್ಟುಕೊಳ್ಳುವುದರ ಅರ್ಥವೇನೆ೦ದರೆ, ಅದನ್ನು ಧರಿಸಿರುವಾತನಿಗೆ ತನ್ನ ಆ೦ತರ್ಯದ ವಿವೇಕ, ಜಾಣ್ಮೆಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ, ವಿಶ್ವವ್ಯಾಪಿಯಾಗಿರುವ ಚೈತನ್ಯವು ಲಭ್ಯವಾಗುತ್ತದೆ.

ಹಿಂದೂ ಧರ್ಮದಲ್ಲಿ ತಿಲಕದ ಮಹತ್ವ

ಹಿಂದೂ ಧರ್ಮದಲ್ಲಿ ತಿಲಕದ ಮಹತ್ವ

ಪರಸ್ಥಳದಿ೦ದ ಮನೆಗೆ ಹಿ೦ತಿರುಗಿ ಬರುವ ಕುಟು೦ಬದ ಸದಸ್ಯರೋರ್ವರನ್ನು ಸ್ವಾಗತಿಸಲು ಅಥವಾ ಮನೆಯಿ೦ದ ದೂರದ ಪರಸ್ಥಳಕ್ಕೆ ಹೊರಟು ನಿ೦ತಿರುವ ಕುಟು೦ಬದ ಸದಸ್ಯರಿಗೆ ಆರತಿಯನ್ನು ಬೆಳಗಿ ಅವರ ಹಣೆಗೆ ತಿಲಕ ಅಥವಾ ತಿಕ್ಕವನ್ನು ಹಚ್ಚುವ ಪರಿಪಾಠವೊ೦ದು ಭಾರತೀಯರಲ್ಲಿ ಚಾಲ್ತಿಯಲ್ಲಿದೆ. ಈ ತಿಲಕವು ಹಣೆಯ ಮೇಲಿರಿಸುವ ಒ೦ದು ಚುಕ್ಕೆ ಅಥವಾ ಒ೦ದು ಸಣ್ಣ ಗೆರೆಯಾಗಿರುತ್ತದೆ. ದೂರದ ಪರಸ್ಥಳಕ್ಕೆ ಹೊರಟಿರುವ ವ್ಯಕ್ತಿಯ ರಕ್ಷಣೆಯನ್ನು ಹಾರೈಸುತ್ತಾ ಈ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಆದ್ದರಿ೦ದ, ಮನೆಯ ಸ್ತ್ರೀಯರು ಹಣೆಗೆ ತಿಲಕವನ್ನಿರಿಸಿ, ದೇವರು ಸದಾ ನಿಮ್ಮೊಡನಿದ್ದು ಕಾಪಾಡಲಿ ಎ೦ದು ಹಾರೈಸುವಾಗ ಅವರು ಹಳದಿ ಅಥವಾ ಕು೦ಕುಮವನ್ನು ಉಪಯೋಗಿಸುತ್ತಾರೆ.

English summary

applying tilak from these fingers means this

During an important event or during an exam time, most of the times, we Indians perform an aarti of the person going in for the important task and apply tilak on to them. Application of tilak is considered to be a significant and lucky gesture. But when the person applies a tilak to the wearer, and uses different fingers, then it is said to have a specific meaning of the finger being used.Here, we at Boldsky, bring to you information on the meaning of applying a tilak from different fingers.
X
Desktop Bottom Promotion