For Quick Alerts
ALLOW NOTIFICATIONS  
For Daily Alerts

ಪುರುಷರು ತಿಳಿದುಕೊಳ್ಳಲೇ ಬೇಕಾದ ತನ್ನ ಪತ್ನಿಯ ಗುಪ್ತ ವಿಷಯಗಳು!

By Arshad
|

ಗುಣ ನೋಡಿ ಹೆಣ್ಣು ಕೊಡು ಎಂಬುದು ಕನ್ನಡದ ಗಾದೆ. ನಿಸರ್ಗ ಗಂಡು ಹೆಣ್ಣು ಎಂಬ ಪ್ರಬೇಧಗಳನ್ನು ಸೃಷ್ಟಿಸಿ ವಂಶ ಮುಂದುವರೆಯಲು ಮಾಡಿರುವ ವ್ಯವಸ್ಥೆಯ ಪ್ರಕಾರ ದಾಂಪತ್ಯ ವ್ಯವಸ್ಥೆಯನ್ನು ನಮ್ಮ ಸಮಾಜ ನಿರ್ಮಿಸಿದೆ. ದಂಪತಿಗಳ ಸಮಾಗಮದ ಮೂಲಕ ಸಂತಾನ ಪ್ರಾಪ್ತಿಯಾಗುವುದಾದರೂ ಇದಕ್ಕೆ ಅಗತ್ಯವಿರುವ ಲೈಂಗಿಕ ಕ್ರಿಯೆಯ ಬಗ್ಗೆ ಸಮಾಜದಲ್ಲಿ ಮುಕ್ತವಾದ ಚರ್ಚೆಯಾಗಲೀ ಮಾಹಿತಿಯಾಗಲೀ ಲಭ್ಯವಿರುವುದಿಲ್ಲ. ಆದರೆ ಈ ಬಗ್ಗೆ ಪ್ರತಿ ಜೀವಿಗೂ ನಿಸರ್ಗವೇ ಮಾಹಿತಿಯನ್ನು ನೀಡುತ್ತದಂತೆ, ಹಾಗಾಗಿ 'ದೊಡ್ಡವನಾದ/ಳಾದ ಮೇಲೆ ನಿನಗೇ ಎಲ್ಲಾ ಗೊತ್ತಾಗುತ್ತೆ' ಎಂಬುದೇ ನಮ್ಮ ಹಿರಿಯರೆಲ್ಲಾ ಅನುಸರಿಸಿಕೊಂಡು ಬರುತ್ತಿದ್ದ ಪಾಠ.

ಆದರೆ ನಿಸರ್ಗ ಕಲಿಸಿರುವ ಪಾಠ ಇಂದಿನ ದಿನಗಳಲ್ಲಿ ಸಾಕಾಗದು, ಬದಲಿಗೆ ಸಂಗಾತಿಯ ದೇಹ ಹಾಗೂ ವಿಶೇಷವಾಗಿ ಅವರ ಗುಪ್ತಾಂಗಗಳ ರಚನೆ, ಜೀವವೊಂದು ಗರ್ಭದೊಳಗೆ ಅಂಕುರಗೊಂಡು ಈ ಜಗತ್ತಿಗೆ ಬರುವ ಮುನ್ನ ಪಡೆಯುವ ಪರಿವರ್ತನೆಗಳು, ಈ ಬಗ್ಗೆ ಕೈಗೊಳ್ಳಬೇಕಾದ ಎಚ್ಚರಿಕಾ ಕ್ರಮಗಳು ಮೊದಲಾದವುಗಳನ್ನು ಅರಿತುಕೊಳ್ಳುವ ಮೂಲಕ ಆರೋಗ್ಯಕರ ಜೀವನ ಹಾಗೂ ಸುಖಕರ ದಾಂಪತ್ಯವನ್ನು ಅನುಭವಿಸಬಹುದು.


ಮಹಿಳೆಯರ ದೇಹದ ಬಗ್ಗೆ ಇರುವ 5 ನಂಬಿಕೆಗಳು

ಸಾಮಾನ್ಯವಾಗಿ ಯುವತಿಯರಿಗೆ ಆಕೆಯ ತಾಯಿಯೇ ಸೂಕ್ತಕಾಲದಲ್ಲಿ ಆಕೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸೂಚನೆ ನೀಡಿ ಮಾನಸಿಕವಾಗಿ ಸಿದ್ಧಪಡಿಸುತ್ತಾಳೆ, ಆದರೆ ಯುವಕರಿಗೆ ತಮ್ಮ ದೇಹದ ಬದಲಾವಣೆಗಳ ಬಗ್ಗೆ ಅರಿವಿದ್ದರೂ ಯುವತಿಯರ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ತಿಳಿದಿರುವುದಿಲ್ಲ. ವೈಜ್ಞಾನಿಕವಾಗಿ ಅರಿತುಕೊಳ್ಳಬೇಕಾದ ವಯಸ್ಸಿನಲ್ಲಿ ಅದು ಹೇಗೋ ತಪ್ಪು ತಪ್ಪಾದ ಹಾಗೂ ಅತಿರೇಕದ ಮಾಹಿತಿಗಳನ್ನು ಪಡೆದುಕೊಂಡು ಜೀವಮಾನವಿಡೀ ತಾವು ನಂಬಿದ್ದೇ ಸರಿ ಎಂಬ ಕಲ್ಪನೆಯಲ್ಲಿರುತ್ತಾರೆ. ಇಂದಿಗೂ ಎಷ್ಟೋ ವಯಸ್ಕರಿಗೆ ಮೊಮ್ಮಕ್ಕಳಾಗಿದ್ದರೂ ಮಹಿಳೆಯರ ದೇಹಪ್ರಕೃತಿಯ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲ!


ಸಮಾಗಮಕ್ಕೆ ಮಹಿಳೆಯರಿಂದ ದೊರಕುವ ಗುಪ್ತ ಸಂಜ್ಞೆಗಳು

ನಿಸರ್ಗ ನಿಯಮದಂತೆ ಪುರುಷರಿಗೆ ಮಹಿಳೆಯರ ಮೈಕಟ್ಟು ಹಾಗೂ ಗುಪ್ತಾಂಗಗಳ ಗುಪ್ತ ಆಕಾರಗಳು ಅತಿ ಹೆಚ್ಚಿನ ಆಕರ್ಷಣೆ ಒದಗಿಸುತ್ತವೆ. ಆದರೆ ಈ ಬಗ್ಗೆ ಪುರುಷರು ಎಷ್ಟೋ ವಿಷಯಗಳನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ವಿಶೇಷವಾಗಿ ಹೊಸದಾಂಪತ್ಯಕ್ಕೆ ಕಾಲಿಟ್ಟವರು ತಾವು ಅಂದುಕೊಂಡಿದ್ದ ಮಾಹಿತಿಗಳನ್ನು ಈ ಕೆಳಗೆ ವಿವರಿಸಿರುವ ಮಾಹಿತಿಗಳೊಂದಿಗೆ ಪರಾಮರ್ಶಿಸಿ ತಪ್ಪು ಕಲ್ಪನೆಗಳನ್ನು ತೊಡೆಯುವ ಮೂಲಕ ಮುಂದಿನ ದಾಂಪತ್ಯಜೀವನವನ್ನು ಅತ್ಯಂತ ಸುಖಕರ ಹಾಗೂ ಆರೋಗ್ಯಕರವಾಗಿಸಬಹುದು...

ಮಹಿಳೆಯರ ಗುಪ್ತಾಂಗ ಹೊರಗೆ ಕಾಣುವಷ್ಟು ಮಾತ್ರವೇ ಅಲ್ಲ

ಮಹಿಳೆಯರ ಗುಪ್ತಾಂಗ ಹೊರಗೆ ಕಾಣುವಷ್ಟು ಮಾತ್ರವೇ ಅಲ್ಲ

ಪುರುಷರ ವೃಷಣಗಳು ದೇಹದಿಂದ ಹೊರಗಿರುವುದೇಕೆ ಗೊತ್ತೇ? ವೀರ್ಯಣುಗಳ ಉತ್ಪತ್ತಿಗೆ ದೇಹದ ತಾಪಮಾನಕ್ಕಿಂತಲೂ ಕೊಂಚ ಕಡಿಮೆ ತಾಪಮಾನವಿರಬೇಕು. ಹಾಗಾಗಿ ಗಂಡು ಸಸ್ತನಿಗಳ ವೃಷಣಗಳು ದೇಹದಿಂದ ಹೊರಗಿರುತ್ತವೆ. ಆದರೆ ಹೆಣ್ಣಿನ ರಚನೆಯಲ್ಲಿ ಪ್ರಮುಖ ಅಂಗಗಳೆಲ್ಲಾ ದೇಹದ ಒಳಗೇ ಇದ್ದು ಕೇವಲ ಮುಖ್ಯ ದ್ವಾರ ಮಾತ್ರ ತೆರೆಯಲು ಸಾಧ್ಯವಾಗುವ ಬಾಗಿಲಿನಂತಿರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಹೇಳುವ ಪ್ರಕಾರ ಹೆಣ್ಣಿನ ಜನನಾಂಗದ ಹೊರಭಾಗವನ್ನು 'ಯೋನಿ' ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಯೋನಿ ಎಂದರೆ ಗರ್ಭಕಂಠ ಹಾಗೂ ಯೋನಿದ್ವಾರದ ನಡುವಣ ಕೊಳವೆಯಾಗಿದ್ದು ಇದು ಅಪಾರವಾಗಿ ಹಿಗ್ಗುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಯೋನಿಯ ಬಾಗಿಲನ್ನು ತೆರೆದರೆ ಬಾಯಿಯಲ್ಲಿರುವಂತೆ ಎರಡು ತುಟಿಗಳು, ಚಂದ್ರನಾಡಿ, ಮೂತ್ರದ್ವಾರ ಹಾಗೂ ಯೋನಿದ್ವಾರಗಳಿರುತ್ತವೆ.

ಕಾಂಡೋಮ್ ಧರಿಸಿದರೂ ಪುರುಷರು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಪಡೆಯಬಹುದು

ಕಾಂಡೋಮ್ ಧರಿಸಿದರೂ ಪುರುಷರು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಪಡೆಯಬಹುದು

ಕಾಂಡೋಮುಗಳನ್ನು ಧರಿಸುವ ಮೂಲಕ ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಎಂದು ಹೆಚ್ಚಿನವರು ತಿಳಿದಿದ್ದಾರೆ. ವಾಸ್ತವವಾಗಿ ಕಾಂಡೋಮ್ ಧರಿಸುವ ಮೂಲಕವೂ ಸೋಂಕು ತಗಲುವ ಸಾಧ್ಯತೆ ಇದ್ದೇ ಇರುತ್ತದೆ. ಏಕೆಂದರೆ ಯೋನಿದ್ವಾರದ ಹೊರಚರ್ಮದಲ್ಲಿಯೂ ಕೆಲವು ಸೋಂಕುಕಾರಕ ಕ್ರಿಮಿಗಳಿದ್ದು ಇದು ಪುರುಷನ ವೃಷಣಕೋಶವನ್ನು ತಗಲುವ ಸಾಧ್ಯತೆ ಇದ್ದು ಇಲ್ಲಿಂದಲೂ ಸೋಂಕು ತಗಲಬಹುದು. ಪರಿಣಾಮವಾಗಿ ಹರ್ಪಿಸ್, molluscum contagiosum ಮೊದಲಾದ ಲೈಂಗಿಕ ರೋಗಗಳೂ, ಇನ್ನೂ ಹೆಚ್ಚಾಗಿ ಅಸಹ್ಯಕರವಾದ ಹೇನುಗಳು ಸಹಾ ಆಕ್ರಮಿಸಿಕೊಳ್ಳಬಹುದು.

ಕಾಂಡೋಮ್ ಧರಿಸಿದರೂ ಪುರುಷರು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಪಡೆಯಬಹುದು

ಕಾಂಡೋಮ್ ಧರಿಸಿದರೂ ಪುರುಷರು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಪಡೆಯಬಹುದು

ಪ್ರತಿ ಮಹಿಳೆಯ ಮುಖಚಹರೆ ಹೇಗೆ ಒಂದೇ ಪ್ರಕಾರವಾಗಿರುವುದಿಲ್ಲವೋ ಹಾಗೇ ದೇಹರಚನೆಯೂ ಕೊಂಚ ಭಿನ್ನವಾಗಿರುತ್ತದೆ. ಬಣ್ಣ, ಆಕಾರ, ಮೈಕಟ್ಟು, ಮೈಗಂಧ ಮೊದಲಾದವುಗಳಂತೆಯೇ ಗುಪ್ತಾಂಗಗಳೂ ಪ್ರತಿ ಮಹಿಳೆಯಿಂದ ಮಹಿಳೆಗೆ ಕೊಂಚ ಭಿನ್ನವಾಗಿರುತ್ತದೆ.

ವಸ್ತಿಕುಹರದ ಮುಂಭಾಗದ ಕೂದಲಿನ ಕಾರ್ಯಗಳು

ವಸ್ತಿಕುಹರದ ಮುಂಭಾಗದ ಕೂದಲಿನ ಕಾರ್ಯಗಳು

ಹದಿಹರೆಯದಲ್ಲಿಯೇ ಹುಡುಗರಿಗೂ ಹುಡುಗಿಯರಿಗೂ ವಸ್ತಿಕುಹರದ ಮುಂಭಾಗದಲ್ಲಿ ಹಾಗೂ ಕಂಕುಳಲ್ಲಿ ತಲೆಗೂದಲಿನಂತೆ ಕೂದಲು ನವಿರಾಗಿ ಬೆಳೆಯಲು ಪ್ರಾರಂಭಿಸುತ್ತದೆ. ದಿನಗಳೆದಂತೆ ಇದು ಗಾಢವಾಗುತ್ತಾ ಹಾಗೂ ಸೊಂಪಾಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಈ ಕೂದಲನ್ನು ಹೆಚ್ಚಿನವರು ಅನಗತ್ಯವಾದುದು ಎಂದು ತಿಳಿದಿದ್ದಾರೆ. ಆದರೆ ವಿಶೇಷವಾಗಿ ಮಹಿಳೆಯರಲ್ಲಿ ಈ ಕೂದಲಿಗೆ ವಿಶಿಷ್ಟ ಕಾರ್ಯಗಳಿವೆ.ಮೊದಲನೆಯದಾಗಿ ಯೋನಿದ್ವಾರದ ಮೂಲಕ ಸೂಕ್ಷ್ಮಕಣಗಳು ಹಾದುಹೋಗದಂತೆ ರಕ್ಷಣೆ ಒದಗಿಸುತ್ತದೆ. ಎರಡನೆಯದಾಗಿ ಇದು ಯುವತಿಯ ದೇಹ ಈಗ ಸಂತಾನೋತ್ಪತ್ತಿಗೆ ತಯಾರಾಗಿದೆ ಎಂದು ಸೂಚ್ಯವಾಗಿ ಹೇಳುತ್ತದೆ. ಮೂರನೆಯದಾಗಿ ಈ ಕೂದಲಿನಲ್ಲಿರುವ ಫೆರೋಮೋನುಗಳು ಸಂಗಾತಿಯ ಗಮನವನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಮಾಗಮದ ಸಮಯದಲ್ಲಿ ನೋವು ಸಾಮಾನ್ಯ

ಸಮಾಗಮದ ಸಮಯದಲ್ಲಿ ನೋವು ಸಾಮಾನ್ಯ

ದಂಪತಿಗಳ ನಡುವಣ ಸಮಾಗಮದಲ್ಲಿ ಕೊಂಚ ನೋವು ಅನುಭವಿಸಬೇಕಾದುದು ಅನಿವಾರ್ಯವಾಗಿದೆ. ಸುಮಾರು 30% ರಷ್ಟು ಮಹಿಳೆಯರು ಸಮಾಗಮದ ಕಡೆಯ ಹಂತದಲ್ಲಿ ಹೆಚ್ಚಿನ ನೋವು ಅನುಭವಿಸುತ್ತಾರೆ. ಒಂದು ವೇಳೆ ನೋವು ಹೆಚ್ಚೇ ಆಗಿದ್ದರೆ ವೈದ್ಯಕೀಯ ಭಾಷೆಯಲ್ಲಿ vulvodynia ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಮಹಿಳೆಯ ಗುಪ್ತಾಂಗದ ರಚನೆ ಅರಿಯದೇ ಪುರುಷ ಅವಸರಿಸುವುದು ಈ ನೋವಿಗೆ ಪ್ರಮುಖ ಕಾರಣವಾಗಿದೆ. ಈ ನೋವನ್ನು ಕಡಿಮೆ ಮಾಡಲು ಅಥವಾ ಇಲ್ಲವಾಗಿಸಲು ಸೂಕ್ತ ಜಾರುಕ, ಸಮರ್ಪಕ ಭಂಗಿ ಹಾಗೂ ಇಬ್ಬರಿಗೂ ಹಿತವೆನಿಸುವ ಚಟುವಟಿಕೆಗಳನ್ನು ಮಾತ್ರವೇ ಅನುಸರಿಸಬೇಕು.

ಉದ್ರೇಕಗೊಂಡಾಗ ಯೋನಿಯ ಗಾತ್ರವೂ ಹೆಚ್ಚುತ್ತದೆ

ಉದ್ರೇಕಗೊಂಡಾಗ ಯೋನಿಯ ಗಾತ್ರವೂ ಹೆಚ್ಚುತ್ತದೆ

ಪುರುಷರ ಗುಪ್ತಾಂಗ ಉದ್ರೇಕಗೊಂಡಾಗ ಸಾಮಾನ್ಯ ಸ್ಥಿತಿಗಿಂತ ಸುಮಾರು ಎರಡರಿಂದ ಮೂರು ಪಟ್ಟು ಹಿಗ್ಗುತ್ತದೆ ಹಾಗೂ ರಕ್ತ ತುಂಬಿಕೊಂಡು ದೃಢವಾಗಿರುತ್ತದೆ. ಇದೇ ರೀತಿ ಮಹಿಳೆಯರ ಗುಪ್ತಾಂಗವೂ ಉದ್ರೇಕಗೊಂಡಾಗ ಯೋನಿಯ ಗಾತ್ರವೂ ಹಿಗ್ಗುತ್ತದೆ. ಆದರೆ ಇದು ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಆದರೆ ಒಳಭಾಗದ ಗೋಡೆಗಳಲ್ಲಿ ಹೆಚ್ಚು ರಕ್ತತುಂಬಿಕೊಳ್ಳುತ್ತವೆ ಹಾಗೂ ಆರ್ದ್ರತೆಯೂ ಹೆಚ್ಚುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ vaginal tenting ಎಂದು ಕರೆಯುತ್ತಾರೆ.

ಕೆಲವು ಸಂದರ್ಭಗಳಲ್ಲಿ ಇದು ಹೊರಬೀಳಬಹುದು

ಕೆಲವು ಸಂದರ್ಭಗಳಲ್ಲಿ ಇದು ಹೊರಬೀಳಬಹುದು

ಅಪರೂಪದ ಸಂದರ್ಭಗಳಲ್ಲಿ ಯೋನಿಯ ಒಳಗೋಡೆಗಳು ಸಡಿಲವಾಗಿ ಪದರವೊಂದು ಒಳಭಾಗ ಹೊರಕಾಣುವಂತೆ ಹೊರಬೀಳಬಹುದು. ಇದಕ್ಕೆ ಒಳಗೋಡೆಗಳ ಸ್ನಾಯುಗಳ ಶಕ್ತಿಗುಂದುವುದು, ಗುದನಾಳ, ಗರ್ಭಕೋಶ ಅಥವಾ ಮೂತ್ರಕೋಶಗಳಲ್ಲಿ ಯಾವುದಾದರೊಂದು ಅಂಗ ಯಾವುದೋ ಕಾರಣದಿಂದ ಈ ಭಾಗವನ್ನು ಒಳಗಿನಿಂದ ಹೊರದಬ್ಬುವ ಮೂಲಕ ಗೋಡೆಗಳು ಹೊರದಬ್ಬಲ್ಪಡಬಹುದು. ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಯನ್ನು ‘vaginal prolapsed' ಎಂದು ಕರೆಯುತ್ತಾರೆ. ಅಪರೂಪದ ಸಂದರ್ಭಗಳಲ್ಲಿ ಸಾಮಾನ್ಯ ಹೆರಿಗೆಯ ಬಳಿಕ ಈ ಸ್ಥಿತಿ ಎದುರಾಗುತ್ತದೆ. ಈ ಸ್ಥಿತಿ ಎದುರಾಗುವ ಪರಿಸ್ಥಿತಿ ಇದ್ದರೆ ವೈದ್ಯರು ಮೊದಲೇ ಸಿಸೇರಿಯನ್ ಅಥವಾ ಸಿ-ಸೆಕ್ಷನ್ ಹೆರಿಗೆಯೇ ಕ್ಷೇಮ ಎಂದು ಮೊದಲೇ ಎಚ್ಚರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

ಈ ಅಂಗಕ್ಕೆ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ಗುಣವಿದೆ

ಈ ಅಂಗಕ್ಕೆ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ಗುಣವಿದೆ

ಸಾಮಾನ್ಯವಾಗಿ ಬಾಯಿಯಂತೆಯೇ ಮಹಿಳೆಯರ ಗುಪ್ತಾಂಗವೂ ಒಳಗಿನಿಂದ ತೇವವಾಗಿರುವ ಕಾರಣ ಸೋಂಕು ತಗಲುವ ಸಾಧ್ಯತೆ ಹೆಚ್ಚೇ ಇರುತ್ತದೆ. ವಾಸ್ತವದಲ್ಲಿ ಇಲ್ಲಿಗಿಂತಲೂ ಬಾಯಿ ಮೂಗುಗಳಲ್ಲಿಯೇ ಅತಿ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವೆ. ಈ ಸೋಂಕು ಉಂಟಾಗದಂತೆ ಕೈಗೊಳ್ಳುವ ಸ್ವಚ್ಛತಾ ಕ್ರಮಗಳೇ ಕೆಲವೊಮ್ಮೆ ಸೋಂಕಿಗೆ ಕಾರಣವಾಗಬಹುದು. ಈ ಭಾಗವನ್ನು ಸ್ವಚ್ಛಗೊಳಿಸಿ ಪಿ ಎಚ್ ಮಟ್ಟವನ್ನು ಸಮಸ್ಥಿತಿಯಲ್ಲಿಡಲು ನಿಸರ್ಗವೇ ಕೆಲವು ಉಪಾಯಗಳನ್ನು ನೀಡಿದೆ. ಆದರೆ ಸ್ವಚ್ಛತಾ ಕ್ರಮದ ಮೂಲಕ ಈ ಮಟ್ಟ ಕೊಂಚ ಮೇಲೆ ಕೆಳಗಾಗಿ ಸೋಂಕು ಹೆಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಸರ್ಗದ ಮೇಲೆ ಭಾರ ಹಾಕಿ ಕೇವಲ ಸ್ವಚ್ಛ ನೀರು ಮತ್ತು ಸಾಮಾನ್ಯ ಸೋಪಿನಿಂದ ತೊಳೆದುಕೊಂಡರೆ ಸಾಕಾಗುತ್ತದೆ.

English summary

All About A Woman’s Privates A Man Needs To Know

Here are certain things that a man needs to know about a woman's private parts and it is all about the "V". These are some of the intruding facts that can simply blow your mind...
X
Desktop Bottom Promotion