ಕೈಗೆ, ಕಾಲಿಗೆ, ಬಂಗಾರ ಧರಿಸುವ ಮುನ್ನ ತಿಳಿದಿರಲಿ ಈ ಸಂಗತಿಗಳು!

By: Hemanth
Subscribe to Boldsky

ಭಾರತೀಯರಿಗೆ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಬಂಗಾರದ ಆಭರಣ ಇದ್ದರೂ ಸಾಲದು. ಪ್ರತಿಯೊಬ್ಬರಿಗೂ ಬಂಗಾರವೆಂದರೆ ಅಚ್ಚುಮೆಚ್ಚು. ಬಂಗಾರವೇ ಹಾಗೆ. ತುಂಬಾ ಮೌಲ್ಯ ಹೊಂದಿರುವಂತಹ ಹಳದಿ ಲೋಹವು ಕಷ್ಟದ ಸಮಯದಲ್ಲೂ ನಮಗೆ ನೆರವಿಗೆ ಬರುವುದು. ಬಂಗಾರವಿದ್ದರೆ ಯಾವುದೇ ಸಮಯದಲ್ಲೂ ನಮಗೆ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡರೆ ಅದನ್ನು ಅಡವಿಟ್ಟು ಹಣ ಪಡೆಯಬಹುದು.

ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಬಂಗಾರ ಧರಿಸುವ ಬಗ್ಗೆ. ಹೌದು! ಬಂಗಾರ ಅಥವಾ ಬೇರೆ ಆಭರಣಗಳನ್ನು ಧರಿಸುವುದರಿಂದ ನಮ್ಮ ಗ್ರಹಗತಿ ಮೇಲೆ ಪರಿಣಾಮ ಉಂಟಾಗಬಹುದು. ಯಾವ್ಯಾವ ಲೋಹ ಹೇಗೆ ಧರಿಸಬೇಕು ಎಂದು ತಿಳಿದುಕೊಳ್ಳುವುದು ಅತೀ ಅಗತ್ಯ. ಇದರಿಂದ ತುಂಬಾ ಬೆಲೆ ಕೊಟ್ಟು ಖರೀದಿಸಿ ಧರಿಸಿರುವ ಆಭರಣವು ನಿಮಗೆ ದುರಾದೃಷ್ಟ ತರದಿರಲಿ ಅಥವಾ ಅನಾರೋಗ್ಯ ಉಂಟು ಮಾಡದಿರಲಿ ಎನ್ನುವುದೇ ನಮ್ಮ ಆಶಯ. ಆಭರಣಗಳನ್ನು ಹೇಗೆ ಧರಿಸಬೇಕು ಎಂದು ತಿಳಿಯಲು ಸ್ಲೈಡ್ ಕ್ಲಿಕ್ ಮಾಡುತ್ತಾ ಹೋಗಿ..... 

ಎಡದ ಕೈಗೆ

ಎಡದ ಕೈಗೆ

ಎಡದ ಕೈಗೆ ಬಂಗಾರದ ಆಭರಣ ಧರಿಸುವುದರಿಂದ ನಿಮಗೆ ಸಮಸ್ಯೆಯಾಗಬಹುದು. ನಿಮಗೆ ಎಡ ಕೈಗೆ ಬಂಗಾರ ಧರಿಸಬೇಕೆಂದು ಇದ್ದರೆ ಮೊದಲು ಜ್ಯೋತಿಷಿಯ ಸಲಹೆ ಪಡೆಯಿರಿ.

ಕಾಲುಗಳು

ಕಾಲುಗಳು

ಕಾಲುಗಳಿಗೆ ಬಂಗಾರದ ಗೆಜ್ಜೆ ಅಥವಾ ಕಾಲುಂಗರ ಧರಿಸಬಾರದು. ಯಾಕೆಂದರೆ ಇದರಿಂದ ಅರೋಗ್ಯದ ಸಮಸ್ಯೆ ಬರಬಹುದು.

ಬಂಗಾರವನ್ನು ಎಲ್ಲಿ ಇಡಬೇಕು

ಬಂಗಾರವನ್ನು ಎಲ್ಲಿ ಇಡಬೇಕು

ಮನೆಯ ಈಶಾನ್ಯ ಭಾಗದ ಕಪಾಟಿನಲ್ಲಿ ಬಂಗಾರವನ್ನು ಇಡಬೇಕು.

ಗರ್ಭಿಣಿ ಮಹಿಳೆಯರು

ಗರ್ಭಿಣಿ ಮಹಿಳೆಯರು

ಗರ್ಭ ಧರಿಸಿರುವ ಮಹಿಳೆಯರು ಹೆಚ್ಚಿನ ಬಂಗಾರ ಧರಿಸಬಾರದು. ಯಾಕೆಂದರೆ ಇದರಿಂದ ಸಮಸ್ಯೆಯಾಗಬಹುದು.

ಗರ್ಭ ಧರಿಸಬೇಕೆಂದಿದ್ದರೆ

ಗರ್ಭ ಧರಿಸಬೇಕೆಂದಿದ್ದರೆ

ನಿಮಗೆ ಮಗು ಬೇಕೆಂದಿದ್ದರೂ ಮಗು ಆಗುತ್ತಿಲ್ಲವೆಂದಾದೆ ನೀವು ಉಂಗುರದ ಬೆರಳಿಗೆ ಬಂಗಾರ ಧರಿಸಬೇಕು. ಇದರಿಂದ ನಿಮ್ಮ ಗ್ರಹಗತಿಗಳಲ್ಲಿ ಸುಧಾರಣೆಯಾಗುವುದು.

ಬಂಗಾರ ದಾನ ಮಾಡುವುದು

ಬಂಗಾರ ದಾನ ಮಾಡುವುದು

ಸನ್ಯಾಸಿ ಅಥವಾ ಗುರುಗಳಿಗೆ ಬಂಗಾರ ದಾನ ಮಾಡುವುದರಿಂದ ಗ್ರಹಗತಿಗಳ ಆಶೀರ್ವಾದವು ನಿಮಗೆ ಸಿಗುವುದು. ನಿಮಗೆ ಆತ್ಮೀಯರಲ್ಲದೆ ಇರುವವರಿಂದ ಬಂಗಾರ ಸ್ವೀಕರಿಸಬೇಡಿ.

ಬಂಗಾರ ಸಿಗುವುದು ಮತ್ತು ಕಳಕೊಳ್ಳುವುದು

ಬಂಗಾರ ಸಿಗುವುದು ಮತ್ತು ಕಳಕೊಳ್ಳುವುದು

ಇವೆರಡು ತುಂಬಾ ದುರಾದೃಷ್ಟವೆಂದು ನಂಬಲಾಗಿದೆ. ಯಾವುದೇ ರೀತಿಯ ಬಂಗಾರದ ಆಭರಣ ಕಳೆದುಕೊಂಡರೆ ಅದು ಮುಂದೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಯಾರಿಂದಲಾದರೂ ಬಂಗಾರ ಸ್ವೀಕರಿಸಿದರೆ ನಿಮಗೆ ಖರ್ಚು ಹೆಚ್ಚಾಗುವುದು.

English summary

According to Vastu, Do Not Wear Gold On Your Left Hand

We all love wearing gold and in our country it is considered to be a symbol of auspiciousness and good fortune. But not knowing how to wear it can cause troubles in your life that you might have not thought about. The metals we put on our body have a direct impact on our planetary positions. So to make sure the expensive jewelry is not making you anxious or unhealthy here are a few tips.
Story first published: Tuesday, September 12, 2017, 17:01 [IST]
Subscribe Newsletter