For Quick Alerts
ALLOW NOTIFICATIONS  
For Daily Alerts

  ಈ ಹಳ್ಳಿಯಲ್ಲಿ ಅವಿವಾಹಿತ ಯುವಕರು ವಧುವಿನ ಶವದೊಂದಿಗೆ ಮದುವೆಯಾಗುತ್ತಾರೆ!

  By Arshad
  |

  ನಿಸರ್ಗ ಮಾಡಿರುವ ಗಂಡು ಹೆಣ್ಣಿನ ಸಂಬಂಧದ ಅಗತ್ಯತೆಗೆ ಸಮಾಜ ನೀಡುರುವ ಅತ್ಯಂತ ಸುಂದರ ವ್ಯವಸ್ಥೆಯೇ ವಿವಾಹ. ಈ ಬಂಧನಕ್ಕೆ ಒಳಗಾದ ದಂಪತಿಗಳು ಇಡಿಯ ಜೀವಮಾನ ತಮ್ಮ ಸಂಗಾತಿಗೆ ಬದ್ದರಾಗಿದ್ದು ಜೀವನದ ಕಷ್ಟ ಸುಖಗಳಲ್ಲಿ ಸಮಾನರಾಗಿ ಭಾಗಿಯಾಗುವ ಮೂಲಕ ಜೀವನವನ್ನು ಕಳೆಯುವ ವ್ಯವಸ್ಥೆಯಾಗಿದೆ. ಒಂದು ವೇಳೆ ಈ ವ್ಯವಸ್ಥೆಯಲ್ಲಿ ವಧುವಿಗೆ ಜೀವವೇ ಇಲ್ಲದಿದ್ದರೆ? ಇದೆಂಥಾ ಪ್ರಶ್ನೆ?

  ಇಲ್ಲಿ ಗಂಡನ ತಮ್ಮನೊಂದಿಗೂ ಹಾಸಿಗೆ ಹಂಚಿಕೊಳ್ಳಬೇಕಂತೆ! ಎಲ್ಲಿದೆ ನ್ಯಾಯ?

  ಜೀವವೇ ಇಲ್ಲದ ಬಳಿಕ ಜೀವನವೆಲ್ಲಿಂದ? ಜೀವವಿಲ್ಲದ ವಧುವನ್ನು ವರಿಸುವುದುದೆಂದರೆ? ಇದೆಂಥಾ ಹುಚ್ಚು? ಆದರೆ ಇದು ಕಲ್ಪನೆಯಲ್ಲ, ಬದಲಿಗೆ ಚೀನಾದಲ್ಲಿ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯವಾಗಿದೆ. ಇಲ್ಲಿ ಅವಿವಾಹಿತ ಪುರುಷರು ವಧುವಿನ ಶವದೊಂದಿಗೆ ವಿವಾಹವಾಗುತ್ತಾರೆ. ಬನ್ನಿ, ಈ ವಿಚಿತ್ರ ಪರಂಪರೆಯ ಬಗ್ಗೆ ಅರಿಯೋಣ:

  ಈ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ

  ಈ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ

  ನಮಗೆ ಇದು ಬೆಚ್ಚಿ ಬೀಳಿಸುವ ಸಂಗತಿಯಾಗಿದ್ದರೂ ಚೀನಾದಲ್ಲಿ ಇದು ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ. ಚೀನಾ ಮಾತ್ರವಲ್ಲ, ಇತ್ತ ಆಫ್ರಿಕಾದ ಸೂಡಾನ್ ಹಾಗೂ ಯೂರೋಪ್ ನ ಫ್ರಾನ್ಸ್ ದೇಶದಲ್ಲಿಯೂ ಈ ವ್ಯವಸ್ಥೆ ಇದೆ ಎಂದು ತಿಳಿದುಬರುತ್ತದೆ. ಇಲ್ಲಿ ವ್ಯಕ್ತಿಗಳು ಮೃತರಾದ ಬಳಿಕ ಅವರ ವಿವಾಹವನ್ನು ನಡೆಸಲು ಮನಯವರೇ ಕ್ರಮ ಕೈಗೊಳ್ಳುತ್ತಾರೆ.

  ಏಕಾಗಿ ಈ ವಿಧಿಯನ್ನು ನಡೆಸಲಾಗುತ್ತದೆ?

  ಏಕಾಗಿ ಈ ವಿಧಿಯನ್ನು ನಡೆಸಲಾಗುತ್ತದೆ?

  ಮೃತ ವ್ಯಕ್ತಿಯ ಮದುವೆಯನ್ನು ಮಾಡಲು ಕುಟುಂಬದವರೇ ಹೆಚ್ಚು ಉತ್ಸುಕರಾಗಿರುತ್ತಾರೆ. ಇದಕ್ಕೆ ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖ ಕಾರಣ ಒಂದು ವೇಳೆ ನಿಶ್ಚಿತಾರ್ಥವಾದ ಬಳಿಕ ಮದುವೆಗೂ ಮುನ್ನವೇ ಹೆಣ್ಣು ಅಕಾಲ ಮರಣಕ್ಕೀಡಾದರೆ ಅವಿವಾಹಿತಳಾಗಿರುವ ಮಗಳನ್ನು ವಂಶಾವಳಿಯಲ್ಲಿ ಸೇರಿಸದೇ ವಿದಾಯ ಹೇಳುವಂತಿಲ್ಲವಾದುದರಿಂದ ಅಂತಿಮ ಸಂಸ್ಕಾರಕ್ಕೂ ಮುನ್ನ ಮದುವೆ ಮಾಡಿ ವಿದಾಯ ಹೇಳಲಾಗುತ್ತದೆ. ಇನ್ನೊಂದು ಕಾರಣವೆಂದರೆ ಚೀನಾದಲ್ಲಿ ಎಲ್ಲಿಯವರೆಗೆ ದೊಡ್ಡಮಗನ ಮದುವೆಯಾಗುವುದಿಲ್ಲವೋ ಅಲ್ಲಿಯವರೆಗೆ ತಮ್ಮಂದಿರೂ ಮದುವೆಯಾಗುವಂತಿಲ್ಲ. ಹಾಗಾಗಿ ಒಂದು ವೇಳೆ ದೊಡ್ಡಮಗನ ವಧು ಅಕಾಲ ಮರಣಕ್ಕೀಡಾದರೆ ಆಕೆಯೊಂದಿಗೆ ಮದುವೆಯನ್ನು ಪೂರೈಸಿಯೇ ವಿವಾಹಿತನ ಪಟ್ಟ ಪಡೆದು ತಮ್ಮಂದಿರ ಮದುವೆಗೆ ಅಡ್ಡಿಯಾಗದಂತೆ ಮಾಡಿರುವ ವ್ಯವಸ್ಥೆಯೂ ಆಗಿದೆ.

  ಈ ಕೆಲಸಕ್ಕೂ ಮಧ್ಯವರ್ಥಿಗಳಿದ್ದಾರೆ

  ಈ ಕೆಲಸಕ್ಕೂ ಮಧ್ಯವರ್ಥಿಗಳಿದ್ದಾರೆ

  ghost marriage ಎಂದು ಕರೆಯಲಾಗುವ ಈ ಪದ್ದತಿಯನ್ನು ಸುಗಮಗೊಳಿಸಲು ಮಧ್ಯವರ್ತಿಗಳಿದ್ದಾರೆ. ಇವರ ಕೆಲಸ ಕಾನೂನುಬದ್ದವಾಗಿದ್ದು ಇವರ ಕೆಲಸವೆಂದರೆ ಸಾವು ಸಂಭವಿಸಿದ ಬಳಿಕ ಮನೆಯವರಿಂದ ಮಾಹಿತಿ ಪಡೆದು ಊರಿನ ಪ್ರಮುಖ ದೇವಾಲಯದ ಅರ್ಚಕ (ಟಾವೋ ಅರ್ಚಕ)ರ ಮನೆಯ ಬಾಗಿಲಿನಲ್ಲಿ ಹೀಗೊಂದು (ಮೃತ)ವಧುವಿದ್ದಾಳೆ, ಜೀವಂತ ವರ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡುತ್ತಾರೆ. ಪ್ರಾರ್ಥನೆಗೆಂದು ಬಂದ ಜನರು ಇದನ್ನು ಓದಿ ಸೂಕ್ತ ವರನನ್ನು ಸೂಚಿಸುತ್ತಾರೆ. ಇವರಿಬ್ಬರ ಜಾತಕವನ್ನು ಪರಿಗಣಿಸಿಯೇ ಈ ವಿವಾಹವನ್ನು ನಡೆಸಲಾಗುತ್ತದೆ.

  ವಿವಾಹಕ್ಕೆ ಮೃತ ಶರೀರವನ್ನು ಹೊರತೆಗೆಯಲಾಗುತ್ತದೆ

  ವಿವಾಹಕ್ಕೆ ಮೃತ ಶರೀರವನ್ನು ಹೊರತೆಗೆಯಲಾಗುತ್ತದೆ

  ವಿವಾಹಕ್ಕೂ ಮುನ್ನ ಮೃತಶರೀರವನ್ನು ಅವರ ಶವಪೆಟ್ಟಿಗೆಯಿಂದ ಹೊರತೆಗೆದು ವಧುವಿನ ಹೊಸ ಉಡುಗೆ ಹಾಗೂ ಆಭರಣಗಳೊಂದಿಗೆ ಅಲಂಕರಿಸಲಾಗುತ್ತದೆ. ಚೀನಾ ದೇಶದ ಇತರ ವಿವಾಹ ಸಂಪ್ರದಾಯಗಳ ಪ್ರಕಾರವೇ ಈ ವಿವಾಹವನ್ನೂ ಪೂಜಾರಿಗಳು ನೆರವೇರಿಸಿ ಕೊಡುತ್ತಾರೆ.

  ವಧುವಿಗೆ ವಿಶೇಷ ಆರೈಕೆಯನ್ನೂ ನೀಡಲಾಗುತ್ತದೆ

  ವಧುವಿಗೆ ವಿಶೇಷ ಆರೈಕೆಯನ್ನೂ ನೀಡಲಾಗುತ್ತದೆ

  ಈ ಕಾರ್ಯಕ್ಕಾಗಿ ವಧುವಿನ ಶರೀರಕ್ಕೆ ವಿಶೇಷ ಆರೈಕೆ ಹಾಗೂ ಜೀವಂತವಿರುವವರಿಗೆ ಮಾಡುವಂತೆಯೇ ಅಲಂಕಾರ ಹಾಗೂ ಇತರ ನೆರವನ್ನು ನೀಡಲಾಗುತ್ತದೆ. ಬೆಳಗ್ಗಿನ ವಿಶೇಷ ವಿವಾಹಖಾದ್ಯವನ್ನೂ ತಿನ್ನಿಸಲಾಗುತ್ತದೆ. ಬಳಿಕವೇ ವರನ ಮನೆಗೆ ತೆರಳಿ ಉಳಿದ ಸಂಪ್ರದಾಯಗಳನ್ನು ನಡೆಸಲಾಗುತ್ತದೆ.

  ರಾಜಸ್ಥಾನದ ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ!!

  ಈ ವಿವಾಹಗಳ ಬಗ್ಗೆ ಇರುವ ನಂಬಿಕೆಗಳು

  ಈ ವಿವಾಹಗಳ ಬಗ್ಗೆ ಇರುವ ನಂಬಿಕೆಗಳು

  ಈ ವಿವಾಹದ ಬಗ್ಗೆ ಕೆಲವಾರು ನಂಬಿಕೆಗಳಿದ್ದು ಇದರಲ್ಲಿ ಪ್ರಮುಖವಾದುದೆಂದರೆ ವಿವಾಹದ ಬಳಿಕ ವಧುವಿನ ಆತ್ಮ ಸ್ವರ್ಗದಲ್ಲಿ ಸುಖವಾಗಿರುತ್ತದೆ ಎಂಬುದಾಗಿದೆ. ಸ್ವರ್ಗದಲ್ಲಿ ಅವಿವಾಹಿತೆಯರಿಗೆ ಸ್ಥಾನವಿಲ್ಲದಿರುವುದರಿಂದ ಸಾವಿಗೂ ಮುನ್ನ ಭೂಮಿಯಲ್ಲಿಯೇ ಮದುವೆಯಾಗಿರುವುದು ಅವಶ್ಯ. ಇದು ಸಾಧ್ಯವಾಗದಿದ್ದರೆ ಸಾವಿನ ಬಳಿಕವಾದರೂ ಮದುವೆಯಾಗುವುದು ಅಗತ್ಯವಾದುದರಿಂದ ಈ ಪದ್ದತಿ ನಡೆದುಬಂದಿದೆ.

  ಇದೇ ಕಾರಣಕ್ಕೆ ಕಣ್ಮರೆಯಾದ ಮಗಳಿಗೆ ಸ್ವರ್ಗದಲ್ಲಿ ಉತ್ತಮ ಜೀವನ ನಡೆಸುವಂತೆ ಮಾಡಲು ಈಕೆಯ ತಂದೆತಾಯಿಯರೇ ಮದುವೆಗೆ ಮೊದಲಾಗಿ ಹೆಚ್ಚು ಉತ್ಸುಕತೆ ತೋರುತ್ತಾರೆ. ಅಷ್ಟೇ ಅಲ್ಲ, ಒಂದು ವೇಳೆ ಅವಿವಾಹಿತೆ ಮೃತಳಾದ ಬಳಿಕವೂ ವಿವಾಹ ನೆರವೇರಿಸದೇ ಇದ್ದರೆ ಆಕೆಯ ಮೃತದೇಹವನ್ನು ಹೂಳಲು ಸ್ಥಳ ನೀಡಲು ನಿರಾಕರಿಸಲಾಗುತ್ತದೆ. ಈ ವಿಚಿತ್ರ ಸಂಪ್ರದಾಯದ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯುವ ಮೂಲಕ ನಮಗೆ ಖಂಡಿತಾ ತಿಳಿಸಿ.

  English summary

  A Village Where Single Men Marry Dead Brides

  Marriage is the most beautiful bond/relationship in which the couple vow to each other to be together through thick and thin and every ups and downs. But what happens when the bond becomes lifeless? The relationship dies eventually. But what about the relationship where people marry the dead in REAL? Sounds impossible, right? Well, this is what is being practiced in a place in China where single men are married off to dead women!! Though this sounds bizarre, this practice is for real and it has been practiced since years. So, check out on more details about this bizarre practice.
  Story first published: Saturday, November 11, 2017, 12:45 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more