For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಆಧಾರದ ಮೇಲೆ ಉಡುಗೊರೆ ದೊರೆತರೆ ಎಲ್ಲವೂ ಶುಭವಾಗುವುದು!

By Divya Pandith
|

ಹಬ್ಬ ಎಂದಾಕ್ಷಣ ಸಿಹಿ ಊಟ, ಸಡಗರ, ದೇವರ ಅಲಂಕಾರ ಹೀಗೆ ಅನೇಕ ವಿಚಾರಗಳು ನಮ್ಮ ಆಲೋಚನೆಯಲ್ಲಿ ಬರುತ್ತವೆ. ಹಾಗೆಯೇ ಕೆಲವು ಹಬ್ಬಗಳಲ್ಲಿ ನಮ್ಮವರಿಗೆ ಅಥವಾ ಪ್ರೀತಿ ಪಾತ್ರರಿಗೆ ವಿಶೇಷವಾಗಿ ಉಡುಗೊರೆ ನೀಡುವುದು ಸಂಪ್ರದಾಯ. ಪ್ರತಿವರ್ಷವೂ ಹಬ್ಬಕ್ಕೆ ಉಡುಗೊರೆ ನೀಡುವ ಪದ್ಧತಿ ಇರುವಾಗ ಹೊಸ ಹೊಸ ಉಡುಗೊರೆಯ ಆಲೋಚನೆ ಇರಬೇಕು. ಕೆಲವೊಮ್ಮೆ ಎಂತಹ ಉಡುಗೊರೆ ನೀಡಬೇಕು ಎನ್ನುವ ಗೊಂದಲ ನಮ್ಮನ್ನು ಕಾಡುತ್ತಿರುತ್ತದೆ.

ಇಂತಹ ಒಂದು ಗೊಂದಲಕ್ಕೆ ತೆರೆ ಎಳೆದು, ರಾಶಿ ಚಕ್ರದ ಆಧಾರದ ಮೇಲೆ ಯಾವೆಲ್ಲಾ ಉಡುಗೊರೆ ನೀಡಬಹುದು? ಎನ್ನುವ ವಿಚಾರವನ್ನು ನಾವಿಲ್ಲಿ ನಿಮಗೆ ಹೇಳುತ್ತೇವೆ. ಅಲ್ಲದೆ ನಿಮಗೆ ಉಡುಗೊರೆ ನೀಡುವ ವ್ಯಕ್ತಿಯ ರಾಶಿಚಕ್ರದ ಆಧಾರದ ಮೇಲೆ ವ್ಯಕ್ತಿಯನ್ನು ಹೇಗೆ ವಿಶ್ಲೇಷಿಸಬಹುದು ಎನ್ನುವುದನ್ನು ಸಹ ನಾವಿಲ್ಲಿ ವಿವರಿಸುತ್ತಿದ್ದೇವೆ...

ಮೇಷ ರಾಶಿಯವರು ಕೊಡುವ ಉಡುಗೊರೆ

ಮೇಷ ರಾಶಿಯವರು ಕೊಡುವ ಉಡುಗೊರೆ

ಮೇಷ ರಾಶಿಯವರು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಸ್ವಲ್ಪ ತಾಳ್ಮೆಯೂ ಕಡಿಮೆ ಎಂದು ಹೇಳಬಹುದು. ಇವರು ಕೆಲವೊಮ್ಮೆ ಕೊನೇ ಗಳಿಗೆಯಲ್ಲಿ ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇವರು ಕೊಡುವ ಉಡುಗೊರೆ ಇವರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಸ್ವಾಭಾವಿಕ ಹಾಗೂ ರೊಮ್ಯಾಂಟಿಕ್ ಉಡುಗೊರೆಯಾಗಿರುತ್ತದೆ.

ಮೇಷ ರಾಶಿಯವರಿಗೆ ನೀವು ಉಡುಗೊರೆ ನೀಡುವಾಗ

ಮೇಷ ರಾಶಿಯವರಿಗೆ ನೀವು ಉಡುಗೊರೆ ನೀಡುವಾಗ

ಇವರಿಗೆ ಉಡುಗೊರೆ ಮುಖ್ಯವಾಗಿರುವುದಿಲ್ಲ. ಅದರ ಗುಣ ಮಟ್ಟ ಮುಖ್ಯವಾಗಿರುತ್ತದೆ. ಇವರು ಅರ್ಥ ಹೀನ ಪ್ರವೃತ್ತಿಯನ್ನು ಬಯಸುವುದಿಲ್ಲ. ಪರಿಪೂರ್ಣತೆಯನ್ನು ಇಷ್ಟ ಪಡುತ್ತಾರೆ. ಅವನು/ಅವಳು ಇವರು ಪುರಾತನ ವಸ್ತುಗಳನ್ನು ಇಷ್ಟ ಪಡುವುದಿಲ್ಲ. ಬದಲಿಗೆ ಪ್ರಸ್ತುತ ಕಾಲಮಾನದ ಉಡುಗೊರೆ ಹೊಳೆಯುವ ಪೇಪರ್‍ನಲ್ಲಿ ಇರಬೇಕೆಂದು ಬಯಸುತ್ತಾರೆ.

ವೃಷಭ ರಾಶಿಯವರು ನೀಡುವ ಉಡುಗೊರೆ

ವೃಷಭ ರಾಶಿಯವರು ನೀಡುವ ಉಡುಗೊರೆ

ಇವರು ಯಾವಾಗಲು ಮಿತವ್ಯಯಿಗಳು ಎಂದು ಹೇಳಬಹುದು. ಆದರೆ ಉತ್ತಮ ವಿಶ್ಲೇಷಕರು ಹೌದು. ಇವರು ಆಯ್ಕೆ ಮಾಡುವ ಉಡುಗೊರೆ ಸೂಕ್ತ ಹಾಗೂ ಅಗತ್ಯ ವಸ್ತುಗಳಾಗಿರುತ್ತವೆ.

ವೃಷಭ ರಾಶಿಯವರಿಗೆ ನೀಡುವ ಉಡುಗೊರೆ

ವೃಷಭ ರಾಶಿಯವರಿಗೆ ನೀಡುವ ಉಡುಗೊರೆ

ಇವರು ಪ್ರತಿಷ್ಠಿತ ರೆಸ್ಟೋರೆಂಟ್ ಅಥವಾ ಬ್ಯೂಟಿ ಸಲೂನ್‍ಗಳಲ್ಲಿ ದಿನವಿಡೀ ಕಳೆಯಲು ಇಷ್ಟಪಡುತ್ತಾರೆ. ಒಂದು ಐಷಾರಾಮಿ ಊಟವನ್ನು ಇವರು ಇಷ್ಟ ಪಡುತ್ತಾರೆ. ಇವರಿಗೆ ಅಮೂಲ್ಯವಾದ ಕಲ್ಲಿನ ಕೆತ್ತನೆ, ತೋಟಗಾರಿಕೆ ಉಪಕರಣಗಳು, ನೇಯ್ದ ಬುಟ್ಟಿ ಮತ್ತು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು.

ಮಿಥುನ ರಾಶಿಯವರು ನೀಡುವ ಉಡುಗೊರೆ

ಮಿಥುನ ರಾಶಿಯವರು ನೀಡುವ ಉಡುಗೊರೆ

ಈ ರಾಶಿಯವರು ಬಹು ಪ್ರತಿಭಾವಂತರು ಎನ್ನಬಹುದು. ಇವರು ಕೆಲವೊಮ್ಮೆ ತಮ್ಮ ಕೈಗಳಿಂದ ಉಡುಗೊರೆ ನೀಡಲು ಬಯಸುತ್ತಾರೆ. ಇವರ ಅಮೂಲ್ಯವಾದ ಸಮಯವನ್ನು ನಿಮಗಾಗಿ ನೀಡಲು ಇಷ್ಟಪಟ್ಟರೆ ನೀವು ಅತ್ಯಂತ ಅದೃಷ್ಟಶಾಲಿಗಳು ಎಂದು ತಿಳಿಯಬಹುದು. ಇವರು ಸುದೀರ್ಘ ಸಮಯವನ್ನು ತೆಗೆದುಕೊಂಡು, ಉಡುಗೊರೆಯನ್ನು ಆಯ್ಕೆ ಮಾಡಿ ನೀಡುವ ಆಸಕ್ತಿ ಇವರು ಹೊಂದಿರುವುದಿಲ್ಲ.

ಮಿಥುನ ರಾಶಿಯವರಿಗೆ ನೀಡುವ ಉಡುಗೊರೆ

ಮಿಥುನ ರಾಶಿಯವರಿಗೆ ನೀಡುವ ಉಡುಗೊರೆ

ಇವರಿಗೆ ಉಡುಗೊರೆ ನೀಡುವುದು ಒಂದು ಒಗಟು ಎಂದು ಹೇಳಬಹುದು. ಇವರಿಗೆ ಆಲೂಗಡ್ಡೆಯ ಚಿಪ್ಸ್ ಬ್ಯಾಗ್ ನಂತಹ ಉಡುಗೊರೆ ನೀಡಿದರೆ ಬಹಳ ಸಂತುಷ್ಟರಾಗುತ್ತಾರೆ. ಇವರಿಗೆ ನೀಡುವ ಉಡುಗೊರೆಯು ದೊಡ್ಡದಾಗಿರಬೇಕೆಂದು ಬಯಸುತ್ತಾರೆ. ಹಾಗಂತ ಅದಕ್ಕೆ ಗಿಫ್ಟ್ ಕಾಗದವನ್ನು ಸುತ್ತಿಕೊಡಬೇಕೆಂದು ಬಯಸುವುದಿಲ್ಲ.

ಕರ್ಕ ರಾಶಿಯವರು ನೀಡುವ ಉಡುಗೊರೆ

ಕರ್ಕ ರಾಶಿಯವರು ನೀಡುವ ಉಡುಗೊರೆ

ಪ್ರೀತಿ ಪಾತ್ರರಿಗೆ ಎಂದು ಇವರು ಕೈ ಬಿಚ್ಚಿ ಉಡುಗೊರೆ ಮಾಡುವುದಿಲ್ಲ. ಅಪರಿಚಿತರು ಅಥವಾ ದೂರದ ಸಂಬಂಧಿಗಳೆನಿಸಿದರೆ ಇವರು ಜಿಪುಣ ತನವನ್ನು ತೋರಿಸುತ್ತಾರೆ.

ಕರ್ಕರಾಶಿಯವರಿಗೆ ನೀಡುವ ಉಡುಗೊರೆ:

ಕರ್ಕರಾಶಿಯವರಿಗೆ ನೀಡುವ ಉಡುಗೊರೆ:

ಉಡುಗೊರೆಯು ಹೃದಯ ಪೂರ್ವಕವಾಗಿ ಬಂದಿಲ್ಲವೆಂದಾದರೆ ಅಥವಾ ಯಾರದೋ ಒತ್ತಾಯಕ್ಕೆ ಉಡುಗೊರೆ ನೀಡುತ್ತಿದ್ದಾರೆ ಎಂದಾದರೆ ತುಂಬಾ ನೊಂದುಕೊಳ್ಳುತ್ತಾರೆ. ಉಡುಗೊರೆಗಿಂತ ಹೆಚ್ಚಾಗಿ ಇವರು ಭಾವನೆಗೆ ಹೆಚ್ಚು ಒತ್ತು ನೀಡುತ್ತಾರೆ. ಉಡುಗೊರೆಯು ಇವರ ನ್ಯೂನತೆಗೆ ಅನುಕೂಲವಾಗುವಂತಹದ್ದಾದರೆ ಕಣ್ಣೀರಿಡುತ್ತಾರೆ. ಟೆಡ್ಡಿ, ಹಿಮಕರಡಿ, ನಾಯಿಮರಿಗಳು, ಉಡುಗೆ ಮತ್ತು ಗಿಡಮೂಲಿಕೆಗಳು, ಪುಷ್ಪಾಲಂಕಾರ ಅಥವಾ ಪ್ರಣಯ ಸ್ಫಟಿಕಗಳಂತಹ ಉಡುಗೊರೆಯನ್ನು ಇಷ್ಟ ಪಡುತ್ತಾರೆ.

ಸಿಂಹ ರಾಶಿಯವರು ನೀಡುವ ಉಡುಗೊರೆ

ಸಿಂಹ ರಾಶಿಯವರು ನೀಡುವ ಉಡುಗೊರೆ

ಉಡುಗೊರೆಯನ್ನು ನೀಡುವುದು ಮತ್ತು ಸ್ವೀಕರಿಸುವುದು ಈ ರಾಶಿಯವರಿಗೆ ವಿಶೇಷವಾದದ್ದು. ಸಿಂಹ ರಾಶಿಯವರು ಉಡುಗೊರೆ ಪಡೆಯುವವರ ಸಂತೋಷವನ್ನು ಪರಿಗಣಿಸುತ್ತಾರೆ. ಉಡುಗೊರೆ ನೀಡುವ ಮೂಲಕ ಅವರ ಮಹತ್ತರ ಸ್ವಭಾವವನ್ನು ಪ್ರದರ್ಶಿಸಲು ಇಷ್ಟಪಡುತ್ತಾರೆ.

ಸಿಂಹ ರಾಶಿಯವರಿಗೆ ನೀಡಬೇಕಾದ ಉಡುಗೊರೆ

ಸಿಂಹ ರಾಶಿಯವರಿಗೆ ನೀಡಬೇಕಾದ ಉಡುಗೊರೆ

ಸೊಗಸಾದ ಮತ್ತು ದುಬಾರಿ ಉಡುಗೊರೆಯನ್ನು ಇವರಿಗೆ ನೀಡಬಹುದು. ಹಬ್ಬದ ಸಂಭ್ರಮದ ಜೊತೆಗೆ ಪ್ರಣಯ ಮತ್ತು ಮನೋಭಾವವು ಇವರಿಗೆ ಬಹಳ ಮುಖ್ಯವಾಗುತ್ತದೆ. ಅವನು/ಅವಳು ಹತ್ತಿರದ ಕಾಳಜಿಯನ್ನು ಇಷ್ಟಪಡುತ್ತಾರೆ.

 ಕನ್ಯಾರಾಶಿಯವರು ನೀಡುವ ಉಡುಗೊರೆ

ಕನ್ಯಾರಾಶಿಯವರು ನೀಡುವ ಉಡುಗೊರೆ

ಇವರು ಮಿತವ್ಯಯದ ಉಡುಗೊರೆ ನೀಡಲು ಇಷ್ಟಪಡುತ್ತಾರೆ. ಇವರು ಯಾರನ್ನು ಮರೆಯುವುದಿಲ್ಲ.

ಕನ್ಯಾ ರಾಶಿಯವರಿಗೆ ನೀಡುವ ಉಡುಗೊರೆ

ಕನ್ಯಾ ರಾಶಿಯವರಿಗೆ ನೀಡುವ ಉಡುಗೊರೆ

ಸಂಪ್ರದಾಯವಾದಿ ಎಂದು ಪರಿಗಣಿಸಲ್ಪಡುವ ಕನ್ಯಾರಾಶಿಯವರಿಗೆ ಅಸಭ್ಯ ವರ್ತನೆಯನ್ನು ಇಷ್ಟಪಡುವುದಿಲ್ಲ. ಇವರಿಗೆ ಸ್ಪಾ ಸೆಟ್, ಟೇಬಲ್ ಬಟ್ಟೆ, ಶಾಲ್ ಸೇರಿದಂತೆ ಇನ್ನಿತರ ಉತ್ತಮ ಉಡುಗೊರೆಯನ್ನು ನೀಡಿದರೆ ಖುಷಿಪಡುತ್ತಾರೆ. ಅವರ ಹವ್ಯಾಸ ಮತ್ತು ಚಟುವಟಿಕೆಗೆ ಸಂಬಂಧಿಸಿದ ಉಡುಗೊರೆ ನೀಡಬಹುದು.

ತುಲಾ ರಾಶಿಯವರು ನೀಡುವ ಉಡುಗೊರೆ

ತುಲಾ ರಾಶಿಯವರು ನೀಡುವ ಉಡುಗೊರೆ

ಇವರು ಸಾಕಷ್ಟು ವಿಶಿಷ್ಟ ಉಡುಗೊರೆಯನ್ನು ನೀಡುತ್ತಾರೆ. ಉಡುಗೊರೆಯನ್ನು ಆಯ್ಕೆ ಮಾಡಲು ಕೆಲವೊಮ್ಮೆ ಸಮಯ ಇಲ್ಲದೆ ಇರುವ ಕಾರಣದಿಂದ ಅರ್ಥಹೀನ ಉಡುಗೊರೆಯನ್ನು ಪಡೆಯಬೇಕಾಗುವುದು.

ತುಲಾ ರಾಶಿಯವರಿಗೆ ನೀಡುವ ಉಡುಗೊರೆ

ತುಲಾ ರಾಶಿಯವರಿಗೆ ನೀಡುವ ಉಡುಗೊರೆ

ತುಲಾ ರಾಶಿಯವರ ಪರಿಷ್ಕøತ ರುಚಿ ಮತ್ತು ಸೌಂದರ್ಯದಿಂದ ಅವರು ಹೆಸರು ವಾಸಿಯಾಗಿದ್ದಾರೆ. ಇವರು ಸುಗಂಧ ಮತ್ತು ಉಡುಗೆಯನ್ನು ಇಷ್ಟ ಪಡುತ್ತಾರೆ. ಇವರಿಗೆ ಉಡುಗೊರೆ ಬಂತೆಂದು ಖುಷಿ ಪಡುವುದಿಲ್ಲ. ಪಿಂಗಾಣಿ, ಸಣ್ಣ ಪ್ರತಿಮೆ ಮತ್ತು ವಿಶೇಷವಾದ ರೆಸ್ಟಾರೆಂಟ್‍ನ ಭೋಜನ, ವಾಚ್‍ಗಳನ್ನು ಇವರು ಇಷ್ಟ ಪಡುತ್ತಾರೆ.

ವೃಶ್ಚಿಕದವರು ನೀಡುವ ಉಡುಗೊರೆ

ವೃಶ್ಚಿಕದವರು ನೀಡುವ ಉಡುಗೊರೆ

ಉಡುಗೊರೆಯ ವಿಚಾರದಲ್ಲಿ ಇವರು ಉತ್ತಮ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಇವರು ಸದಾ ಸವಾಲಿನ ಉಡುಗೊರೆಯನ್ನು ಖರೀದಿಸುತ್ತಾರೆ. ಇವರು ಉಡುಗೊರೆ ನೀಡುವಾಗ ಹೆಚ್ಚು ಪ್ರಚಾರವನ್ನು ಬಯಸುತ್ತಾರೆ.

 ವೃಶ್ಚಿಕ ರಾಶಿಯವರಿಗೆ ನೀಡುವ ಉಡುಗೊರೆ

ವೃಶ್ಚಿಕ ರಾಶಿಯವರಿಗೆ ನೀಡುವ ಉಡುಗೊರೆ

ಇವರಿಗೆ ಚಿಕ್ಕ ಪುಟ್ಟ ಅಗ್ಗದ ಉಡುಗೊರೆ ನೀಡಬಹುದು. ಹೆಚ್ಚು ನಿಗೂಢವಾದ ಉಡುಗೊರೆ, ಫೋಟೋ ಉಪಕರಣಗಳು, ಚಿತ್ರ ಚೌಕಟ್ಟು, ಬಣ್ಣದ ಗಾಜಿನ ವಸ್ತುಗಳು, ವೀಡಿಯೋಗಳು ಉಡುಗೊರೆಯ ಉತ್ತಮ ಪರಿಕಲ್ಪನೆಗಳು.

ಧನು ರಾಶಿಯವರು ನೀಡುವ ಉಡುಗೊರೆ

ಧನು ರಾಶಿಯವರು ನೀಡುವ ಉಡುಗೊರೆ

ಈ ರಾಶಿಯವರು ಉಡುಗೊರೆ ಖರೀದಿಸುವುದಕ್ಕೆಂದು ಹೆಚ್ಚು ಸಮಯ ವ್ಯಯಿಸಲು ಇಷ್ಟಪಡುವುದಿಲ್ಲ. ಉಡುಗೊರೆಯ ಆಯ್ಕೆಯನ್ನು ಬೇರೊಬ್ಬರಿಗೆ ನೀಡುತ್ತಾರೆ. ಇಲ್ಲವದರೆ ಅವರಿಗೆ ಉಡುಗೊರೆ ನೀಡಬೇಕಾದ ವಸ್ತುವನ್ನು ತರಲು ಇವರೇ ಸೂಚಿಸುತ್ತಾರೆ.

ಧನು ರಾಶಿಯವರಿಗೆ ನೀಡುವ ಉಡುಗೊರೆ

ಧನು ರಾಶಿಯವರಿಗೆ ನೀಡುವ ಉಡುಗೊರೆ

ಒಂದು ಪ್ರವಾಸ, ಸ್ಪಾದಲ್ಲಿ ದಿನ ಕಳೆಯುವುದು, ಬೈಸಿಕಲ್, ರಾಕೆಟ್‍ಗಳು, ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು ಬಸ್ ಟಿಕೆಟ್ ಕೊಡಿಸುವುದು ಇವರಿಗೆ ಇಷ್ಟವಾಗುವ ಉಡುಗೊರೆಯ ವಸ್ತುಗಳಾಗಿರುತ್ತವೆ. ಉಡುಗೊರೆಯು ಅವಳ/ಅವನ ಆಸಕ್ತಿಗೆ ಹೊಂದುವಂತದ್ದು ಮತ್ತು ಕ್ರೀಡೋಪಕರಣಗಳನ್ನು ಕೊಡಿಸಿದರೆ ಇವರಿಗೆ ಹೆಚ್ಚು ಇಷ್ಟವಾಗುತ್ತದೆ.

 ಮಕರ ರಾಶಿಯವರು ನೀಡುವ ಉಡುಗೊರೆ

ಮಕರ ರಾಶಿಯವರು ನೀಡುವ ಉಡುಗೊರೆ

ಇವರು ತಾವೇ ತಯಾರಿಸುವಂತಹ ವಸ್ತುಗಳನ್ನು ಅಥವಾ ಪ್ರಾಯೋಗಿಕವಾಗಿರುವಂತಹ ವಸ್ತುವನ್ನು ಉಡುಗೊರೆಯಾಗಿ ನೀಡಲು ಇಷ್ಟ ಪಡುತ್ತಾರೆ. ಇವರು ನೀಡುವ ಉಡುಗೊರೆಯು ಆಕರ್ಷಕ ಮತ್ತು ಭವಿಷ್ಯದಲ್ಲಿ ಪ್ರಯೋಜನ ಬರುವಂತಿರಬೇಕು.

ಮಕರ ರಾಶಿಯವರಿಗೆ ನೀಡುವ ಉಡುಗೊರೆ

ಮಕರ ರಾಶಿಯವರಿಗೆ ನೀಡುವ ಉಡುಗೊರೆ

ಮನೆ ಅಲಂಕಾರಿಕ ವಸ್ತುಗಳು, ಕಂಚಿನ ಅಥವಾ ತಾಮ್ರದ ಮೋಂಬತ್ತಿ ಸ್ಟಿಕ್, ಕರಕುಶಲ ವಸ್ತುಗಳು, ಆಭರಣಗಳು, ಸುಗಂಧದ್ರವ್ಯ ವಸ್ತುಗಳನ್ನು ನೀಡಬಹುದು. ಇವರಿಗೆ ನೀಡುವ ಉಡುಗೊರೆಯು ಪ್ರಾಯೋಗಿಕ ಮತ್ತು ಸುಂದರವಾಗಿರಬೇಕು.

ಕುಂಬ ರಾಶಿಯವರು ನೀಡುವ ಉಡುಗೊರೆ

ಕುಂಬ ರಾಶಿಯವರು ನೀಡುವ ಉಡುಗೊರೆ

ಇವರು ಸಾಂಪ್ರದಾಯಿಕ ಮತ್ತು ನವೀನ, ಅಕ್ವೇರಿಯಸ್ ಉಡುಗೊರೆಯನ್ನು ಆಯ್ಕೆ ಮಾಡುತ್ತಾರೆ. ಅವುಗಳಲ್ಲಿ ಹೆಚ್ಚಿನವು ಉತ್ತಮ ಅಭಿರುಚಿ ಮತ್ತು ಉತ್ತಮ ಶೈಲಿಯ ಪ್ರಜ್ಞೆಯನ್ನು ಹೊಂದಿರುತ್ತವೆ. ಅವನ/ಅವಳ ಕುಟುಂಬಕ್ಕೆ ಸ್ವಂತ ರೀತಿಯಲ್ಲಿ ಸಂಪ್ರದಾಯವಾದಿ ಶೈಲಿಯಲ್ಲಿ ಉಡುಗೊರೆಯನ್ನು ಆಯ್ಕೆ ಮಾಡುತ್ತಾರೆ.

ಕುಂಬರಾಶಿಯವರಿಗೆ ನೀಡುವ ಉಡುಗೊರೆ

ಕುಂಬರಾಶಿಯವರಿಗೆ ನೀಡುವ ಉಡುಗೊರೆ

ಇವರಿಗೆ ನೋಟ್ ಬುಕ್, ಬರವಣಿಗೆ ಸೆಟ್, ಕರಕುಶಲ ಆಧಾರಿತ ಒಂದು ಸಣ್ಣ ಸಾಧನ ಮತ್ತು ಹಣಿಗೆ ಸೆಟ್ ಹೆಚ್ಚು ಮೆಚ್ಚುಗೆ ಯಾಗುವ ಸಾಧನವಾಗಿದೆ. ಇವರಿಗೆ ಖಗೋಳ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ಟೆಲಿಸ್ಕೋಪ್‍ಗಳನ್ನು ಉಡುಗೊರೆಯಾಗಿ ನೀಡಬಹುದು.

 ಮೀನ ರಾಶಿಯವರು ನೀಡುವ ಉಡುಗೊರೆ

ಮೀನ ರಾಶಿಯವರು ನೀಡುವ ಉಡುಗೊರೆ

ಈ ರಾಶಿಯವರು ದೃಢವಾದ ಮತ್ತು ಕಲಾತ್ಮಕ ವ್ಯಕ್ತಿತ್ವದವರಾಗಿರುವುದರಿಂದ ಅದ್ಭುತ ಉಡುಗೊರೆಯನ್ನು ಆಯ್ಕೆ ಮಾಡುತ್ತಾರೆ. ಪ್ರಾಯೋಗಿಕತೆಯು ಅವರಿಗೆ ಯಾವುದೇ ತೊಂದರೆಯನ್ನುಂಟುಮಾಡುವುದಿಲ್ಲ.

ಮೀನರಾಶಿವರಿಗೆ ನೀಡುವ ಉಡುಗೊರೆ

ಮೀನರಾಶಿವರಿಗೆ ನೀಡುವ ಉಡುಗೊರೆ

ಇವರು ಉಡುಗೊರೆಯನ್ನು ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ. ಸಂಗೀತದ ಟಿಕೆಟ್, ಕುಟುಂಬದ ಚರಾಸ್ತಿ ಮತ್ತು ಬೆಳ್ಳಿ ವಸ್ತುಗಳನ್ನು ಇಷ್ಟಪಡುತ್ತಾರೆ. ಇವರು ಉಡುಗೊರೆಯನ್ನು ನೀಡುವವರ ಭಾವನಾತ್ಮಕ ಸಂಬಂಧವನ್ನು ಇಷ್ಟಪಡುತ್ತಾರೆ. ಮೃದುವಾದ ಬಟ್ಟೆ, ಒಳಾಂಗಣ ನೀರಿನ ಕಾರಂಜಿ, ಸಮುದ್ರದ ಕಪ್ಪೆ ಚಿಪ್ಪುಗಳು ಬಹಳ ಇಷ್ಟವಾಗುವಂತಹ ವಸ್ತುಗಳು.

English summary

A Perfect Gift Guide For Each Zodiac Sign!

With festive season around the corner, there is a lot of time and money that get invested on gifts for the loved ones. Do you know that gift choices can be based on our zodiac signs? Here's an extensive gift guide that could help you learn more about the best gift that would be suitable for a person based on Zodiac.
Story first published: Tuesday, August 29, 2017, 20:11 [IST]
X
Desktop Bottom Promotion