ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಸಿಕ್ಕ ವ್ಯಕ್ತಿ! ವಿಡಿಯೋ ವೈರಲ್...

By Arshad
Subscribe to Boldsky

ಇತ್ತೀಚೆಗೆ ವೈರಲ್ ಆಗಿರುವ ವಿಷಯದಲ್ಲಿ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಸಿಕ್ಕ ವ್ಯಕ್ತಿಯ ವಿಷಯ ಪ್ರಮುಖವಾಗಿದೆ. ಸುಮಾರು ಒಂದು ದಿನದಿಂದ ಕಾಣೆಯಾಗಿದ್ದ ವ್ಯಕ್ತಿ ಹೆಬ್ಬಾವೊಂದರ ಹೊಟ್ಟೆಯಲ್ಲಿ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ವಿಚಿತ್ರ ಮತ್ತು ಭೀಕರ ಘಟನೆ ಎಲ್ಲಿ ನಡೆಯಿತು? ಈತ ಹೆಬ್ಬಾವಿಗೆ ಹೇಗೆ ಆಹಾರವಾದ?

ಸಾಮಾನ್ಯವಾಗಿ ಮನುಷ್ಯರ ಮೇಲೆ ಎರಗದ ಹೆಬ್ಬಾವು ಈತನ ಮೇಲೇಕೆ ಎರಗಿತು? ಮನುಷ್ಯನ ಶರೀರವನ್ನು ನುಂಗುವಷ್ಟು ಸಾಮರ್ಥ್ಯವಿಲ್ಲದ ಈ ಹೆಬ್ಬಾವು ಈತನನ್ನು ನುಂಗಿದ್ದಾದರೂ ಹೇಗೆ? ಆ ದುರ್ವಿಧಿಯ ದಿನ ಈ ವ್ಯಕ್ತಿಗೇನಾಯಿತು? ಈ ಎಲ್ಲಾ ಪ್ರಶ್ನೆಗಳಿಕೆ ಉತ್ತರಗಳೇನು ನೋಡೋಣ...   

ಹೆಬ್ಬಾವು ಮನುಷ್ಯರ ಮೇಲೆ ಎರಗುವುದು ತೀರಾ ಕಡಿಮೆ!!

ಹೆಬ್ಬಾವು ಮನುಷ್ಯರ ಮೇಲೆ ಎರಗುವುದು ತೀರಾ ಕಡಿಮೆ!!

ಪ್ರಾಣಿಶಾಸ್ತ್ರಜ್ಞರ ಪ್ರಕಾರ ಹೆಬ್ಬಾವುಗಳು ಒಮ್ಮೆಲೇ ದೊಡ್ಡ ಪ್ರಾಣಿಯನ್ನು ಹಿಡಿದು ನುಂಗಿ ಹಲವಾರು ದಿನ ಹಾಗೇ ಬಿದ್ದುಕೊಂಡಿರುವ ಜೀವಿಗಳಾಗಿವೆ. ಇವುಗಳ ಆಹಾರದಲ್ಲಿ ಜಿಂಕೆ, ಸಾರಂಗ, ಕಾಡುಹಂದಿ, ಮತ್ತಿತರ ಕೊಂಚ ದೊಡ್ಡವೇ ಆದ ಪ್ರಾಣಿಗಳಾಗಿವೆ. ಆದರೆ ಇವು ಮನುಷ್ಯರ ಮೇಲೆ ಧಾಳಿ ಮಾಡುವುದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

ಈ ಮೃತ ವ್ಯಕ್ತಿಯ ಹೆಸರು ಅಕ್ಬರ್ ಸಾಲುಬ್ರಿಯೋ

ಈ ಮೃತ ವ್ಯಕ್ತಿಯ ಹೆಸರು ಅಕ್ಬರ್ ಸಾಲುಬ್ರಿಯೋ

ಇಂಡೋನೇಷ್ಯಾದ ಪ್ರಜೆಯಾದ ಅಕ್ಬರ್ ಸಾಲುಬ್ರಿಯೋ ಎಂಬ ಹೆಸರಿನ ಕೇವಲ ಇಪ್ಪತ್ತೈದು ವರ್ಷದ ಈ ತರುಣ ತನ್ನ ಜೀವನದಲ್ಲಿ ಎಂದೂ ಹೆಬ್ಬಾವನ್ನು ಕಂಡಿರಲಿಕ್ಕಿಲ್ಲ.

ಈತ ಕಾಣೆಯಾಗಿರುವ ಬಗ್ಗೆ ದೂರು ಬಂದಿತ್ತು

ಈತ ಕಾಣೆಯಾಗಿರುವ ಬಗ್ಗೆ ದೂರು ಬಂದಿತ್ತು

ಈತ ಕಾಣೆಯಾದ ಬಳಿಕ ಹುಡುಕಾಟ ನಡೆಸಿ ವಿಫಲರಾದ ಸ್ನೇಹಿತರು ಮತ್ತು ಕುಟುಂಬದವರು ಈತನ ಕಾಣೆಯಾದ ಬಗ್ಗೆ ಪೋಲೀಸರಲ್ಲಿ ದೂರನ್ನು ನೀಡಿದ್ದರು. ಪಶ್ಚಿಮ ಸುಲವಾಸಿಯಲ್ಲಿರುವ ಈತನ ಮನೆಯಿಂದ ಕೊಂಚ ದೂರದಲ್ಲಿದ್ದ ತಾಳೆಮರದ ಕಟಾವಿಗೆ ಈಗ ಹೋಗಿದ್ದು ಹಿಂದಿರುಗಿರಲಿಲ್ಲ.

ಹುಡುಕಾಟದಲ್ಲಿ ಸಿಕ್ಕ ಹೆಬ್ಬಾವು

ಹುಡುಕಾಟದಲ್ಲಿ ಸಿಕ್ಕ ಹೆಬ್ಬಾವು

ಈತನ ಹುಡುಕಾಟಕ್ಕೆಂದು ತಂಡವನ್ನು ಕಳಿಸಿದ ಪೋಲೀಸರು ಈ ಬಗ್ಗೆ ವಿಚಾರಣೆ ನಡೆಸಿದರು. ಈತನ ಪಕ್ಕದ ಮನೆಯವರು ಮನೆಯ ಹಿಂಬದಿಯಲ್ಲಿ ಈತನ ರೋದನ ಕೇಳಿದಂತಾಯ್ತು ಎಂದು ವರದಿ ಮಾಡಿದ್ದರು. ಈ ವಿವರಗಳನ್ನು ಪರಿಶೀಲಿಸಲು ಮನೆಯ ಹಿತ್ತಲಿನಲ್ಲಿ ಹುಡುಕಾಟ ನಡೆಸಿದಾಗ 23 ಅಡಿಯಷ್ಟು ಉದ್ದನೆಯ ಭಾರೀ ಹೆಬ್ಬಾವು ಹೊಟ್ಟೆಯುಬ್ಬಿಸಿಕೊಂಡು ಆರಾಮವಾಗಿ ಮಲಗಿತ್ತು. ಅನತಿ ದೂರದಲ್ಲಿಯೇ ತಾಳೆ ಕಟಾವಿಗೆ ಬಳಸುತ್ತಿದ್ದ ಕತ್ತಿ ಕಂಡುಬಂದಿತ್ತು.

rn

ಹೆಬ್ಬಾವನ್ನು ಸೀಳಲು ನಿರ್ಧಾರ

ಕತ್ತಿ ಇಲ್ಲೇ ಇದೆ ಎಂದ ಮೇಲೆ ಈತನನ್ನು ಈ ಹೆಬ್ಬಾವೇ ನುಂಗಿರಬೇಕು ಎಂದು ಸ್ಥೂಲವಾಗಿ ಊಹಿಸಿದ ತಂಡ ಒಂದು ವೇಳೆ ಅಕ್ಬರ್ ಜೀವಂತವಿದ್ದರೆ ಎಂಬ ದೂರದ ಆಸೆಯಿಂದ ಹೆಬ್ಬಾವಿನ ಹೊಟ್ಟೆಯನ್ನು ಸೀಳುವ ನಿರ್ಧಾರ ಕೈಗೊಂಡರು. ಅಂತೆಯೇ ಹೊಟ್ಟೆಯನ್ನು ಸೀಳಿದಾಗ ಅಕ್ಬರ್ ತನ್ನ ಎರಡೂ ಕೈಗಳನ್ನು ಎದೆಗವಚಿ ಮಲಗಿದ್ದ ಭಂಗಿಯಲ್ಲಿಯೇ ಮೃತನಾಗಿ ಪತ್ತೆಯಾದ. ಈ ಹೆಬ್ಬಾವು ಈತನ್ನು ಇಡಿಯಾಗಿ ನುಂಗಿತ್ತು. ಈ ಭಯಾನಕ ದೃಶ್ಯದ ವೀಡೀಯೋ ನೋಡಿ...

 

 

 

For Quick Alerts
ALLOW NOTIFICATIONS
For Daily Alerts

    English summary

    A Missing Man Was Found In A Python!

    Check out the bizarre incident and the guy who met with his gruesome end. This incident is a shocker, as this breed of snake is said to be harmless to humans, since it does not swallow a human. However, how did the man get there in the first place??? Check out on what exactly happened on that fateful day.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more