ಇಡೀ ಜಗತ್ತಿಗೆಯೇ ಸವಾಲು! ಈಕೆಯ ಹೃದಯ ದೇಹದಿಂದ ಹೊರಗಡೆ ಇದೆ!!

By: manu
Subscribe to Boldsky

ಹೃದಯ ಎಲ್ಲಿದೆ ಎಂದು ಕೇಳಿದರೆ ದೇಹದ ಒಳಗೆ ಎದೆಯ ಭಾಗದಲ್ಲಿ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೆ ಕೆಲವೊಂದು ಸಲ ವೈದ್ಯಕೀಯ ಜಗತ್ತಿಗೆ ಸವಾಲಾಗುವಂತಹ ಮಾನವರು ಭೂಮಿ ಮೇಲೆ ಹುಟ್ಟುತ್ತಾರೆ. ಇವರಲ್ಲಿ ಕೆಲವರು ಸಾಮಾನ್ಯ ಜನರಂತೆ ಜೀವನ ಸಾಗಿಸಿದರೆ ಇನ್ನು ಕೆಲವರು ಕಷ್ಟಪಡುತ್ತಾ ಇರುವರು.

ಆದರೆ ಇಲ್ಲೊಬ್ಬಳು ಹುಡುಗಿಯ ಹೃದಯವು ದೇಹದಿಂದ ಹೊರಗಿದ್ದು, ಅದು ಬಡಿದುಕೊಳ್ಳುತ್ತಿದೆ. ಎಂಟು ವರ್ಷದ ವೃಸವ್ಯ ಎನ್ನುವ ಬಾಲಕಿಯೇ ಈ ಸಮಸ್ಯೆಯಿಂದ ಬಳಲುತ್ತಿರುವಾಕೆ. ಆಕೆಯ ಕಥೆ ಓದಿಕೊಳ್ಳಿ. ಎಂಟು ವರ್ಷದ ವೃಸವ್ಯಳು ಥೊರಾಕೊ-ಕಿಬ್ಬೊಟ್ಟೆಯ ಸಿಂಡ್ರೋಮ್ ಅಥವಾ ಪ್ಯಾಂಟ್ರೋಜಿ ಆಫ್ ಕ್ಯಾಂಟ್ರೆಲ್' ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಒಂದು ದಶಲಕ್ಷ ಜನರಲ್ಲಿ ಒಬ್ಬರಿಗೆ ಇಂತಹ ಸಮಸ್ಯೆ ಕಾಡುವುದು.....

 ಆಕೆ ಇತರ ಬಾಲಕಿಯರಂತೆ ಇರುವ ಎಂಟರ ಹುಡುಗಿ

ಆಕೆ ಇತರ ಬಾಲಕಿಯರಂತೆ ಇರುವ ಎಂಟರ ಹುಡುಗಿ

ವೃಸವ್ಯ ಇತರ ಎಂಟು ವರ್ಷದ ಬಾಲಕಿಯರಂತೆ ಇದ್ದಾಳೆ. ಆಕೆಗೆ ನೃತ್ಯ, ಚಿತ್ರಕಲೆ ತುಂಬಾ ಇಷ್ಟ. ಆದರೆ ಆಕೆಯು ತುಂಬಾ ಅಪರೂಪದ ಸಮಸ್ಯೆಯಿಂದ ಬಳಲುತ್ತಾ ಇರುವುದು ಆಕೆಗೆ ಆಘಾತ ಉಂಟು ಮಾಡಿದೆ. ಆಕೆ ಜನಿಸುವಾಗ ಹೃದಯ ಆಕೆಯ ಎದೆಯ ಹೊರಭಾಗದಲ್ಲಿತ್ತು.

ವಿಡಿಯೋ ವೈರಲ್ ಆಗಿದೆ…..

ವಿಡಿಯೋ ವೈರಲ್ ಆಗಿದೆ…..

ಆಕೆ ಕಿಸಿಕಿಸಿ ನಗುವಾಗ ಹೃದಯವು ವೇಗವಾಗಿ ಬಡಿಯುವಂತಹ ವೀಡಿಯೋವು ತುಂಬಾ ವೈರಲ್ ಆಗಿದೆ. ಈ ವಿಡಿಯೋ ನೋಡಲು ಕೆಲವರಿಗೆ ಸಾಧ್ಯವಾಗದು. ಆದರೆ ಬಾಲಕಿಯ ಮುಗ್ಧತೆ ನೋಡಿದರೆ ಕಣ್ಣೀರು ಬರುವುದು.

ವಿಡಿಯೋ ವೈರಲ್ ಆಗಿದೆ…..

ವಿಡಿಯೋ ವೈರಲ್ ಆಗಿದೆ…..

ಆಕೆ ಕಿಸಿಕಿಸಿ ನಗುವಾಗ ಹೃದಯವು ವೇಗವಾಗಿ ಬಡಿಯುವಂತಹ ವೀಡಿಯೋವು ತುಂಬಾ ವೈರಲ್ ಆಗಿದೆ. ಈ ವಿಡಿಯೋ ನೋಡಲು ಕೆಲವರಿಗೆ ಸಾಧ್ಯವಾಗದು. ಆದರೆ ಬಾಲಕಿಯ ಮುಗ್ಧತೆ ನೋಡಿದರೆ ಕಣ್ಣೀರು ಬರುವುದು.

ಆಕೆ ಒಳ್ಳೆಯದೆಂದು ನಂಬಿದ್ದಾಳೆ

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ, ಇದು ನನ್ನ ಹೃದಯ, ನಾನು ಮಾತ್ರ ಇದನ್ನು ಪಡೆದಿರುವುದು. ಬಟ್ಟೆ ಧರಿಸುವಾಗ ನನ್ನ ಹೃದಯಕ್ಕೆ ನೋವಾಗದಂತೆ ಮೆತ್ತಗಿನ ಬಟ್ಟೆಯನ್ನಿಡುತ್ತೇನೆ. ನಾನು ನಡೆಯುತ್ತೇನೆ, ಕುಣೆಯುತ್ತೇನೆ, ಓಡುತ್ತೇನೆ, ಜಿಗಿಯುತ್ತೇನೆ. ನಾನು ಓಡಬಾರದು. ಆದರೆ ಓಡುವುದೆಂದರೆ ನನಗಿಷ್ಟ ಎನ್ನುತ್ತಾಳೆ. ಆಕೆಗೆ ಒಳ್ಳೆಯದಾಗಲಿ ಮತ್ತು ಆಕೆಯ ಸ್ಪೂರ್ತಿಗೆ ನಮ್ಮದೊಂದು ದೊಡ್ಡ ಸಲಾಂ.

English summary

8-Year-Old Whose Heart Beats Outside Her Body

There are so many medical conditions that can shock us. Some of these conditions make us wonder as how the person is alive with that, and most of these cases can simply inspire us! Here is a story of an 8-year-old girl who is suffering from a rare condition in which her heart beats outside her body.Meet Virsaviya and know her special story...
Subscribe Newsletter