ಕಣ್ಣಿನ ಹುಬ್ಬುಗಳು- ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು

By: Jaya subramanya
Subscribe to Boldsky

ನಿಮ್ಮ ಮುಖದ ಸೌಂದರ್ಯವನ್ನು ಎದ್ದುಗಾಣಿಸುವಲ್ಲಿ ಕಣ್ಣು ಮತ್ತು ಹುಬ್ಬುಗಳು ತಮ್ಮದೇ ಆದ ಪ್ರಾಮುಖ್ಯ ಸ್ಥಾನವನ್ನು ಪಡೆದುಕೊಂಡಿವೆ. ಕಣ್ಣಿನ ಮೇಲ್ಭಾಗದಲ್ಲಿ ತಮ್ಮ ಇರುವಿಕೆಯನ್ನು ಸೂಚಿಸುವ ಹುಬ್ಬುಗಳು ನಿಮ್ಮ ಮುಖದ ಭಾವನೆಯನ್ನು ತೋರ್ಪಡಿಸುವಲ್ಲಿ ಪಾತ್ರ ನಿರ್ವಿಸುತ್ತದೆ.

ಕಾಮನ ಬಿಲ್ಲಿನ ಹುಬ್ಬು, ಗೀರು ಹುಬ್ಬು, ದಪ್ಪನೆಯ ಹುಬ್ಬು, ಶಿಖರಗಳನ್ನು ನಾಚಿಸುವ ಏರು ಹುಬ್ಬು ಮೊದಲಾಗಿ ಕವಿಗಳು ಹುಬ್ಬನ್ನು ವ್ಯಾಖ್ಯಾನಿಸುತ್ತಾರೆ. ಅಂತೆಯೇ ಹೆಣ್ಣಿಗೆ ಬಿಲ್ಲಿನ ಆಕಾರದ ಸುಂದರ ಹುಬ್ಬು ಇದ್ದರಂತೂ ಅದಕ್ಕೆ ಮನಸೋಲದ ಪುರುಷರು ಇಲ್ಲದಿಲ್ಲ. ಕಣ್ಣಿನ ಹುಬ್ಬುಗಳನ್ನು ಸುಂದರವಾಗಿರಿಸಲು ಸಲಹೆಗಳು

ಬ್ಯೂಟಿಪಾರ್ಲರ್‌ನಲ್ಲಿ ಮಹಿಳೆಯರು ಐಬ್ರೋಸ್ ಮಾಡಿಸುವಾಗ ಹುಬ್ಬನ್ನು ಬೇರೆ ಬೇರೆ ಮಾದರಿಯಲ್ಲಿ ವಿನ್ಯಾಸಗೊಳಿಸುತ್ತಾರೆ. ಅದರಂತೆಯೇ ವೃತ್ತಿಪರ ಸೌಂದರ್ಯ ತಜ್ಞೆಯರು ಸ್ತ್ರೀಯರಿಗೆ ಬೇಕಾದ ಮಾದರಿಯಲ್ಲಿ ಹುಬ್ಬನ್ನು ಮಾರ್ಪಾಡುಗೊಳಿಸುತ್ತಾರೆ. ಸೌಂದರ್ಯದ ವಿಷಯದಲ್ಲಿ ಹುಬ್ಬು ಸ್ಥಾನವನ್ನು ಪಡೆದುಕೊಂಡಿರುವಂತೆಯೇ ನಿಮ್ಮ ವ್ಯಕ್ತಿತ್ವವನ್ನು ತೋರ್ಪಡಿಸುವ ವಿಷಯದಲ್ಲೂ ಇದು ಎತ್ತಿದ ಕೈಯಾಗಿದೆ....

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಹುಬ್ಬು ಅಂತೆಯೇ ಈ ಮಾದರಿಯ ಹುಬ್ಬುಗಳನ್ನು ಹೊಂದಿರುವ ಇತರ ವ್ಯಕ್ತಿಗಳ ವ್ಯಕ್ತಿತ್ವವನ್ನು ಕುರಿತು ಅರಿತುಕೊಳ್ಳೋಣ.

 

ಸಾಮಾನ್ಯ ಹುಬ್ಬುಗಳು

ಸಾಮಾನ್ಯ ಹುಬ್ಬುಗಳು

ಇದು ಮಧ್ಯಮ ದಪ್ಪವನ್ನು ಪಡೆದುಕೊಂಡು ಉದ್ದವಾಗಿರುತ್ತದೆ. ಈ ರೀತಿಯ ಹುಬ್ಬನ್ನು ಹೊಂದಿರುವ ವ್ಯಕ್ತಿ ನಿಷ್ಟನಾಗಿರುತ್ತಾರೆ ಮತ್ತು ಮೋಸ ಕಪಟವನ್ನು ಅರಿಯದವರಾಗಿರುತ್ತಾರೆ. ಅಂತೆಯೇ ಸಂಬಂಧದಲ್ಲಿ ಕೃತ್ರಿಮತೆಯನ್ನು ಇವರು ತೋರ್ಪಡಿಸುವುದಿಲ್ಲ.

ಹೆಚ್ಚು ಉದ್ದವಾಗಿರುವ ಹುಬ್ಬುಗಳು

ಹೆಚ್ಚು ಉದ್ದವಾಗಿರುವ ಹುಬ್ಬುಗಳು

ಈ ರೀತಿಯ ಹುಬ್ಬುಳ್ಳ ವ್ಯಕ್ತಿ ವಿಷಯಗಳ ಬಗ್ಗೆ ಗಾಢವಾಗಿ ತಿಳಿದುಕೊಳ್ಳುವ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಇವರಲ್ಲಿರುತ್ತದೆ.

ಕಿರು ಹುಬ್ಬುಗಳು

ಕಿರು ಹುಬ್ಬುಗಳು

ಈ ಮಾದರಿಯ ಹುಬ್ಬುಳ್ಳವರು ಪ್ರತಿಯೊಂದರ ವಿಶ್ಲೇಷಣೆಯನ್ನು ಅರಿಯಬಯಸುವವರಾಗಿರುತ್ತಾರೆ. ಪ್ರತಿಯೊಂದರಲ್ಲೂ ಅಚ್ಚುಕಟ್ಟುತನ ಇವರ ಸ್ವಭಾವ ಮತ್ತು ವಿಶೇಷತೆಯಾಗಿರುತ್ತದೆ. ಇವರಿಗೆ ಸಮಸ್ಯೆಗಳಿಗಿಂತ ಹೆಚ್ಚು ಪರಿಹಾರಗಳಲ್ಲಿ ನಂಬಿಕೆ ಇರುತ್ತದೆ.

ದಪ್ಪ ಹುಬ್ಬು

ದಪ್ಪ ಹುಬ್ಬು

ನೀವು ಮಾಡುವ ಕೆಲಸದಲ್ಲಿ ನಿಮಗೆ ನಂಬಿಕೆ ಇರುತ್ತದೆ ಅಂತೆಯೇ ಧನಾತ್ಮಕ ಫಲಿತಾಂಶಗಳನ್ನು ನೀವು ಪಡೆದುಕೊಳ್ಳುತ್ತೀರಿ. ಸಂಘರ್ಷಗಳನ್ನು ಪರಿಹರಿಸುವ ಚತುರತೆ ನಿಮ್ಮಲ್ಲಿರುತ್ತದೆ ಅಂತೆಯೇ ಸಂಬಂಧದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವ ಅರಿವು ನಿಮ್ಮಲ್ಲಿ ನೈಸರ್ಗಿಕವಾಗಿ ಇರುತ್ತದೆ. ನಿಮಗೆ ಸ್ವಾತಂತ್ರ್ಯವನ್ನು ಆನಂದಿಸುವುದು ಎಂದರೆ ಬಹು ಇಷ್ಟವಾಗಿರುತ್ತದೆ ಮತ್ತು ಇತರರು ಏನೆಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದೇ ಇಲ್ಲ.

ಎತ್ತರ ಬಿಲ್ಲು ಹುಬ್ಬು

ಎತ್ತರ ಬಿಲ್ಲು ಹುಬ್ಬು

ನೀವು ಹೆಚ್ಚು ಸೂಕ್ಷ್ಮ ಮನಸ್ಸಿನವರಾಗಿರುತ್ತೀರಿ. ನಿಮಗೆ ಆರಾಮದಾಯಕವಾಗಿರುವ ವ್ಯಕ್ತಿಗಳನ್ನು ಆರಿಸಿ ಅವರೊಂದಿಗೆ ಮಾತ್ರವೇ ನೀವು ಸಂಬಂಧವನ್ನು ಪೋಷಿಸಿಕೊಳ್ಳುತ್ತೀರಿ. ತಮ್ಮ ಆಸೆಗಳಿಗೆ ಮಾತ್ರವೇ ಬೆಲೆ ಕೊಡುವವರು ಇವರಾಗಿದ್ದರೂ ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣ ಇವರದ್ದಾಗಿರುತ್ತದೆ.

ತ್ರಿಭುಜಾಕಾರದ ಹುಬ್ಬುಗಳು

ತ್ರಿಭುಜಾಕಾರದ ಹುಬ್ಬುಗಳು

ತೀಕ್ಷ್ಣ ತ್ರಿಭುಜಾಕಾರದ ಹುಬ್ಬುಗಳು ನಿಮ್ಮ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ ಮತ್ತು ಬುದ್ಧಿವಂತ ನಿರ್ಧಾರಗಳನ್ನು ನೀವು ಕೈಗೊಳ್ಳುತ್ತೀರಿ. ಜನರನ್ನು ಮನರಂಜಿಸುತ್ತೀರಿ ಮತ್ತು ಹೃದಯಸ್ಪರ್ಶಿಯಾಗಿ ಜನರನ್ನು ತಲುಪುತ್ತೀರಿ.

ನೇರ ಹುಬ್ಬುಗಳು

ನೇರ ಹುಬ್ಬುಗಳು

ನಿಮ್ಮ ಹುಬ್ಬುಗಳು ನೇರವಾಗಿವೆ ಅಂತೆಯೇ ನಿಮ್ಮ ಸ್ವಭಾವ ಕೂಡ. ವಿಶ್ಲೇಷಣಾತ್ಮಕವಾಗಿ ಪ್ರತಿಯೊಂದನ್ನು ನೀವು ಕಾಣುತ್ತೀರಿ. ತಪ್ಪುಗಳನ್ನು ಕಂಡುಹಿಡಿಯುವಲ್ಲಿ ನೀವು ಹೆದರುವುದಿಲ್ಲ ಮತ್ತು ಯಾರಿಗೂ ಅಂಜದೆಯೇ ತಪ್ಪನ್ನು ಎದ್ದುಗಾಣಿಸುತ್ತೀರಿ.

ತೆಳು ಹುಬ್ಬುಗಳು

ತೆಳು ಹುಬ್ಬುಗಳು

ನಿಮ್ಮ ಹುಬ್ಬು ಕಡಿಮೆ ಕೂದಲನ್ನು ಹೊಂದಿವೆ ಎಂದಾದಲ್ಲಿ ಅಂತೆಯೇ ಯಾವುದೇ ಆಕಾರವನ್ನು ಪಡೆದುಕೊಂಡಿಲ್ಲದಿದ್ದಲ್ಲಿ ನಿಮ್ಮದು ನಾಚಿಕೆಯ ಸ್ವಭಾವ ಎಂದಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಹೇಳುವಲ್ಲಿ ನೀವು ಸ್ಥೈರ್ಯವಂತರಾಗಿರುವುದಿಲ್ಲ ಮತ್ತು ಏನನ್ನಾದರೂ ಮಾಡುವಲ್ಲಿ ನಿಮ್ಮನ್ನು ಆತ್ಮಸ್ಥೈರ್ಯ ಕಾಡುತ್ತದೆ.

English summary

8 Eyebrow Shapes That Reveal Your Personality

Here, we will discuss some of the most common types of eyebrow shapes to reveal about your personality. So, from now on, look not only at the eyes, but at the eyebrows as well!
Please Wait while comments are loading...
Subscribe Newsletter