For Quick Alerts
ALLOW NOTIFICATIONS  
For Daily Alerts

  ರಾಕ್ಷಸ ಗಾತ್ರದ ಹೆಬ್ಬಾವನ್ನು ಹಿಡಿದ ವೀರರು ಈ ಊರಿನವರು!

  By Divya Pandith
  |

  ಹಾವು ಎಂದರೇನೇ ಅದೇನೋ ಒಂದು ಬಗೆಯ ಭಯ ಒಮ್ಮೆಲೇ ನಮ್ಮ ಮನಸ್ಸಿಗೆ ಬಂದು ಹೋಗುತ್ತದೆ. ಇನ್ನು ಅದು ನಮ್ಮ ಕಣ್ಮುಂದೆ ಬಂದರೆ ನಮ್ಮ ಪರಿಸ್ಥಿತಿ ಆದೇವರಿಗೆ ಚೆನ್ನ ಅನಿಸುತ್ತದೆ ಅಲ್ಲವಾ? ಸಾಮಾನ್ಯ ಹಾವನ್ನು ಕಂಡು ಭಯಪಡುವವರ ಮುಂದೆ ಮನುಷ್ಯನನ್ನೇ ತಿನ್ನುವ ಹೆಬ್ಬಾವು ಬಂದರೆ ಹೇಗಿರುತ್ತದೆ ಪರಿಸ್ಥಿತಿ... ಎನ್ನುವುದನ್ನು ಕಲ್ಪನೆ ಮಾಡಿಕೊಂಡರೂ ಮೈಯಲ್ಲಿ ಒಂದು ಬಗೆಯ ನಡುಕ ಪ್ರಾರಂಭವಾಗುತ್ತದೆ.

  ಆದರೆ ಇಲ್ಲೊಂದು ಗ್ರಾಮದ ಜನರ ಧೈರ್ಯವೇ ಬೇರೆ ರೀತಿಯದ್ದು... ಒಮ್ಮೆ ಮೈ ಮೇಲೆ ಹಾರಿದರೆ ಜೀವವನೇ ಹಿಂಡಿ ಬಿಡುತ್ತದೆ ಎನ್ನುವ ಹೆಬ್ಬಾವಿನ ಜೊತೆಗೆ ಕಾದಾಟಕ್ಕೆ ಇಳಿದಿದ್ದಾರೆ. ಹಾವಿನ ಶಕ್ತಿ ಹಾಗೂ ಸಾಮಥ್ರ್ಯಕ್ಕಿಂತ ತಮ್ಮ ಸಾಹಸ ಧೈರ್ಯವೇ ಹೆಚ್ಚು ಎನ್ನುವುದನ್ನು ತೋರಿಸಿದ್ದಾರೆ. ಜೊತೆಗೆ ಹಾವಿನ ಮಾಂಸವನ್ನು ಪಡೆದುಕೊಂಡು ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು, ಇಂಡೋನೇಷ್ಯಾದಲ್ಲಿರುವ ಹಳ್ಳಿಯೊಂದರಲ್ಲಿ 26 ಅಡಿ ಉದ್ದದ (7.8 ಮೀಟರ್) ಹೆಬ್ಬಾವನ್ನು ಕೊಂದು ಮಾಂಸದ ಹಬ್ಬವನ್ನು ಆಚರಿಸಿದ್ದಾರೆ. ಜೊತೆಗೆ ತಮ್ಮ ಧೈರ್ಯದ ಪ್ರತೀಕ ಎಂದು ತೋರಿಸಿಕೊಟ್ಟಿದ್ದಾರೆ.

  python

  ಯಾವ ಜಾತಿಗೆ ಸೇರಿದ್ದು?

  ವನ್ಯ ಜೀವಿ ಸೊಸೈಟಿ ವಂಶಪಾರಂಪರಿಕ ಮೇಲ್ವಿಚಾರಕರಾದ ಡೋನಾಲ್ ಬೊಯೆರ್ ಹೇಳುವ ಪ್ರಕಾರ ಹೆಚ್ಚಾವು(ಪೈಥಾನ್) ಮ್ಯಾಲಿಪಿಥಾನ್ ರೆಟಿಕ್ಯುಲಾಟಸ್ ಜಾತಿಗೆ ಸೇರಿದ್ದು. ಇದು ಆಗ್ನೇಯ ಏಷ್ಯದಾದ್ಯಂತ ಕಂಡುಬರುತ್ತದೆ. ಇದರ ಉದ್ದ ಸುಮಾರು 30 ಅಡಿ (9.1 ಮೀ.) ಇರುತ್ತದೆ. ಆದರೂ ಈ ಗಾತ್ರದ ಹಾವು ಬಹಳ ಅಪರೂಪವಾದದ್ದು. ಕಳೆದ ಸಾಲಿನಲ್ಲಿ ಕೇವಲ 26.2 ಅಡಿ ಉದ್ದದ ರೆಟಿಕ್ಯುಲೇಟೆಡ್ ಪೈಥಾನ್‍ಅನ್ನು ಮಲೇಶಿಯಾದ ಒಂದು ಕಟ್ಟಣ ನಿರ್ಮಾಣ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಮೂರು ದಿನಗಳ ಬಳಿಕ ಒಂದು ಮೊಟ್ಟೆಯನ್ನು ಹಾಕಿತು. ನಂತರ À ಸತ್ತು ಹೋಯಿತು.

  python

  ಬಿಬಿಸಿ ಸುದ್ದಿಯ ಪ್ರಕಾರ

  ರಾಬರ್ಟ್ ನಬಾಬನ್ ಎಂಬ ಭದ್ರತಾ ಸಿಬ್ಬಂದಿ ಬಟಾಂಗ್ ಗನ್ಸಾಲ್‍ನ ಸುಮತ್ರನ್ ಜಿಲ್ಲೆಯಲ್ಲಿರುವ ಪಾಮ್ ಎಣ್ಣೆ ತೋಟದ ರಸ್ತೆಯ ಮೇಲೆ ಹೋಗುತ್ತಿರುವಾಗ ಹಾವು ಎದುರಾಯಿತು. ಇದನ್ನು ಹಿಡಿಯಲು ಹೋದಾಗ ಅದು ನನ್ನ ಕೈ ಕಚ್ಚಿತು. ನಂತರ ಅದರ ಜೊತೆ ಹೋರಾಡಲೇ ಬೇಕಾಯಿತು ಎಂದಿದ್ದಾರೆ. ಈ ವಿಚಾರವನ್ನು ಇಂಡೋನೇಷ್ಯಾಯಾದ ನ್ಯೂಸ್ ಔಟ್ಲೆಟ್‍ಗೆ ತಿಳಿಸಿದ್ದರು. ನಬಾಬನ್‍ಗೆ ಹಾವು ತೀವ್ರವಾಗಿಯೇ ಕಚ್ಚಿತ್ತು. ಅದರಿಂದ ಗಂಭೀರವಾದ ಗಾಯೊಂಡಿದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ಬಿಬಿಸಿಯಲ್ಲಿ ಹೇಳಿದ್ದಾರೆ.

  ಇವು ಏನನ್ನು ತಿನ್ನುತ್ತವೆ?

  ಇವು ಸಾಮಾನ್ಯವಾಗಿ ಇಲಿಗಳು, ಸಾಕು ಪ್ರಾಣಿ, ಹಂದಿ, ನಾಯಿ ಸೇರಿದಂತೆ ಮಧ್ಯಮ ಗಾತ್ರದ ಪ್ರಾಣಿ ಹಾಗೂ ಸಾಕು ಪ್ರಾಣಿಯನ್ನು ತಿನ್ನುತ್ತವೆ. ಇವು ಬೇಟೆಯಾಡುವಾಗ ಮೊದಲು ಪ್ರಾಣಿಯನ್ನು ಹುಸಿರುಗಟ್ಟಿಸಿ ಕೊಂದು ನಂತರ ತಿನ್ನುತ್ತವೆ ಎನ್ನಲಾಗುತ್ತದೆ.

  python

  ನಬಾಬನ್ ಕಚ್ಚುವಾಗ

  ನಬಾಬನ್ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುವಾಗ ಕಚ್ಚಲು ಪ್ರಯತ್ನಿಸಿತು ಎಂದು ಹೇಳಲಾಗಿದೆ. ರೆಟಿಕ್ಯುಲೇಟೆಡ್ ಹೆಬ್ಬಾವುಗಳು ಮಾನವರ ಮೇಲೆ ಆಹಾರಕ್ಕಾಗಿ ಆಕ್ರಮಣ ಮಾಡುವುದು ಬಹಳ ವಿರಳ ಎಂದು ಹೇಳಲಾಗುತ್ತದೆ. ಇಂಡೋನೇಷ್ಯಾದ ವೆಸ್ಟ್ ಸುಲಾವೆಸಿ ಎನ್ನುವ ಫಾಮ್ ತೈಲ ತೋಟದಲ್ಲಿ, ಮಾರ್ಚ್ ತಿಂಗಳಲ್ಲಿ 23 ಅಡಿ ಉದ್ದದ ಹೆಬ್ಬಾವನ್ನು ಹಿಡಿಯಲಾಯಿತು. ಇದರ ಹೊಟ್ಟೆಯಲ್ಲಿ 25 ವರ್ಷ ಪ್ರಾಯದ ಒಬ್ಬ ವ್ಯಕ್ತಿ ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

  ವರದಿಯ ಪ್ರಕಾರ

  ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‍ನ ಜರ್ನಲ್ ಪ್ರೊಸೀಡಿಂಗ್ಸ್‍ನಲ್ಲಿ ನಡೆಸಿದ ವರದಿಯ ಪ್ರಕಾರ 1976 ರಿಂದ ಈಚೆಗೆ ಪರಭಕ್ಷಕ ರೆಟಿಕ್ಯುಲೇಟೆಡ್ ಪೈಥಾನ್ ದಾಳಿಯಿಂದ 16 ಪ್ರಕರಣಗಳನ್ನು ಬಹಿರಂಗ ಪಡಿಸಿದೆ. ಇದರಲ್ಲಿ ಇಬ್ಬರು ಮಕ್ಕಳನ್ನು ತಿಂದಿತ್ತು ಹಾವು ತಿಂದಿತ್ತು. ಹಾಗೆಯೇ ಇಬ್ಬರು ವಯಸ್ಕರು ಬಲಿಯಾಗಿದ್ದಾರೆ. ಒಬ್ಬ ವಯಸ್ಕನು ಹೆಬ್ಬಾವಿನ ಕಡಿತದಿಂದ ಸತ್ತಿದ್ದಾನೆ ಎನ್ನುವುದನ್ನು ವರದಿ ಮಾಡಿದ್ದಾರೆ.

  python

  ಹಲವರ ರಕ್ಷಣೆಯಾಗಿದೆ

  ವಾರದ ಈಚೆಗೆ ನಡೆದ ಹೆಬ್ಬಾವಿನ ಸಮರದಲ್ಲಿ ಸಂತೋಷಕರ ಫಲಿತಾಂಶ ದೊರೆತಿದೆ. ನಬಾಬನ್ ಜೊತೆ ಕೆಲವು ಸ್ಥಳೀಯರು ಹಾವನ್ನು ಸಾಯಿಸಿದ್ದಾರೆ. ಇಲ್ಲವಾದರೆ ಹತ್ತಿರದ ಗ್ರಾಮದ ಜನರಿಗೆ ಅಪಾಯ ಉಂಟಾಗುತ್ತಿತ್ತು ಎಂದು ಬಿಬಿಸಿಯಲ್ಲಿ ವರದಿ ಮಾಡಲಾಗಿದೆ. ಕೊಂದ ಹಾವನ್ನು ಹುರಿದು ಗ್ರಾಮಸ್ಥರು ತಿಂದಿದ್ದಾರೆ ಎನ್ನಲಾಗುತ್ತದೆ.

  English summary

  23-feet-long-python-has-been-confronted-an-unhurried-man

  You must have seen Anaconda, a Hollywood movie. There is a huge snake in it and you have to hear the tales of capturing large snakes, many times such videos also become viral on social media.
  Story first published: Thursday, October 26, 2017, 14:15 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more