Latest Updates
-
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ!
ರಾಶಿ ಭವಿಷ್ಯ: ಮೇಷ ಮತ್ತು ಮಕರ ರಾಶಿಯವರಿಗೆ 2018ರಲ್ಲಿ ಅದೃಷ್ಟ ಒಲಿಯಲಿದೆ...
2017ರ ವರ್ಷಕ್ಕೆ ನಮಸ್ಕಾರ ಹೇಳಿ 2018ಕ್ಕೆ ಸ್ವಾಗತ ಮಾಡುವ ಸಮಯ ಬರುತ್ತಿದೆ. ಪ್ರತಿಯೊಬ್ಬರಿಗೂ ಹೊಸ ವರ್ಷ, ಹೊಸ ಪಂಚಾಂಗದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಜೊತೆಗೆ ಹೊಸ ವರ್ಷವಾದರೂ ಜೀವನದಲ್ಲಿ ಹೊಸತನ್ನು ತರಬಹುದೇ? ಎನ್ನುವ ನಿರೀಕ್ಷೆ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಕೊಂಚ ಬದಲಾವಣೆ ಅಥವಾ ಲಾಭ ಉಂಟಾಗುವುದೇ? ಎನ್ನುವ ನಿರೀಕ್ಷೆ ಇರುತ್ತದೆ. ಈಗಾಗಲೇ ಅನೇಕ ಮಂದಿ ಹೊಸ ವರ್ಷದ ಸ್ವಾಗತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಗ್ರಹಗತಿಗಳ ವಿಚಾರವನ್ನು ತಿಳಿಯಬೇಕೆಂದರೆ ಈ ವರ್ಷವು ವಿಸ್ಮಯಕರ ಬದಲಾವಣೆ ಉಂಟಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮಂಗಳ ಗ್ರಹವು ತುಲಾ ರಾಶಿಯನ್ನು ಬಿಡುವುದು. ಶನಿಯು ವೃಶ್ಚಿಕ ರಾಶಿಯನ್ನು ಬಿಡುವುದು. ಮಂಗಳ ಮತ್ತು ಗುರು ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶ ಪಡೆಯುವುದು. ಗುರು ಗ್ರಹವು ವೃಶ್ಚಿಕಕ್ಕೆ ಪ್ರವೇಶಿಸುವ ಮೊದಲೇ ರವಿಯ ಪ್ರವೇಶ ಉಂಟಾಗುವುದರಿಂದ ಉತ್ತಮ ಫಲಿತಾಂಶ ದೊರೆಯುವುದು. ಗುರುವು ವೃಶ್ಚಿಕ ರಾಶಿಗೆ ಜನವರಿ 17ಕ್ಕೆ ಪ್ರವೇಶಿಸುತ್ತಾನೆ. ಈ ಸಮಯದಿಂದ ಮಾರ್ಚ್ 17ರ ವರೆಗೆ ಕೆಲವು ರಾಶಿಯವರು ಗಮನಾರ್ಹ ಬದಲಾವಣೆಯನ್ನು ಕಾಣಬಹುದಾಗಿದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಬರುವ ಹೊಸ ವರ್ಷವು ಬಹುತೇಕ ರಾಶಿ ಚಕ್ರದವರಿಗೆ ಧನಾತ್ಮಕ ಪರಿಣಾಮವು ಉಂಟಾಗುವುದು. ಅದರಲ್ಲಿಯೂ ಎರಡು ರಾಶಿ ಚಕ್ರದವರಿಗೆ ಅತ್ಯಂತ ಉತ್ತಮವಾದ ವರ್ಷವಾಗಲಿದೆ. ಈ ವರ್ಷದಲ್ಲಿ ಆರೋಗ್ಯ, ವೃತ್ತಿ, ಪ್ರೀತಿ, ವಿವಾಹ, ಸಂಪತ್ತು ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಶ್ರೀಮಂತಿಕೆಯನ್ನು ಪಡೆಯುವ ಸಾಧ್ಯತೆಗಳಿವೆ. ನಿಮಗೂ ಅದ್ಯಾವ ರಾಶಿಯವರಿಗೆ ಅತ್ಯಂತ ಉತ್ತಮವಾದ ಬದಲಾವಣೆ ಉಂಟಾಗುತ್ತಿದೆ ಎನ್ನುವದನ್ನು ತಿಳಿಯುವ ಕಾತುರ ಉಂಟಾಗುತ್ತಿದ್ದರೆ ಈ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ....

ಮೇಷ
ಈ ವರ್ಷದಲ್ಲಿ ನಿಮ್ಮ ರಾಶಿಚಕ್ರದಲ್ಲಿ ಉತ್ತಮ ಹಾಗೂ ಧನಾತ್ಮಕ ಬದಲಾವಣೆ ಉಂಟಾಗುತ್ತಿ ರುವುದರಿಂದ, ವಿಶೇಷವಾಗಿ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಲಾಭ ಹಾಗೂ ಯಶಸ್ಸನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ವರ್ಷ ನಿಮಗೆ ಅನೇಕ ಅನುಕೂಲವನ್ನು ತಂದುಕೊಡುವುದು.

ಮೇಷ
ಇಷ್ಟು ದಿನಗಳಕಾಲ ಪ್ರಯತ್ನಗಳಿಗೆ ಸೂಕ್ತ ಪರಿಹಾರ ಸಿಗದೆ ಬೇಸರಕ್ಕೆ ಒಳಗಾಗಿದ್ದೀರಿ. ಈ ಬಾರಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ವೃತ್ತಿ ಜೀವನದಲ್ಲಿ ನಿಮ್ಮ ಬುದ್ಧಿಶಕ್ತಿಗೆ ಅನುಗುಣವಾಗಿ ಅವಕಾಶವೂ ದೊರೆಯುವುದು. ನಿಮ್ಮ ಜೀವನದ ಪ್ರಗತಿಗೆ ಸಹಾಯವಾಗುವುದು.

ಮಕರ
ಈ ರಾಶಿಯವರಿಗೆ ಜನವರಿ 2018 ರಿಂದ ಮಾರ್ಚ್2018ರ ವರಗೆ ಅತ್ಯಂತ ಉತ್ತಮ ಫಲಗಳನ್ನು ಪಡೆದುಕೊಳ್ಳುವರು. ಹಣ ಹಾಗೂ ಬುದ್ಧಿವಂತಿಕೆಗೆ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುವರು.

ಮಕರ
ಈ ಸಮಯವು ವ್ಯಾಪಾರ ವಹಿವಾಟು ನಡೆಸುವವರಿಗೆ ಅತ್ಯಂತ ಲಾಭವನ್ನು ತಂದುಕೊಡುವ ಸಮಯ ಎಂದು ಹೇಳಬಹುದು. ನಿಮ್ಮ ವ್ಯವಹಾರ ವ್ಯಾಪಾರವು ಹೆಚ್ಚು ಪ್ರಚಾರ ಹಾಗೂ ಯಶಸ್ಸಿನ ಹಾದಿಯಲ್ಲಿ ಸಾಗುವುದು.

ಶನಿಯು ವೃಶ್ಚಿಕ ರಾಶಿಯಿಂದ ಹೊರ ಬರುವುದರಿಂದ ಉಂಟಾಗುವ ಪರಿಣಾಮ
ಈ ವರ್ಷವು ಇನ್ನೊಂದು ಪರಿವರ್ತನೆಯೆಂದರೆ ಶನಿಯು ವೃಶ್ಚಿಕ ರಾಶಿಯಿಂದ ಹೊರ ಬರುತ್ತಿರುವುದು. ಈ ಬದಲಾವಣೆಯು ಎರಡು ರಾಶಿ ಚಕ್ರದವರ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಉಂಟಾಗುವುದು.

ಸಿಂಹ
ಇಷ್ಟು ದಿನ ಅತ್ಯಂತ ಕಷ್ಟ ಹಾಗೂ ನೋವುಗಳಿಂದ ಬಳಲುತಿದ್ದ ನಿಮಗೆ 2018ರ ವರ್ಷ ನೆಮ್ಮದಿಯನ್ನು ನೀಡಲಿದೆ. ವರ್ಷದ ಮಧ್ಯ ಭಾಗದಲ್ಲಿ ಉತ್ತಮ ದಿನಗಳನ್ನು ಕಾಣುವಿರಿ. ನಿಮ್ಮ ಜೀವನದಲ್ಲಿ ಕೆಟ್ಟ ದಿನಗಳು ಕಳೆದು ಸಂತೋಷದ ದಿನಗಳು ಮರುಕಳಿಸಲಿವೆ. ದೀರ್ಘಾವದಿಯಿಂದ ತಡೆದಿರುವ ಹಣವು ನಿಮ್ಮ ಕೈ ಸೇರುವುದು.

ಸಿಂಹ
ಮೇಲಾಧಿಕಾರಿಗಳು ಹಾಗೂ ಹಿರಿಯರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ನಿಮ್ಮ ಆಕ್ರೋಶದ ಸ್ವಭಾವವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ಸಂತೋಷವು ನಿಮ್ಮ ಜೀವನದಿಂದ ದೂರ ಸರಿಯುವುದು.

ತುಲಾ
ಸಾಡೆ ಸಾತು ಶನಿಯ ಪ್ರಭಾವದಿಂದ ಮುಕ್ತಿಯನ್ನು ಪಡೆಯುವಿರಿ. ಮನೆಯಲ್ಲಿ ಹಾಗೂ ಮಾನಸಿಕವಾಗಿ ಶಾಂತಿ ಹಾಗೂ ನೆಮ್ಮದಿ ಲಭಿಸುವುದು. ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಚಾರ, ಏರಿಕೆ ಮತ್ತು ಯಶಸ್ಸನ್ನು ಪಡೆದುಕೊಳ್ಳುತ್ತೀರಿ. ಹಾಗಾಗಿ ಈ ವರ್ಷ ಪೂರ್ತಿ ಹೆಚ್ಚು ಶ್ರಮ ವಹಿಸಬೇಕಾಗುವುದು.

ತುಲಾ
ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ದಿನ ಕಳೆಯಲು ಈ ವರ್ಷ ಉತ್ತಮ ಅವಕಾಶ ಕಲ್ಪಿಸಿಕೊಡುವುದು. ನಿಮ್ಮ ತೀರ್ಮಾನಕ್ಕೆ ಸುತ್ತಲಿನ ಜನರು ಬೆಂಬಲ ನೀಡುವರು. ಆಹ್ಲಾದಕರ ಸಂದರ್ಭಕ್ಕಾಗಿ ಒಂದಿಷ್ಟು ಹಣವನ್ನು ವ್ಯಯ ಮಾಡಬೇಕಾಗುವುದು.



Click it and Unblock the Notifications











