Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡೀ ವಿಶ್ವದ ನಿದ್ದೆಕೆಡಿಸಿರುವ ಭಯಾನಕ ದುರಂತಗಳು
ವಿಜ್ಞಾನದಲ್ಲಿ ನಾವು ಎಷ್ಟೇ ಮುಂದುವರೆದಿರಬಹುದು, ಆದರೆ ನಿಸರ್ಗ ನಮಗಿಂತ ಒಂದು ಹೆಜ್ಜೆ ಸದಾ ಮುಂದಿರುತ್ತದೆ. ಇದರ ಮುಂದಿನ ನಡೆ ಹೀಗೇ ಇರುತ್ತದೆ ಎಂಬುದನ್ನು ಖಡಾಖಂಡಿತವಾಗಿ ಹೇಳಬಲ್ಲಷ್ಟು ನಾವಿನ್ನೂ ಮುಂದುವರೆದಿಲ್ಲ. ಉದಾಹರಣೆಗೆ ಇಂದು ಭಾರೀ ಮಳೆ ಬರಲಿದೆ ಎಂದು ಮುನ್ಸೂಚನೆ ನೀಡಿದ ದಿನ ಪ್ರಖರ ಬಿಸಿಲಿರುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೇ ಧೀಡೀರನೇ ನೆಲ ಅದುರುತ್ತದೆ, ಸುನಾಮಿ ಅಲೆಗಳು ಎದ್ದು ಬಂದು ತೀರಗಳನ್ನು ಅಪ್ಪಳಿಸುತ್ತವೆ.
ಇವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಕೆಲವು ದೂರದಿಂದ ಬರುತ್ತಿರುವ ಚಂಡಮಾರುತ ಎಲ್ ನೈನೋ ಮೊದಲಾದ ಪ್ರಕೋಪಗಳ ಬಗ್ಗೆ ಉಪಗ್ರಹದಿಂದ ಮಾಹಿತಿ ಪಡೆದು ಇದು ಸುಳಿಯುತ್ತಿರುವ ಪ್ರದೇಶದ ಜನರನ್ನು ಖಾಲಿ ಮಾಡಿಸಿ ಪ್ರಾಣಹಾನಿಯನ್ನು ತಪ್ಪಿಸಲು ಸಾಧ್ಯವಾಗಿದೆಯೇ ಹೊರತು ಈ ಚಂಡಮಾರುತವನ್ನು ಬರದೇ ಇರದಂತೆ ಮಾಡಲು ಸಾಧ್ಯವಾಗಿಲ್ಲ. ಪ್ರಕೃತಿಯ ರುದ್ರ, ನರ್ತನಕ್ಕೆ, ಅಂದು ದೇಶವೇ ಬೆಚ್ಚಿ ಬಿದ್ದಿತು
ನಿಸರ್ಗ ಪ್ರಕೋಪದ ಪ್ರಾಬಲ್ಯ ಎಷ್ಟಿರುತ್ತದೆ ಎಂದು ಅಳೆಯಲೂ ಸಾಧ್ಯವಿಲ್ಲ. ಒಂದು ಕ್ಷಣದ ಒಂದು ಭಾಗದಷ್ಟು ಕಡಿಮೆ ಸಮಯದಲ್ಲಿ ಸುಳಿಯುವ ಮಿಂಚಿನಲ್ಲಿಯೂ ಲಕ್ಷಾಂತರ ವೋಲ್ಟ್ ವಿದ್ಯುತ್ ಇರುತ್ತದೆ. ಆದರೆ ಇದನ್ನು ಹಿಡಿಯಲು ಸಾಧ್ಯವಿಲ್ಲ. ಅಂತೆಯೇ ಇತರ ನೈಸರ್ಗಿಕ ವಿಕೋಪಗಳನ್ನು ತಡೆಯಲೂ ಸಾಧ್ಯವಿಲ್ಲ. ಇದುವರೆಗೆ ನೂರಾರು ಪ್ರಕೃತಿ ವಿಕೋಪಗಳು ಈ ಜಗತ್ತಿನ ಹಲವಾರು ಸ್ಥಳಗಳಲ್ಲಿ ಭಾರೀ ಅನಾಹುತಗಳನ್ನು ಮಾಡಿದೆ.
ಇವುಗಳಲ್ಲಿ ಕೆಲವು ಎಂದೂ ದಾಖಲಾಗಿರದೇ ಇರುವ ಕಾರಣ ಇದರ ಕುರುಹುಗಳನ್ನು ಮಾತ್ರ ಕಾಣಬಹುದು. ಆದರೆ ಇತಿಹಾಸದಲ್ಲಿ ಸಂಭವಿಸಿದ ಹಲವಾರು ನಿಸರ್ಗ ಪ್ರಕೋಪಗಳನ್ನು ಕೆಲವರು ದಾಖಲಿಸಿದ್ದು ಇಂದು ಅಮೂಲ್ಯ ಮಾಹಿತಿಗಳಾಗಿ ಲಭ್ಯವಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ಇವುಗಳಲ್ಲಿ ಪ್ರಮುಖವಾದುದನ್ನು ಸಂಗ್ರಹಿಸಿ ನೀಡಲಾಗಿದೆ. ಇದರಿಂದ ಈ ಜೀವನ ಯಾವುದೇ ಕ್ಷಣದಲ್ಲಿ ಕೊನೆಗೊಳ್ಳಬಹುದು ಎಂಬ ಎಚ್ಚರಿಕೆಯನ್ನೂ ಪಡೆದಂತಾಗುತ್ತದೆ.

ತ್ಸುನಾಮಿ ಅಲೆ (2011)
ಜಪಾನಿ ಭಾಷೆಯಲ್ಲಿ ತ್ಸುನಾಮಿ ಅಂದರೆ 'ಬಂದರಿನ ಅಲೆಗಳು' ಎಂಬ ಅರ್ಥವಿದೆ. ಸಾಗರದಾಳದಲ್ಲೆಲ್ಲೋ ಭೂಕಂಪದ ಕಾರಣ ನೆಲ ಕುಸಿದಾಗ ಅದರ ಮೇಲಿದ್ದ ನೀರು ಸಹಾ ಧಬಕ್ಕನೆ ಕೆಳಗೆ ಕುಸಿಯುತ್ತದೆ. ಕುಸಿದ ನೀರಿನ ರಭಸಕ್ಕೆ ಅಷ್ಟೇ ರಭಸದಲ್ಲಿ ನೆಲದಿಂದ ಮೇಲೂ ಚಿಮ್ಮುತ್ತದೆ. ಇದು ಅರ್ಥವಾಗಬೇಕಾದರೆ ಗಾಳಿ ತುಂಬಿದ ಚೆಂಡೊಂದನ್ನು ಬಕೆಟ್ ನೀರಿನೊಳಗೆ ಮುಳುಗಿಸಿ ಕೈಬಿಟ್ಟಾಗ ಮೇಲೆ ಪುಟಿದೇಳುವ ಚೆಂಡಿನ ಕಾರಣ ವೃತ್ತಾಕಾರದ ಅಲೆಗಳು ಬಕೆಟ್ಟಿನ ಪರಿಧಿಯತ್ತ ಸರಿಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತ್ಸುನಾಮಿ ಅಲೆ (2011)
ಇವೇ ತ್ಸುನಾಮಿ ಅಲೆಗಳು ಮಾ11, 2011ರಂದು ಜಪಾನ್ ಬಳಿಯ ಟೋಹೋಕು ಎಂಬಲ್ಲಿ ಸಂಭವಿಸಿದ ಭೂಪಂಪದ ಕಾರಣ ಎದ್ದ ಮಹಾ ಅಲೆಗಳ ಕಾರಣ ಜಪಾನ್ ಸೇರಿದಂತೆ ಅಲಾಸ್ಕಾ, ಚಿಲಿ ಮೊದಲಾದೆಡೆ ಭಾರೀ ಅಲೆಗಳು ಧಾವಿಸಿತ್ತು. ಅಷ್ಟೇ ಅಲ್ಲ ದಕ್ಷಿಣದ ಅಂಟಾರ್ಟಿಕಾ ಕಡೆಗೂ ಧಾವಿಸಿ ಅಲ್ಲಿನ ಮಂಜುಗಡ್ಡೆಯ ಗೋಡೆಗಳನ್ನೂ ಬೀಳಿಸಿತ್ತು. ಅಂಕಿ ಅಂಶಗಳ ಪ್ರಕಾರ 15,894 ಜನರು ಸಾವಿಗೀಡಾಗಿದ್ದು 6,152 ಜನರು ಗಾಯಗೊಂಡಿದ್ದು 2,562 ಜನರು ನಾಪತ್ತೆಯಾಗಿದ್ದರು.

ಪಾಕಿಸ್ತಾನ ಭೂಕಂಪ (2005)
ರಿಕ್ಟರ್ ಮಾಪಕದಲ್ಲಿ 7.6 ರಷ್ಟಿದ್ದ ಪ್ರಬಲ ಭೂಕಂಪ ಪಾಕಿಸ್ತಾನದ ಕಾಶ್ಮೀರ ಪ್ರದೇಶದ ಮುಜಪ್ಫರಾಬಾದ್ ನಗರದ ಬಳಿ ಕೇಂದ್ರವಾಗಿದ್ದು ಸುತ್ತಲ ಹಲವು ಮೈಲುಗಳ ವರೆಗೆ ಭಾರೀ ಪ್ರಮಾಣದ ಹಾನಿಯುಂಟುಮಾಡಿತ್ತು. ಇದರ ಪರಿಣಾಮವಾಗಿ ಅಂದಾಜು 75,000 ಜನರು ಸತ್ತು ಸುಮಾರು 106,000 ಜನರು ಗಾಯಗೊಂಡರು. Image Courtesy

ನ್ಯೂಜಿಲ್ಯಾಂಡ್ ಭೂಕಂಪ (2011)
ರಿಕ್ಟರ್ ಮಾಪಕದಲ್ಲಿ 6.3 ರಷ್ಟಿದ್ದ ಪ್ರಬಲ ಭೂಕಂಪ ನ್ಯೂಜಿಲ್ಯಾಂಡ್ ನಲಿ ಫೆಬ್ರವರಿ22, 2011 ರಂದು ಸಂಭವಿಸಿತ್ತು. ಈ ಪ್ರಬಲ ಭೂಕಂಪ ನ್ಯೂಜಿಲ್ಯಾಂಡ್ ದೇಶದ ಎರಡನೇ ಅತಿ ದೊಡ್ಡ ನಗರವಾದ ಕ್ರೈಸ್ಟ್ ಚರ್ಚ್ ನ ಹಲವು ಪ್ರದೇಶ ಮತ್ತು ಕ್ಯಾಂಟೆರ್ಬರಿ ಪ್ರದೇಶದ ಕೇಂದ್ರಭಾಗವನ್ನೂ ಬಹಳವಾಗಿ ನಾಶಪಡಿಸಿತ್ತು. Image courtesy

ಹಿಂದೂ ಮಹಾಸಾಗರದ ಮಹಾ ಭೂಕಂಪ (2004)
ಭಾರತ ಕಂಡ ಅತ್ಯಂತ ಅನಾಹುತಕಾರಿ 9.15 ಪ್ರಬಲ ಭೂಕಂಪ ಡಿಸೆಂಬರ್ 26, 2004ರಂದು ಸುಮಾತ್ರಾ ಮತ್ತು ಅಂಡಮಾನ್ ದ್ವೀಪಗಳ ನಡುವಣ ಹಿಂದೂ ಮಹಾಸಾಗರದಲ್ಲಿ ಸಂಭವಿಸಿತ್ತು. ಇದರ ಪರಿಣಾಮವಾಗಿ ಎದ್ದ ಭಾರೀ ಅಲೆಗಳು ಸುತ್ತಲೂ ಹರಡಿ ಭಾರತದ ಪಶ್ಚಿಮ ತೀರ, ಶ್ರೀಲಂಕಾ, ಥಾಯ್ಲೆಂಡ್, ಮಾಲ್ಡೀವ್, ದೂರದ ಸೂಡಾನ್ ದೇಶದವರೆಗೂ ವ್ಯಾಪಿಸಿ ವ್ಯಾಪಕ ಹಾನಿಯುಂಟುಮಾಡಿತು. ಈ ಎಲ್ಲಾ ದೇಶಗಳಲ್ಲಿ ಸತ್ತವರ ಒಟ್ಟು ಸಂಖ್ಯೆ 230,273 ಗಾಯಗೊಂಡವರ ಸಂಖ್ಯೆ 125,000 ಮತ್ತು ನಾಪತ್ತೆಯಾಗಿರುವವರ ಸಂಖ್ಯೆ 45,752 ಎಂದು ದಾಖಲಾಗಿದೆ. Image coutesy

ಕತ್ರಿನಾ ಚಂಡಮಾರುತ(2005)
ಅಮೇರಿಕಾದ ಫ್ಲೋರಿಡಾ, ಬಹಾಮಾಸ್, ಕ್ಯೂಬಾ, ಲೂಸಿಯಾನಾ, ನ್ಯೂ ಆರ್ಲೀನ್ಸ್, ಮಿಸಿಸಿಪ್ಪಿ ಮೊದಲಾದ ತೀರನಗರಗಳಿಗೆ ಆಗಸ್ಟ್ 23, 2005ರಂದು 280 ಕಿಮೀ ಪ್ರತಿ ಘಂಟೆಯ ವೇಗದಲ್ಲಿ ಅಪ್ಪಳಿಸಿದ ಪ್ರಬಲ ಚಂಡಮಾರುತ ಅಮೇರಿಕಾದ ಇತಿಹಾಸ ಕಂಡ ಭಯಾನಕ ಚಂಡಮಾರುತವಾಗಿದೆ. ಇತಿಹಾಸದ ಆರನೆಯ ಅತಿ ಪ್ರಬಲ ಚಂಡಮಾರುತ ಎಂದು ಇದು ದಾಖಲಾಗಿದೆ. Image courtesy

ನರ್ಗಿಸ್ ಚಂಡಮಾರುತ (2008)
2008ರ ಮೇ 2ರಂದು ಹಿಂದೂ ಮಹಾಸಾಗರದ ಮಾಯನ್ಮಾರ್ ದ್ವೀಪಗಳಿಗೆ 215 ಕಿಮೀ ವೇಗದಲ್ಲಿ ಅಪ್ಪಳಿಸಿದ ನರ್ಗಿಸ್ ಚಂಡಮಾರುತದ ಪರಿಣಾಮವಾಗಿ 138,366 ಜನರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 53,800ಜನರು ನಾಪತ್ತೆಯಾಗಿದ್ದಾರೆ. Image courtesy

ಹೈತಿ ಭೂಕಂಪ (2010)
ಜನವರಿ 12, 2010ರಂದು 7.0 ರಿಕ್ಟರ್ ಮಾಪಕದ ಪ್ರಬಲ ಭೂಕಂಪವೊಂದು ಹೈತಿ ದೇಶದಲ್ಲಿ ಸಂಭವಿಸಿತು. 1770ರ ಬಳಿಕ ಈ ದೇಶ ಕಂಡ ಅತಿ ಪ್ರಬಲ ಭೂಕಂಪದಲ್ಲಿ 200,000 ಜನರು ಪ್ರಾಣ ಕಳೆದುಕೊಂಡರೆ ಸುಮಾರು ಇಪ್ಪತ್ತು ಲಕ್ಷಕ್ಕೂ ಜನರು ಮನೆಗಳನ್ನು ಕಳೆದುಕೊಂಡರು. Image courtesy



Click it and Unblock the Notifications









