Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಶರ್ಟ್ ಬಟನ್‌ಗಳ ಹಿಂದಿನ ಕೊಂಚ ಇಂಟರೆಸ್ಟಿಂಗ್ ಸಂಗತಿಗಳು
ಕೆಲವೊಂದು ವಿಷಯಗಳು ನಾವು ತುಂಬಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅದು ನಮ್ಮ ಗಮನಕ್ಕೆ ಬರುತ್ತದೆ. ಪುರುಷರು ಮತ್ತು ಮಹಿಳೆಯರ ಅಂಗಿಯ ಬಟನ್ ಅನ್ನು ಯಾವತ್ತಾದರೂ ನೀವು ಗಮನಿಸಿದ್ದೀರಾ?
ಅದರಲ್ಲಿ ನಿಮಗೆ ಯಾವುದಾದರೂ ವ್ಯತ್ಯಾಸ ಕಂಡುಬಂದಿದೆಯಾ ಹೇಳಿ. ಇಲ್ಲ ತಾನೇ? ಹಾಗಾದರೆ ನಾವು ನಿಮಗೆ ಇದರಲ್ಲಿನ ಒಂದು ಮಹತ್ವದ ವ್ಯತ್ಯಾಸದ ಬಗ್ಗೆ ಹೇಳಲಿದ್ದೇವೆ. ಪುರುಷರ ಅಂಗಿಯಲ್ಲಿ ಬಟನ್ ಬಲದ ಬದಿಯಲ್ಲಿ ಇದ್ದರೆ, ಮಹಿಳೆಯರ ಅಂಗಿಯಲ್ಲಿ ಬಟನ್ ಎಡದ ಬದಿಯಲ್ಲಿ ಇರುತ್ತದೆ. ಬಟನ್ ಬಗ್ಗೆ ನಿಮಗೆ ಹೇಳಿ ಅಚ್ಚರಿಯಾಯಿತೇ? ಇದರ ಬಗ್ಗೆ ಇನ್ನು ಹಲವಾರು ರೋಚಕ ಸಂಗತಿಗಳಿವೆ ಅದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು, ಮುಂದೆ ಓದಿ.....

ವಾಸ್ತವ #1
ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಾಗಿ ದಾಸಿಯರು ಇರುತ್ತಿದ್ದರು. ಅವರು ಬಲದ ಕೈಯನ್ನು ಬಳಸುತ್ತಿದ್ದರು. ಪುರುಷರು ಸಾಮಾನ್ಯ ಬಟ್ಟೆಯನ್ನು ತಾವೇ ಧರಿಸುತ್ತಿದ್ದರು. ಇದು ಪುರುಷರು ಮತ್ತು ಮಹಿಳೆಯರ ಅಂಗಿಯ ಬಟನ್‌ನ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿರಬಹುದು.

ವಾಸ್ತವ #2
ಯುದ್ಧ ಕಾಲದಲ್ಲಿ ಪುರುಷರು ಬಲದ ಕೈಯಲ್ಲಿ ಖಡ್ಗವನ್ನು ಹಿಡಿದುಕೊಳ್ಳುತ್ತಿದ್ದರು ಮತ್ತು ಎಡದ ಕೈಯಿಂದ ಅಂಗಿಯ ಬಟನ್ ತೆಗೆಯುವುದು ಅವರಿಗೆ ತುಂಬಾ ಸುಲಭವಾಗುತ್ತಿತ್ತು. ಮಹಿಳೆಯರು ಎಡದ ಕೈಯಲ್ಲಿ ಮಗುವನ್ನು ಹಿಡಿದುಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಮೊಲೆ ಹಾಲುಣಿಸಲು ಸುಲಭವಾಗುತ್ತಿತ್ತು.

ವಾಸ್ತವ #3
ಮಹಿಳೆಯರು ಒಂದು ಬದಿಯಲ್ಲಿ ಕುಳಿತುಕೊಂಡರೆ ಪುರುಷರು ಇನ್ನೊಂದು ಬದಿಯಲ್ಲಿ ಕುಳಿತುಕೊಳ್ಳುತ್ತಾ ಇದ್ದರು. ಮಹಿಳೆಯರ ಅಂಗಿಯಲ್ಲಿ ಎಡದ ಬದಿಯಲ್ಲಿ ಇರುತ್ತಿದ್ದ ಬಟನ್‌ನಿಂದ ಅವರ ಕಡೆಗೆ ಬರುತ್ತಿದ್ದ ಹಿಮಗಾಳಿಯನ್ನು ತಡೆಯಲು ಸಾಧ್ಯವಾಗುತ್ತಿತ್ತು. ಮಹಿಳೆಯರ ಅಂಗಿಯ ಬಟನ್ ಎಡದ ಬದಿಯಲ್ಲಿ ಇರಲು ಇದು ಒಂದು ಕಾರಣವಾಗಿರಬಹುದು.

ವಾಸ್ತವ #4
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಮಾನರೆಂದು ಸಾಬೀತು ಮಾಡಲು ಬಯಸುತ್ತಿದ್ದರು. ಪುರುಷರ ಬಟ್ಟೆಯಲ್ಲಿರುವ ಸಮಾನತೆ ಮಹಿಳೆಯರ ಬಟ್ಟೆಯಲ್ಲೂ ಇರುತ್ತಿತ್ತು. ಆದರೆ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳು ಮಹಿಳೆಯರ ಅಂಗಿಯಲ್ಲಿರುತ್ತಿತ್ತು.

ವಾಸ್ತವ #5
ನೆಪೋಲಿಯನ್‌ನ ಭಾವಚಿತ್ರಗಳಲ್ಲಿ ಬಲದ ಕೈಯು ಯಾವಾಗಲೂ ಕೋಟ್‌ನೊಳಗೆ ಇರುತ್ತಿತ್ತಂತೆ. ಇದರಿಂದ ಪುರುಷರ ಅಂಗಿಯ ಬಟನ್ ಬಲದ ಬದಿಯಲ್ಲಿ ಇರಲು ಕಾರಣವಾಗಿರಬಹುದು. ಈಗ ನಿಮಗೆ ಉತ್ತರ ಸಿಕ್ಕಿದೆ ತಾನೇ?



Click it and Unblock the Notifications
