For Quick Alerts
ALLOW NOTIFICATIONS  
For Daily Alerts

  ಮುಂಜಾನೆಯ ಮೂರು ಗಂಟೆ-ಭೂತ ಪ್ರೇತಗಳದ್ದೇ ಕಾರುಬಾರು!!

  By Manu
  |

  ಹಿಂದಿ ಅಥವಾ ಹಾಲಿವುಡ್ ಚಿತ್ರಗಳನ್ನು ನೋಡುವ ಅಭ್ಯಾಸವಿದ್ದವರಿಗೆ ಭೂತದ ಚಿತ್ರಗಳನ್ನೂ ಆಗಾಗ ನೋಡುವ ಅವಕಾಶ ಬಂದಿರಬಹುದು. ಈ ಭೂತದ ಚಿತ್ರಗಳಲ್ಲಿ ಒಂದು ವಿಷಯ ಗಮನಿಸಿದ್ದೀರಾ? ಅದೆಂದರೆ ಭೂತದ ಅವಸಾನವಾಗುವ ಸಮಯ - ಸರಿಯಾಗಿ ಮುಂಜಾನೆಯ ಮೂರು ಗಂಟೆಗೆ! ಇದು ಒಂದು ಚಿತ್ರದಲ್ಲಿಯಾಗಿದ್ದರೆ ಕಾಕತಾಳೀಯ ಎನ್ನಬಹುದು.  ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

  ಆದರೆ ಚಲನಚಿತ್ರದ ವಿವಿಧ ತಂಡಗಳಿಂದ, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದೇ ತಯಾರಿಸಿದ ಚಿತ್ರಗಳಲ್ಲಿಯೂ ಈ ಸಮಯ ಮಾತ್ರ ಒಂದೇ. ಹೀಗೇಕೆ? ಇದಕ್ಕೆ ಸಾಮಾನ್ಯವಾಗಿ ದೊರಕುವ ಉತ್ತರವೆಂದರೆ "ಮುಂಜಾನೆಯ ಮೂರು ಗಂಟೆ ಅಂದರೆ ಭೂತದ ಸಮಯ', ಆ ಸಮಯದಲ್ಲಿ ಹೊರಗೆ ಹೋಗಬೇಡಿ. ಅಂದರೆ ಈ ಸಮಯದಲ್ಲಿ ಭೂತ ಪಿಶಾಚಿಗಳ ಶಕ್ತಿ ಅತ್ಯಂತ ಹೆಚ್ಚಾಗಿದ್ದು ಕಾಟ ಕೊಡುವ ಭೂತಗಳ ಚೇಷ್ಟೆ ಗರಿಷ್ಠವಾಗಿರುತ್ತದೆಯಂತೆ.      ಸವಾಲಾಗಿರುವ ಈ ಭೂತ, ಪ್ರೇತಗಳ ನಿಗೂಢ ರಹಸ್ಯ

  ಕ್ರೈಸ್ತರು ಈ ಸಮಯವನ್ನು ಯೇಸುಕ್ರಿಸ್ತನ ಮರಣದ ಸಮಯವಾಗಿತ್ತು ಎಂಬುದಾಗಿ ನಂಬುತ್ತಾರೆ. ಅಂದರೆ ಸರಿಯಾಗಿ ಮುಂಜಾವಿನ ಮೂರು ಗಂಟೆಗೆ ಕ್ರಿಸ್ತನ ಕೊನೆಯ ಉಸಿರಿನೊಂದಿಗೇ ಸೈತಾನ ಅದುವರೆಗೆ ಬಂಧನದಲ್ಲಿಟ್ಟಿದ್ದ ಭೂತ ಮತ್ತು ಪ್ರೇತಾತ್ಮಗಳನ್ನು ಬಿಡುಗಡೆ ಮಾಡಿದನಂತೆ. ಕ್ರೈಸ್ತ ಧರ್ಮವನ್ನು ಅನುಸರಿಸುವ ಹೆಚ್ಚಿನ ಪಾಶ್ಚಾತ್ಯ ನಾಗರಿಕರು ಈ ನಂಬಿಕೆಯನ್ನೇ ತಮ್ಮ ಚಿತ್ರಗಳಲ್ಲಿಯೂ ಅಳವಡಿಸಿದ್ದಾರೆ.      ಭೂತಗಳ ಕಾಟದಿಂದ ಈಗ ಬೆಂಗಳೂರು ಕೂಡ ನಲುಗುತ್ತಿದೆ!

  ಸಾಮಾನ್ಯವಾಗಿ ಆತ್ಮ, ಪಿಶಾಚಿಗಳ ಬಗ್ಗೆ ಇತರ ಧರ್ಮಗಳಲ್ಲಿಯೂ ಉಲ್ಲೇಖಗಳಿವೆಯಾದರೂ ಯಾವ ಧರ್ಮದಲ್ಲಿಯೂ ಇದಕ್ಕೊಂದು ಖಚಿತವಾದ ಸಮಯವನ್ನು ನಿಗದಿಪಡಿಸಿಲ್ಲ. ಅಂದರೆ ಮುಂಜಾವಿನ ಮೂರು ಗಂಟೆಯ ಸಮಯ ಕೇವಲ ಕ್ರೈಸ್ತಧರ್ಮದಲ್ಲಿ ಮಾತ್ರ ಖಚಿತವಾಗಿ ತಿಳಿಸಲಾಗಿದ್ದು ಇದು ಹಲವು ಕಥೆಗಳಿಗೆ, ತನ್ಮೂಲಕ ಹಾಲಿವುಡ್‌ನ ಭೂತದ ಚಿತ್ರಗಳಿಗೆ ಸ್ಫೂರ್ತಿಯಾಗಿದೆ. ಬನ್ನಿ, ಈ ಸಮಯದ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯೋಣ:      ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ದೆವ್ವದ ಕಾಟವಿದೆಯಂತೆ!

  ಮುಂಜಾವಿನ ಮೂರು ಗಂಟೆಗೇ ಕೇಳಿಸುವ ವಿಚಿತ್ರ ಸದ್ದುಗಳು!

  ಮುಂಜಾವಿನ ಮೂರು ಗಂಟೆಗೇ ಕೇಳಿಸುವ ವಿಚಿತ್ರ ಸದ್ದುಗಳು!

  ಭೂತಗಳ ಆವಾಸ ಸ್ಥಾನದಿಂದ ಅಥವಾ ಭೂತಗಳ ಇರುವಿಕೆಯ ಬಗ್ಗೆ ಅನುಭೂತಿ ಪಡೆದವರು ಈ ಅನುಭೂತಿಯನ್ನು ತಾವು ಮುಂಜಾನೆಯ ಮೂರು ಮತ್ತು ನಾಲ್ಕು ಗಂಟೆಯ ನಡುವೆಯೇ ಪಡೆದೆವು ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಅವರಿಗೆ ಹಲವು ಅಲೌಕಿಕ ಅನುಭವಗಳಾಗಿವೆ. ಕೆಲವರಿಗೆ ಬಾಗಿಲು ತೆರೆಯುವ, ಒಂಟಿಯಾಗಿದ್ದರೂ ಕೋಣೆಯಲ್ಲಿ ಇನ್ಯಾರೋ ಇರುವ ಅನುಭವವಾಗಿವೆ ಎಂದು ಹೇಳಿಕೊಂಡಿದ್ದಾರೆ.

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಹಗಲಲ್ಲಿ ಎಚ್ಚರವಾಗಿದ್ದು ರಾತ್ರಿ ನಿದ್ದೆ ಮಾಡಿ ಎಂದೇ ಜಗತ್ತಿನ ಎಲ್ಲಾ ಧರ್ಮಗಳು ತಿಳಿಸುತ್ತವೆ. ಅಂದರೆ ರಾತ್ರಿ ಇರುವುದೇ ನಿದ್ದೆ ಮಾಡಲಿಕ್ಕಾಗಿ ಎಂಬ ನಂಬಿಕೆ ಬೆಳೆದುಬಂದಿದೆ. ನಮ್ಮ ದೇಹವನ್ನೂ ನಿಸರ್ಗ ಇದೇ ರೀತಿಯಾಗಿ ನಿರ್ಮಿಸಿದೆ. ಕತ್ತಲಾಗುತ್ತಿದ್ದಂತೆಯೇ ಆವರಿಸುವ ನಿದ್ದೆ ನಡುರಾತ್ರಿಗೆ ಗಾಢವಾಗುತ್ತಾ ಹೋಗಿ ಸುಮಾರು ಮುಂಜಾವಿನ ಮೂರು ಗಂಟೆಗೆ ಗಾಢತೆಯ ಗರಿಷ್ಠ ಹಂತ ತಲುಪುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಇದಕ್ಕೆ ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರವೇ ಕಾರಣ. (ಬೆಳಗ್ಗಿನ ಐದು ಗಂಟೆಗೆ ಏಳಲೇಬೇಕು ಎಂದು ದೃಢಸಂಕಲ್ಪ ಮಾಡಿ ಮಲಗಿದ್ದವರಿಗೆ ಅಲಾರಾಂ ಇಲ್ಲದೆಯೇ ಸರಿಯಾಗಿ ಐದು ಗಂಟೆಗೇ ಎಚ್ಚರಾಗುವುದಕ್ಕೆ ಈ ಗಡಿಯಾರವೇ ಕಾರಣ).

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಈ ಸಮಯದಲ್ಲಿ ಮುಚ್ಚಿದ್ದ ಕಣ್ಣುಗಳ ಒಳಗಿನ ಗುಡ್ಡೆಗಳು ಅತಿವೇಗವಾಗಿ ಚಲಿಸುತ್ತವೆ. REM (Rapid Eye Movement) ಎಂದು ಕರೆಯುವ ಈ ಸ್ಥಿತಿಯಲ್ಲಿ ಮೆದುಳು ಹಲವು ಕನಸುಗಳ ಮೂಲಕ ಹಲವು ವಿಷಯಗಳನ್ನು ತೋರ್ಪಡಿಸುತ್ತದೆ. ಇದು ಅತ್ಯಂತ ಆರೋಗ್ಯಕರ ಲಕ್ಷಣವಾಗಿದೆ. ಆದರೆ ಕೆಲವು ಗೂಬೆ ಮನುಷ್ಯರು ಮಲಗಲು ತಡಮಾಡಿ ದೇಹ ಈ ಪರಿಯ ನಿದ್ದೆಗೆ ಜಾರುವ ಸಮಯವನ್ನೂ ಬದಲಿಸಿಬಿಡುತ್ತಾರೆ.

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಮುಂಜಾವಿನ ಮೂರು ಗಂಟೆ ಎಂದರೆ ಗಾಢ ನಿದ್ದೆಯ ಸಮಯ

  ಆಗ ಏರುಪೇರಾಗುವ ದೇಹದ ಜೈವಿಕ ಗಡಿಯಾರದ ಸಮಯ ಮತ್ತು ಸಹಜವಾಗಿ ದೇಹ ಸ್ಪಂದಿಸುವ ಸಮಯಕ್ಕೂ ತಾಳಮೇಳವೇ ಇಲ್ಲದೇ ನಿದ್ದೆಯಲ್ಲಿ ನಡೆಯುವುದು, ನಿದ್ದೆಯಲ್ಲಿ ಕಿಟಕಿ ತೆರೆಯುವುದು, ನಲ್ಲಿ ತೆರೆದು ನೀರು ಹರಿಯಬಿಟ್ಟು ಮತ್ತೆ ವಾಪಸ್ ಬಂದ್ ಮಾಡದೇ ಇಡಿಯ ರಾತ್ರಿ ನೀರು ಹರಿಯುತ್ತಿರುವಂತೆ ಮಾಡುವುದು ಮೊದಲಾದವು ನಡೆಯುತ್ತವೆ. ಈ ಕೃತ್ಯಗಳು ಮಾಡಿದ್ದ ನೆನಪೇ ಇಲ್ಲದೇ ಪಾಪ ಏನೂ ಮಾಡದ ಭೂತ ತಾನು ಮಾಡದ ಅಪರಾಧಕ್ಕಾಗಿ ಆಪಾದನೆಯನ್ನು ಹೊರಬೇಕಾಗಿ ಬರುತ್ತದೆ.

  ಈ ಹೊತ್ತಿನಲ್ಲಿ ಮೆದುಳು ಗ್ರಹಿಸುವ ರೀತಿ

  ಈ ಹೊತ್ತಿನಲ್ಲಿ ಮೆದುಳು ಗ್ರಹಿಸುವ ರೀತಿ

  ನಿದ್ದೆ ಸರಿಯಾಗಿ ಆಗದಿದ್ದರೆ ಮಧ್ಯರಾತ್ರಿ ಮೂರು ಗಂಟೆಯ ಹೊತ್ತಿಗೆ ಜೈವಿಕ ಗಡಿಯಾರ ಮತ್ತು ನಿಜವಾದ ಸಮಯದ ನಡುವೆ ಗೊಂದಲವುಂಟಾಗಿ ನಿದ್ದೆಯಿಂದ ಅರೆನಿದ್ರಾವಸ್ಥೆಯಲ್ಲಿ ಎಚ್ಚರಾಗುತ್ತದೆ. ಈ ಸಮಯದಲ್ಲಿ ಮೆದುಳು ಅಕ್ಕಪಕ್ಕ ಇರುವ ವಸ್ತುಗಳು, ಸದ್ದುಗಳು, ವಾಸನೆ, ಸ್ಪರ್ಶ ಮೊದಲಾದ ಸಂವೇದನೆಗಳನ್ನು ಎಚ್ಚರಾಗಿರುವ ಹೊತ್ತಿಗಿಂತ ಭಿನ್ನವಾಗಿ ಗ್ರಹಿಸುತ್ತದೆ. ಇದನ್ನು ಅನುಸರಿಸಿ ನಡವಳಿಕೆಯೂ ಬದಲಾಗುತ್ತದೆ.

  ಈ ಹೊತ್ತಿನಲ್ಲಿ ಮೆದುಳು ಗ್ರಹಿಸುವ ರೀತಿ

  ಈ ಹೊತ್ತಿನಲ್ಲಿ ಮೆದುಳು ಗ್ರಹಿಸುವ ರೀತಿ

  ಈ ಬದಲಾದ ನಡವಳಿಕೆಗೆ ಮನಃಶಾಸ್ತ್ರಜ್ಞರು ‘Hag Phenomenon‘ ಎಂದು ಕರೆಯುತ್ತಾರೆ. ಅಂದರೆ ಮೆದುಳು ಗ್ರಹಿಸಿದ ಅಥವಾ ತಪ್ಪಾಗಿ ಗ್ರಹಿಸಿದ ಸಂವೇದನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗದಿರುವುದು. ಇದನ್ನೇ ಭೂತಚೇಷ್ಟೆ ಎಂದು ಕರೆದುಬಿಡುತ್ತೇವೆ. ಈ ಸಮಯದಲ್ಲಿ ಮಾತನಾಡಲೂ, ಯಾವುದೇ ದೈಹಿಕ ಪ್ರತಿಕ್ರಿಯೆ ನೀಡಲೂ ಸಾಧ್ಯವಾಗದೇ ಅವ್ಯಕ್ತ ಭಯ ಆವರಿಸುತ್ತದೆ.

  ಆ ಬಳಿಕ ಮೆದುಳು ನೀಡುವ ಪ್ರತಿಕ್ರಿಯೆ...

  ಆ ಬಳಿಕ ಮೆದುಳು ನೀಡುವ ಪ್ರತಿಕ್ರಿಯೆ...

  ಈ ಸಮಯದಲ್ಲಿ ವಾಸ್ತವವಾಗಿ REM (Rapid Eye Movement) ಆಗಿದ್ದು ಸ್ವಾಭಾವಿಕವಾಗಿ ಬೀಳಬೇಕಾಗಿದ್ದ ಕನಸುಗಳು ಕಲಸುಮಲಸಾಗುತ್ತವೆ. ಕೆಲವೊಮ್ಮೆ ಮೆದುಳು ಗಾಢ ನಿದ್ದೆ ಬರಬೇಕಾಗಿದ್ದ ಸಮಯದಲ್ಲಿ ಅರೆ ಎಚ್ಚರ ಇರುವಂತೆ ಮಾಡುತ್ತದೆ. ದೇಹ ಪೂರ್ಣವಾಗಿ ಎಚ್ಚರವಾಗದೇ ಇದ್ದರೂ ಮನಸ್ಸು ಮಾತ್ರ ಪೂರ್ಣವಾಗಿ ಎಚ್ಚರಗೊಂಡಿದ್ದು ಇದು ದ್ವಂದ್ವಕ್ಕೆ ಕಾರಣವಾಗುತ್ತದೆ. ಈ ದ್ವಂದ್ವದಲ್ಲಿ ಮೆದುಳಿನ ವರ್ತನೆಗಳು ಪೂರ್ಣ ಎಚ್ಚರಾಗಿರುವುದಕ್ಕೂ ಭಿನ್ನವಾಗಿರುತ್ತದೆ.

  ಪ್ರತಿಕ್ರಿಯೆಗಳು ಹೇಗೆ ಭಿನ್ನವಾಗಿರುತ್ತದೆ?

  ಪ್ರತಿಕ್ರಿಯೆಗಳು ಹೇಗೆ ಭಿನ್ನವಾಗಿರುತ್ತದೆ?

  ಈ ಹಂತದಲ್ಲಿ ಮೆದುಳು ಎಚ್ಚರಾಗಿದ್ದರೂ ಕೈಕಾಲುಗಳು ಅಲ್ಲಾಡಿಸಲು ಮೆದುಳು ಸೂಚನೆ ನೀಡದೇ ಇರುವ ಕಾರಣ ಕೈಕಾಲುಗಳು ಮರಗಟ್ಟಿದಂತಾಗಿರುತ್ತದೆ. ಮಾತನಾಡಲು ಆಗದೇ ಇರುವುದು, ಎದೆಯ ಮೇಲೆ ಹೆಚ್ಚಿದ ಒತ್ತಡ, ಸಾಯುವಂತಾಗುವ ಭಯ, ಶ್ರವಣ ಮತ್ತು ದೃಶ್ಯದಲ್ಲಿ ಇಲ್ಲದುದನ್ನು ಕಲ್ಪಿಸಿಕೊಳ್ಳುವುದು, ಗಾಳಿಯಲ್ಲಿ ತೇಲುವಂತೆ ಆಗುತ್ತಿರುವುದು ಮೊದಲಾದ ಅನುಭವಗಳಾಗುತ್ತವೆ.

  ಪ್ರತಿಕ್ರಿಯೆಗಳು ಹೇಗೆ ಭಿನ್ನವಾಗಿರುತ್ತದೆ?

  ಪ್ರತಿಕ್ರಿಯೆಗಳು ಹೇಗೆ ಭಿನ್ನವಾಗಿರುತ್ತದೆ?

  ಕೆಲವೊಮ್ಮೆ ಒಂದೇ ಅನುಭವ ಹೆಚ್ಚು ಪರಿಣಾಮಕಾರಿಯಾಗಿದ್ದು ಉಳಿದವು ಗೌಣವಾಗಿದ್ದರೆ ಇದೇ ಅನುಭವವನ್ನು ಭೂತದ ಮೇಲೆ ಹೊರಿಸಲಾಗುತ್ತದೆ.

  ಪ್ರತಿಕ್ರಿಯೆಗಳು ಹೇಗೆ ಭಿನ್ನವಾಗಿರುತ್ತದೆ?

  ಪ್ರತಿಕ್ರಿಯೆಗಳು ಹೇಗೆ ಭಿನ್ನವಾಗಿರುತ್ತದೆ?

  ಉದಾಹರಣೆಗೆ ಎದೆ ಭಾರವಾಗಿರುವುದು, ಇದನ್ನು ಅನುಭವಿಸಿದವರು ಭೂತ ತನ್ನ ಎದೆಯ ಮೇಲೆ ಕುಳಿತುಕೊಂಡಿತ್ತು, ಆದ್ದರಿಂದ ಉಸಿರೇ ತೆಗೆದುಕೊಳ್ಳಲಿಕ್ಕಾಗಿರಲಿಲ್ಲ ಎಂದು ತಿಳಿಸುತ್ತಾರೆ. ಕಿವಿಯಿಂದ ಕಿವಿಗೆ ದಾಟಿದ ಈ ವಿಷಯ ನಾಲ್ಕು ಜನರನ್ನು ತಲುಪುವ ವೇಳೆಗೆ ನಿಜವಾಗಿಯೂ ಭೂತವೊಂದು ಸೃಷ್ಟಿಯಾಗಿಬಿಟ್ಟಿರುತ್ತದೆ, ಅದೂ ಸರಿಯಾಗಿ ಮೂರು ಗಂಟೆಗೆ.

  ಭೂತದ ಕಥೆಗಳನ್ನು ವೈಭವೀಕರಿಸುವ ಜನಪದ

  ಭೂತದ ಕಥೆಗಳನ್ನು ವೈಭವೀಕರಿಸುವ ಜನಪದ

  ಭೂತದ ಕಥೆಗಳು ಮನುಷ್ಯನೊಂದಿಗೇ ಬೆಳೆದುಬಂದಿರುವುದರಿಂದ ಭೂತಗಳೂ ಮನುಷ್ಯರು ಯಾವಾಗ ಭೂಮಿ ಮೇಲೆ ಬಂದರೋ ಆಗಲೇ ಬಂದಿರಬಹುದು. ಈ ಬಗ್ಗೆ ಜನಜನಿತವಾಗಿ ಬಂದಿರುವ ನಂಬಿಕೆಗಳು ಮತ್ತು ಕಥೆಗಳು ಇಂದು ವಿಜ್ಞಾನ ವಿವರಿಸುವ ಪರಿಗಿಂತ ಎಷ್ಟೋ ಭಿನ್ನವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಭೂತದ ಕಥೆಗಳನ್ನು ವೈಭವೀಕರಿಸುವ ಜನಪದ

  ಭೂತದ ಕಥೆಗಳನ್ನು ವೈಭವೀಕರಿಸುವ ಜನಪದ

  ನಮ್ಮ ದೇಹ ಅನುಭವಿಸುವ ಈ ನೈಸರ್ಗಿಕ ವಿದ್ಯಮಾನಗಳನ್ನು ಭೂತಪ್ರೇತಗಳಿಗೆ ಅಂಟಿಸಿಕೊಂಡು ನಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆಯುತ್ತಾ ನಮ್ಮ ಮನಸ್ಸುಗಳಲ್ಲಿ ಭೂತಗಳ ಬಗ್ಗೆ ಇಲ್ಲದುದನ್ನು ಕಲ್ಪಿಸಿಕೊಂಡು ಬರಲಾಗಿದೆ. ವಾಸ್ತವವಾಗಿ ಭೂತ ಎಂಬುದು ನಮ್ಮ ಮನಸ್ಸಿನಲ್ಲಿದೆಯೇ ಹೊರತು ವಾಸ್ತವದಲ್ಲಿ ಅಲ್ಲ ಎಂದೇ ವಿಜ್ಞಾನ ತಿಳಿಸುತ್ತದೆ.

  ತರ್ಕಕ್ಕೆ ನಿಲುಕದ ಪ್ರಶ್ನೆಗಳು

  ತರ್ಕಕ್ಕೆ ನಿಲುಕದ ಪ್ರಶ್ನೆಗಳು

  ನಮ್ಮಲ್ಲಿ ಮೂರು ಗಂಟೆಯಾಗಿದ್ದಾಗ ಪಕ್ಕದ ದೇಶದಲ್ಲಿ ನಾಲ್ಕು ಗಂಟೆಯಾಗಿರಬಹುದು. ಹಾಗಾದರೆ ಆ ದೇಶದ ಪಿಶಾಚಿಗಳು ಎಷ್ಟು ಗಂಟೆಗೆ ಹೊರಬರಬೇಕು? ಅದರಲ್ಲೂ ವಿಶ್ವದ ಅರ್ಧಗೋಲ ದಾಟಿದರೆ ಅಲ್ಲಿ ಮಟಮಟ ಮಧ್ಯಾಹ್ನದ ಮೂರು ಗಂಟೆಯಾಗಿರಬಹುದು. ಅಲ್ಲಿದ್ದವರು ಕ್ರಿಸ್ತನ ಮರಣದ ಸಮಯವನ್ನು ಯಾವ ರೀತಿ ಅರ್ಥೈಸಿಕೊಳ್ಳಬೇಕು? ಆತನಂತೂ ಎರಡು ಸಮಯದಲ್ಲಿ ಮರಣ ಪಡೆಯಲು ಸಾಧ್ಯವಿಲ್ಲವಲ್ಲ?

  ತರ್ಕಕ್ಕೆ ನಿಲುಕದ ಪ್ರಶ್ನೆಗಳು

  ತರ್ಕಕ್ಕೆ ನಿಲುಕದ ಪ್ರಶ್ನೆಗಳು

  ಸಂಗ್ದಿಗ್ಧಕ್ಕೆ ಸಿಲುಕಿಸುವ ಈ ತರ್ಕ ಏನೇ ಇದ್ದರೂ ವಿಶ್ವದಾದ್ಯಂತ ಕ್ರೈಸ್ತರು ಮುಂಜಾವಿನ ಮೂರು ಗಂಟೆಯನ್ನು ಮಾತ್ರ ಸೈತಾನನ ಸಮಯವೆಂದೇ ಪರಿಗಣಿಸುತ್ತಾರೆ. ಅಂದರೆ ಯೇಸುವಿನ ಮರಣಕ್ಕೂ ಮುನ್ನ ಪಿಶಾಚಿಗಳೇ ಇರಲಿಲ್ಲವೇ, ಆಗ ಮುಂಜಾವಿನ ಮೂರು ಗಂಟೆಗೆ ಏನೂ ಸಂಭವಿಸುತ್ತಿರಲಿಲ್ಲವೇ? ಇದಕ್ಕೇ ಹೇಳುವುದು ವಿಶ್ವವೇ ಒಂದು ಅಚ್ಚರಿಯ ಪೆಟ್ಟಿಗೆಯಂದು!!

    

  English summary

  Why Is The Time 3 AM Significant?

  Most Hollywood exorcism movies have one thing in common -- the time 3 am. The spirits possessing the body are said to be proactive during the third hour of morning. The time 3 am has often been described as the 'Devil's hour' or the 'witching hour'. It is believed that 3 am is the time when the evil spirits and the demons are strongest. The Christian belief says that the hour, three in the morning, is apparently the mockery hour of Jesus's death. As Christ died at 3 pm, the Devil chose 3 am to unleash his demons and spirits. Since most Western civilisations follow Christianity, the dead hour of 3 am has become a phenomenon.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more