For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: 'ಅಕ್ಷತೆಕಾಳು' ಶತಮಾನಗಳ ಇತಿಹಾಸವೇ ಹೊಂದಿದೆ!

By Manu
|

ಮದುವೆ ಒಂದು ಪವಿತ್ರ ಬಂಧನವಾಗಿದ್ದು ಇದರ ಆಚರಣೆಗಳು ಪ್ರತಿ ಧರ್ಮದಲ್ಲಿಯೂ ಬೇರೆ ಬೇರೆ ತೆರನಾಗಿರುತ್ತವೆ. ಬಹುಸಂಸ್ಕೃತಿಯ ತವರೂರಾಗಿರುವ ಭಾರತದಲ್ಲಂತೂ ನೂರಾರು ಧರ್ಮಗಳಿದ್ದು ಪ್ರತಿ ಧರ್ಮದ ಆಚರಣೆಯೂ ಭಿನ್ನವಾಗಿರುತ್ತದೆ. ಹಿಂದೂ ಧರ್ಮದಲ್ಲಿ ನೂತನ ವಧೂವರರನ್ನು ಅಕ್ಕಿಕಾಳುಗಳನ್ನು ಎರಚಿ ಅಥವಾ ವಧೂವರರ ತಲೆಯ ಮೇಲೆ ಹಾಕಿ ಹರಸಲಾಗುತ್ತದೆ. ಹಿಂದೂ ಮದುವೆ ಶಾಸ್ತ್ರದ ಹಿಂದಿರುವ ವೈಜ್ಞಾನಿಕ ಸತ್ಯಾಸತ್ಯತೆ

ಹೀಗೆ ಎಸೆಯುವ ಕಾಳುಗಳಿಗೆ ಅಕ್ಷತೆ ಕಾಳುಗಳು ಎಂದು ಕರೆಯಲಾಗುತ್ತದೆ. ಆದರೆ ಈ ಪರಿ ಅಕ್ಕಿಯನ್ನು ಎರಚುವುದರಿಂದ ಆಹಾರವಸ್ತುವಾದ ಅಕ್ಕಿಗೆ ಅವಮಾನ ಮಾಡಿದಂತಾಗುವುದಿಲ್ಲವೇ? ಅಕ್ಷತೆಕಾಳುಗಳ ಬಗ್ಗೆ ಅರಿಯದ ಯಾರೇ ಆಗಲಿ ಅವರಿಂದ ನಿರೀಕ್ಷಿಸಬಹುದಾದ ಪ್ರಶ್ನೆ ಇದು. ಹಿಂದೂ ಧರ್ಮದಲ್ಲಿರುವ ಅಷ್ಟ ವಿಧದ ವಿವಾಹ ಪದ್ಧತಿಗಳು

ಒಂದು ವೇಳೆ ನಿಮ್ಮ ಸ್ನೇಹಿತರಾರಾದರೂ ಈ ಪ್ರಶ್ನೆ ಕೇಳಿದರೆ ಇದಕ್ಕೆ ಉತ್ತರಿಸಲು ನಿಮ್ಮ ಬಳಿ ಉತ್ತರವಿದೆಯೇ? ಈ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವೆಲ್ಲರೂ ಅಕ್ಷತೆ ಕಾಳುಗಳನ್ನು ಎರಚಿ ವಧೂವರರನ್ನು ಹರಸುತ್ತೇವೆಯೇ ವಿನಃ ಇದರ ಇತಿಹಾಸವನ್ನು ಅರಿತಿಲ್ಲ. ಬನ್ನಿ, ಈ ವಿಧಿಯ ಹಿಂದೆ ಯಾವ ಕಾರಣವಿದೆ ಎಂಬುದನ್ನು ನೋಡೋಣ...

ಕಾರಣ #1

ಕಾರಣ #1

ಈ ವಿಧಿ ಪ್ರಾಚೀನ ರೋಮ್ ನಗರದಲ್ಲಿ ಮೊದಲು ಪ್ರಾರಂಭವಾಯಿತು. ಈ ವಿಧಿಯ ಮೂಲಕ ತಾವಿರುವ ನಾಡಿನ ಸಮೃದ್ಧತೆ ಮುಂದಿನ ಪೀಳಿಗೆಗೂ ಲಭಿಸುವಂತಾಗಲಿ ಎಂದು ಸೂಚ್ಯವಾಗಿ ಅಂದಿನ ದಿನದ ಐಶ್ವರ್ಯದ ಸಂಕೇತವಾಗಿದ್ದ ಅಕ್ಕಿ, ಅಹಾರ ಮತ್ತು ಅಮೂಲ್ಯವಸ್ತುಗಳನ್ನು ಎರಚಲಾಗುತ್ತಿತ್ತು.

ವಾಸ್ತವ #2

ವಾಸ್ತವ #2

ಅಕ್ಕಿ ಎಂದರೆ ಫಲವಂತಿಕೆಯ ಸಂಕೇತವಾಗಿದ್ದು ವಧೂವರರಲ್ಲಿ ಫಲವಂತಿಕೆ ಮೂಡಿ ಸಂತಾನಭಾಗ್ಯ ಪ್ರಾಪ್ತವಾಗಲಿ ಎಂದು ಹರಸುವ ರೀತಿಯಲ್ಲಿ ಅಕ್ಕಿಯನ್ನು ಎರಚಲಾಗುತ್ತಿತ್ತು.

ವಾಸ್ತವ #3

ವಾಸ್ತವ #3

ನಿಧಾನವಾಗಿ ಈ ವಿಧಿ ಪ್ರಪಂಚದ ಎಲ್ಲೆಡೆ ಹರಡುತ್ತಿದ್ದಂತೆಯೇ ಆಯಾ ನಾಡಿನ ಸಮೃದ್ಧತೆಯ ಸಂಕೇತಗಳನ್ನು ಬಳಸಲಾಗುತ್ತಿತ್ತು. ಮೊರೊಕ್ಕೋ ದೇಶದಲ್ಲಿ ಅಕ್ಕಿಗಿಂತಲೂ ಒಣ ಅಂಜೂರ ಮತ್ತು ಒಣ ದ್ರಾಕ್ಷಿಯೇ ಹೆಚ್ಚು ಸಮೃದ್ದವಾಗಿರುವ ಕಾರಣ ವಧೂವರರ ಮೇಲೆ ಇವನ್ನೇ ಅಕ್ಕಿಯ ಬದಲಾಗಿ ಎರಚಲಾಗುತ್ತಿದೆ. ವಧೂವರರ ಅದೃಷ್ಟ, ಇಲ್ಲಿ ಹಲಸಿನ ಹಣ್ಣು ಸಮೃದ್ದವಾಗಿಲ್ಲ.

ವಾಸ್ತವ #4

ವಾಸ್ತವ #4

ಭಾರತದಲ್ಲಿ ಅಕ್ಕಿಯನ್ನು ಅರಿಶಿನದಲ್ಲಿ ಬೆರೆಸಿ ವಧೂವರರ ಮೇಲೆ ಎರಚಲಾಗುತ್ತದೆ. ಇದರ ಹೊರತಾಗಿ ಇತರ ನಂಬಿಕೆಗಳೆಲ್ಲಾ ಇತರೆಡೆ ಇರುವಂತಹದ್ದೇ ಆಗಿದೆ. ಅರಿಶಿನದ ಮೂಲಕ ದುಷ್ಟಶಕ್ತಿಗಳು ಆಗಮಿಸದಿರಲಿ ಎಂದು ಅಕ್ಕಿಯ ಜೊತೆಗೆ ಬೆರೆಸಲಾಗುತ್ತದೆ.

ವಾಸ್ತವ #5

ವಾಸ್ತವ #5

ಫ್ರಾನ್ಸ್‌ನಲ್ಲಿಯೂ ಇದೇ ವಿಧಾನದ ಮೂಲಕ ವಧೂವರರನ್ನು ಆಶೀರ್ವದಿಸಲಾಗುತ್ತದೆ. ಆದರೆ ಇಲ್ಲಿ ಅಕ್ಕಿಯ ಬದಲು ಗೋಧಿಯನ್ನು ಬಳಸಲಾಗುತ್ತದೆ.

ಅಕ್ಕಿಯ ಬದಲಿಗೆ ಅಕ್ಷತೆಗೆ ಏನನ್ನು ಉಪಯೋಗಿಸಬಹುದು?

ಅಕ್ಕಿಯ ಬದಲಿಗೆ ಅಕ್ಷತೆಗೆ ಏನನ್ನು ಉಪಯೋಗಿಸಬಹುದು?

ಅಕ್ಷತೆ ಕಾಳುಗಳನ್ನು ಎರಚಿದ ಬಳಿಕ ನೆಲದಲ್ಲೆಲ್ಲಾ ಚೆಲ್ಲಿರುವ ಅಕ್ಕಿಕಾಳುಗಳ ಮೇಲೆ ನಡೆಯುವವರು ಬೀಳುವ ಸಂಭವವಿದೆ. ಆದ್ದರಿಂದ ಅಕ್ಕಿಯ ಬದಲು ಕೊಂಚ ಚಪ್ಪಟೆಯಾಗಿರುವ ಇತರ ಕಾಳುಗಳನ್ನು ಬಳಸಬಹುದು. ಸೂರ್ಯಕಾಂತಿ ಬೀಜ ಇದಕ್ಕೆ ಸೂಕ್ತ.

ಕೆಲವು ವಿವಾಹಗಳಲ್ಲಿ ಹಸಿಮೊಟ್ಟೆಯನ್ನೂ, ಸೋಪಿನ ಗುಳ್ಳೆಗಳನ್ನೂ, ಕೇಕು, ಸಿಹಿತಿಂಡಿಗಳನ್ನೂ ಎಸೆಯುವುದು ಇತ್ತೀಚಿನ ದಿನಗಳಲ್ಲಿ ಮಾಡಲಾಗುತ್ತಿದೆ. ಯಾವುದೇ ಸಂಸ್ಕೃತಿಯ ಅಂಧಾನುಕರಣೆ ಮಾಡುವ ಭರದಲ್ಲಿ ಆಹಾರವಸ್ತುವನ್ನು ಹೀಗೆ ದುರ್ಬಳಕೆ ಮಾಡುವುದು ಸಲ್ಲದು. ಈ ಬಗ್ಗೆ ಪ್ರಜ್ಞೆ ಮೂಡುವುದು ಅಗತ್ಯವಾಗಿದೆ.

English summary

Why Do People Throw Rice In Weddings?

Marriages are all about following various customs and rituals and finding about some of the rituals being practiced can make us wonder as to why are they even followed. One such ritual people throwing rice grains on newlyweds. Have you ever wondered why people throw rice on newlyweds? have a look
X
Desktop Bottom Promotion