Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಎಲ್ಲರಂತಲ್ಲ ನಮ್ಮ ರಿಕ್ಷಾ ಚಾಲಕರು, ಇವರ ಸ್ಟೈಲೇ ಬೇರೆ!
ಕೈಯ ಮುಗಿದು ಏರು ಇದು ಕನ್ನಡದ ತೇರು....ಎನ್ನುವ ಹಾಡನ್ನು ಕೇಳಿರಬಹುದು. ಹೌದು, ಈ ಲೇಖನದಲ್ಲಿ ಹೇಳಲು ಹೊರಟಿರುವುದು ಆಟೋರಿಕ್ಷಾದ ಬಗ್ಗೆ. ಆಟೋರಿಕ್ಷಾ ಚಾಲಕರಿಗೆ ನಮ್ಮ ರಾಜ್ಯದಲ್ಲಿ ಗೌರವವನ್ನು ತಂದು ಕೊಟ್ಟವರು ನಟ ಶಂಕರನಾಗ್. ಅವರು ನಟಿಸಿದಂತಹ ಆಟೋ ಶಂಕರ್ ಚಿತ್ರ ಇಂದಿಗೂ ರಿಕ್ಷಾ ಚಾಲಕರ ಮನದಲ್ಲಿ ಅಚ್ಚೊತ್ತಿದೆ.
ಕೇವಲ ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಸಾರಿಗೆ ವಾಹನವಾಗಿ ಅತಿಯಾಗಿ ಬಳಸಲ್ಪಡುವ ವಾಹನವೆಂದರೆ ಅದು ಆಟೋರಿಕ್ಷಾ. ರಿಕ್ಷಾವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾರೆ. ಕೆಲವರು ನೇರವಾಗಿ ಕುಳಿತರೆ, ಇನ್ನು ಕೆಲವರು ಬಗ್ಗಿ ಕುಳಿತುಕೊಳ್ಳುತ್ತಾರೆ. ಮತ್ತೆ ಕೆಲವರು ಸೀಟಿನ ಬದಿಯಲ್ಲಿ ಕುಳಿತುಕೊಂಡು ಆಟೋರಿಕ್ಷಾ ಚಲಾಯಿಸುತ್ತಾರೆ. ರಿಕ್ಷಾ ಚಾಲಕರು ಸೀಟಿನ ಬದಿಯಲ್ಲಿ (ಸೀಟಿನ ಅಂಚಿನಲ್ಲಿ) ಕುಳಿತುಕೊಳ್ಳಲು ಕಾರಣಗಳು ಏನೆಂದು ಈ ಲೇಖನದಲ್ಲಿ ತಿಳಿದುಕೊಳ್ಳುವ....

ಕಾರಣ # 1
ಸಾಮಾನ್ಯವಾಗಿ ಮೊದಲಿಗೆ ಆಟೋರಿಕ್ಷಾ ಕಲಿಯುವಾಗ ಅವರ ಬದಿಯಲ್ಲಿ ಒಬ್ಬರು ಕುಳಿತುಕೊಂಡಿರುತ್ತಾರೆ. ಇದೇ ಅಭ್ಯಾಸ ಆಟೋರಿಕ್ಷಾಕಲಿತ ಬಳಿಕವೂ ಕೆಲವು ಚಾಲಕರಲ್ಲಿ ಇರುತ್ತದೆ.

ಕಾರಣ # 1
ಸಾಮಾನ್ಯವಾಗಿ ಆಟೋರಿಕ್ಷಾದ ಇಂಜಿನ್ ಬಿಸಿಯಾಗುವ ಕಾರಣದಿಂದಾಗಿ ರಿಕ್ಷಾ ಚಾಲಕರು ಆಗಾಗ ಸೀಟಿನಲ್ಲಿ ಆ ಬದಿ ಈ ಬದಿಗೆ ಹೋಗುತ್ತಾ ಇರುತ್ತಾರೆ.

ಕಾರಣ # 3
ನಗರದದೆಲ್ಲೆಡೆ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಹೋಗುವಾಗ ಹೆಚ್ಚುವರಿ ಪ್ರಯಾಣಿಕರು ಸಿಕ್ಕಿದರೆ ಅವರನ್ನು ತಮ್ಮ ಬದಿಯಲ್ಲೇ ಕುಳ್ಳಿರಿಸುತ್ತಾರೆ. ಪ್ರಯಾಣಿಕರಿಗೆ ಜಾಗ ಕೊಡಲು ಅವರು ಬದಿಯಲ್ಲಿ ಕುಳಿತಿರುತ್ತಾರೆ.

ಕಾರಣ # 4
ಕೆಲವು ವರ್ಷಗಳ ಹಿಂದೆ ಹಾರ್ನ್ ಅನ್ನು ರಿಕ್ಷಾದ ಒಂದು ಬದಿಯಲ್ಲಿ ಅಳವಡಿಸಲಾಗಿತ್ತು. ಇದನ್ನು ತಲುಪಲು ರಿಕ್ಷಾ ಚಾಲಕರು ಬದಿಯಲ್ಲಿ ಕುಳಿತಿರುತ್ತಿದ್ದರು.

ಕಾರಣ # 5
ಟ್ರಾಫಿಕ್ ಹೆಚ್ಚಾಗಿರುವಾಗ ಹೊರಗಡೆ ತಲೆಹಾಕಿ ಏನಾದರೂ ಸಲಹೆ ನೀಡಲು ಅಥವಾ ಪಕ್ಕದ ವಾಹನದವನೊಂದಿಗೆ ಹರಟೆ ಹೊಡೆಯಲು ಹೀಗೆ ಕುಳಿತಿರುತ್ತಾರೆ.



Click it and Unblock the Notifications
