For Quick Alerts
ALLOW NOTIFICATIONS  
For Daily Alerts

ಮಾತ್ರೆಗಳ ಪಟ್ಟಿಯಲ್ಲಿ ಖಾಲಿ ಜಾಗಕ್ಕೇ ಆದ್ಯತೆ! ಏನಿದರ ರಹಸ್ಯ?

By Manu
|

ಪ್ರತಿ ಬಾರಿ ಯಾವುದಾದರೂ ಮಾತ್ರೆಯನ್ನು ಪಡೆದುಕೊಳ್ಳಬೇಕಾಗಿ ಬಂದಾಗ ಮಾತ್ರೆಗಳ ಸ್ಟ್ರಿಪ್‌ನಲ್ಲಿ ಅಥವಾ ಮಾತ್ರೆಗಳ ಪಟ್ಟಿಯ ನಡುವೆ ಸಾಕಷ್ಟು ಖಾಲಿ ಜಾಗವಿರುವುದನ್ನು ಗಮನಿಸಿರಬಹುದು. ಆದರೆ ಈ ಖಾಲಿ ಜಾಗವನ್ನು ಕಂಡಾಗ ಕೆಲವು ಅನುಮಾನ ಮೂಡುವುದು ಸಹಜ. ಪ್ರಥಮವಾಗಿ ಇದು ತಪ್ಪಿನಿಂದ ಆಗಿರಬಹುದು ಎಂದುಕೊಂಡರೆ ಇಲ್ಲ, ಪ್ರತಿ ಪ್ಯಾಕೆಟ್ಟಿನಲ್ಲಿರುವ ಎಲ್ಲಾ ಪಟ್ಟಿಗಳಲ್ಲೂ ಖಾಲಿ ಜಾಗ ಇದೆ, ಎಂದರೆ ಇದನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟಿದ್ದಾರೆ ಎಂದಾಯ್ತು. ವೈದ್ಯರ ಸಲಹೆವಿಲ್ಲದೇ ಇಂತಹ ಔಷಧಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ!

ಹೆಚ್ಚುವರಿ ಮಾತ್ರೆ ಬೇಕೆಂದಾಗ ಸೇರಿಸಲು ಬಿಟ್ಟಿದ್ದಾರೆಯೇ ಎಂಬ ಅನುಮಾನವೂ ಮೂಡಬಹುದು, ಅಥವಾ ಮೊದಲು ದೊಡ್ಡ ಮಾತ್ರೆಗಳಿಗಾಗಿ ಈ ಪಟ್ಟಿಯನ್ನು ತಯಾರಿಸಿ ಕಡೇ ಘಳಿಗೆಯಲ್ಲಿ ಚಿಕ್ಕ ಮಾತ್ರೆಯನ್ನು ಪ್ಯಾಕ್ ಮಾಡಿರಬಹುದು ಎಂದೂ ಕೆಲವರು ಯೋಚಿಸಬಹುದು. ಬೆಚ್ಚಿ ಬೀಳಿಸುವ ಸತ್ಯ- ಈ ಔಷಧಿಗಳ ಉದ್ದೇಶ ಬೇರೆಯೇ ಆಗಿತ್ತು..

ವಿಶೇಷವಾಗಿ ಕೆಲವು ದುಬಾರಿ ಅಥವಾ ಪ್ರಮುಖ ಮಾತ್ರೆಗಳಲ್ಲಿ ಐದು ಮಾತ್ರೆಗಳಿಗೆ ಹಣ ಕೊಟ್ಟಿದ್ದರೂ ನಾಲ್ಕನ್ನು ಖಾಲಿ ಬಿಟ್ಟು ನಡುವೆ ಒಂದೇ ಮಾತ್ರೆಯನ್ನು ಇರಿಸಲಾಗುತ್ತದೆ, ಇದು ನಿಮಗೂ ಅನುಭವವಾಗಿರಬಹುದು ಅಲ್ಲವೇ?, ಹಾಗಾದರೆ ಇದರ ಹಿಂದಿನ ರಹಸ್ಯವೇನು? ಏಕಾಗಿ ಈ ಪರಿಯನ್ನು ಔಷಧಿ ನಿರ್ಮಾಣ ಸಂಸ್ಥೆಗಳು ಅನುಸರಿಸುತ್ತವೆ? ಈ ಅನುಮಾನಗಳು ನಿಮಗೂ ಮೂಡಿದ್ದರೆ ಕೆಳಗಿನ ಸ್ಲೈಡ್ ಶೋ ಸೂಕ್ತ ಪರಿಹಾರ ಒದಗಿಸಬಲ್ಲುದು.

ಕಾರಣ # 1

ಕಾರಣ # 1

ಈ ಖಾಲಿಜಾಗದಲ್ಲಿ ತಟಸ್ಥ ಗಾಳಿಯನ್ನು ತುಂಬಿಸಿರಲಾಗುತ್ತದೆ. ಇದರಿಂದ ಮಾತ್ರೆಯ ಬಂಧಿತವಾಗಿರುವ ಪದರವನ್ನು ತೆರೆದು ಮಾತ್ರೆಯನ್ನು ರೋಗಿ ನುಂಗುವವರೆಗೂ ಇದು ತನ್ನ ಗುಣಗಳನ್ನು ಉಳಿಸಿಕೊಳ್ಳುತ್ತದೆ. ಅಲ್ಲದೇ ಪ್ರತಿ ಎರಡು ಮಾತ್ರೆಗಳ ನಡುವೆ ನಿಗದಿತ ಅಂತರ ಇಡುವುದೂ ಇದೇ ಕಾರಣಕ್ಕೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ # 1

ಕಾರಣ # 1

ಇನ್ನೊಂದು ಪ್ರಮುಖ ಕಾರಣವೆಂದರೆ ಸಾಗಾಟದ ಸಮಯದಲ್ಲಿ ಕುಲುಕಾಟಕ್ಕೆ ಒಂದಕ್ಕೊಂದು ಉಜ್ಜಿಕೊಂಡು ಪುಡಿಯಾಗುವ ಸಾಧ್ಯತೆಯನ್ನು ಈ ಪಟ್ಟಿಗಳು ಇಲ್ಲವಾಗಿಸುತ್ತವೆ. ಹೀಗೆ ಪುಡಿಯಾಗದ ಮಾತ್ರೆಗಳನ್ನು ಮಾತ್ರ ಚಿಕ್ಕ ಬಾಟಲಿಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ.

ಕಾರಣ #2

ಕಾರಣ #2

ಯಾವುದೇ ಉತ್ಪನ್ನ ಮಾರಾಟ ಸ್ಥಳ ತಲುಪಲು ಸೂಕ್ತವಾದ ಪೆಟ್ಟಿಗೆಗಳು ಅಗತ್ಯ. ಯಾವುದೇ ಹಾನಿ ಇಲ್ಲದೇ ಗ್ರಾಹಕನವರೆಗೆ ತಲುಪುವಂತಾಗಲು ಒಂದು ಅಳತೆಯ ಪೆಟ್ಟಿಗೆಗಳ ಒಳಗೆ ಅಲ್ಲಾಡದೇ ಕುಳಿತುಕೊಳ್ಳಲು ಏಕಪ್ರಕಾರದ ಪಟ್ಟಿಗಳನ್ನು ತಯಾರಿಸಿ ಇದರಲ್ಲಿ ಎಲ್ಲಾ ಗಾತ್ರದ ಮಾತ್ರೆಗಳು ಕುಳಿತುಕೊಳ್ಳುವಂತೆ ವಿನ್ಯಾಸ ಮಾಡಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #2

ಕಾರಣ #2

ಸ್ವಾಭಾವಿಕವಾಗಿ ಚಿಕ್ಕ ಮಾತ್ರೆಗಳಿದ್ದರೆ ಹೆಚ್ಚು ಖಾಲಿ ಜಾಗ ಉಳಿಯುತ್ತದೆ. ಒಂದೇ ರೀತಿಯ ಪೆಟ್ಟಿಗೆಗಳನ್ನು ಬಳಸುವ ಮೂಲಕ ಸಂಸ್ಥೆಗೆ ಹಲವು ಗಾತ್ರದ ಪೆಟ್ಟಿಗೆ ಮತ್ತು ಪಟ್ಟಿಗಳನ್ನು ತಯಾರಿಸುವ ಖರ್ಚು ಉಳಿಯುತ್ತದೆ.

ಕಾರಣ #3

ಕಾರಣ #3

ಯಾವುದೇ ಮಾತ್ರೆಯ ವಿವರಗಳನ್ನು ಇದರ ಪಟ್ಟಿಯ ಹಿಂದಿನ ಅಲ್ಯೂಮಿನಿಯಂ ಹಾಳೆಯ ಮೇಲೆ ಮುದ್ರಿಸಲಾಗುತ್ತದೆ. ಈಗ ಒಂದೇ ಮಾತ್ರೆಯನ್ನು ನೀಡುವ ಸಂದರ್ಭವಿದ್ದರೆ ಚಿಕ್ಕದಾದ ಒಂದೇ ಮಾತ್ರೆಗೆ ಹಿಡಿಸುವ ಪಟ್ಟಿಯ ಹಿಂಭಾಗದಲ್ಲಿ ಎಲ್ಲಾ ವಿವರಗಳನ್ನು ಮುದ್ರಿಸಲು ಸಾಧ್ಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #3

ಕಾರಣ #3

ಆದ್ದರಿಂದ ಸುಮಾರು ಐದು ಮಾತ್ರೆಗಳ ಪಟ್ಟಿಯನ್ನು ತಯಾರಿಸಿ ವಿವರಗಳನ್ನು ಮುದ್ರಿಸಿ ಒಂದು ಮಾತ್ರೆ ನಡುವೆ ಬರುವಂತೆ ಮತ್ತು ನಾಲ್ಕು ಖಾಲಿ ಜಾಗ ಇರುವಂತೆ ಪ್ಯಾಕ್ ಮಾಡಲಾಗುತ್ತದೆ.

ಕಾರಣ #4

ಕಾರಣ #4

ಇನ್ನೊಂದು ಪ್ರಮುಖ ಕಾರಣವೆಂದರೆ ಸಾಗಾಟದ ಸಮಯದಲ್ಲಿ ಅನಿವಾರ್ಯವಾದ ಕುಲುಕಾಟವನ್ನು ಈ ಖಾಲಿ ಜಾಗಗಳು ಹೀರಿಕೊಳ್ಳುತ್ತವೆ. ಇದರಿಂದ ಮಾತ್ರೆಗಳು ತುಂಡಾಗುವ ಅಥವಾ ಪುಡಿಯಾಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

ಕಾರಣ #5

ಕಾರಣ #5

ಇನ್ನೊಂದು ಪ್ರಮುಖ ಕಾರಣಕ್ಕೆ ನಮ್ಮ ಚಿಂತನೆಯೇ ಕಾರಣ. ಶ್ರೀಮಂತರು ನಕಲಿ ಚಿನ್ನ ಧರಿಸಿದರೂ ನಾವು ಅದನ್ನು ನಿಜವಾದ ಚಿನ್ನವೆಂದೂ ಬಡವರು ನಿಜವಾದ ಚಿನ್ನವನ್ನೇ ಧರಿಸಿದರೂ ನಾವು ಇದು ನಕಲಿ ಚಿನ್ನ ಎಂದು ತಕ್ಷಣಕ್ಕೆ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವಲ್ಲವೇ, ಹಾಗೇ ಇದೂ ಕೂಡ! ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾರಣ #5

ಕಾರಣ #5

ಇಡಿಯ ಪ್ಯಾಕೆಟ್ಟಿನಲ್ಲಿ ಕೆಲವೇ ಮಾತ್ರೆಗಳಿದ್ದು ಉಳಿದದ್ದು ಖಾಲಿ ಇದ್ದರೆ ಗ್ರಾಹಕನ ಮನಸ್ಸಿನಲ್ಲಿ ಈ ಮಾತ್ರೆ ಬಹಳ ಅಮೂಲ್ಯವೇ ಇರಬೇಕು ಎಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ. ಅಷ್ಟಕ್ಕೂ ಮಾತ್ರೆಗಳನ್ನು ಮಾರುವುದೂ ಒಂದು ದೊಡ್ಡ ಉದ್ಯಮವೇ ಅಲ್ಲವೇ? ವಾಸ್ತವವಾಗಿ ಈ ಹೆಚ್ಚಿನ ಖಾಲಿ ಜಾಗವನ್ನು ಬಿಡಲು ಮೂಲ ವೆಚ್ಚದಲ್ಲಿ ಒಂದಿನಿತೂ ಹೆಚ್ಚಿನ ಖರ್ಚಾಗುವುದಿಲ್ಲ.


English summary

Why Are There Empty Spaces In Medical Tablets?

Whenever we see a strip of medicine, we think, "Why are they fooling us with an empty space". Initially when you would have noticed it, you would have thought that the company must have forgotten to fill the medicine, but that is not the actual reason for the empty space. Here in this article, we are sharing some information about the actual reasons as to why there are empty spaces in medical tablets. There are some meaningful reasons for these empty spaces.
Story first published: Wednesday, July 20, 2016, 12:40 [IST]
X
Desktop Bottom Promotion