For Quick Alerts
ALLOW NOTIFICATIONS  
For Daily Alerts

  ನೀಲಿ ಡಿಟರ್ಜೆಂಟ್ ಪೌಡರ್‌‪ಗಳ ಹಿಂದಿದೆ ಖತರ್ನಾಕ್ ಐಡಿಯಾ!

  By Manu
  |

  ಬಟ್ಟೆ ಒಗೆಯಲು ಸೋಪು ಬಳಸುವ ಪರಿ ಇಂದು ಹೆಚ್ಚು ಕಡಿಮೆ ಕಣ್ಮರೆಯಾಗುತ್ತಾ ಬಂದಿದೆ. ಏಕೆಂದರೆ ಇಂದು ಹೆಚ್ಚಿನವರು ಬಟ್ಟೆ ಒಗೆಯಲು ವಾಷಿಂಗ್ ಮೆಷೀನ್‌ಗಳನ್ನು ಬಳಸುತ್ತಾರೆ. ಸೋಪನ್ನು ಪುಡಿಯ ರೂಪದಲ್ಲಿ ಪ್ರಸ್ತುತಪಡಿಸಿದ ಮೊದಲ ಸಂಸ್ಥೆ ಪ್ರಾಯಶಃ ನಿರ್ಮಾ. ಈ ಪುಡಿ ಅಪ್ಪಟ ಹಳದಿ ಬಣ್ಣದ್ದಾಗಿತ್ತು. ಇಂದು ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳು ವಿವಿಧ ಮಾದರಿಯ ವಾಷಿಂಗ್ ಪೌಡರ್‌ಗಳನ್ನು ಮಾರುತ್ತಿವೆ.

  ಯಂತ್ರದ ಮಾದರಿ (ಟಾಪ್ ಲೋಡಿಂಗ್, ಫ್ರಂಟ್ ಲೋಡಿಂಗ್) ಅನುಸರಿ ಅದಕ್ಕನುಗುಣವಾದ ಡಿಟರ್ಜೆಂಟುಗಳನ್ನೂ ಮಾರುತ್ತಿವೆ. ಆದರೆ ಒಂದು ವಿಷಯ ಎಲ್ಲಾ ಪೌಡರುಗಳಲ್ಲಿ ಸಾಮಾನ್ಯವಾದುದೆಂದರೆ ಇದರ ಬಣ್ಣ ನೀಲಿಯಾಗಿರುವುದು ಅಥವಾ ಬಿಳಿಯ ಪುಡಿಯ ನಡುವೆ ನೀಲಿ ಕಡ್ಡಿಗಳಿರುವುದು. ಇದೇನೂ ಕಾಕತಾಳೀಯವಲ್ಲ, ಒಂದು ಕಾಲದಲ್ಲಿ ಹಳದಿಯಾಗಿದ್ದ ಪುಡಿ ಈಗ ನೀಲಿಯಾಗಲು ಕೆಲವು ಕಾರಣಗಳಿವೆ. ಈ ಕಾರಣಗಳೇನು ಎಂಬುದನ್ನು ಮುಂದೆ ಓದಿ...

  ಮಾರುಕಟ್ಟೆಯ ಮಾರಾಟ ತಂತ್ರ

  ಮಾರುಕಟ್ಟೆಯ ಮಾರಾಟ ತಂತ್ರ

  ವಾಸ್ತವವಾಗಿ ಬಟ್ಟೆ ಒಗೆಯಲು ಪುಡಿ ಯಾವುದೇ ಬಣ್ಣದ್ದಾಗಿರಲಿ, ಬಟ್ಟೆ ಸ್ವಚ್ಛಗೊಳಿಸಿದರೆ ಸರಿ. ಆದರೆ ಜನರ ಮನದಾಳದಲ್ಲಿ ಕೆಲವು ಬಣ್ಣಗಳು ಸ್ವಚ್ಛತೆಗೂ ಮಲಿನಕ್ಕೂ ನೇರ ನಂಟು ಹಾಕಿರುತ್ತವೆ.

  ಮಾರುಕಟ್ಟೆಯ ಮಾರಾಟ ತಂತ್ರ

  ಮಾರುಕಟ್ಟೆಯ ಮಾರಾಟ ತಂತ್ರ

  ಈ ಪ್ರಕಾರ ಹಳದಿ ಎಂದರೆ ಮಲಿನ ಮತ್ತು ನೀಲಿ ಎಂದರೆ ಸಾಗರ, ಸ್ವಚ್ಛ. ಹಾಗಾಗಿ ಸ್ವಚ್ಛತೆಯ ಪರಿಕರವನ್ನು ಮಲಿನದ ಬಣ್ಣದಲ್ಲಿ ನೀಡಿದರೆ ಹೇಗೆ? ಇದೇ ಕಾರಣಕ್ಕೆ ಪುಡಿಗೆ ಬಲವಂತವಾಗಿ ನೀಲಿ ಬಣ್ಣವನ್ನು ಸೇರಿಸಲಾಗುತ್ತದೆ ಅಥವಾ ಕೇವಲ ನೀಲಿ ಬಣ್ಣ ನೀಡುವ ಪುಟ್ಟ ಕಡ್ಡಿಗಳನ್ನು ಸೇರಿಸಲಾಗುತ್ತದೆ.

  ಜನರ ಆಯ್ಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಪರಿಣಾಮ

  ಜನರ ಆಯ್ಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಪರಿಣಾಮ

  ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಜನರು ಇದನ್ನು ಆಯ್ಕೆ ಮಾಡುವಂತೆ ಹತ್ತು ಹಲವು ವಿಧಾನಗಳನ್ನು ಅನುಸರಿಸಲೇಬೇಕು. ಇದಕ್ಕೆ ಪ್ರಥಮ ಆದ್ಯತೆ ಪ್ಯಾಕಿಂಗ್ ಅಥವಾ ಹೊರಕವಚಕ್ಕೆ. ಒಳಗಿನ ಹುಳುಕು ಹೇಗೇ ಇರಲಿ, ಹೊರಗಿನ ಥಳಕು ಚೆನ್ನಾಗಿದ್ದರೆ ಮಾತ್ರ ನಮ್ಮ ಜನರು ಇದನ್ನು ಕೊಳ್ಳುತ್ತಾರೆ.

  ಜನರ ಆಯ್ಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಪರಿಣಾಮ

  ಜನರ ಆಯ್ಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಪರಿಣಾಮ

  ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆಚ್ಚಾಗಿ ಸ್ವಚ್ಛತಾ ಉಪಕರಣಗಳಲ್ಲಿ ನೀಲಿ

  ಬಣ್ಣವನ್ನೂ, ಆಹಾರವಸ್ತುಗಳಲ್ಲಿ ಹಸಿರು ಬಣ್ಣವನ್ನೂ, ಗೃಹೋಪಯೋಗಿ ವಸ್ತುಗಳಲ್ಲಿ ಬಿಳಿ ಬಣ್ಣವನ್ನೂ ಆಯ್ಕೆ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿ ಅಂಕಿ ಅಂಶಗಳ ಮೂಲಕ ಕಲೆಹಾಕಿ ಕುತೂಹಲಕರ ವಿವರಗಳನ್ನು ಪಡೆಯಲಾಗಿದೆ. ಇದರ ಪರಿಣಾಮವಾಗಿ ಡಿಟರ್ಜೆಂಟು ಪೌಡರುಗಳ ಪ್ಯಾಕಿಂಗ್ ಹಾಗೂ ಪುಡಿಗಳೂ ನೀಲಿ ಬಣ್ಣದಲ್ಲಿಯೇ ಇರುತ್ತವೆ.

  ಬಳಕೆದಾರದ ನಂಬಿಕೆ

  ಬಳಕೆದಾರದ ನಂಬಿಕೆ

  ನಮ್ಮ ಕೈಗಳು ಮುಟ್ಟುವ ಯಾವುದೇ ವಸ್ತುಗಳು ಸ್ವಚ್ಛವಾಗಿರಬೇಕೆಂದು ನಾವು ಬಯಸುತ್ತೇವೆ. ಇದೇ ಕಾರಣಕ್ಕೆ ಮಲಿನಗೊಂಡ ವಸ್ತುಗಳನ್ನು ಮುಟ್ಟಲೇಬೇಕಾದರೆ ಅತಿ ಕಡಿಮೆ ಭಾಗ ತಾಕುವಂತೆ ಬೆರಳುಗಳನ್ನು ತಾಗಿಸುತ್ತೇವೆ. (ಬೇಕಾದರೆ ಈಗಲೇ ಪರೀಕ್ಷೆ ಮಾಡಿ ನೋಡಿ). ಹಾಗಿದ್ದಾಗ ಕೈಯಲ್ಲಿ ತೆಗೆದುಕೊಳ್ಳುವ ಪೌಡರುಗಳೂ ಸ್ವಚ್ಛವಾಗಿಲ್ಲದಿದ್ದರೆ ಹೇಗೆ? ಹೆಚ್ಚಿನವರು ನೀಲಿ ಅಥವಾ ಹಸಿರು ಬಣ್ಣದ ಸೋಪುಗಳನ್ನೇ ಆಯ್ಕೆ ಮಾಡಿದ ಕಾರಣ ಇವು ನೀಲಿ ಅಥವಾ ಹಸಿರು ಬಣ್ಣದ್ದೇ ಆಗಿರುತ್ತವೆ.

  ಪೌಡರುಗಳಲ್ಲಿರುವ ನೀಲಿ ಏಜೆಂಟರು ಯಾರು?

  ಪೌಡರುಗಳಲ್ಲಿರುವ ನೀಲಿ ಏಜೆಂಟರು ಯಾರು?

  ಬಿಳಿಬಟ್ಟೆಗೆ ನೀಲಿ ಹಾಕುವ ಕ್ರಮ ಬಹುಕಾಲದಿಂದ ನಡೆದು ಬರುತ್ತಿದೆ. ಬಟ್ಟೆಗಳನ್ನು ಒಗೆದ ಬಳಿಕ ನೀರಿಗೆ ಕೊಂಚ ನೀಲಿ ಹಾಕಿ ಈ ನೀರಿನಲ್ಲಿ ಬಿಳಿ ಬಟ್ಟೆಗಳನ್ನು ಮುಳುಗಿಸಿ ಹಿಂಡಿ ಒಣಗಿಸಿದ ಬಳಿಕ ಬಟ್ಟೆಗಳು ಇನ್ನಷ್ಟು ಬಿಳುಪಾಗಿ ಹೊಳೆಯುತ್ತವೆ. ವಾಸ್ತವವಾಗಿ ಇದು ನಮ್ಮ ಕಣ್ಣಿನ ಮೋಸವಾಗಿದೆ. ಅಂದರೆ ಕೊಂಚವೇ ನೀಲಿ ಬಣ್ಣದ ಥಳುಕಿದ್ದರೆ ಬೆಳಕು ಹೆಚ್ಚು ವಕ್ರೀಭವಗೊಂಡು ಬಿಳಿಯ ಬಣ್ಣ ಪ್ರಖರವಾಗಿರುವ ಭ್ರಮೆ ಮೂಡಿಸುತ್ತದೆ. ಇದೇ ಪರಿಯನ್ನು ಡಿಟರ್ಜೆಂಟು ಪೌಡರುಗಳಲ್ಲಿಯೂ ಬಳಸಲಾಗಿದೆ. ಹೆಚ್ಚಿನವು ಸಾಮಾನ್ಯ ನೀಲಿಯನ್ನೇ ತಮ್ಮ ಪೌಡರುಗಳ ಜೊತೆ ಬೆರೆಸಿ ನೀಲಿ ಬಣ್ಣದ ಮೆರುಗು ಮೂಡಿಸುವ ಮೂಲಕ ಇತರರಿಗಿಂತಲೂ ಹೆಚ್ಚು ಬಿಳುಪಾಗಿಸುತ್ತೇವೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತವೆ.

  ಎಲ್ಲ ಪೌಡರುಗಳಲ್ಲಿರುವುದೇ ಒಂದೇ ಸೂತ್ರ

  ಎಲ್ಲ ಪೌಡರುಗಳಲ್ಲಿರುವುದೇ ಒಂದೇ ಸೂತ್ರ

  ಖ್ಯಾತ ಸಂಸ್ಥೆಯ ಕಾರಿನ ಒಂದು ಬಗೆ ಹಲವು ರೂಪಗಳಲ್ಲಿ ದೊರಕುತ್ತದೆ. ಏಕೆಂದರೆ ಇದರ ಛಾಸಿ, ಇಂಜಿನ್ ಮೊದಲಾದ ಪ್ರಮುಖ ಅಂಗಗಳು ಸಾಮಾನ್ಯವಾಗಿದ್ದು ಕೇವಲ ಹೊರನೋಟದ ಕವಚದಲ್ಲಿ ಕೊಂಚವೇ ಬದಲಾವಣೆ ಮಾಡುವ ಮೂಲಕ ಹಲವು ಆವೃತ್ತಿಗಳನ್ನು (ಬೇರೆ ಬೇರೆ ಬೆಲೆಗಳಲ್ಲಿ) ಮಾರಲಾಗುತ್ತದೆ.

  ಎಲ್ಲ ಪೌಡರುಗಳಲ್ಲಿರುವುದೇ ಒಂದೇ ಸೂತ್ರ

  ಎಲ್ಲ ಪೌಡರುಗಳಲ್ಲಿರುವುದೇ ಒಂದೇ ಸೂತ್ರ

  ಇದೇ ಪರಿ ಡಿಟರ್ಜೆಂಟ್ ಪೌಡರುಗಳಲ್ಲಿಯೂ ಇವೆ. ವಾಸ್ತವವಾಗಿ ಯಾವುದೇ ಪೌಡರ್ ಕೊಂಡರೂ ಇದರ ಮೂಲ ವಸ್ತುಗಳು ಮಾತ್ರ ಒಂದೇ. ಇದರೊಂದಿಗೆ ಬೆರೆಸಿದ ಅಗ್ಗದ ನೀಲಿ, ನೀಲಿ ಬಣ್ಣ ಬರುವ ಕಡ್ಡಿಗಳು ಮೊದಲಾದವುಗಳನ್ನೇ ವೈಭವೀಕರಿಸಿ ಹೆಚ್ಚಿನ ಸ್ವಚ್ಛತೆಯ ಭ್ರಮೆ ಮೂಡಿಸಲಾಗುತ್ತದೆ. ಇವೆಲ್ಲವೂ ಗ್ರಾಹಕರನ್ನು ಸೆಳೆಯುವ ತಂತ್ರವಾಗಿವೆಯೇ ಹೊರತು ನೀಲಿ ಬಣ್ಣ ಇದ್ದ ಮಾತ್ರಕ್ಕೇ ಇದು ಉತ್ತಮ ಎಂದರ್ಥವಲ್ಲ. ಆದರೆ ಮೂಲವಸ್ತುಗಳಿಗೇ ಖೋತಾ ಮಾಡುವ ಪುಡಿಗಳು ಮಾತ್ರ ನಿಷ್ಪ್ರಯೋಜಕ.

   

  English summary

  Why Are Detergents Blue In Colour?

  Every time you use a detergent do you realise that most of these are blue in colour? We are here to just find out the actual reason as to why all detergents, or most of them, are blue in colour. In this article, we are here to just throw some light on the actual reasons as to why all detergents and washing powders are blue in colour.
  Story first published: Tuesday, September 27, 2016, 8:13 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more