ತಿನ್ನುವ ಅಭ್ಯಾಸಕ್ಕೂ-ವ್ಯಕ್ತಿತ್ವಕ್ಕೂ ಎತ್ತಿಂದೆತ್ತ ಸಂಬಂಧ?

By Super
Subscribe to Boldsky

ಪಾಶ್ಚಾತ್ಯ ದೇಶಗಳಲ್ಲಿ ಊಟದ ಸಮಯದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಒಂದು ಪಾಠದ ರೂಪದಲ್ಲಿ ಕಲಿಸಿಕೊಡುತ್ತಾರೆ. Table manners ಎಂದು ಕರೆಯಲಾಗುವ ಈ ವಿಧಾನದ ಮೂಲಕ ಕಲಿತವರು ಜೀವಮಾನವಿಡೀ ಇದೇ ವಿಧಾನವನ್ನು ಅನುಸರಿಸುತ್ತಾರೆ. ನಮ್ಮ ಭಾರತದಲ್ಲಿರುವ ಹಲವು ಧರ್ಮಗಳಲ್ಲಿ ಊಟದ ಅಭ್ಯಾಸ ಭಿನ್ನವಾಗಿವೆ. ಆದರೆ ಎಲ್ಲಾ ಧರ್ಮಗಳಲ್ಲೂ ಇರುವ ಏಕಸಾಮ್ಯತೆ ಎಂದರೆ ಊಟಕ್ಕೆ ಬಲಗೈ ಉಪಯೋಗಿಸುವುದು.

ಪಾಶ್ಚಾತ್ಯರಲ್ಲಿ ಎರಡೂ ಕೈಗಳನ್ನು ಉಪಯೋಗಿಸಿ ಊಟ ಮಾಡುತ್ತಾರೆ. ಅಂತೆಯೇ ನಾವು ಕಲಿತುಬಂದ ವಿಧಾನಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇದು ಕೇವಲ ಊಟ ಮಾಡುವ ರೀತಿಯಲ್ಲಲ್ಲ, ಉಡುಗೆ ಉಡುವ ರೀತಿ, ಹಿರಿಯರಿಗೆ ನೀಡುವ ಗೌರವ, ಆಡುವ ಮಾತುಗಳು ಎಲ್ಲವೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಇತರರೊಂದಿಗೆ ಊಟ ಮಾಡುವಾಗ ಮಾತ್ರ ಉಳಿದವರು ಬೇರೆ ಬೇರೆ ಸಂಸ್ಕೃತಿಯಿಂದ ಬಂದಿದ್ದರೆ ನಮ್ಮ ಕೆಲವು ಅಭ್ಯಾಸಗಳು ಇತರರಿಗೆ ಮುಜುಗರ ಉಂಟುಮಾಡಬಹುದು. ಉದಾಹರಣೆಗೆ ಭಾರತೀಯರು ಮಸಾಲೆ ದೋಸೆಯನ್ನು ಕೈಗಳಿಂದ ತಿನ್ನುವುದು ಪಾಶ್ಚಾತ್ಯರಿಗೆ ಮುಜುಗರ ತರಿಸುತ್ತದೆ. ಅವರು ಎಡಗೈಯಲ್ಲಿ ತಿನ್ನುವುದು ನಮಗೆ ಮುಜುಗರ ತರಿಸುತ್ತದೆ.

ಕೊರಿಯಾದಲ್ಲಿ ಜನರು ತಾವು ಊಟ ಮಾಡುವ ಅಭ್ಯಾಸವನ್ನು ರೆಕಾರ್ಡಿಂಗ್ ಮಾಡಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವಷ್ಟು ಬದ್ಧರಾಗಿರುತ್ತಾರೆ. ಕೆಲವರು ಗಬಗಬನೇ ತಿಂದರೆ ಕೆಲವರು ಸಾವಕಾಶವಾಗಿ ಊಟ ಮಾಡುತ್ತಾರೆ. ತಮಿಳುನಾಡಿನಲ್ಲಿ, ಉತ್ತರ ಕರ್ನಾಟಕದ ಕೆಲವೆಡೆ ಅನ್ನವನ್ನು ಉಂಡೆ ಮಾಡಿ ತಿನ್ನುವ ಪರಿಪಾಠವಿದೆ. ಆದರೆ ನಮ್ಮ ಊಟದ ಅಭ್ಯಾಸಗಳು ನಮ್ಮ ಸಹಜ ಪ್ರವೃತ್ತಿಯನ್ನು ಬಿಂಬಿಸುತ್ತವೆ ಎಂದು ಗೊತ್ತಿತ್ತೇ? ಹೌದು, ಊಟದ ಅಭ್ಯಾಸಕ್ಕೂ ನಮ್ಮ ವ್ಯಕ್ತಿತ್ವಕ್ಕೂ ನೇರ ಸಂಬಂಧವಿದೆ ಎಂದು ಈಗ ಕಂಡುಕೊಳ್ಳಲಾಗಿದೆ. ಇದು ಹೇಗೆ ಎಂಬುದನನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ... 

ನಿಧಾನಗತಿಯಲ್ಲಿ ಊಟ ಮಾಡುವವರು

ನಿಧಾನಗತಿಯಲ್ಲಿ ಊಟ ಮಾಡುವವರು

ಒಂದು ವೇಳೆ ನೀವು ಸಾವಕಾಶವಾಗಿ ಊಟ ಮಾಡುತ್ತಾ ಹೆಚ್ಚಿನ ಸಮಯ ಊಟವನ್ನು ಆಸ್ವಾದಿಸುವವರಾಗಿದ್ದರೆ ನೀವು ಧಾವಂತದವರಲ್ಲ ಎಂದು ಗೊತ್ತಾಗುತ್ತದೆ. ಈ ವ್ಯಕ್ತಿಗಳು ಇಂದಿನ ಕ್ಷಣವನ್ನು ಜೀವಿಸುವವರಾಗಿದ್ದು ತಕ್ಷಣವೇ ಮಾಡುವ ಕೆಲಸಕ್ಕಿಂತ ಪರಿಪೂರ್ಣವಾಗಿ ಮಾಡುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವವರಾಗಿದ್ದಾರೆ. ಇದು ಇವರ ಸಂಬಂಧಗಳಿಗೂ ಅನ್ವಯಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಧಾನಗತಿಯಲ್ಲಿ ಊಟ ಮಾಡುವವರು

ನಿಧಾನಗತಿಯಲ್ಲಿ ಊಟ ಮಾಡುವವರು

ಇವರ ಸ್ನೇಹ ಗಳಿಸುವುದು ನಿಧಾನವಾದರೂ ಗಳಿಸಿದ ಬಳಿಕ ಶಾಶ್ವತವಾಗಿರುತ್ತದೆ. ಆದರೆ ಇನ್ನೊಂದು ಕಡೆ ಈ ವ್ಯಕ್ತಿಗಳು ಹಠಮಾರಿಗಳು ಮತ್ತು ಏಕತಾನತೆ ಬಯಸುವ ವ್ಯಕ್ತಿಗಳಾಗಿದ್ದಾರೆ.

ಅತಿ ವೇಗವಾಗಿ ಊಟ ಮಾಡುವವರು

ಅತಿ ವೇಗವಾಗಿ ಊಟ ಮಾಡುವವರು

ಕೆಲವರು ತಮ್ಮ ಊಟವನ್ನು ಬೇಗನೇ ಮುಗಿಸುವ ಆತುರದಲ್ಲಿ ಊಟವನ್ನೂ ಸರಿಯಾಗಿ ಜಗಿಯದೇ ನುಂಗಿಬಿಡುತ್ತಾರೆ. ಇವರು ಕೌಶಲ್ಯಯುಕ್ತ ವ್ಯಕ್ತಿಗಳಾಗಿದ್ದು ತಮ್ಮ ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ಮತ್ತು ತಕ್ಷಣವೇ ಮುಗಿಯಬೇಕು ಎಂದು ಬಯಸುವವರಾಗಿರುತ್ತಾರೆ. ಇವರು ಒಂದೇ ಹೊತ್ತಿನಲ್ಲಿ ಒಂದಕ್ಕಿಂತ ಹೆಚ್ಚಿನ ಕೆಲಸ ಮಾಡುವವರೂ, ಸ್ಪರ್ಧೆಗೆ ಸದಾ ಎದೆಯೊಡ್ಡುವವರೂ ಆಗಿದ್ದಾರೆ. ಆದರೆ ಇದೇ ಇವರ ಪಾಲಿನ ಶಾಪವೂ ಆಗಿದೆ. ಇವರಿಗೆ ತಮ್ಮ ಸ್ವಂತಕ್ಕಾಗಲೀ ತಮ್ಮವರಿಗಾಗಲೀ ನೀಡಲು ಸಮಯವೇ ಸಾಲುವುದಿಲ್ಲ.

ಇನ್ನೊಬ್ಬರು ತಮ್ಮ ಊಟವನ್ನು ಮುಟ್ಟಲು ಬಿಡದವರು

ಇನ್ನೊಬ್ಬರು ತಮ್ಮ ಊಟವನ್ನು ಮುಟ್ಟಲು ಬಿಡದವರು

ಕೆಲವರಿಗೆ ತಮ್ಮ ತಟ್ಟೆಗೆ ಊಟ ಬಿದ್ದ ಬಳಿಕ ಬೇರೆ ಯಾರೂ ಇದನ್ನು ಮುಟ್ಟಕೂಡದು ಎಂಬ ಭಾವನೆ ಇರುತ್ತದೆ. ಒಂದು ವೇಳೆ ಜೊತೆಯಲ್ಲಿದ್ದವರು ರುಚಿನೋಡಲು ಒಂದು ಚಿಕ್ಕ ತುಂಡು ಇವರ ತಟ್ಟೆಯಿಂದ ತೆಗೆದುಕೊಂಡರೂ ಸಹಿಸಲು ಸಾಧ್ಯವಾಗದೇ ಇದ್ದರೆ ಈ ವ್ಯಕ್ತಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ವ್ಯಕ್ತಿತ್ವದವರಾಗಿದ್ದು ತಮ್ಮ ಕೆಲಸದಲ್ಲಿ ಇನ್ನೊಬ್ಬರು ದಾಖಲಾಗುವುದನ್ನು ಸಹಿಸದ ವ್ಯಕ್ತಿಗಳಾಗಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇನ್ನೊಬ್ಬರು ತಮ್ಮ ಊಟವನ್ನು ಮುಟ್ಟಲು ಬಿಡದವರು

ಇನ್ನೊಬ್ಬರು ತಮ್ಮ ಊಟವನ್ನು ಮುಟ್ಟಲು ಬಿಡದವರು

ಇದು ವೈಯಕ್ತಿಕ ಸಂಬಂಧಕ್ಕೂ ಅನ್ವಯಿಸುತ್ತದೆ. ಆದರೆ ಇನ್ನೊಂದು ಕಡೆ ಎಲ್ಲಾ ಕೆಲಸವನ್ನು ತಮ್ಮ ಮೇಲೇ ಹೇರಿಕೊಳ್ಳುವ ಭಂಡತನದ ಕಾರಣ ಇವರು ಸದಾ ಆಯಾಸಗೊಂಡಿದ್ದು ಇತರರೊಂದಿಗೆ ಸಂತೋಷಕರ ಕ್ಷಣಗಳನ್ನು ಹಂಚಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಾರೆ.

ತಮ್ಮ ಊಟದಲ್ಲಿ ಕೆಲವೇ ಕೆಲವು ಆಯ್ಕೆಯನ್ನು ಬಯಸುವವರು

ತಮ್ಮ ಊಟದಲ್ಲಿ ಕೆಲವೇ ಕೆಲವು ಆಯ್ಕೆಯನ್ನು ಬಯಸುವವರು

ಒಂದು ವೇಳೆ ಹೊರಗೆ ಊಟ ಮಾಡುವಾಗ ಮೆನುವಿನಲ್ಲಿ ನೂರಾರು ಆಯ್ಕೆಗಳಿದ್ದರೂ ಕೆಲವು ನಿರ್ದಿಷ್ಟ ಆಹಾರಗಳನ್ನು ಮಾತ್ರ ಸದಾ ಆಯ್ಕೆ ಮಾಡಿಕೊಂಡರೆ ಇವರು ಎಂದೂ ತಮ್ಮ ಆರಾಮವಲಯದಿಂದ ಹೊರಬರಲು ಯತ್ನಿಸದ ವ್ಯಕ್ತಿಗಳಾಗಿದ್ದಾರೆ. ಇವರು ತಮ್ಮ ಒಂದೇ ಬಗೆಯ ಉದ್ಯೋಗದಲ್ಲಿ ಸಂತೃಪ್ತರಾಗಿದ್ದು ಹೆಚ್ಚಿನ ಫಲಕ್ಕಾಗಿ ಯತ್ನಿಸುವುದೇ ಇಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಮ್ಮ ಊಟದಲ್ಲಿ ಕೆಲವೇ ಕೆಲವು ಆಯ್ಕೆಯನ್ನು ಬಯಸುವವರು

ತಮ್ಮ ಊಟದಲ್ಲಿ ಕೆಲವೇ ಕೆಲವು ಆಯ್ಕೆಯನ್ನು ಬಯಸುವವರು

ಇವರು ತಮ್ಮ ಮನೆ, ಉದ್ಯೋಗ, ಹವ್ಸಾಸದ ಸುತ್ತಲೇ ತಮ್ಮೆಲ್ಲಾ ಜೀವನವನ್ನು ಸವೆಸಲು ಸಿದ್ಧರಾದಂತಿರುತ್ತಾರೆ. ಆದರೆ ಇದು ಜಡಜೀವನಕ್ಕೆ ಕಾರಣವಾಗಿರುವ ಕಾರಣ ಈ ವಲಯದಿಂದ ಹೊರಬಂದು ಜೀವನದಲ್ಲಿ ಕೊಂಚ ಸಾಹಸ, ಪ್ರವಾಸ, ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುವುದು ಶ್ರೇಯಸ್ಕರ.

ಸಿಹಿಯನ್ನು ಹೆಚ್ಚು ಬಯಸುವವರು

ಸಿಹಿಯನ್ನು ಹೆಚ್ಚು ಬಯಸುವವರು

ಒಂದು ವೇಳೆ ನೀವು ಸಿಹಿಯನ್ನು ಹೆಚ್ಚು ಇಷ್ಟಪಡುವ ವ್ಯಕ್ತಿಯಾದರೆ ನೀವು ಸಹೃದಯಿ ಮತ್ತು ನಿರಾಳ ಮನೋಭಾವದ ವ್ಯಕ್ತಿಯಾಗಿರುತ್ತೀರಿ. ನಿಮಗೆ ಇತರ ವ್ಯಕ್ತಿಗಳ ದುಃಖ ದುಮ್ಮಾನಗಳ ಬಗ್ಗೆ ಕಾಳಜಿಯಿದ್ದು ಇವರ ತೊಂದರೆಗಳಿಗೆ ಕಿವಿ ನೀಡುವವರಾಗಿರುತ್ತೀರಿ. ಆದರೆ ವಾಸ್ತವವಾಗಿ ನಿಮ್ಮ ಬಗ್ಗೆ ಅಷ್ಟು ಸುಲಭವಾಗಿ ಗುಟ್ಟುಗಳನ್ನು ಬಿಟ್ಟು ಕೊಡಲಾರಿರಿ.

ಉಪ್ಪು ಕುರುಕುಗಳನ್ನು ಬಯಸುವವರು

ಉಪ್ಪು ಕುರುಕುಗಳನ್ನು ಬಯಸುವವರು

ಒಂದು ವೇಳೆ ಉಪ್ಪುಪ್ಪಾದ ತಿಂಡಿಗಳನ್ನೇ ನೀವು ಹೆಚ್ಚು ಬಯಸುವಿರಾದರೆ ನೀವು ನಿಮ್ಮ ಬಗ್ಗೆಯೇ ಹೆಚ್ಚು ಮಾತನಾಡುವವರಾಗಿರುತ್ತೀರಿ. ನಿಮ್ಮ ಬಗ್ಗೆ ಹೇಳಿಕೊಳ್ಳಲು ಮತ್ತು ಇತರರ ಬಗ್ಗೆ ತಿಳಿದುಕೊಳ್ಳಲು ನಿಮಗೆ ಯಾವುದೇ ದುಮ್ಮಾನವಿರುವುದಿಲ್ಲ.

ಕಹಿಯನ್ನು ಇಷ್ಟಪಡುವವರು

ಕಹಿಯನ್ನು ಇಷ್ಟಪಡುವವರು

ಒಂದು ವೇಳೆ ಕಹಿಯನ್ನು ಇಷ್ಟಪಡುವ ವ್ಯಕ್ತಿ ನೀವಾಗಿದ್ದರೆ ನಿಮಗೆ ಎದುರಿನ ವ್ಯಕ್ತಿಯ ಉತ್ತಮ ಗುಣಗಳಿಗಿಂತ ಅವಗುಣಗಳೇ ಪ್ರಮುಖವಾಗಿ ಕಾಣುತ್ತವೆ. ಅದರಲ್ಲಿಯೂ ಪ್ರಥಮ ಭೇಟಿಯಲ್ಲಿ ವ್ಯಕ್ತಿಯ ಅವಗುಣವನ್ನೇ ಹುಡುಕುವ ವ್ಯಕ್ತಿತ್ವ ನಿಮ್ಮದಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಹಿಯನ್ನು ಇಷ್ಟಪಡುವವರು

ಕಹಿಯನ್ನು ಇಷ್ಟಪಡುವವರು

ಹೊಸ ಸ್ನೇಹಿತರನ್ನು ಸಂಪಾದಿಸುವುದು ನಿಮ್ಮಿಂದಾಗದ ಕೆಲಸ. ನಿಮ್ಮ ಬಗ್ಗೆ ಉತ್ಸುಕರಾದವರಲ್ಲಿಯೂ ನೀವು ಕೊಂಕು ಹುಡುಕುವ ಕಾರಣ ನಿಮ್ಮ ಸ್ನೇಹಿತರ ಸಂಖ್ಯೆ ಕಡಿಮೆ. ಇಂತಹ ವ್ಯಕ್ತಿಗಳು ತಮ್ಮನ್ನು ಬದಲಿಸಿಕೊಂಡು ಜನರಲ್ಲಿಯ ಒಳ್ಳೆಯ ಗುಣಗಳನ್ನು ನೋಡುವ ಪರಿಪಾಠ ಬೆಳೆಸಿಕೊಳ್ಳುವುದು ಒಳಿತು. ಇದಕ್ಕಾಗಿ ಸಿಹಿ ತಿನ್ನಲು ಪ್ರಾರಂಭಿಸಿದರೆ ಹೇಗೆ?

 
For Quick Alerts
ALLOW NOTIFICATIONS
For Daily Alerts

    English summary

    What Your Eating Habits Say About You

    Some people eat quickly as if they are in a rush, while others prefer to take their time and eat their food in peace. But did you know that our eating habits are entirely instinctive? That’s why our eating habits are strongly connected with our personality.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more