Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲಿಗೂ, ವ್ಯಕ್ತಿತ್ವಕ್ಕೂ ಎತ್ತಿಂದೆತ್ತ ಸಂಬಂಧ..?
ಹೌದು ಸ್ವಾಮಿ ಕೂದಲಿಗೆ ತನ್ನದೇ ಆದ ಶಿಸ್ತು ಇದೆ. ಮಿಲಿಟರಿಯಲ್ಲಿ ಕೆಲಸ ಮಾಡುವವರು ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡಿರುತ್ತಾರೆ. ಇನ್ನೂ ಶಾಲೆಗಳಲ್ಲಿ ಇದೇ ರೀತಿ ಕೂದಲು ಕತ್ತರಿಸಿಕೊಂಡಿರಬೇಕು ಎಂಬ ನಿಯಮಗಳನ್ನು ಇಟ್ಟಿರುತ್ತಾರೆ. ಕೆದರಿದ ಕೂದಲನ್ನು ಎಲ್ಲಾ ಕಡೆ ಅಶಿಸ್ತು ಎಂದು ಭಾವಿಸುತ್ತಾರೆ. ಉತ್ತರ ಕೊರಿಯಾದಲ್ಲಿ ಅಧ್ಯಕ್ಷರು ಮತ್ತು ಅವರ ಪತ್ನಿಯ ಕೇಶ ಶೈಲಿಯನ್ನೆ ಇಡೀ ದೇಶದ ಗಂಡಸರು ಮತ್ತು ಹೆಂಗಸರು ಕ್ರಮವಾಗಿ ಪಾಲಿಸಬೇಕು ಎಂಬ ನಿಯಮ ಇದೆ. ನಮ್ಮ ದೇಶದಲ್ಲಿ ವಿವಿಧ ಬಗೆಯ ಕೂದಲನ್ನು ಹೊಂದಿರುವ ಜನರನ್ನು ನಾವು ನೋಡಬಹುದು.
ನೀವು ಪ್ರತಿದಿನ ವಿವಿಧ ಬಗೆಯ ಜನರ ಜೊತೆಗೆ ಬೆರೆಯುತ್ತಿರುತ್ತೀರಿ, ಒಡನಾಡುತ್ತಿರುತ್ತೀರಿ. ಅವರ ಸ್ವಭಾವಗಳು ಬೇರೆ ಬೇರೆ, ಮನೋಧರ್ಮಗಳು ಬೇರೆ ಬೇರೆ. ಆದರೆ ಅವರ ಸ್ವಭಾವಗಳನ್ನೆಲ್ಲ ಸೇರಿಸಿ ಹೆಚ್ಚು ಕಡಿಮೆ ಒಂದಷ್ಟು ವರ್ಗಗಳನ್ನಾಗಿ ಮಾಡಬಹುದು. ಆ ಸ್ವಭಾವಗಳನ್ನೆಲ್ಲ ಒಮ್ಮೆ ನೋಡಿ, ಒಂದು ವರ್ಗದ ಸ್ವಭಾವಗಳ ಜನರೆಲ್ಲರು ಒಂದೇ ಬಗೆಯ ಕೂದಲನ್ನು ಹೊಂದಿರುತ್ತಾರೆ. ಗುಂಗುರು ಕೂದಲು, ಒಣ ಕೂದಲು, ಕೋಳಿ ಜುಟ್ಟು, ಸಿಕ್ಕು ಸಿಕ್ಕಾದ ಕೂದಲಿನ ಜನರನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಿ. ಆಗ ನಿಮಗೆ ತಿಳಿಯುತ್ತದೆ, ಕೂದಲಿನಿಂದ ಸಹ ವ್ಯಕ್ತಿತ್ವವನ್ನು ಅಳೆಯಬಹುದು. ಸರಿಯಾಗಿ ಕೂದಲನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೇ? ಚಿಂತಿಸಬೇಡಿ ಮುಂದೆ ಓದಿ, ಅದನ್ನು ನಾವು ಹೇಳಿಕೊಡುತ್ತೇವೆ.

ಉದ್ದನೆಯ ಕೂದಲು
ಸಾಮಾನ್ಯವಾಗಿ ಫ್ಯಾಷನ್ ಪ್ರಪಂಚದಲ್ಲಿ ಉದ್ದನೆಯ ಕೂದಲಿಗೆ ಆದ್ಯತೆ ಹೆಚ್ಚು. ಈ ಬಗೆಯ ಕೂದಲನ್ನು ಹೊಂದಿರುವವರು, ತೀರಾ ಮೃದು ಭಾಷಿಗಳು, ಶಾಂತ ಸ್ವಭಾವದವರು ಮತ್ತು ವರ್ಚಸ್ವಿಗಳಾಗಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉದ್ದನೆಯ ಕೂದಲು
ಅಲ್ಲದೆ ಇವರು ಜನರ ಜೊತೆಗೆ ಬೆರೆಯುವುದು ಕಡಿಮೆ. ಇವರು ಒಳ್ಳೆಯ ಚಿಂತಕರು ಸಹ ಆಗಿರುತ್ತಾರೆ. ಇವರ ಗುರಿಗಳು ಸ್ಪಷ್ಟವಾಗಿ ಇರುತ್ತವೆ ಹಾಗಾಗಿ ಇವರು ಶ್ರಮಜೀವಿಗಳು ಎಂಬುದರಲ್ಲಿ ಸಂಶಯವೇ ಇಲ್ಲ. ಸಾಧನೆಯನ್ನು ಮಾಡುವ ವಿಚಾರದಲ್ಲಿ ಇವರು ಸ್ವಲ್ಪ ಸ್ವಾರ್ಥಿಗಳಾಗಿರುತ್ತಾರೆ.

ಗುಂಗುರು ಕೂದಲು
ಕೆಲವೊಂದು ಪ್ರದೇಶಗಳಲ್ಲಿ ಗುಂಗುರು ಕೂದಲು ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ಸಾಮಾನ್ಯ ಭೌಗೋಳಿಕ ಪ್ರದೇಶದಲ್ಲಿ ಗುಂಗುರು ಕೂದಲು ಇರುವವರು ವಿನೋದವನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗುಂಗುರು ಕೂದಲು
ಅಲ್ಲದೆ, ಆರಾಮವಾಗಿ ಜೀವನವನ್ನು ಕಳೆಯುವ ಮನೋಭಾವ ಇವರದಾಗಿರುತ್ತದೆ. ಒಂದು ವೇಳೆ ಈ ಮನೋಭಾವ ನಿಮ್ಮಲ್ಲಿ ಇಲ್ಲ ಎಂದುಕೊಂಡಲ್ಲಿ, ನಿಮ್ಮ ಬಗ್ಗೆ ಜನರ ಅಭಿಪ್ರಾಯ ಅದೇ ಆಗಿರುತ್ತದೆ. ಇವರು ಸ್ವಲ್ಪ ಮೃಗೀಯ ಸ್ವಭಾವದ ಜೊತೆಗೆ, ಲವಲವಿಕೆಯಿಂದ ಕೂಡಿದ ಆಕರ್ಷಕ ಜೀವನವನ್ನು ನಡೆಸುತ್ತಿರುತ್ತಾರೆ.

ಹಾರಾಡುವ ಕೂದಲು
ಇದು ನೋಡಲು ಎಷ್ಟು ಆಕರ್ಷಕವಾಗಿರುತ್ತದೆಯೋ, ಅಷ್ಟೇ ಆಕರ್ಷಕವಾಗಿರುತ್ತದೆ ಇವರ ಜೀವನ. ಇವರು ಕಲಾವಿದರು, ಸೃಜನಶೀಲ ಜನರು ಮತ್ತು ಹಾಸ್ಯವನ್ನು ಬಯಸುವ ಜನರಾಗಿರುತ್ತಾರೆ. ಈ ವ್ಯಕ್ತಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಚಟುವಟಿಕೆಯನ್ನು ಹೊಂದಿರುವ ಜನರಾಗಿದ್ದು, ಹಗಲುಗನಸು ಕಾಣುವ ಜನರು ಸಹ ಆಗಿರುತ್ತಾರೆ.

ಪಾಲಿಶ್ ಮತ್ತು ಸಂಸ್ಕರಿಸಿದ ಕೂದಲು
ನಿಮ್ಮ ಕೂದಲನ್ನು ಸರಿಪಡಿಸಿಕೊಳ್ಳಲು ಮತ್ತು ಬಣ್ಣವನ್ನು ಬಳಿದುಕೊಳ್ಳಲು ನೀವು ಸಲೂನ್‌ನಲ್ಲಿ ಗಂಟೆಗಟ್ಟಲೆ ಕುಳಿತರೆ, ನೀವು ಜೀವನದಲ್ಲಿ ಎಲ್ಲವನ್ನೂ ಪರಿಪೂರ್ಣವಾಗಿ ಬಯಸುತ್ತೀರಿ ಎಂದರ್ಥ.

ಪಾಲಿಶ್ ಮತ್ತು ಸಂಸ್ಕರಿಸಿದ ಕೂದಲು
ಇದು ಸ್ವ-ಪ್ರೀತಿಯನ್ನು ಸಹ ತೋರಿಸುತ್ತದೆ. ತಮ್ಮನ್ನು ತಾವೇ ಹೊಗಳಿಕೊಳ್ಳುವ ಜನ ಇವರು.

ಸ್ವಾಭಾವಿಕ ಕೂದಲು
ತಮ್ಮ ಕೂದಲನ್ನು ಇದ್ದಂತೆ ಇರಲು ಬಿಡುವ ಜನರು, ಬುದ್ಧಿವಂತರಾಗಿರುತ್ತಾರೆ. ಇವರು ತಮ್ಮ ಜೀವನವನ್ನು ಸೃಜನಶೀಲ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದು ವೇಳೆ ಕೂದಲು ಬೆಳ್ಳಗಾದರು ಸಹ ಇವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದಕ್ಕೆ ಬಣ್ಣಹಚ್ಚಲು ಅವರು ಹೋಗುವುದಿಲ್ಲ.

ಸ್ವಾಭಾವಿಕ ಕೂದಲು
ಇದು ಅವರು ಬೌದ್ಧಿಕವಾಗಿ ಬೆಳೆದಿರುತ್ತಾರೆ ಮತ್ತು ಚಿಂತನಾತ್ಮಕ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾರೆ ಎಂದು ತೋರಿಸುತ್ತದೆ.



Click it and Unblock the Notifications









