Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಕರಿಕೆ ಬರುವಂತಹ ವಸ್ತುಗಳೆಂದರೆ, ಇವರಿಗೆ ಪಂಚ ಪ್ರಾಣ!
ಈ ಜಗತ್ತಿನಲ್ಲಿ ಎರಡು ವಿಧದ ಜನರಿದ್ದಾರೆ. ಮೊದಲನೆಯವರು ಜೀವಿಸಲಿಕ್ಕಾಗಿ ತಿನ್ನುವವರು, ಎರಡನೆಯವರು ತಿನ್ನಲಿಕ್ಕಾಗಿಯೇ ಜೀವಿಸುವವರು. ನಿಮ್ಮದು ಯಾವ ವಿಧ? ಈ ಪ್ರಶ್ನೆಗೆ ಮುಗುಳ್ನಗದವರೇ ಇಲ್ಲ. ವಾಸ್ತವವಾಗಿ ಆಹಾರ ಮೂಲಭೂತ ಅವಶ್ಯಕತೆಯಲ್ಲಿ ಪ್ರಮುಖವಾದರೂ ನಮ್ಮ ಮನ ವೈವಿಧ್ಯವನ್ನು ಬಯಸುತ್ತದೆ. ಪ್ರತಿದಿನ ಒಂದೇ ಬಗೆಯ ಊಟವನ್ನು ಮಾಡಲು ಯಾರಿಗೂ ಸಾಧ್ಯವಿಲ್ಲ. ಹಿರಿಯರೇ ಏಕೆ, ಹಸುಗೂಸುಗಳೂ ಒಮ್ಮೆ ತಿನ್ನಿಸಿದ ರುಚಿಯನ್ನೇ ಬಾರಿ ಬಾರಿ ತಿನ್ನಿಸುತ್ತಿದ್ದರೆ ಬೇಡ ಎಂದು ಅಳುತ್ತವೆ. ಆದ್ದರಿಂದ ಆಹಾರದಲ್ಲಿ ವೈವಿಧ್ಯತೆ ಹೆಚ್ಚಿಸಲು ನೂರಾರು ಬಿಡಿ, ಲಕ್ಷಾಂತರ ಆಹಾರ ಸಾಮಾಗ್ರಿಗಳಿವೆ.
ಆದರೆ ಕೆಲವರು ಈ ಆಹಾರ ಸಾಮಾಗ್ರಿಗಳ ಹೊರತಾಗಿ ಆಹಾರವೆಂದು ಪರಿಗಣಿಸದೇ ಇರುವ ವಸ್ತುಗಳನ್ನೇ ತಿನ್ನುವ ಮೂಲಕ ಇತರರಲ್ಲಿ ದಿಗ್ಭ್ರಮೆ ಉಂಟುಮಾಡುತ್ತಾರೆ. ಕೆಲವು ಧರ್ಮಗಳಲ್ಲಿ ದೇಹದಿಂದ ವಿಸರ್ಜಿಸಲ್ಪಟ್ಟ ದ್ರವಗಳನ್ನೂ ಔಷಧಿಯ ರೂಪದಲ್ಲಿ ಪರಿಗಣಿಸಲ್ಪಟ್ಟಿವೆ. ಆದರೆ ಕೆಲವರು ಇದಕ್ಕೂ ಮೀರಿ ಸೇವಿಸಲು ಅರ್ಹವೇ ಅಲ್ಲದ, ಆದರೆ ಇದರ ಬಗ್ಗೆ ಕೇಳಿದರೂ ವಾಕರಿಕೆ ಬರುವಂತಹ ವಸ್ತುಗಳನ್ನು ನಿಜವಾಗಿ ಸೇವಿಸುತ್ತಾರೆ. ಒಂದು ವೇಳೆ ನೀವು ದುರ್ಬಲಹೃದಯಿಯಾಗಿದ್ದರೆ ಈ ಲೇಖನವನ್ನು ಸೂಕ್ತ ಸಂದರ್ಭದಲ್ಲಿ ಓದಲು ತೆಗೆದಿರಿಸಿ. ಏಕೆಂದರೆ ಕೆಳಗಿನ ಮಾಹಿತಿ ಮೂಲಕ ತಿಳಿಸಿರುವ ವಿಷಯಗಳು ನಿಮ್ಮ ನಂಬಿಕೆಗಳನ್ನೇ ಅಲ್ಲಾಡಿಸಿಬಿಡಬಹುದು. ಇವುಗಳಲ್ಲಿ ಕೆಲವು ಆಕಸ್ಮಿಕವಾಗಿ ತಿನ್ನಲ್ಪಟ್ಟರೆ ಉಳಿದವು ಉದ್ದೇಶಪೂರ್ವಕವಾಗಿಯೇ ಸೇವಿಸಲ್ಪಡುತ್ತವೆ..

ಮೂತ್ರ
ಮ್ಯಾನ್ ವರ್ಸಸ್ ವೈಲ್ಡ್ ಎಂಬ ಟೀವೀ ವಾಸ್ತವ ರೂಪಕ (ರಿಯಾಲಿಟಿ ಷೋ) ನಲ್ಲಿ ಕೆಲವು ವ್ಯಕ್ತಿಗಳು ಮೂತ್ರವನ್ನು ಕುಡಿಯುವುದು ಕಂಡುಬಂದಿದೆ. ಬೇರ್ ಗ್ರಿಲ್ಸ್ ಎಂಬುವರು ಇವರಲ್ಲಿ ಒಬ್ಬರು. ಅಂದರೆ ಕುಡಿಯಲು ಏನೂ ಇಲ್ಲದಿದ್ದಾಗ ತನ್ನ ಮೂತ್ರವನ್ನೇ ಸೇವಿಸುವುದರಿಂದ ಸಾವಿಗೀಡಾಗುವುದನ್ನು ತಪ್ಪಿಸಬಹುದು. ಆದರೆ ಸ್ವಮೂತ್ರಪಾನ ಭಾರತದ ಒಂದು ಪುರಾತನ ಚಿಕಿತ್ಸಾವಿಧಿಯೂ ಆಗಿದ್ದು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರೂ ಇದನ್ನು ಅನುಸರಿಸುತ್ತಿದ್ದರು.

ಶವ ಸಂಸ್ಕಾರದ ಬಳಿಕ ದೊರೆಯುವ ಬೂದಿ
ತನ್ನ ಪತಿಯ ಅಂತಿಮ ಸಂಸ್ಕಾರದ ಬಳಿಕ ಬೂದಿಯನ್ನು ಸಂಗ್ರಹಿಸಿದ ಮಹಿಳೆಯೊಬ್ಬರು ತನ್ನ ಕೈ ಮೇಲೆ ಬಿದ್ದ ಆ ಬೂದಿಯನ್ನು ಅನೂಚಾನವಾಗಿ, ಯಾವ ಉದ್ದೇಶವೂ ಇಲ್ಲದೇ ಕೊಂಚ ನೆಕ್ಕಿದ್ದರಷ್ಟೇ. ಆದರೆ ಇದರ ರುಚಿ ಆಕೆಗೆ ಭಾರೀ ಹಿಡಿಸಿತ್ತು. ರುಚಿಗಾಗಿ ಇನ್ನಷ್ಟು ನೆಕ್ಕುತ್ತಾ ಕುಳಿತ ಆಕೆಗೆ ಇಂದು ಬೂದಿಯನ್ನು ನೆಕ್ಕುವುದೇ ಒಂದು ಗೀಳಾಗಿ ಪರಿಣಮಿಸಿದೆ. Image courtesy

ಸೋಫಾದ ಕುಶನ್
ನಮ್ಮಲ್ಲಿ ಕೆಲವರಿಗೆ ಸಿನೇಮಾ ಹಾಲ್ ನಲ್ಲಿ ತಾವು ಕುಳಿತ ಕುರ್ಚಿಯನ್ನು ಬ್ಲೇಡಿನಿಂದ ಹರಿದು ಒಳಗಿನ ಸ್ಪಂಜನ್ನು ಚೂರುಚೂರಾಗಿ ಹೊರಹಾಕುವ ಕುತ್ಸಿತ ಮನೋಭಾವವಿದೆ. ಕೆಲವರು ಸಿಕ್ಕಿಬೀಳುವ ಹಂತದಲ್ಲಿದ್ದಾಗ ತಾವು ಹೊರತೆಗೆದ ಸ್ಪಂಜನ್ನು ತಿಂದು ಪಾರಾಗಿದ್ದಾರೆ. ಆದರೆ ಫ್ಲೋರಿಡಾದ ಆಡೇಲ್ ಎಂಬ ಮಹಿಳೆಗೆ ಈ ಸ್ಪಂಜು ತಿನ್ನುವುದೇ ಒಂದು ಗೀಳಾಗಿ ಪರಿಣಮಿಸಿದ್ದು ಇದುವರೆಗೆ ಇನ್ನೂರು ಪೌಂಡಿಗೂ ಹೆಚ್ಚು ಸ್ಪಂಜು ತಿಂದು ಮುಗಿಸಿದ್ದಾರೆ. ಇದುವರೆಗೆ ಅವರು ಏಳು ಸೋಫಾ ಮತ್ತು ಎರಡು ಕುರ್ಚಿಗಳನ್ನು ಸ್ವಾಹಾ ಮಾಡಿದ್ದಾರೆ. Image courtesy

ಟಾಯ್ಲೆಟ್ ಪೇಪರ್
ಶೌಚಾಲಯದಲ್ಲಿದ್ದಾಗ ಪೇಪರ್ ಓದುವುದು ಇದುವರೆಗಿನ ನೆಚ್ಚಿನ ಹವ್ಯಾಸವಾಗಿತ್ತು. ಈಗ ಈ ಸ್ಥಾನವನ್ನು ಮೊಬೈಲು ಆವರಿಸಿದೆ. ಆದರೆ ಈ ಸಮಯದಲ್ಲಿ ಯಾರೂ ತಿನ್ನಲು ಇಷ್ಟಪಡುವುದಿಲ್ಲ. ಅದರಲ್ಲೂ ಪೇಪರ್ ಅಂತೂ ಸರ್ವಥಾ ಅಲ್ಲ. ಆದರೆ ಈ ಮಹಿಳೆಗೆ ಟಾಯ್ಲೆಟ್ ಪೇಪರ್ ಎಂದರೆ ಮಕ್ಕಳಿಗೆ ಚಾಕಲೇಟು ಇದ್ದಂತೆ. ಪ್ರತಿದಿನ ಈಕೆ ಅರ್ಧ ರೋಲ್ ಭರ್ತಿ ಟಾಯ್ಲೆಟ್ ಪೇಪರ್ ತಿನ್ನುತ್ತಾರೆ. ಬರೆಯ ಶೌಚಾಲಯದಲ್ಲಿದ್ದಾಗ ಮಾತ್ರವಲ್ಲ, ಸಿನೇಮಾ ನೋಡುತ್ತಿದ್ದಾಗಲೂ ಉಳಿದವರೆಲ್ಲಾ ಪಾಪ್ ಕಾರ್ನ್ ತಿನ್ನುತ್ತಿದ್ದರೆ ಈಕೆ ಟಾಯ್ಲೆಟ್ ಪೇಪರ್ ತಿನ್ನುತ್ತಿರುತ್ತಾರೆ.

ಆಯಸ್ಕಾಂತ
ಪೋರ್ಟ್ ಲ್ಯಾಂಡ್ ಎಂಬ ಸ್ಥಳದಲ್ಲಿ ಬಾಲಕಿಯೊಬ್ಬಳು ತನಗೆ ಅತೀವ ಹೊಟ್ಟೆ ನೋವಾಗುತ್ತಿದೆ ಎಂದು ದೂರ್ ನೀಡಿದಾಗ ತಕ್ಷಣ ವೈದ್ಯರ ಬಳಿ ಕರೆತರಲಾಯ್ತು. ಈಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಈಕೆಯ ಹೊಟ್ಟೆಯಲ್ಲಿ ಬ್ರೇಸ್ಲೆಟ್ ಅಥವಾ ಕೈಗೆ ಧರಿಸುವ ಆಭರಣದಂತಿದ್ದುದೇನೋ ಕಂಡುಬಂದಿತ್ತು. ಇದು ಏನು? ಏನು ತಿಂದಿದ್ದೆ ಎಂದು ವಿಚಾರಿಸಿದಾಅಗ ಆಕೆ "ಬಕ್ಕಿ ಬಾಲ್" ಎಂಬ ಗೋಲಿರೂಪದ ಆಯಸ್ಕಾಂತಗಳನ್ನು ತಿಂದಿದ್ದೆ ಎಂದು ಹೇಳಿದ್ದಳು. ಹೊಟ್ಟೆಯಲ್ಲಿ ಈ ಗೋಲಿಗಳು ತಮ್ಮ ಆಯಸ್ಕಾಂತೀಯ ಆಕರ್ಷಣೆಯಿಂದ ಒಂದಕ್ಕೊಂದು ಅಂಟಿಕೊಂಡು ವೈದ್ಯರಿಗೆ ಬ್ರೇಸ್ಲೆಟ್ ನಂತೆ ಕಂಡುಬಂದಿತ್ತು. Image courtesy

ಸೋಪು
ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್‍ಯಾಗಿಂಗ್ ರೂಪದಲ್ಲಿ ಬಲವಂತವಾಗಿ ಸೋಪು ತಿನ್ನಿಸಿ ವಿದ್ಯಾರ್ಥಿಯೊಬ್ಬ ಅಸ್ವಸ್ಥನಾದ ಬಳಿಕ ಇದಕ್ಕೆ ಕಾರಣರಾದ ಹಿರಿಯ ವಿದ್ಯಾರ್ಥಿಗಳನ್ನು ಮುಂದಿನ ಐದು ವರ್ಷಗಳವರೆಗೆ ಕಾಲೇಜಿಗೆ ದಾಖಲು ಮಾಡಿಕೊಳ್ಳದಂತೆ ಕರ್ನಾಟಕದ ನ್ಯಾಯಾಲಯ ತೀರ್ಪು ನೀಡಿದ್ದುದನ್ನು ಸ್ಮರಿಸಬಹುದು. ಆದರೆ ಫ್ಲೋರಿಡಾದ ಈ ಹತ್ತೊಂಬತ್ತು ವಯಸ್ಸಿನ ಟಿಂಪೆಸ್ಟ್ ಎಂಬ ಯುವತಿಗೆ ಸೋಪು ತಿನ್ನುವುದು ಎಂದರೆ ಪಂಚಪ್ರಾಣ. ವಾರಕ್ಕೆ ಐದು ಬಾರ್ ಸೋಪುಗಳನ್ನು ಈಕೆ ತಿನ್ನುತ್ತಾ ಬಂದಿದ್ದಾರೆ. ನಾಲಿಗೆಗೆ ಇಷ್ಟವಾದರೂ ದೇಹಕ್ಕೆ ಇಷ್ಟವಾಗಬೇಕಲ್ಲ, ಆಗಾಗ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತದೆ. ಆಗ ಆಕೆ ಇದನ್ನು ನಿಲ್ಲಿಸುತ್ತಾರೆ. ಆದರೆ ಒಮ್ಮೆ ಆರೋಗ್ಯ ಸುಧಾರಿಸಿತೋ ಮತ್ತೆ ಸೋಪುಸೇವನೆ ಪ್ರಾರಂಭವಾಗುತ್ತದೆ. ಇದು ಯಾವಾಗ ನಿಲ್ಲುತ್ತದೋ ಗೊತ್ತಿಲ್ಲ. ಉಸಿರು ನಿಂತಾಗಲೇ ಎಂದು ಯಾರೋ ಹೇಳಿದಂತಾಯಿತು.....



Click it and Unblock the Notifications









