Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮಗುವನ್ನೇ ಮರೆತು ಬಿಟ್ಟುಹೋದವರ ಸ್ಟೋರಿ ಇದು!
ಮನೆಗೆ ಮಗುವಿನ ಆಗಮನವಾದಾಗ ಅದರ ಲಾಲನೆಪಾಲನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗುತ್ತದೆ. ಅದು ದೊಡ್ಡದಾಗುತ್ತಿರುವಂತೆ ಪೋಷಕರ ಜವಾಬ್ದಾರಿ ಕೂಡ ಹೆಚ್ಚುತ್ತಾ ಹೋಗುತ್ತದೆ. ಪೋಷಕರಿಗೆ ಮಗುವಿನ ಬಗ್ಗೆ ಎಷ್ಟೇ ಕಾಳಜಿಯಿದ್ದರೂ ಗೊಂದಲದಲ್ಲಿ ಕೆಲವೊಂದು ವಿಷಯಗಳು ಮರೆತು ಹೋಗುತ್ತದೆ. ಆದರೆ ಮಗುವನ್ನೇ ಮರತರೆ ಅಂತಹ ಪೋಷಕರನ್ನು ಏನೆಂದು ಕರೆಯಬೇಕು ನೀವೇ ಹೇಳಿ. ಇದು ನಿಜ.
ಕೆಲವು ಪೋಷಕರು ತಮ್ಮ ಮಗುವನ್ನು ಬಿಟ್ಟು ಎಷ್ಟೋ ದೂರ ತೆರಳಿದ ಬಳಿಕ ಅವರಿಗೆ ಮಗುವಿನ ನೆನಪಾಗಿ ಮರಳಿದ ಘಟನೆಗಳು ನಡೆದಿವೆ. ಆಗ ಮಗು ಯಾರದ್ದೋ ಕೈಯಲ್ಲಿ ಇರುತ್ತಿತ್ತು. ಇಂತಹ ಪೋಷಕರನ್ನು ನಾವು ಬೇಜವಾಬ್ದಾರಿಗಳೆಂದು ಕರೆಯಬಹುದು. ಇಲ್ಲವಾದಲ್ಲಿ ಮಗುವಿನ ನೆನಪು ಯಾರಿಗಾದರೂ ಆಗದೆ ಇರುತ್ತದೆಯಾ?
ಕೆಲವು ಪೋಷಕರು ತಮ್ಮ ಮಗುವನ್ನು ಬಿಟ್ಟು ಹೋದ ಸಂದರ್ಭವನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಮಗುವನ್ನು ನೆನಪಿಲ್ಲದೆ ಬಿಟ್ಟು ತೆರಳುವುದು ತುಂಬಾ ಮುಜುಗರವನ್ನು ಉಂಟುಮಾಡುವಂತಹ ಪರಿಸ್ಥಿತಿ. ತಮ್ಮ ಜೀವವೆಂದೇ ಭಾವಿಸಿರುವ ಮಗುವನ್ನು ಬಿಟ್ಟು ತೆರಳುವ ಪೋಷಕರು ಮುಂದೆ ಇಂತಹ ತಪ್ಪನ್ನು ಮಾಡದಿರಲಿ. ಇಂತಹ ಕೆಲವೊಂದು ಘಟನೆಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ.
ವಿಮಾನ ನಿಲ್ದಾಣದಲ್ಲಿ ಮಗುವನ್ನು ಬಿಟ್ಟು ತೆರಳಿದರು!
ಇಸ್ರೇಲ್ ನ ಬೆನ್ ಗ್ಯುರಿಯನ್ ವಿಮಾನ ನಿಲ್ದಾಣದ ಅಂಗಡಿಯೊಂದರಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಏಕಾಂಗಿಯಾಗಿ ಕುಳಿತಿರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ನೋಡಿದ್ದಾರೆ. ಮಗುವಿನ ಪೋಷಕರಿಗೆ ತಮ್ಮ ಇತರ ನಾಲ್ಕು ಮಕ್ಕಳು ಮತ್ತು ಲಗೇಜ್‌ನ ಗಡಿಬಿಡಿಯಲ್ಲಿ ಈ ಮಗುವನ್ನು ಬಿಟ್ಟುಬಿಟ್ಟಿದ್ದಾರೆ. ಪ್ಯಾರಿಸ್‌ಗೆ ತೆರಳುವ ವಿಮಾನ ಆಕಾಶಕ್ಕೇರಿದ ಮೇಲೆ ತಮ್ಮ ಮಗು ನಾಪತ್ತೆಯಾಗಿರುವ ಬಗ್ಗೆ ದಂಪತಿ ದೂರು ನೀಡಿದ್ದಾರೆ. ಮಗುವನ್ನು ಮುಂದಿನ ವಿಮಾನದಲ್ಲಿ ಪ್ಯಾರಿಗೆ ಕಳುಹಿಸಿಕೊಡಲಾಯಿತು.
ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಹೋದ ತಂದೆ
ಇದನ್ನು ಕೇಳಿ ನಿಮಗೆ ತುಂಬಾ ಅಚ್ಚರಿಯಾಗಬಹುದು. ಮಸ್ಸಕಸೆಟ್ಸ್ ನಲ್ಲಿ ತಂದೆಯೊಬ್ಬ ತನ್ನ ಒಂದು ವರ್ಷದ ಮಗುವನ್ನು ಕಾರಿನ ಹಿಂಬದಿ ಸೀಟಿನಲ್ಲಿ ಬಿಟ್ಟು ಕಾರನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಹೋಗಿದ್ದ. ಇದರ ಬಗ್ಗೆ ನೆನಪಾದಾಗ ಆತ 911 ಕರೆ ಮಾಡಿ ತಿಳಿಸಿದ್ದಾನೆ. ಆತನಿಗೆ ಮಗುವಿನ ಬಗ್ಗೆ ಅರಿವಾದಾಗ ಅದಾಗಲೇ ಆತ ರೈಲನ್ನು ಏರಿದ್ದ. ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಗುವನ್ನು ಕಾರಿನಿಂದ ಹೊರತೆಗೆದಿದ್ದಾರೆ. ಬಳಿಕ ಮಗುವನ್ನು ತಂದೆಗೆ ಒಪ್ಪಿಸಲಾಯಿತು.
ಕಾರಿನ ಮೇಲೆ ಮಗುವನ್ನಿಟ್ಟು ಪ್ರಯಾಣಿಸಿದ ತಾಯಿ
ಅರಿಜೋನಾ ಪೋನಿಕ್ಸ್ ನಲ್ಲಿರುವ 19ರ ಹರೆಯದ ಕ್ಯಾತಲಿನಾ ಕ್ಲೌಸರ್ ಎಂಬಾಕೆ ತನ್ನ ಮಗುವನ್ನು ಕಾರಿನ ಮೇಲಿಟ್ಟು ಕಾರು ಚಲಾಯಿಸುತ್ತಿರುವಾಗ ಪೊಲೀಸರಿಂದ ಬಂಧಿಸಲ್ಪಟ್ಟಳು. ಮರಿಜುನಾ ಸೇವನೆ ಮಾಡಿದ್ದ ಆಕೆ ಎರಡು ತಿಂಗಳ ಮಗುವನ್ನು ಕಾರಿನ ಮೇಲಿಟ್ಟು ಪ್ರಯಾಣಿಸುತ್ತಿದ್ದಳು. ನಶೆ ಇಳಿದು ಮಗುವಿನ ನೆನಪಾದಾಗ ಮಗು ಅದಾಗಲೇ ಕಾರಿನಿಂದ ಕೆಳಗೆ ಬಿದ್ದಿತ್ತು. ಆದರೆ ಯಾವುದೇ ತೊಂದರೆಯಾಗಿರಲಿಲ್ಲ.
ಶಾಪಿಂಗ್ ಗೆ ಹೋದಾಗ ಮಗುವನ್ನು ಬಿಟ್ಟುಹೋದಳು
ಸ್ಯಾನ್ ಡಿಯಾಗೊದಲ್ಲಿರುವ ಮಹಿಳೆಯೊಬ್ಬಳಿಗೆ ರುಚಿಯಾದ ಡೌನಟ್ ತಿನ್ನುವ ಆಸೆ. ಇದಕ್ಕಾಗಿ ಆಕೆ ಸ್ಯಾನ್ ಡಿಯಾಗೊದಲ್ಲಿರುವ ಗೋಲ್ಡನ್ ಡೌನಟ್ ಗೆ ತನ್ನ ಸೋದರ ಸಂಬಂದಿ ಮತ್ತು ಐದು ತಿಂಗಳ ಮಗುವಿನೊಂದಿಗೆ ತೆರಳಿದ್ದಳು. ಆಕೆಗೆ ತನ್ನ ಇಷ್ಟದ ಡೌನಟ್ ಸಿಗದೆ ಇದ್ದಾಗ ಮತ್ತೊಂದು ಅಂಗಡಿಗೆ ತೆರಳಿದ್ದಾಳೆ. ಈ ವೇಳೆ ಆಕೆ ಮೊದಲ ಅಂಗಡಿಯಲ್ಲಿ ತನ್ನ ಮಗುವನ್ನು ಕುಳ್ಳಿರಿಸಿದ್ದನ್ನು ಮರೆತು ಬಿಟ್ಟಿದ್ದಾಳೆ. ನೆನಪಾದಾಗ ಓಡಿಹೋದ ಆಕೆಗೆ ಮಗು ಸುರಕ್ಷಿತವಾಗಿ ಸಿಕ್ಕಿದೆ.