ನೋಡುವುದಕ್ಕೆ ಹುಚ್ಚರಂತೆ ಕಂಡರು, ಇವರು ಹುಚ್ಚರಲ್ಲ, ಪ್ಲೀಸ್ ನಂಬಿ!

By Super

ನಮ್ಮ ಸುತ್ತಮುತ್ತಲಿನವರ ದೃಷ್ಟಿಯಲ್ಲಿ ಸುಂದರರಾಗಿ ಕಾಣಿಸಿಕೊಳ್ಳಬೇಕೆಂದು ಎಲ್ಲರೂ ಬಯಸುತ್ತಾರೆ. ಸಮಾಜದಲ್ಲಿ ಸಭ್ಯರಾಗಿರಲು ನಮ್ಮ ಉಡುಗೆ ತೊಡುಗೆಗಳೂ ಮುಖ್ಯ. ಕೆಲವರು ಇತರರ ಗಮನ ಥಟ್ಟನೇ ಸೆಳೆಯಲು ಕೆಲವು ವಿಧದಲ್ಲಿ ಅಲಂಕರಿಸಿಕೊಳ್ಳುತ್ತಾರೆ. ಚಿತ್ರವಿಚಿತ್ರ ಕೇಶವಿನ್ಯಾಸ, ಮುಖ-ತುಟಿಗಳಿಗೆ ಭಿನ್ನಬಣ್ಣವನ್ನು ಬಳಿದುಕೊಳ್ಳುವುದು, ಹೊಸ ವಿನ್ಯಾಸದ ಬಟ್ಟೆಗಳನ್ನು ತೊಡುವುದು ಇತ್ಯಾದಿಗಳನ್ನು ಅನುಸರಿಸುವುದನ್ನು ಕಾಣಬಹುದು. ವಿಚಿತ್ರ ಅಂಗಗಳನ್ನು ಹೊಂದಿರುವ ಮಾನವ ಶರೀರಗಳು

ಆದರೆ ಕೆಲವರು ಇದನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗಿ ತಮ್ಮ ದೇಹದ ಕೆಲವು ಭಾಗಗಳಿಗೆ ಶಾಶ್ವತವಾದ ಬಣ್ಣ ಅಥವಾ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ ಗಮನ ಸೆಳೆಯಲು ಯತ್ನಿಸುತ್ತಾರೆ. ಟ್ಯಾಟೂ ಮತ್ತು ತಮ್ಮ ಇಷ್ಟದ ಪ್ರಾಣಿಗಳ ರೂಪಕ್ಕೆ ರೂಪಾಂತರಗೊಳ್ಳುವುದು ಈ ವೈಪರೀತ್ಯದ ಕೆಲವು ಉದಾಹರಣೆಗಳು. ಇಡಿಯ ಮೈತುಂಬಾ ಪಿನ್ನು, ರಿಂಗುಗಳನ್ನು ಚುಚ್ಚಿಸಿಕೊಳ್ಳುವುದು, ಹಲ್ಲುಗಳನ್ನು ಚೂಪಾಗಿಸಿಕೊಳ್ಳುವುದು, ತಲೆಬುರುಡೆಯ ಚರ್ಮದ ಅಡಿ ಕೃತಕ ಕೋಡು, ಬೋಲ್ಟು ನಟ್ಟುಗಳನ್ನು ಅಳವಡಿಸಿಕೊಳ್ಳುವುದು ಸಹಾ ಇತರ ಉದಾಹರಣೆಗಳಾಗಿವೆ. ವರ್ಷಗಳೇ ಕಳೆದರೂ, ಇಲ್ಲಿನ ಶವಗಳು ಕೊಳೆಯುವುದಿಲ್ಲ!

ಇಂತಹ ಕೆಲವು ವಿಪರೀತವಾದ ದೈಹಿಕ ಮಾರ್ಪಾಡುಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲಾಗಿದೆ. ಒಂದು ಪ್ರಸಂಗದಲ್ಲಿ 99.2% ದಷ್ಟು ದೇಹದ ಭಾಗಕ್ಕೆ ಹಚ್ಚೆ ಹಾಕಿಸಿಕೊಂಡಿದ್ದರೆ ಇನ್ನೊಬ್ಬರು ಇಡಿಯ ಮೈತುಂಬಾ ಪಿನ್ನು ರಿಂಗುಗಳನ್ನು ಚುಚ್ಚಿಸಿಕೊಂಡಿದ್ದಾರೆ. ಇದನ್ನು ನೋಡುವಾಲೇ ನಮಗೇ ನೋವಾಗಿರುವಾಗ ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿರಬಹುದು, ಅಷ್ಟಕ್ಕೂ ಈ ನೋವಿನಿಂದ ಯಾವ ಸಂತೋಷ ಸಿಗುತ್ತದೆ ಎಂಬುದನ್ನು ಯೋಚಿಸಿದಾಗ ಅಚ್ಚರಿಯಾಗುತ್ತದೆ.

ಓಗರ್ ಎಂಬ ಮಾನವರೂಪಿ ರಾಕ್ಷಸ

ಓಗರ್ ಎಂಬ ಮಾನವರೂಪಿ ರಾಕ್ಷಸ

ಕೆಲವು ವರ್ಷಗಳ ಹಿಂದೆ ಅನಿಮೇಟೆಡ್ ಚಲನಚಿತ್ರಗಳ ಸರಣಿಯಲ್ಲಿ ಶ್ರೆಕ್ ಎಂಬ ಚಲನಚಿತ್ರ ಬಂದಿತ್ತು. ಶ್ರೆಕ್ ಎಂಬುದು ಮಾನವರೂಪಿ ರಾಕ್ಷಸನ ತಳಿಯಾಗಿದ್ದು ಹಸಿರು ಬಣ್ಣ ಮತ್ತು ಧಡೂತಿ ದೇಹ, ತುತ್ತೂರಿಯಂತಹ ಕಿವಿಯನ್ನು ಹೊಂದಿರುವ ಆಕೃತಿಯಾಗಿತ್ತು. ಈ ಆಕೃತಿಯನ್ನು ಬಹುವಾಗಿ ಹಚ್ಚಿಕೊಂಡ ವ್ಯಕ್ತಿಯೊಬ್ಬರು ಈ ರೂಪವನ್ನು ತಾವೇ ಧರಿಸಲು ಉತ್ಸುಕರಾಗಿ ಹಲವಾರು ಶಸ್ತ್ರಕ್ರಿಯೆಗಳಿಗೆ ಒಳಗಾಗಿ ತಮ್ಮ ರೂಪವನ್ನು ಬದಲಿಸಿಕೊಂಡರು. ತಲೆಬುರುಡೆಯ ಚರ್ಮದಡಿ ಸ್ಟೇನ್ಲೆಸ್ ಸ್ಟೀಲ್ ನ ಉಬ್ಬುಗಳು, ಕೆಲವು ಪಿನ್ನು, ರಿಂಗುಗಳು, ಮೂಗಿನ ಒಳಗಿನ ಚರ್ಮವನ್ನೂ ತೂರಿದ ಲಾಳ, ತಲೆಯ ಮೇಲೆ ಎರಡು ಚಿಕ್ಕ ಕೋಡುಗಳು ಮೊದಲಾದವು ಶ್ರೆಕ್ ನಂತಿಲ್ಲದಿದ್ದರೂ ಓರ್ವ ರಾಕ್ಷಸನ ರೂಪ ಧರಿಸಲು ಸಾಧ್ಯವಾಗಿದೆ. ಇವರು ನಡೆದಾಡಿದಲ್ಲೆಲ್ಲಾ ಜನರು ಇವರತ್ತ ಕುತೂಹಲದ ನೋಟ ಬೀರುತ್ತಿರುವುದನ್ನು ಕಂಡು ಸಂತುಷ್ಟರಾದರೂ ವಿಮಾನ ನಿಲ್ದಾಣದಲ್ಲಿ ಮಾತ್ರ ಲೋಹಶೋಧಕಗಳು ಇವರು ಬಂದಾಕ್ಷಣ ಬಹಳವೇ ಗಲಾಟೆ ಮಾಡುವುದು ಮಾತ್ರ ಸಹಿಸಲಸಾಧ್ಯವಾಗುತ್ತದೆ. Image courtesy

ಮೂಗಿನಡಿ ಕುದುರೆ ಲಾಳ

ಮೂಗಿನಡಿ ಕುದುರೆ ಲಾಳ

ಮೂಗಿನ ಎರಡೂ ಹೊಳ್ಳೆಗಳ ಚರ್ಮದಲ್ಲಿ ಚಿಕ್ಕ ತೂತು ಮಾಡಿ ಇದರ ಮೂಲಕ ಒಂದು ರಿಂಗ್ ಆಭರಣವನ್ನು ಧರಿಸುವುದು ನಮ್ಮ ಉತ್ತರ ಕರ್ನಾಟಕ, ಲಂಬಾಣಿ, ರಾಜಸ್ಥಾನದಲ್ಲಿ ಸಾಂಪ್ರದಾಯಿಕವಾಗಿದೆ. ಆದರೆ ಈ ರಿಂಗ್ ಕೊಂಚ ಭಾರವಾಗಿದ್ದರೆ? ಕೊಂಚ ಹೆಚ್ಚೇ ಭಾರವಾಗಿದ್ದರೆ? ಚರ್ಮವನ್ನು ಇನ್ನೇನು ಹಿಸಿದು ಕೆಳಕ್ಕೇ ಬೀಳುತ್ತದೆ ಎಂದಿದ್ದರೆ? ಓರ್ವ ಪುರುಷರು ಇದೇ ರೀತಿಯಲ್ಲಿ ತಮ್ಮ ಮೂಗಿನೊಳಕ್ಕೆ ಭಾರೀ ರಿಂಗ್ ಒಂದನ್ನು ತೂರಿಸಿಕೊಂಡಿದ್ದಾರೆ. ಊಟ ಹೇಗೆ ಮಾಡುತ್ತಾರೆ? ಒಂದು ವೇಳೆ ಸೀನು ಬಂದರೆ ಈ ರಿಂಗ್ ಅಡ್ಡಿಯಾಗುವುದಿಲ್ಲವೇ? ಇಂತಹ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಧ್ಯಕ್ಕೆ ಲಭ್ಯವಿಲ್ಲ. Image courtesy

ಇವರಿಗೆ ಕಪ್ಪೆಯಾಗಬೇಕಿತ್ತಂತೆ

ಇವರಿಗೆ ಕಪ್ಪೆಯಾಗಬೇಕಿತ್ತಂತೆ

ಕಪ್ಪೆ ಮತ್ತು ರಾಜಕುಮಾರಿ ಕಥೆಯನ್ನು ಕೇಳಿದ ಯಾರಿಗಾದರೂ ಒಂದು ಕ್ಷಣ ಆ ಕಪ್ಪೆ ನಾನಾಗಿರಬಾರದಿತ್ತೇ ಎನ್ನಿಸುವುದು ಸಹಜ. ಆದರೆ ಇಲ್ಲೊಬ್ಬರಿಗೆ ನಿಜವಾಗಿಯೂ ಆ ರೂಪ ಪಡೆಯಬೇಕು ಎನ್ನಿಸಿತ್ತು. ತಕ್ಷಣ ಟ್ಯಾಟೂ ಅಂಗಡಿಗೆ ಓಡಿ ಅಡ್ಡಾದಿಡ್ಡಿ ಹಚ್ಚೆಹಾಕಿಸಿ ನಾಲಿಗೆಗೊಂದು ತೂತು ಮಾಡಿ ಸ್ಟೇನ್ಲೆಸ್ ಸ್ಟೀಲಿನ ನಳಿಕೆಯನ್ನು ತೂರಿಸಿ ಎರಡೂ ಕಿವಿಗಳನ್ನು ಉದ್ದಕ್ಕೆ ಕೊಯ್ದು ಈ ನಳಿಕೆಗೆ ಸೇರಿಸಿ ಒಟ್ಟಾರೆ ಕಪ್ಪೆಯಂತೆ ಕಾಣಿಸಿಕೊಳ್ಳಲು ಸಫಲರಾಗಿದ್ದಾರೆ. ಇದಕ್ಕಾಗಿ ಕಿವಿಯ ಚರ್ಮವನ್ನು ಸೀಳಿದ್ದು ಎಷ್ಟು ದೊಡ್ಡದಾಗಿದೆ ಎಂದರೆ ಇಲ್ಲಿ ಒಂದು ಚಹಾ ಕಪ್ಪನ್ನು ಇರಿಸಬಹುದು ಅಥವಾ ಇಡಿಯ ಕೈಯನ್ನೇ ತೂರಿಸಿಕೊಳ್ಳಬಹುದು. Image courtesy

ಹಲ್ಲಿ ಮನುಷ್ಯ

ಹಲ್ಲಿ ಮನುಷ್ಯ

ಜೇಡ ಮನುಷ್ಯ ಅಥವಾ ಸ್ಪೈಡರ್ ಮ್ಯಾನ್ ಎಂಬ ಚಲನಚಿತ್ರದ ಪ್ರಭಾವವೋ ಏನೋ, ಹಲ್ಲಿಗಳನ್ನು ವಿಪರೀತವಾಗಿ ಹಚ್ಚಿಕೊಂಡಿದ್ದ ಎರಿಕ್ ಸ್ಪರಾಗ್ ಎಂಬುವರಿಗೆ ಹಲ್ಲಿಯಾಗುವ ಮನಸ್ಸಾಗಿತ್ತು. ಇಡಿಯ ಮೈತುಂಬಾ ಹಸಿರು ಹಚ್ಚೆ, ಹುಬ್ಬಿನಡಿ ಉಬ್ಬು ತಟ್ಟೆ, ಕೆಂಪುತುಟಿ ಮೊದಲಾದ ಮೂಲಕ ಹಲ್ಲಿಯ ರೂಪವನ್ನು ಪಡೆದ ಇವರಿಗೆ ಇದು ಒಂದು ಹವ್ಯಾಸವಲ್ಲ, ಜೀವನದ ಗುರಿಯೇ ಆಗಿದೆ. Image courtesy

ಬೆಕ್ಕಿನ ರೂಪ ತಾಳಿದ ಮನುಷ್ಯ

ಬೆಕ್ಕಿನ ರೂಪ ತಾಳಿದ ಮನುಷ್ಯ

ತಮ್ಮ ಸಾಕುಪ್ರಾಣಿಯನ್ನು ಎಷ್ಟೇ ಮೆಚ್ಚುವವರಾದರೂ ಅದರ ರೂಪ ತಾಳುವುದು ಮಾತ್ರ ಕೇಳರಿಯದ ವಿದ್ಯಮಾನ. ಆದರೆ ಡೆನ್ನಿಸ್ ಅವ್ನೆರ್ ಎಂಬುವರಿಗೆ ತಮ್ಮ ಬೆಕ್ಕನ್ನು ನೋಡಿದರೆ ಪಂಚಪ್ರಾಣವಾಗಿದ್ದು ತಮ್ಮ ರೂಪದಲ್ಲಿಯೂ ಬೆಕ್ಕಿನ ರೂಪವನ್ನು ಪಡೆಯಲು ಹವಣಿಸಿದರು. ಅಂತೆಯೇ ಶಸ್ತ್ರಚಿಕಿತ್ಸೆಯ ಮೂಲಕ ತಮ್ಮ ಮುಖ, ತಲೆಗಳಲ್ಲಿ ಬದಲಾವಣೆ ಹೊಂದಿ ಸರಿಸುಮಾರು ಬೆಕ್ಕಿನ ರೂಪವನ್ನು ಪಡೆದಿದ್ದಾರೆ. Image courtesy

ಜೀಬ್ರಾ ಮನುಷ್ಯ

ಜೀಬ್ರಾ ಮನುಷ್ಯ

ಸಾಮಾನ್ಯವಾಗಿ ಕಪ್ಪು ಬಿಳಿಪು ಪಟ್ಟೆ ಇರುವ ವಸ್ತುಗಳಿಗೆ ಜೀಬ್ರಾ ಎಂದೇ ಕರೆಯುತ್ತೇವೆ. ತಮ್ಮ ಮೈಗೂ ಕಪ್ಪುಬಣ್ಣದ ಭಾರೀ ವೃತ್ತಾಕಾರದ ವಿನ್ಯಾಸದ ಹಚ್ಚೆಗಳನ್ನು ಹಚ್ಚಿಕೊಂಡ ಹೋರಾಸ್ ರಿಡ್ಲರ್ ಎಂಬುವರಿಗೆ ಜೀಬ್ರಾ ಮ್ಯಾನ್ ಅಥವಾ ಜೀಬ್ರಾ ಮನುಷ್ಯನೆಂಬ ವಿಶೇಷಣ ದೊರಕಿದೆ. ಇವರಿಗೆ ಇಪ್ಪತ್ತು ವರ್ಷಗಳಾಗುವವರೆಗೂ ಸಾಮಾನ್ಯರೂಪ ಇದ್ದರೂ ಬಳಿಕ ಮನಸ್ಸಿಗೆ ಏನು ಹೊಳೆಯಿತೋ ಏನೋ, ಮೈತುಂಬಾ ಹಚ್ಚೆ ಹಾಕಿಸಿಕೊಳ್ಳತೊಡಗಿದರು. ಎಷ್ಟು ಎಂದರೆ ಇಡಿಯ ಮೈ ಆವರಿಸುವವರೆಗೆ. ತಮ್ಮ ಎಪ್ಪತ್ತೇಳನೇ ವಯಸ್ಸಿನಲ್ಲಿ ಇತ್ತೀಚೆಗೆ ಇವರು ತೀರಿಕೊಂಡರು. Image courtesy

ಹುಲಿಮಹಿಳೆ

ಹುಲಿಮಹಿಳೆ

ಎಲ್ಲಾ ವಿಷಯದಲ್ಲಿ ಪುರುಷರಿಗೆ ಸರಿಸಮನಾಗಿರುವ ಮಹಿಳೆಯರು ಇಲ್ಲಿ ಹಿಂದುಳಿದರೆ ಹೇಗೆ? ಟೆಕ್ಸಾಸ್ ನ ಕ್ಯಾಟ್ಜೆನ್ ಹಾಬ್ಸ್ ಎಂಬ ಮಹಿಳೆ ತಮ್ಮ ನಿಜನಾಮಕ್ಕಿಂತಲೂ ಟೈಗರ್ ಲೇಡಿ ಎಂದೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಏಕೆಂದರೆ ಹುಲಿಯಂತೆ ಕಾಣುವುದು ಇವರ ಹೆಬ್ಬಯಕೆಯಾಗಿದ್ದು ಐದು ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ಹುಲಿಯಂತಹ ಮೀಸೆ ಹೊಂದಲು ಬಯಸಿದ್ದರು. ಆ ದಿನಗಳಲ್ಲಿ ಹಚ್ಚೆ ಎಂಬುದೂ ಆಕೆಗೆ ಗೊತ್ತಿರಲಿಲ್ಲ. ಯಾವಾಗ ಇದು ಗೊತ್ತಾಯಿತೋ ಆಗ ಅವರ ಬಯಕೆ ಈಡೇರಿಸಲು ಯಾವ ತಡೆಯೂ ಇರಲಿಲ್ಲ. ಮೈಗೆ ಹುಲಿಯಂತೆ ಪಟ್ಟೆಗಳನ್ನು ಹಚ್ಚಿಸಿಕೊಂಡು ಹುಲಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಾರಿಗೂ ಹುಲಿಯ ಪಟ್ಟೆಯಂತೆ ಪೇಂಟ್ ಮಾಡಿಸಿ ಊರಿನಲ್ಲೆಲ್ಲಾ ತಿರುಗಾಡುತ್ತಾರೆ. Image courtesy

ಚಿರತೆ ಮಾನವ

ಚಿರತೆ ಮಾನವ

ಸ್ಕಾಟ್ಲಾಂಡಿನ ಟಾಮ್ ಲೆಪ್ಪಾರ್ಡ್ ಎಂಬ ಹೆಸರಿನ ಈ ವ್ಯಕ್ತಿಗೆ ಏಕಾಂತವಾಗಿ ಬದುಕುವ ಬಯಕೆ ಮೂಡಿತ್ತು. ಏಕಾಂತದಲ್ಲಿ ಬದುಕುವುದು ಇನ್ನೂ ಹೆಚ್ಚಿನ ಜನರ ಬಯಕೆಯಾಗಿರಬಹುದು. ಆದರೆ ಇವರಿಗೆ ಚಿರತೆಯಂತೆ ಏಕಾಂಗಿಯಾಗಿ ಬದುಕಬೇಕು ಎಂಬ ಬಯಕೆ ಮೂಡಿತ್ತು. ಅಂತೆಯೇ ಇಡಿಯ ಮೈತುಂಬಾ ಅಂದರೆ 99.0%ಕ್ಕೂ ಹೆಚ್ಚು ಭಾಗವನ್ನು ಚಿರತೆಯಂತೆ ಹಚ್ಚೆ ಹಚ್ಚಿಸಿಕೊಂಡು ಸ್ಕೈ (Skye) ಎಂಬ ಜನರಹಿತ ದ್ವೀಪವೊಂದರಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದಾರೆ. 2006ರವರೆಗೂ ಅತಿ ಹೆಚ್ಚಿನ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡ ಗಿನ್ನಿಸ್ ದಾಖಲೆಯೂ ಇವರ ಹೆಸರಿನಲ್ಲಿಯೇ ಇತ್ತು. Image courtesy

English summary

Weirdest Body Transformations People Have Done

There are many things that we have always wished to do. Things like having a belly piercing or getting inked are some of the wishes we all have had at some point or the other in our lives. However, do you realise that there are certain people out there who have gone to the extreme level to transform themselves to either look like their favourite animal or cartoon? So, find out more about these interesting, and a few disgusting, cases of people who have damaged their beautiful bodies just for the sake of their weird passion. Check em' out!
X
Desktop Bottom Promotion