Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾರೇ ಕೂಗಾಡಲಿ, ಚೀನಾದ ಜನರು ಇರುವುದೇ ಹೀಗೆ!
ಪ್ರಾಚೀನ ಪರಂಪರೆಯನ್ನು ಇಂದೂ ಉಳಿಸಿಕೊಂಡು ಬಂದಂತಹ ಎರಡು ರಾಷ್ಟ್ರಗಳೆಂದರೆ ಭಾರತ ಮತ್ತು ಚೀನಾ. ತನ್ನ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ನಿಭಾಯಿಸಲು ಚೀನಾ ಕೈಗೊಂಡ ಹಲವು ಕ್ರಮಗಳ ಪರಿಣಾಮವಾಗಿ ಇಂದು ವಿಶ್ವದ ಮಾರುಕಟ್ಟೆಯಲ್ಲಿ ಅಗ್ಗದ ವಸ್ತುಗಳು ಹಲವು ಗುಣಮಟ್ಟಗಳಲ್ಲಿ ದೊರಕುತ್ತವೆ. ಒಂದು ಮಾಹಿತಿಯ ಪ್ರಕಾರ ಚೀನಾದಲ್ಲಿ ಇಪ್ಪತ್ತು ಮಟ್ಟದ ಅಂದರೆ ಉತೃಷ್ಟದಿಂದ ಅತ್ಯಂತ ಕಳಪೆ ಮಟ್ಟದವರೆಗೆ ಇಪ್ಪತ್ತು ಮಟ್ಟದ ವಸ್ತುಗಳನ್ನು ತಯಾರಿಸಲಾಗುತ್ತಿದೆ.
ಅಮೇರಿಕಾ ಗಲ್ಫ್‌ಗಳಿಗೆ ಉತ್ತಮ ಗುಣಮಟ್ಟದ ವಸ್ತುಗಳು ರಫ್ತಾದರೆ ಭಾರತದಂತಹ ದೇಶಗಳಿಗೆ ಹದಿನೈದರ ಬಳಿಕದ ಗುಣಮಟ್ಟದ ವಸ್ತುಗಳು ತಯಾರಾಗುತ್ತವೆ. ಅಗ್ಗ ಮತ್ತು ಸುಂದರ ಎಂಬ ಎರಡು ಕಾರಣಗಳಿಗೆ ಭಾರತದಲ್ಲಿ ಚೀನಾದ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತವೆ. ಇದೇ ಕಾರಣಕ್ಕೆ ಭಾರತೀಯ ವಸ್ತುಗಳು ಗ್ರಾಹಕರಿಗೆ ಮೊದಲಿನಷ್ಟು ಸುಲಭವಾಗಿ ತಲುಪುತ್ತಿಲ್ಲ. ಚೀನಾ ದೇಶವನ್ನು ಇನ್ನೊಂದು ದೃಷ್ಟಿಯಿಂದ ನೋಡಿದರೆ ಇದೊಂದು ಸುಂದರ, ಸಾಂಪ್ರಾದಾಯಿಕ ಮತ್ತು ಸರಳ ವ್ಯಕ್ತಿಗಳಿಂದ ಕೂಡಿದ ದೇಶವಾಗಿದೆ. ವಿಷಭರಿತ ಚೀನಾ ಆಹಾರಗಳು ಮಾರುಕಟ್ಟೆಗೆ ಬಂದುಬಿಟ್ಟಿವೆ!
ವಿಶ್ವದ ಅತಿ ಹೆಚ್ಚು ಮಾತನಾಡುವ ಭಾಷೆ-ಮಂಡಾರಿನ್, ಒಂದೇ ಅಕ್ಷರದ ಉಚ್ಚಾರಣೆಯ ಕೊಂಚವೇ ವ್ಯತ್ಯಾಸದಲ್ಲಿ ಮೂಡುವ ಭಿನ್ನ ಭಾವನೆಗಳು, ನೋಡಲು ಒಂದೇ ರೀತಿ ಇರುವ ಕಿರಿಯ ಕಣ್ಣುಗಳ ವ್ಯಕ್ತಿಗಳು, ಉಚ್ಚರಿಸಲು ಒಂದೇ ತರಹ ಇರುವ ಹೆಸರುಗಳು, ಅತಿ ಪ್ರಾಚೀನ, ಆದರೆ ಇಂದಿಗೂ ಫಲಪ್ರದವಾಗಿರುವ ಆರೋಗ್ಯ ವಿಧಾನಗಳು, ಬುದ್ಧಿಮತ್ತೆಯ ವಿಷಯದಲ್ಲಿ ಕಂಡುಬರುವ ಆಗಾಧ ಬುದ್ಧಿಮತ್ತೆ, ಕ್ರೀಡಾಲೋಕದಲ್ಲಿ ಬಾಚಿಕೊಳ್ಳುವ ಪದಕಗಳು, ಇಂತಹ ಹಲವಾರು ವಿಷಯಗಳು ಚೀನಾದ ಬಗ್ಗೆ ಕುತೂಹಲ ಮೂಡಿಸುತ್ತವೆ. ಆದರೆ ಇದಕ್ಕೂ ಹೊರತಾಗಿ ಚೀನಾದ ಬಗ್ಗೆ ಇರುವ ಹಲವಾರು ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ.... ಇನ್ನು ಮುಂದೆ ಟೀ ಕುಡಿಯುತ್ತಾ ಚೀನಾದ ವಸ್ತುಗಳನ್ನು ದೂರಬೇಡಿ!

ಮತ್ತೆ ಪಡೆದುಕೊಳ್ಳುವ ಕನ್ಯತ್ವ
ಚೀನಾದಲ್ಲಿಯೂ ಭಾರತದಂತೆಯೇ ಕನ್ಯತ್ವಕ್ಕೆ ಬಹಳ ಬೆಲೆ ಮತ್ತು ಪ್ರಾಮುಖ್ಯತೆ ಇದೆ. ಆದರೆ ಯೌವನದ ಆಕರ್ಷಣೆಯಿಂದ ಕನ್ಯತ್ವ ಕಳೆದುಕೊಂಡರೆ ಚೀನೀ ಯುವತಿಯರು ದಿಕ್ಕೆಡುವುದಿಲ್ಲ. ಬದಲಿಗೆ ನೇರವಾಗಿ ಪ್ಲಾಸ್ಟಿಕ್ ಸರ್ಜನ್ ರ ಬಳಿ ಧಾವಿಸುತ್ತಾರೆ. ಕೊಂಚ ಹೆಚ್ಚೇ ಹಣ ತೆತ್ತು ಮತ್ತೊಮ್ಮೆ ಕನ್ಯೆಯಾಗುತ್ತಾರೆ...!

ಮೂತ್ರದಲ್ಲಿ ಬೇಯಿಸುವ ಮೊಟ್ಟೆ
ಹತ್ತು ವರ್ಷಕ್ಕೂ ಕಿರಿಯ ಬಾಲಕರ ಮೂತ್ರವನ್ನು ವ್ಯರ್ಥವಾಗದಂತೆ ಸಂಗ್ರಹಿಸಲಾಗುತ್ತದೆ. ಈ ಮೂತ್ರದಲ್ಲಿ ಮೊಟ್ಟೆಗಳನ್ನು ಬೇಯಿಸಿ ಬಳಿಕ ಸೇವಿಸಲಾಗುತ್ತದೆ. ಈ ಮೊಟ್ಟೆಗಳಿಗೆ ಆರೋಗ್ಯವರ್ಧಕ ಗುಣಗಳಿವೆ ಎಂದು ಚೀನೀಯರು ನಂಬುತ್ತಾರೆ.

ಎಲ್ಲೆಂದರಲ್ಲಿ ಮಲಗುವುದು
ಚೀನಾದಲ್ಲಿ ಮಧ್ಯಾಹ್ನದ ಊಟವಾದ ಬಳಿಕ ಕೊಂಚಕಾಲ ಮಲಗುವುದು ಕಡ್ಡಾಯವಾಗಿದೆ. ಶಾಲೆಗಳಲ್ಲಿಯೂ ಅರ್ಧ ಗಂಟೆ ಮಲಗಲು ಸಮಯಾವಕಾಶ ನೀಡಲಾಗುತ್ತದೆ. ಚೀನೀಯರಿಗೆ ಇದಕ್ಕಾಗಿ ಮನೆಗೇ ಬರಬೇಕಾಗಿಲ್ಲ, ಹಾಸಿಗೆಯೇ ಬೇಕೆಂದಿಲ್ಲ, ಎಲ್ಲಿದ್ದಾರೋ ಅಲ್ಲಿಯೇ, ಅಂದರೆ ಪಾರ್ಕುಗಳು, ರಸ್ತೆಬದಿ, ಮೆಟ್ಟಿಲ ಕೆಳಗೆ, ಒಟ್ಟಾರೆ ಎಲ್ಲಿ ಸ್ಥಳಾವಕಾಶ ಸಿಕ್ಕಿತೋ ಅಲ್ಲೇ ಮಲಗಿಬಿಡುತ್ತಾರೆ.

ಶ್ವಾನಮಾಂಸಪ್ರಿಯರು
ಶ್ವಾನ ಮಾಂಸವೆಂದರೆ ಚೀನೀಯರಿಗೆ ಪ್ರಿಯವಾದ ಆಹಾರವಾಗಿದೆ. ಅಷ್ಟೇ ಅಲ್ಲ, ಈ ಮಾಂಸ ತಿನ್ನಲು ಒಂದು ಹಬ್ಬವೂ ಇದೆ. ಶ್ವಾನದ ಮಾಂಸ, ಅದರಲ್ಲೂ ಕಪ್ಪುನಾಯಿಯ ಮಾಂಸ ಅತಿ ಹೆಚ್ಚು ಪ್ರಿಯವಾಗಿದೆ. ಇದರಿಂದ ಉತ್ತಮ ಆರೋಗ್ಯ ಮತ್ತು ಅದೃಷ್ಟಕರ ಎಂದು ಭಾವಿಸುತ್ತಾರೆ.

ಪ್ರಿಯಕರ ಬಾಡಿಗೆಗೆ ಲಭ್ಯ!
ಚೀನಾದಲ್ಲಿ ಪ್ರತಿ ಮಹಿಳೆಯ ಬಳಿ ಅನೈತಿಕವಾದ ವ್ಯವಹಾರ ಇರದಿದ್ದರೆ ಇದನ್ನೊಂದು ಅಪಶಕುನದಂತೆ ನೋಡಲಾಗುತ್ತದೆ. ಏಕೆಂದರೆ ಪ್ರತಿ ಚಾಂದ್ರಮಾನ ವರ್ಷದಲ್ಲಿ ಒಂದಾದರೂ ತಪ್ಪು ಕಂಡುಬರದೇ ಇದ್ದರೆ ಅವರನ್ನು ಕಳಂಕ ಅಂಟಿಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರಿಯಕರ ಬಾಡಿಗೆಗೆ ಲಭ್ಯ!
ಆದ್ದರಿಂದ ಪತಿವ್ರತೆಯರೂ ಅನಿವಾರ್ಯವಾಗಿ ತಮ್ಮ ಪ್ರಿಯಕರ ಅಥವಾ ಪತಿಯನ್ನು ಬೇರೆಯವರಿಗೆ ಬಾಡಿಗೆಯ ರೂಪದಲ್ಲಿ ನೀಡುತ್ತಾರೆ. ಇದರಿಂದ ಕೃತಕವಾಗಿ ಅಪವಾದ ಬರುವಂತೆ ಮಾಡಿ ಕಳಂಕದಿಂದ ಪಾರಾಗುತ್ತಾರೆ.

ಮಕ್ಕಳನ್ನು ಪಡೆಯಲೂ ಅನುಮತಿ ಅಗತ್ಯ
ಎಷ್ಟೋ ವರ್ಷಗಳವರೆಗೆ ಚೀನಾದಲ್ಲಿ ದಂಪತಿಗಳಿಗೆ ಒಂದೇ ಮಗುವಿನ ಕಾನೂನಿತ್ತು. ಈಗ ಇದನ್ನು ಸಡಿಲಿಸಿ ಎರಡು ಮಕ್ಕಳಿಗೆ ಅವಕಾಶ ನೀಡಲಾಗಿದೆ. ಆದರೆ ದಂಪತಿಗಳು ತಮ್ಮ ಮನಸ್ಸಿಗೆ ತೋಚಿದಂತೆ ಮಕ್ಕಳನ್ನು ಪಡೆಯುವಂತಿಲ್ಲ. ಯಾವಾಗ ಮಗು ಬೇಕೆಂದು ಅನ್ನುಸುತ್ತದೆಯೋ ಅದಕ್ಕೂ ಮೂರು ತಿಂಗಳ ಮುನ್ನ ಸರ್ಕಾರಕ್ಕೆ ಅರ್ಜಿ ಬರೆದು ಕೊಟ್ಟು ಅವಕಾಶ ಪಡೆದುಕೊಳ್ಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಕ್ಕಳನ್ನು ಪಡೆಯಲೂ ಅನುಮತಿ ಅಗತ್ಯ
ಸರ್ಕಾರ ಬಳಿಕ ಈ ಅರ್ಜಿಗಳನ್ನು ಪರಿಶೀಲಿಸಿ ಎಷ್ಟು ಹೆರಿಗೆ ಆಸ್ಪತ್ರೆಗಳಲ್ಲಿ ಮತ್ತು ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಅನುಮತಿ ನೀಡುತ್ತದೆ. ಅನುಮತಿ ಪಡೆದ ದಂಪತಿಗಳು ಮಾತ್ರ ಸಂಸರ್ಗದಲ್ಲಿ ಮುಂದುವರೆಯಬಹುದು. ಉಳಿದವರಿಗೆ ಇದು ಶಿಕ್ಷಾರ್ಹ ಅಪರಾಧವಾಗಿದೆ.

ಮಕ್ಕಳಿಗೆ ಹಿಂದೆ ತೆರೆದ ಪ್ಯಾಂಟ್
ಮಕ್ಕಳು ಯಾವಾಗ ಬೇಕಾದರೂ ಪ್ಯಾಂಟ್ ಕಳಚದೇ ಶೌಚಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹಿಂಭಾಗದ ಹೊಲಿಗೆಯನ್ನು ತೆರೆದಿಡಲಾಗುತ್ತದೆ. ಮಕ್ಕಳ ಪ್ಯಾಂಟುಗಳು ಹಿಂದಿನಿಂದ ತೆರೆದಿದ್ದು ಯಾವಾಗ ಬೇಕಿದ್ದರೂ ಶೌಚಕ್ಕೆ ನೇರವಾಗಿ ಹೋಗಬಹುದು. ಇಡಿಯ ದೇಶದ ಮಕ್ಕಳಲ್ಲಿ ಇದು ಸಾಮಾನ್ಯವಾಗಿದೆ.



Click it and Unblock the Notifications











