Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಬಂಧದ ನಡುವೆ ತಳುಕು ಹಾಕಿಕೊಂಡಿರುವ ಕಟು ಸತ್ಯ
ಎರಡು ಜೀವಗಳು ಪರಸ್ಪರ ಆಕರ್ಷಿತವಾಗಿ ಒಂದು ಸಂಬಂಧಕ್ಕೆ ಒಳಪಡುವ ಮುನ್ನ ಹಲವಾರು ಅಚ್ಚರಿಯ ಬದಲಾವಣೆಗಳಾಗುತ್ತವೆ. ಈ ಸಂಬಂಧ ಹಲವು ಹೊಸ ಸಂಗತಿಗಳನ್ನು ಕಲಿಸುತ್ತದೆ. ಆದರೂ ಸಂಬಂಧದಲ್ಲಿ ಕೆಲವು ರಹಸ್ಯಮಯ ಮತ್ತು ಅರ್ಥವಾಗದ ಸಂಗತಿಗಳೂ ಇರುತ್ತವೆ. ದಿನಗಳೆದಂತೆ ಪಕ್ವವಾಗುವ ಮನಸ್ಸಿನ ಕಾರಣ ಸಂಬಂಧದಲ್ಲಿಯೂ ಕೆಲವು ಒಡಕುಗಳನ್ನು ಕಂಡುಕೊಳ್ಳುತ್ತದೆ. ಸಮಯ ಕಳೆದಂತೆ ಯುವಜನಾಂಗವೂ ಹಿಂದಿನ ತಲೆಮಾರು ಪಡೆಯದಿದ್ದ ಹಲವು ಹೊಸರೂಪಗಳನ್ನು ಸ್ವರೂಪಗಳನ್ನು ಪಡೆಯುತ್ತಾ ಹೋಗುತ್ತದೆ.
ವಯಸ್ಸಿಗೆ ಬಂದ ಪ್ರತಿ ಯುವಕ ಮತ್ತು ಯುವತಿ ಪರಸ್ಪರ ಆಕರ್ಷಿತರಾಗಿ ಸಂಬಂಧಕ್ಕೆ ಒಳಪಡಲು ಇಚ್ಛಿಸುತ್ತಾರೆ. ಇದಕ್ಕೆ ಪ್ರೇಮ, ಪ್ರೀತಿ ಎಂಬ ವ್ಯಾಖ್ಯಾನ ನೀಡಬಹುದಾದರೂ ಹೆಚ್ಚಿನವರು ಪ್ರಣಯದತ್ತ ಹೆಚ್ಚಿನ ಒಲವು ತೋರುತ್ತಾರೆ. ಪರಸ್ಪರ ವಿಶ್ವಾಸ ಪಡೆದ ಜೋಡಿ ಪ್ರೀತಿಯಲ್ಲಿ ಬೆಸೆದು ವಿವಾಹಬಂಧನಕ್ಕೊಳಗಾಗುವ ಮೂಲಕ ಜೀವನಪರ್ಯಂತ ಜೊತೆಯಾಗಿ ಬಾಳುವ ಪಣ ತೊಡುತ್ತಾರೆ. ಒಂಟಿಯಾಗಿರಲು ಯಾರೂ ಬಯಸುವುದಿಲ್ಲ. ಅಲ್ಲದೇ ಒಂಟಿಯಾಗಿರುವುದು ನಿಸರ್ಗನಿಯಮಕ್ಕೆ ವಿರುದ್ದ ಸಹಾ. ಬನ್ನಿ ಆರೋಗ್ಯಕರ ಮತ್ತು ಸುಖಕರ ಸಂಬಂಧದ ಕುರಿತಾದ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ವಾಸ್ತವಾಂಶ # 1
ಒಂದು ಸಂಶೋಧನೆಯ ಪ್ರಕಾರ ಒಂಟಿಯಾಗಿದ್ದವರು ಸಂಬಂಧದಲ್ಲಿದ್ದರೆ ಸುಖಕರ ಎಂದೂ ಸಂಬಂಧದಲ್ಲಿದ್ದವರು ಒಂಟಿಯಾಗಿದ್ದರೇ ಸುಖಕರ ಎಂದು ಭಾವಿಸುತ್ತಾರೆ.

ವಾಸ್ತವಾಂಶ #2
35% ರಷ್ಟು ಸಂಬಂಧದಲ್ಲಿರುವ ಪುರುಷರು ಯಾವಾಗ ಈ ಸಂಬಂಧ ಗಟ್ಟಿಗೊಳ್ಳುತ್ತಾ ಸಾಗುತ್ತದೋ ಆಗ ನಿಧಾನವಾಗಿ ನುಣುಚಿಕೊಳ್ಳಲು ಯತ್ನಿಸುತ್ತಾರೆ.

ವಾಸ್ತವಾಂಶ #3
ಒಂದುವೇಳೆ ಸಂಬಂಧ ವಿಫಲವಾದರೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ವ್ಯಾಕುಲರಾಗುತ್ತಾರೆ. ಏಕೆಂದರೆ ಮನಸ್ಸಿನ ಭಾವನೆಗಳನ್ನು ಪುರುಷರಿಗಿಂತ ಮಹಿಳೆಯರೇ ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಬಲ್ಲರು. ಹೆಚ್ಚಿನ ಪುರುಷರು ತಮ್ಮ ಭಾವನೆಗಳನ್ನು ಹೊರಗೆಡವಲು ಕಷ್ಟಪಡುತ್ತಾರೆ.

ವಾಸ್ತವಾಂಶ #4
ಒಂದು ವೇಳೆ ತಮ್ಮ ಆಯ್ಕೆಯ ಪುರುಷನನ್ನು ಮನೆಯವರು, ಸ್ನೇಹಿತರು ಮತ್ತು ಹಿತೈಷಿಗಳು ಒಪ್ಪದೇ ಇದ್ದರೆ ಸುಮಾರು 40% ರಷ್ಟು ಮಹಿಳೆಯರು ತಮ್ಮ ಆಯ್ಕೆಯನ್ನು ಬಿಟ್ಟುಬಿಡಲು ತಯಾರಾಗುತ್ತಾರೆ.

ವಾಸ್ತವಾಂಶ #5
ಇನ್ನೊಂದು ಸಮೀಕ್ಷೆಯ ಪ್ರಕಾರ ಮನೆಯಿಂದ ಕೆಲಸಕ್ಕೆ ಹೊರಡುವ ಮೊದಲು ತಮ್ಮ ಪತ್ನಿಯನ್ನು ಚುಂಬಿಸಿ ಹೊರಟವರು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಅತಿ ಕಡಿಮೆ.

ವಾಸ್ತವಾಂಶ #6
ಆನ್ಲೈನ್ ಡೇಟಿಂಗ್‌ನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ನೋಡಲು ಸಾಧ್ಯವಿಲ್ಲದಾಗ ಇಬ್ಬರಿಗೂ ಅತ್ತ ಕಡೆಯ ವ್ಯಕ್ತಿ ಆನ್ಲೈನ್ ತಾಣದಲ್ಲಿ ಹಾಕಿದ ಫೋಟೋ ಪ್ರಕಾರ ಇಲ್ಲವೆಂದು ಗೊತ್ತಿರುತ್ತದೆ. ಆದರೂ ಡೇಟಿಂಗ್ ಮುಂದುವರೆಸುತ್ತಾರೆ. ಮಹಿಳೆಯರಿಗೆ ಅತ್ತ ಕಡೆ ಇರುವ ವ್ಯಕ್ತಿ ಸರಣಿ ಕೊಲೆಗಾರ ಆಗಿರಬಹುದು ಎಂಬ ಆತಂಕ ಕಾಡಿದರೆ ಪುರುಷರಿಗೆ ಇತ್ತ ಫೋಟೋದಲ್ಲಿದ್ದಕ್ಕೂ ವ್ಯತಿರಿಕ್ತವಾಗಿ ಧಡೂತಿ ಮಹಿಳೆ ಇದ್ದಿರಬಹುದು ಎಂಬ ಆತಂಕ ಕಾಡುತ್ತದೆ.

ವಾಸ್ತವಾಂಶ #7
ಮೊದಲ ಭೇಟಿಯಲ್ಲಿ ಒಂದು ವೇಳೆ ಮಹಿಳೆ ಪುರುಷನನ್ನು ಇಷ್ಟಪಟ್ಟರೆ ಆಕೆ ಆತನ ಚಿಕ್ಕಪುಟ್ಟ ನಗೆಹನಿಗಳಿಗೂ ನಗುತ್ತಾಳೆ, ಕೆನ್ನೆ ಕೆಂಪಗಾಗುತ್ತದೆ ಮತ್ತು ಮುಂದಕ್ಕೆ ಬಾಗುವುದು, ಮುಂಗುರುಳನ್ನು ತಿರುವುತ್ತಿರುವುದು ಮೊದಲಾದವು ಅನೈಸ್ಛಿಕವಾಗಿ ನಡೆಯುತ್ತದೆ.

ವಾಸ್ತವಾಂಶ #8
ಒಂದು ವೇಳೆ ಪ್ರಥಮ ಭೇಟಿಯನ್ನು ಮಹಿಳೆ ಇಷ್ಟಪಡದೇ ಇದ್ದರೆ ಆಕೆ ಪದೇ ಪದೇ ಸಮಯ ನೋಡಿಕೊಳ್ಳುತ್ತಿರುವುದು, ಯಾವುದೇ ಭಾವನೆಯಿಲ್ಲದೇ ದುರುಗುಟ್ಟುವುದು, ಕ್ಷಿಪ್ರವಾದ ಉತ್ತರ ನೀಡುವುದು ಮತ್ತು ಕೃತಕ ನಗೆ ಬೀರುವುದು ಮೊದಲಾದ ಚರ್ಯೆಗಳು ಕಂಡುಬರುತ್ತವೆ.



Click it and Unblock the Notifications
