For Quick Alerts
ALLOW NOTIFICATIONS  
For Daily Alerts

ಇಂತಹ ವಿಚಿತ್ರ ಹೋಟೆಲ್‌ಗಳಲ್ಲಿ ಊಟ ಮಾಡಿದವರೇ ಧನ್ಯರು!!

By Arshad
|

ಹೋಟೆಲುಗಳು ಎಂದಾಕ್ಷಣ ನಮಗೆ ಪ್ರಿಯವಾದ ಹೋಟೆಲುಗಳೇ ನೆನಪಿಗೆ ಬರುತ್ತವೆ. ಹೋಟೆಲುಗಳ ಬಗ್ಗೆ ಪ್ರೊ.ಅ.ರಾ ಮಿತ್ರರವರು ಎಷ್ಟೋ ವರ್ಷಗಳ ಹಿಂದೆ ಬರೆದಿದ್ದ ಪ್ರಬಂಧಕ್ಕೂ ಇಂದಿನ ಹೋಟೆಲುಗಳಿಗೂ ಎಷ್ಟೋ ವ್ಯತ್ಯಾಸವಿದೆ. ಅಂದು ಹಣ ಹೆಚ್ಚು ತೆತ್ತು ಕಡಿಮೆ ಪ್ರಮಾಣ ತಿನ್ನಬೇಕಾಗಿತ್ತು.

ಆದರೆ ಇಂದು ಪ್ರಮಾಣ ಕಡಿಮೆಯೇನೂ ಆಗುವುದಿಲ್ಲ, ಬದಲಿಗೆ ಅಗತ್ಯಕ್ಕಿಂತಲೂ ಕೊಂಚ ಹೆಚ್ಚೇ ಅನ್ನಿಸುವಷ್ಟು ಬಡಿಸಿ ಇದಕ್ಕೆ ದುಬಾರಿ ಹಣವನ್ನು ದೋಚುವುದೇ ಆಧುನಿಕ ಹೋಟೆಲುಗಳ ಕಾರ್ಯವಿಧಾನವಾಗಿದೆ. ಆದರೆ ದುಬಾರಿಯಾದರೂ ಜನರು ಕುರಿಸಂತೆಯಂತೆ ಅತ್ತ ನುಗ್ಗಲು ಕಾರಣ ಈ ಹೋಟೆಲುಗಳು ಕಾಪಾಡುವ ಸ್ವಚ್ಛತೆ, ರುಚಿ, ದುಬಾರಿ ಪೀಠೋಪಕರಣಗಳು, ತಟ್ಟೆಲೋಟಗಳು, ಮತ್ತು ಮುಖ್ಯವಾಗಿ ಇಂತಹ ದೊಡ್ಡ ಹೋಟೆಲಿನಲ್ಲಿ ಊಟ ಮಾಡಿದೆವು ಎಂದು ಹೇಳಿಕೊಳ್ಳುವ ದೊಡ್ಡಸ್ತಿಕೆ. ಇಂತಹ ಚಿತ್ರ ವಿಚಿತ್ರ ಐಷಾರಾಮಿ ಹೋಟೆಲ್‌ಗೆ ಬೆರಗಾಗಲೇಬೇಕು!

ಆದರೆ ವಿಶ್ವದ ಕೆಲವು ಹೋಟೆಲುಗಳು ಇನ್ನೂ ಒಂದು ಹೆಚ್ಚು ಮುಂದೆ (ಅಥವಾ ಹಿಂದೆ) ಹೋಗಿ ಗ್ರಾಹಕರಿಗೆ ಇನ್ನೂ ಭಿನ್ನವಾದ ಅನುಭವವನ್ನು ನೀಡುತ್ತಿವೆ. ಉದಾಹರಣೆಗೆ ನಮ್ಮ ಬೆಂಗಳೂರಿನಲ್ಲಿಯೇ ಇರುವ ಚಿನ್ನದ ದೋಸೆ ತಿನ್ನಿಸುವ ಹೋಟೆಲು...!!ರೂ. 1,011ಕ್ಕೆ ಮಲೇಶ್ವರಂ ಹದಿನೈದನೇ ಕ್ರಾಸಿನಲ್ಲಿ ಚಿನ್ನದ ಲೇಪನ ಹೊಂದಿರುವ ದೋಸೆ ಸಿಗುತ್ತದೆ. ಇದು ಒಂದು ಹೆಜ್ಜೆ ಮುಂದೆ ಆಯಿತು. ಒಂದು ಹೆಜ್ಜೆ ಹಿಂದೆ ಅಂದರೆ? ಅರ್ಥವಾಗಲಿಲ್ಲವೇ? ಕೆಳಗಿನ ಸ್ಲೈಡ್ ಷೋ ಮೂಲಕ ನೀಡಿರುವ ಈ ರೆಸ್ಟೋರೆಂಟುಗಳ ಬಗ್ಗೆ ಓದಿದ ಬಳಿಕ ತನ್ನಿಂತಾನೇ ಅರ್ಥವಾಗುತ್ತದೆ. ನೀರಿನಾಳದ ಈ ಹೋಟೆಲ್‌ಗಳು, ವಿಶ್ವದ ನೂತನ ಅದ್ಭುತಗಳು

ಈ ಹೋಟೆಲುಗಳಲ್ಲಿ ಬಡಿಸುವುದು ಮಾತ್ರ ಜನಸಾಮಾನ್ಯರು ಊಹಿಸದೇ ಇರುವ ಖಾದ್ಯಗಳು ಎಂದು ಮೊದಲೇ ಹೇಳಿಬಿಡುತ್ತೇವೆ. ಆದ್ದರಿಂದ ಮುಂದಿನ ಭಾರಿ ಈ ಹೋಟೆಲುಗಳಿರುವ ಊರಿಗೆ ಭೇಟಿ ನೀಡಿದರೆ ಈ ಹೋಟೆಲಿನ ಊಟದ ರುಚಿ ನೋಡುವುದು ಬಿಡುವುದು ಕೇವಲ ನಿಮ್ಮ ಆಯ್ಕೆ.

ಹಾಸ್ಟೆಲಿನ ಸಾಮಾನ್ಯ ಕೋಣೆಯೇ ಲಕ್ಶುರಿ ರೆಸ್ಟೋರೆಂಟ್

ಹಾಸ್ಟೆಲಿನ ಸಾಮಾನ್ಯ ಕೋಣೆಯೇ ಲಕ್ಶುರಿ ರೆಸ್ಟೋರೆಂಟ್

ಅಮೇರಿಕಾದ ಕೊಲುಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರಿಗೆ ತಾವು ವಾಸವಾಗಿರುವ ಕೋಣೆಯಲ್ಲಿಯೇ ಒಂದು ಹೋಟೆಲು ತೆರೆಯುವ ಐಡಿಯಾ ಬಂದಿತ್ತು. ಈ ಕೋಣೆಯೋ, ನಾಲ್ಕು ಜನರಿಗೇ ಇಕ್ಕಟ್ಟಾದ ಸ್ಥಳ, ಒಂದೇ ಮೇಜಿನ ಸುತ್ತ ನಾಲ್ವರು ಕುಳಿತುಕೊಳ್ಳಬಹುದಷ್ಟೇ. ಆದರೆ ಈ ಮೇಜಿನ ಮೇಲೆ ಬಡಿಸುವ ಊಟ ಮಾತ್ರ ಬೆರಳುಗಳನ್ನೇ ತಿನ್ನುವಷ್ಟು ರುಚಿಯಾಗಿರುತ್ತದೆ ಎಂದು ಪ್ರಸಿದ್ಧಿ ಪಡೆದದ್ದೇ ತಡ, ಜನರು ನಾಮುಂದು, ತಾಮುಂದು ಎಂದು ಈ ಹೋಟೆಲಿಗೆ ಎಡತಾಕುತ್ತಿದ್ದಾರೆ. ಒಂದು ವೇಳೆ ನಿಮಗೂ ಈ ಹೋಟೆಲಿನ ರುಚಿ ನೋಡಬೇಕು ಎನಿಸಿದರೆ ಆನ್ಲೈನ್ ನಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡುವುದು ಅನಿವಾರ್ಯ. Image courtesy

ಉಡುಪು ತೊಡುವುದು ಐಚ್ಛಿಕವಾದ ರೆಸ್ಟೋರೆಂಟ್

ಉಡುಪು ತೊಡುವುದು ಐಚ್ಛಿಕವಾದ ರೆಸ್ಟೋರೆಂಟ್

ಕೆಲವು ಕಟ್ಟಡಗಳು ಪ್ರಾರಂಭೋತ್ಸವ ಪಡೆಯುವುದಕ್ಕೂ ಮುನ್ನವೇ ಭಾರೀ ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ. ಲಂಡನ್ನಿನ ಬುನ್ಯಾದಿ ಎಂಬ ರೆಸ್ಟ್ರೋರೆಂಟ್ ಇನ್ನೂ ತೆರೆದಿಲ್ಲ. ಜೂನ್ 2016ರಲ್ಲಿ ತೆರೆಯಲಾಗುತ್ತದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿ ವಿಶೇಷ ಏನು ಎಂದರೆ ಇದರಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದ್ದು ಜನಸಾಮಾನ್ಯರಿಗಾಗಿ. ಎರಡನೆಯದ್ದೂ ಜನಸಾಮಾನ್ಯರಿಗಾಗಿಯೇ, ಆದರೆ ಹುಟ್ಟುಡುಗೆಯಲ್ಲಿ ಬಂದರೆ ಮಾತ್ರ ಪ್ರವೇಶ. ಈ ವಿಭಾಗಕ್ಕೆ ಕೇವಲ ಹಣದ ಪರ್ಸ್ ಮಾತ್ರ ಕೊಂಡೊಯ್ಯಬಹುದು. ಬಟ್ಟೆ, ಕ್ಯಾಮೆರಾ ಮೊಬೈಲ್ ಇತ್ಯಾದಿಗಳಿಗೆ ಪ್ರವೇಶವಿಲ್ಲ. Image courtesy

ಹತ್ತಿ ತುಂಬಿದ ಗೊಂಬೆಗಳ ರೆಸ್ಟೋರೆಂಟ್

ಹತ್ತಿ ತುಂಬಿದ ಗೊಂಬೆಗಳ ರೆಸ್ಟೋರೆಂಟ್

ಜಪಾನ್ ನಲ್ಲಿ ಊಟದ ಕುರಿತು ಎಷ್ಟೋ ಕಟ್ಟುಪಾಡುಗಳಿವೆ. ಇದರಿಂದ ಹೊರಬರಲು ಅಲ್ಲಿನವರು ಏನಾದರೂ ಹೊಸತೊಂದನ್ನು ಯೋಚಿಸುತ್ತಾ ಇರುತ್ತಾರೆ. ತೀರಾ ಇತ್ತೀಚಿನದ್ದು ಎಂದರೆ ಹತ್ತಿ ತುಂಬಿದ ಗೊಂಬೆಗಳೊಂದಿಗೆ ಊಟ ಮಾಡುವುದು. ಅಂದರೆ ಈ ಗೊಂಬೆಯನ್ನು ಒಂದು ಆತ್ಮದಂತೆ ಪರಿಗಣಿಸಿ ಒಟ್ಟು ಹದಿನಾಲ್ಕು ತರಹದ ಅನುಭವಗಳನ್ನು ಅನುಭವಿಸಬೇಕು. ಅಷ್ಟಕ್ಕೂ ಈ ಗೊಂಬೆಗಳು ಸುಲಭವಾಗಿ ದೊರಕುವುದಿಲ್ಲ, ಇವು ಲಭ್ಯವಿರುವ ದಿನಾಂಕವನ್ನು ಮೊದಲೇ ಮುಂಗಡ ಬುಕ್ಕಿಂಗ್ ಮಾಡಿಕೊಂಡವರಿಗೆ ಮಾತ್ರ ಊಟ ಮಾಡುವ ಅವಕಾಶ. ಅಷ್ಟೂ ಅನುಭವಗಳ ಫೋಟೋ ಸೆರೆಹಿಡಿದು ಇತರರೊಂದಿಗೆ ಹಂಚಿ ಅವರ ಹೊಟ್ಟೆ ಉರಿಸುವುದೇ ಇದರ ಮುಖ್ಯ ಉದ್ದೇಶ. Image courtesy

ಟಿಮ್ ಬರ್ಟನ್ ರಿಂದ ಪ್ರೇರಿತ ರೆಸ್ಟೋರೆಂಟ್ ಮತ್ತು ಬಾರ್

ಟಿಮ್ ಬರ್ಟನ್ ರಿಂದ ಪ್ರೇರಿತ ರೆಸ್ಟೋರೆಂಟ್ ಮತ್ತು ಬಾರ್

ಟಿಮ್ ಬರ್ಟನ್ ಎಂದರೆ ಜನಸಾಮಾನ್ಯರು ವ್ಯಾಕ್ ಎಂದು ಪ್ರತಿಕ್ರಿಯಿಸುವಂತೆ ಯೋಚಿಸುವ ನಿರ್ದೇಶಕ. ಇವರ ಚಿತ್ರವಿಚಿತ್ರವಾದ ಕಲ್ಪನೆಗಳೇ ಇವರ ಜನಪ್ರಿಯತೆಗೂ ಸಾಕ್ಷಿಯಾಗಿವೆ. ಉದಾಹರಣೆಗೆ ಜೀರುಂಡೆಯ ಜ್ಯೂಸ್, ಬರ್ಗರ್ ಕೈಗಳು ಇತ್ಯಾದಿ. ಇವು ಕೇಳಲಿಕ್ಕೇ ಹೀಗಿರುವಾಗ ಸೇವಿಸುವುದು? ನಿಮ್ಮ ಊಹೆ ಸರಿ, ಇಂತಹ ಚಿತ್ರವಿಚಿತ್ರವಾದ ಖಾದ್ಯಗಳೇ ನ್ಯೂಯಾರ್ಕ್ ನ ಈ ಹೋಟೆಲಿನಲ್ಲಿ ಲಭ್ಯವಿವೆ. ಆದರೆ ಸದ್ಯಕ್ಕೆ ಎಷ್ಟು ಜನಭರಿತವಾಗಿದೆ ಎಂದರೆ ಮುಂಗಡವಾಗಿ ಆನ್ಲೈನ್ ಮೂಲಕ ಬುಕ್ ಮಾಡಬೇಕಾಗಿದೆ. Image courtesy

ಮಲರುಚಿಯ ಆಹಾರ..!!

ಮಲರುಚಿಯ ಆಹಾರ..!!

ಈ ತಲೆಬರಹವನ್ನು ಓದಿದ ತಕ್ಷಣ ನಮ್ಮಲ್ಲಿ ಅನೇಕರಿಗೆ ತಲೆತಿರುಗಿರಬಹುದು. ಕೆಲವರು ಬಾಯಿಯ ಮೇಲೆ ಕೈಯಿಟ್ಟು ಇನ್ನೇನು ಶೌಚಾಲಯಕ್ಕೆ ಓಡುವವರಿದ್ದಿರಬಹುದು. ಆದರೆ ವಾಸ್ತವವಾಗಿ ಇದು ನಿಜವಾದ ಮಲವಲ್ಲ, ಬದಲಿಗೆ ಹಸಿರು ಟೀ, ಹಾಗಲಕಾಯಿ, ಕೋಕೋ ಪೌಡರ್ ಎಲ್ಲವನ್ನೂ ಹದವಾಗಿ ಬೆರೆಸಿ ಕೃತಕವಾಗಿ ಈ ವಾಸನೆ ಮತ್ತು ರುಚಿ ಬರುವಂತೆ ಮಾಡಿರುವ ಖಾದ್ಯಗಳನ್ನು ಬಡಿಸಲಾಗುತ್ತದೆ. ಇದಕ್ಕೆ ಬಳಸಲಾಗುವ ತಟ್ಟೆಲೋಟಗಳೂ ಶೌಚಾಲಯದ ಬೋಗುಣಿಯ ಆಕಾರದಲ್ಲಿಯೇ ಇರುವುದು ಮಾತ್ರ ವಿಪರ್ಯಾಸ...! ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಲರುಚಿಯ ಆಹಾರ

ಮಲರುಚಿಯ ಆಹಾರ

ಈ ಹೋಟೆಲನ್ನು ಪ್ರಾರಂಭಿಸಿದ ಬಾಣಸಿಗ ಕೆನ್ ಷಿಮಿಝುರವರಿಗೆ ಈ ಐಡಿಯಾ ಎಲ್ಲಿಂದ ಬಂತು ಅಂದರೆ ಅಶ್ಲೀಲ ಚಿತ್ರದಲ್ಲಿ ಕಾಮಪಿಪಾಸುಗಳು ಅಂಧರಾಗಿ ಉಚ್ಚಿಷ್ಟವನ್ನೂ ನೆಕ್ಕುವುದನ್ನೇ ಗಮನಿಸಿ ಇದನ್ನೇ ಇವರು ಹಣಮಾಡುವ ಆಯುಧವಾಗಿ ಬಳಸಿಕೊಂಡಿದ್ದಾರೆ. Image courtesy

ಬ್ರೇಕಿಂಗ್ ಬ್ಯಾಡ್ - ನಿರೂಪಣಾ ವಿಷಯಾಧಾರಿತ ರೆಸ್ಟೋರೆಂಟ್

ಬ್ರೇಕಿಂಗ್ ಬ್ಯಾಡ್ - ನಿರೂಪಣಾ ವಿಷಯಾಧಾರಿತ ರೆಸ್ಟೋರೆಂಟ್

ಬ್ರೇಕಿಂಗ್ ಬ್ಯಾಡ್ ಎಂಬುದು ಒಂದು ಜನಪ್ರಿಯ ಟೀವಿ ಧಾರಾವಾಹಿಯ ಹೆಸರು. ಈ ಧಾರಾವಾಹಿಯಲ್ಲಿ ಬರುವಂತಹದ್ದೇ ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ರೂಪಿಸಿ ಈ ಧಾರಾವಾಹಿಯಲ್ಲಿ ತಿನ್ನುವ ಆಹಾರಗಳನ್ನೇ ಬಡಿಸಿ, ಒಟ್ಟಾರೆ ಈ ಧಾರಾವಾಹಿಯ ಅಭಿಮಾನಿಗಳಿಗೆ ತಾವೂ ಈ ಧಾರಾವಾಹಿಯ ಒಂದು ಭಾಗವೇ ಅನ್ನಿಸುವಂತೆ ಮಾಡುವ ರೆಸ್ಟೋರೆಂಟ್. Image courtesy

ಬ್ರೇಕಿಂಗ್ ಬ್ಯಾಡ್ - ನಿರೂಪಣಾ ವಿಷಯಾಧಾರಿತ ರೆಸ್ಟೋರೆಂಟ್

ಬ್ರೇಕಿಂಗ್ ಬ್ಯಾಡ್ - ನಿರೂಪಣಾ ವಿಷಯಾಧಾರಿತ ರೆಸ್ಟೋರೆಂಟ್

ಜನರೂ ಈ ಹುಚ್ಚಿನಲ್ಲಿ ಭಾಗಿಯಾಗಿ ಭಾರಿ ಪ್ರಚಾರ ಸಿಕ್ಕ ಪರಿಣಾಮವಾಗಿ ಇದರ ರೇಟಿಂಗ್ 5 ರಿಂದ 4.6ಕ್ಕೇರಿದೆ. ಇದರ ವಿನ್ಯಾಸವನ್ನು ನೋಡಿದರೆ ಇದು ಜರ್ಮನಿಯಲ್ಲಿದ್ದಂತೆ ಅನ್ನುಸುತ್ತಿದೆಯೇ? ನಿಮ್ಮ ಊಹೆ ನೂರಕ್ಕೆ ನೂರರಷ್ಟು ಸತ್ಯ..........ವಲ್ಲ. ಏಕೆಂದರೆ ಇದು ಇರುವುದು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರದಲ್ಲಿ.

English summary

Unique Restaurants That You Should Check

When it is all about relishing food, you would think about the taste, hygiene and the ambiance of the place before going in. We do not wish to compromise on any of these factors and would also require the food to be served at the earliest and at its best. Here, in this article, we've shared the list of the unique restaurants that you should check out.
X
Desktop Bottom Promotion