Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋಪ ನೆತ್ತಿಗೇರಿಸಿಕೊಂಡ ಇವರು ಮಾಡಿದ ರಂಪಾಟ ನೋಡಿ...
ಕೋಪವು ಮನುಷ್ಯನನ್ನು ದಹಿಸುತ್ತದೆ ಎಂಬ ಮಾತಿದೆ. ಹೆಚ್ಚು ಕೋಪ ಬಂದಾಗ ನಮ್ಮನ್ನು ನಾವು ನಿಯಂತ್ರಿಸಲು ವಿಫಲರಾಗುತ್ತೇವೆ. ಕೈಗೆ ಸಿಕ್ಕಿದ್ದನ್ನು ಬಿಸಾಡಿಬಿಡುತ್ತೇವೆ. ಕೋಪ ಇಳಿದಾಗ ನಮ್ಮ ಕಾರ್ಯಕ್ಕೆ ಪಶ್ಚತ್ತಾಪ ಉಂಟಾದರೂ ಆ ಕ್ಷಣದ ಕೋಪ ಕೊಂಚವಾದರೂ ಹಾನಿಯನ್ನು ಉಂಟುಮಾಡುತ್ತಿರುತ್ತದೆ. ಇಂದಿನ ಲೇಖನದಲ್ಲಿ ಕೂಡ ಜನರು ಕೋಪ ಬಂದಾಗ ಬಳಸುವ ಕೆಲವೊಂದು ಉತ್ಪನ್ನಗಳ ವಿವರಗಳನ್ನು ನೀಡುತ್ತಿದ್ದು ಜನರು ಹೆಚ್ಚು ಕೋಪ ಬಂದಾಗ ಇಂತಹ ವಸ್ತುಗಳನ್ನು ಸಂಗಾತಿಗಳ ಮೇಲೆ ಎಸೆಯುತ್ತಿರುತ್ತಾರೆ. ಕೋಪವನ್ನು ನಿಯಂತ್ರಿಸಲು 4 ಮಂತ್ರ
ಕೋಪ ಬಂದಾಗ ಜನರು ಇನ್ನೊಂದು ವ್ಯಕ್ತಿಯನ್ನು ಕೊಲ್ಲಲು ಕೂಡ ಈ ವಸ್ತುಗಳ ಬಳಕೆಯನ್ನು ಮಾಡುತ್ತಿದ್ದರು ಎಂಬುದು ನಿಮ್ಮನ್ನು ದಂಗುಬಡಿಸಿದರೂ ಇದು ಅಸಲಿ ವಿಷಯವಾಗಿದೆ. ಹಾಗಿದ್ದರೆ ಬನ್ನಿ ಆ ವಸ್ತುಗಳು ಯಾವುವು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದು ಕೋಪಕ್ಕೆ ಬುದ್ಧಿಯನ್ನು ಬಲಿಕೊಡಬೇಡಿ ಎಂಬ ಸಣ್ಣ ಉಪದೇಶವನ್ನು ಈ ಲೇಖನ ಒಳಗೊಂಡಿದೆ.

ಪೆನ್ನು
ಜಾಸನ್ ವೆಬ್ಸ್ಟರ್ ಎಂಬ 21 ರ ಹರೆಯದ ವ್ಯಕ್ತಿ ಪದವೀಧರನಾಗಿದ್ದರೂ ಅಸೂಯೆಯುಳ್ಳವನಾಗಿದ್ದ. ತನ್ನ ಪ್ರೇಯಸಿ 26 ರ ಹರೆಯದ ರೆಬೆಕ್ಕಾಳನ್ನು ಆತ ಕೊಂದಿದ್ದ, ಅದೂ ಆತ ಪಾನಮತ್ತ ಸ್ಥಿತಿಯಲ್ಲಿದ್ದಾಗ ಈ ಕೆಲಸವನ್ನು ಮಾಡಿದ್ದ. ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಆಕೆಯ ಶವವು 2 ದಿನಗಳ ನಂತರ ದೊರಕಿದ್ದು 93 ಪ್ರತ್ಯೇಕ ಗಾಯಗಳನ್ನು ಆಕೆಯ ದೇಹದಲ್ಲಿ ಆತ ಮಾಡಿದ್ದ ಅದೂ ತಲೆ, ಎದೆ, ಕುತ್ತಿಗೆ ಮತ್ತು ದೇಹದಲ್ಲಿ ತೀವ್ರ ಗಾಯಗಳಾಗಿತ್ತು.

ಗಿಟಾರ್
33 ರ ಹರೆಯದ ಡೆರ್ರಿಕ್ ಬಿರ್ಡೊ ಎಂಬಾತ ಟೆಕ್ಸಾಸ್ನ ಬ್ಯಾಪಿಟಿಸ್ಟ್ ಚರ್ಚ್ನ ಪಾದ್ರಿಯನ್ನು ಗಿಟಾರ್ನಿಂದ ಆತ ಸಾಯುವವರೆಗ ಹೊಡೆದಿದ್ದ. ಬಿರ್ಡೊವನ್ನು ನಿಲ್ಲಿಸಲು ಪೋಲೀಸರು ಸ್ಟನ್ ಗನ್ ಅನ್ನು ಬಳಸಿದರು, ಆದರೆ ಬಿರ್ಡೊ ನಂತರ ಮರಣ ಹೊಂದಿದ.

ಪ್ರಾಸ್ಥೆಟಿಕ್ ಲೆಗ್
ಲೂಯಿಸಿಯಾನಾದ ನಿರಾಶ್ರಿತ ಮಹಿಳೆಯು ತನ್ನ ಗೆಳೆಯನಿಂದಲೇ ಹತ್ಯೆಗೊಳಗಾಗಿದ್ದು ಆಕೆಯ ಪ್ರಾಸ್ಥೆಟಿಕ್ ಲೆಗ್ ಅನ್ನು ಬಳಸಿ ಆತ ಈ ಕೆಲಸವನ್ನು ಮಾಡಿದ್ದ. ಆಕೆ ಆತನನ್ನು ಒದ್ದಳು ಎಂಬ ಕಾರಣಕ್ಕೆ ಆಕೆಯ ಗೆಳೆಯ ಪ್ರಾಸ್ಥೆಟಿಕ್ ಲೆಗ್ನಿಂದ ಸಾಯುವಂತೆ ಹೊಡೆದಿದ್ದಾನೆ.

ಸ್ಪೂನ್
ಇಂಗ್ಲೆಂಡ್‌ನ ದರೋಡೆಕೋರನು ಅಸಮರ್ಥನಾದ ಟಿಮೋಟಿ ಮ್ಯಾಗಿಯನ್ನು ದೋಚಲು ಪ್ರಯತ್ನಿಸಿದ. ಮ್ಯಾಗಿ ತನ್ನನ್ನು ತಾನು ಸಂರಕ್ಷಿಸಲು ಚಮಚದ ಹಿಂಭಾಗದಿಂದ ದರೋಡೆಕೋರನ ತಲೆಗೆ ಹೊಡೆಯುತ್ತಾನೆ. ಮ್ಯಾಗಿ ಚಮಚದಿಂದ ದರೋಡೆಕೋರನಿಗೆ ಹೊಡೆದ ಶಕ್ತಿ ಹೇಗಿತ್ತೆಂದರೆ ಅದು ಅಪಧಮನಿಯನ್ನು ಛಿದ್ರವಾಗಿಸಿ ಮಾರಣಾಂತಿಕ ರಕ್ತಸ್ರಾವಕ್ಕೆ ಕಾರಣವಾಯಿತು.

ಮೈಕ್ರೋವೇವ್
ತನ್ನ 28 ದಿನದ ಮಗುವನ್ನು ಸ್ವತಃ ತಾಯಿಯೇ ಓವನ್ನಲ್ಲಿ 2 ನಿಮಿಷಗಳ ಕಾಲವಿಟ್ಟು ಸಾಯಿಸಿದ ಮನಕಲಕುವ ಘಟನೆಯಾಗಿದೆ. ಮಗುವಿನ ಆಂತರಿಕ ಅಂಗಗಳು ಬೆಂದು ಹೋಗಿ ಇದರಿಂದ ಮಗು ಸಾವನ್ನಪ್ಪಿದೆ.

ಛತ್ರಿ
ಛತ್ರಿಯನ್ನು ಹಿಡಿದುಕೊಂಡಿದ್ದ ಆಗಂತುಕನೊಬ್ಬನು 40 ರ ಹರೆಯದ ವ್ಯಕ್ತಿಯನ್ನು ಸಾಯಿಸಿದ್ದಾನೆ. ಆಗಂತುಕನು ವ್ಯಕ್ತಿಯನ್ನು ಸಮೀಪಿಸಿ ಯಾವುದೇ ಮುನ್ಸೂಚನೆಯನ್ನು ನೀಡದೆಯೇ ಛತ್ರಿಯ ಹಿಂಭಾಗದ ಹಿಡಿಕೆಯಿಂದ ಅವನನ್ನು ತಿವಿದಿದ್ದಾನೆ. ನಂತರ ತಿಳಿದು ಬಂದ ವರದಿಯೆಂದರೆ ಛತ್ರಿಯು ಸೂಜಿಯನ್ನು ಹೊಂದಿದ್ದು ಇದರಲ್ಲಿ ಪಾದರಸವನ್ನು ತುಂಬಿಸಲಾಗಿತ್ತು ಇದು ವ್ಯಕ್ತಿಯ ದೇಹವನ್ನು ಪ್ರವೇಶಿಸಿ ಅವರನ್ನು ಕೊಲ್ಲುತ್ತದೆ.

ಉಪ್ಪಿನಕಾಯಿಯ ಜಾಡಿ
ಡೇನಿಯಲ್ ಕೊವರಬಾಸಿಕ್ ಹೆಸರಿನ ಯುವಕನು ತನ್ನ ನಾಯಿಯೊಂದಿಗೆ ವಿಹಾರ ಮಾಡುತ್ತಿದ್ದ 55 ರ ಹರೆಯದ ಡ್ಯೂನ್ ಹರ್ಲೆಯನ್ನು ಸಾಯಿಸಿದ್ದಾನೆ. ಈ ಹುಡುಗನ ವಯಸ್ಸು ಬರೇ 12 ಆಗಿದೆ. ಹರ್ಲೆ ಒಬ್ಬ ಶಿಶುಕಾಮಿಯಾಗಿದ್ದು ದೈಹಿಕವಾಗಿ ಹುಡುಗನನ್ನು ನಿಂದಿಸಿದ್ದಾನೆ. ಈ ನಿಂದನೆಗೆ ಹುಡುಗನು ಆಯಾಸಗೊಂಡು, ಉಪ್ಪಿನಕಾಯಿಯ ಜಾಡಿಯಿಂದ ಹುಡುಗನು ಹರ್ಲೆಯ ತಲೆಗೆ ಹೊಡೆದಿದ್ದಾನೆ.



Click it and Unblock the Notifications
