Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಯಾವಾಗ ಸ್ವಾಮಿ, ಇವರಿಗೆಲ್ಲಾ ಬುದ್ಧಿ ಬರೋದು..?
ಭಾರತವು ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಸಂಸ್ಕೃತಿಗಳ ದೇಶ. ಆದರೆ ಕೆಲವು ಸಂಗತಿಗಳು ನಮ್ಮ ದೇಶದ ಘನತೆಗೆ ಮಸಿ ಬಳಿಯುತ್ತಿವೆ. ಇನ್ನು ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವಿರದ, ಇಲ್ಲವೇ ಅರಿವಿದ್ದು ಅರಿವಿಲ್ಲದಂತೆ ನಡೆದುಕೊಳ್ಳುವ ಜನರು ನಮ್ಮ ದೇಶದ ಜನರು ಇತರ ದೇಶಗಳ ಮುಂದೆಯೇ ಹರಾಜು ಹಾಕುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ!
ಅದು ಬಿಡಿ, ನಮ್ಮವರು ಸಾರ್ವಜನಿಕವಾಗಿಯಾದರು ಸರಿಯಾಗಿ ಇರುತ್ತಾರಾ? ಅದೂ ಇಲ್ಲ, ಇಂತಹ ಜನರು ಒಂದು ಕಡೆಯಾದರೆ , ಶ್ರೀಮಂತ ಸಂಸ್ಕೃತಿ, ಇತಿಹಾಸ, ಆಹಾರ, ಭೌಗೋಳಿಕ ನೆಲೆಗಳು ಮತ್ತೊಂದು ಕಡೆ. ಒಟ್ಟಾರೆ, ನಮ್ಮ ದೇಶ ಹಿಂದೆ ಹೇಗಿತ್ತೋ, ಈಗಲು ಹಾಗೆಯೇ ಇದೆ ಎಂದು ಹೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಹಿಂದೆ ಇನ್ನೂ ಚೆನ್ನಾಗಿದ್ದ ಸ್ಥಿತಿ ಈಗ ಮತ್ತಷ್ಟು ಹದಗೆಟ್ಟು ಹೋಗಿದೆ. ಏನೇ ಹೇಳಿ, ಆದರೆ ಒಂದಂತೂ ಸತ್ಯ, ನಮ್ಮ ದೇಶದಲ್ಲಿ ಬದಲಾಗದೆ ಉಳಿದ ಸಂಗತಿಯಲ್ಲಿ ಜನರು ಮೊದಲು. ಭಾರತದಲ್ಲಿ ಹೇಳಿ, ಕೇಳಿ ಕುತೂಹಲವನ್ನು ಹೊಂದಿರುವ ಜನರೇ ಹೆಚ್ಚು. ಈ ಕುತೂಹಲ ಒಳ್ಳೆಯದಕ್ಕಲ್ಲ ಇತರರು ಮಾಡುವ ಕೆಲಸದಲ್ಲಿ ಸುಮ್ಮನೆ ಮೂಗು ತುರಿಸಲು ಮಾತ್ರ ಇವರ ಕುತೂಹಲ ಕೆಲಸಕ್ಕೆ ಬರುತ್ತದೆ.
ಭ್ರಷ್ಟಾಚಾರ ಆ ಕಾಲದಿಂದ ಈ ಕಾಲದವರೆಗು ವಂಶಪಾರಂಪರ್ಯವೆಂಬಂತೆ ಬೆಳೆದುಕೊಂಡು ಬರುತ್ತಿದೆ. ಬದಲಾಗುವ ಒಂದು ಸಣ್ಣ ಸುಳಿವು ಸಹ ಅಲ್ಲಿ ಕಾಣುತ್ತಿಲ್ಲ. ಯಾರೇ ಅಧಿಕಾರಕ್ಕೆ ಬಂದರು, " ಯಾರೂ ಮಾಡದೆ ಇರೋದು ನಾನು ಮಾಡ್ತಾ ಇದ್ದೀನಾ?" ಎಂದು ದಬಾಯಿಸಿ , ಭ್ರಷ್ಟಾಚಾರ ಅಧಿಕಾರದ ಆಜನ್ಮ ಸಿದ್ಧ ಹಕ್ಕು ಎಂಬ ಅಲಿಖಿತ ನಿಯಮವನ್ನು ಮೌಖಿಕ ಮಾಡುವವರೆಗೆ ಇದು ಬೆಳೆದಿದೆ. ನಮ್ಮ ಬೋಲ್ಡ್ ಸ್ಕೈ ಇಂತಹ ಕೆಲವೊಂದು ಅವಮಾನಕಾರಿಯಾದ ಸಂಗತಿಗಳನ್ನು ನಿಮ್ಮ ಮುಂದೆ ಇಡುತ್ತಿದೆ. ಬನ್ನಿ ಸುಮ್ಮನೆ ಒಂದು ಪಕ್ಷಿನೋಟವನ್ನು ಇದರ ಮೇಲೆ ಹರಿಸಿ....

ಕಾನೂನನ್ನು ಮುರಿಯುವುದರಲ್ಲಿ ನಂ1
ಆಂಬುಲೆನ್ಸ್‌ಗಳನ್ನು ಓವರ್ ಟೇಕ್ ಮಾಡಿ ದಾರಿ ಕೊಡದ ವಾಹನಗಳು, ಫುಟ್‍ಪಾತ್ ಮೇಲೆ ವಾಹನ ಓಡಿಸುವ ಸವಾರರು, ಕೆಂಪು ದೀಪವನ್ನು ಸಹ ಹಸಿರು ದೀಪ ಎಂದು ಪರಿಗಣಿಸುವ ವರ್ಣಾಂಧತೆಯಿರುವವರು, ರಸ್ತೆಯಲ್ಲಿ ಲೇನ್ ಡಿಸಿಪ್ಲೀನ್ ಎಂಬುದು ಇದೆ ಎಂದು ತಿಳಿಯದ ಅಜ್ಞಾನಿಗಳು, ಶಾಲಾ ವಾಹನಗಳನ್ನು ಸಹ ಓವರ್ ಸ್ಪೀಡಿನಲ್ಲಿ ಚಲಾಯಿಸುವ ಚಾಲಕರು, ಶಾಪಿಂಗ್ ಮಾಡಿ ಹೊರ ಬರುವವರೆಗೆ ರಸ್ತೆಯಲ್ಲಿಯೇ ಪಾರ್ಕ್ ಮಾಡಿ ಹೋಗುವ ಕಾರ್‌ಬಾರು!!! ಮಾಡುವ ಮಾಲೀಕರು ಬದಲಾಗಿದ್ದಾರೆ ಎಂದು ನಿಮಗೆ ಅನಿಸಿದೆಯೇ? ಇದಕ್ಕೆ ವಿದೇಶಿಯರು ನಮ್ಮ ದೇಶದ ಕುರಿತಾಗಿ ದಿಗ್ಭ್ರಮೆ ವ್ಯಕ್ತಪಡಿಸುತ್ತಾರೆ.

ಹೆಣ್ಣುಮಕ್ಕಳ ಪಾಡು ಕೇಳುವುದೇ ಬೇಡ..!
ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಓಡಾಡುವಾಗ ನೆರೆದಿರುವ ಪಡ್ಡೆ ಯುವಕರು ಚುಡಾಯಿಸುವ ಗೀಳನ್ನು ಇಂದಿಗೂ ಕಾಣಬಹುದು. ಈ ಬಗ್ಗೆ ಸ್ಪಷ್ಟವಾದ ಕಾನೂನಿದ್ದರೂ ಇದರ ಗೊಡವೇ ಬೇಡವೆಂದು ನಿರ್ಲಕ್ಷ್ಯ ತೋರುವ ಹೆಣ್ಣುಮಕ್ಕಳು ಹಾಗೂ ಪಾಲಕರಿಂದಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಹೆಸರಿಗೆ ಮಾತ್ರ ಸ್ವಚ್ಛ ಭಾರತ..!
ರಸ್ತೆ ಬದಿ ಕಸ ಎಸೆಯುವುದು ಸ್ವಚ್ಛ ಭಾರತ ಎಂಬ ದೊಡ್ಡ ದೊಡ್ಡ ಮಾತುಗಳಿಗೆ ತಲೆ ಅಲ್ಲಾಡಿಸುವ ನಮಗೆ ನಮ್ಮ ಕಸದ ವಿಷಯ ಬಂದಾಗ ಮಾತ್ರ ಅತಿ ಸೋಮಾರಿಗಳಾಗುತ್ತೇವೆ. ಕಸವನ್ನು ಯಾವುದೋ ಒಂದು ಹರಕು ಚೀಲದಲ್ಲಿ ಒತ್ತಿ ತುಂಬಿಸಿ ಯಾರೂ ಗಮನಿಸದ ವೇಳೆಯಲ್ಲಿ ರಸ್ತೆಬದಿಯಲ್ಲಿ ಎಲ್ಲೋ ಒಂದೆಡೆ ನಿಲ್ಲಿಸಿದರೆ, ಅಥವಾ ನಮ್ಮಂತೆಯೇ ಇನ್ನಾರಾದರೂ ಈಗಾಗಲೇ ನಿಲ್ಲಿಸಿದ್ದರೆ ಅದರ ಪಕ್ಕ ನಿಲ್ಲಿಸಿದರೆ ನಮ್ಮ ಕರ್ತವ್ಯ ಮುಗಿಯಿತು.

ಇವರಿಗೆ ಶೌಚಾಲಯದ ಅಗತ್ಯವೇ ಇಲ್ಲ!
ದೇಹಬಾಧೆ ತೀರಿಸಿಕೊಳ್ಳಲು ಶೌಚಾಲಯವೇ ಬೇಕಾಗಿಲ್ಲ ಭಾರತೀಯ ಪುರುಷರಿಗೆ ಹೊರಗಿದ್ದಾಗ ಮೂತ್ರಕ್ಕೆ ಹೋಗಲು ಶೌಚಾಲಯದ ಅಗತ್ಯವೇ ಇಲ್ಲ. ಎಲ್ಲಿ ಗೋಡೆ ಕಂಡಿತೋ ಅಲ್ಲಿ ತಮ್ಮ ದಾಹ ತೀರಿಸಿಕೊಂಡುಬಿಡುತ್ತಾರೆ. ಹೆಚ್ಚಿನವರು ಎಲ್ಲಿ ಮೂತ್ರ ಮಾಡಬಾರದು ಎಂದು ಬರೆದಿರುತ್ತಾರೋ ಅಲ್ಲಿಯೇ ಮೂತ್ರ ವಿಸರ್ಜಿಸಿ ಅಟ್ಟಹಾಸ ಮೆರೆದಿರುತ್ತಾರೆ. ಅದಕ್ಕೆ ಕೆಲವರು ವಿವಿಧ ದೇವರ ಪಟವಿರುವ ಟೈಲ್ಸ್ ಗಳನ್ನು ಸಂಭವನೀಯ ಸ್ಥಳಗಳಲ್ಲಿ ಸ್ಥಾಪಿಸಿದ ಬಳಿಕ ಈ ಚಾಳಿ ಕಡಿಮೆಯಾಗಿದೆ. ಭಾರತೀಯರು ದೇವರಿಗೆ ಹೆದರುವಷ್ಟು ಯಾರಿಗೂ ಹೆದರುವುದಿಲ್ಲ. ಪ್ರಮುಖವಾಗಿ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿಲ್ಲದಿರುವುದು ಈ ತೊಂದರೆಗೆ ಮುಖ್ಯ ಕಾರಣ.

ಉಗುಳೋದೆ ನಮ್ಮ ಬ್ಯುಸಿನೆಸ್!!
ಬಸ್ಸು, ರೈಲು, ಸದ್ಯ ವಿಮಾನ ಬಿಟ್ಟಿದ್ದಾರೆ!, ಆಸ್ಪತ್ರೆ, ಸಿನಿಮಾ ಹಾಲ್, ಕಲ್ಯಾಣ ಮಂಟಪ, ಹೋಟೆಲ್, ಬಾರ್, ಬಸ್ ಸ್ಟ್ಯಾಂಡ್, ರಸ್ತೆ ಎಲ್ಲಾ ಕಡೆ ಉಗುಳಿನ ಸಾಕ್ಷಿ ನಮಗೆ ದೊರೆಯುತ್ತದೆ. ಬಸ್ಸು-ರೈಲು ಮತ್ತು ಕಾರಿನಲ್ಲಿ ಕಿಟಕಿ ಪಕ್ಕ ಕುಳಿತವರು ಹಿಂದೆ ಮುಂದೆ ನೋಡದೆ ಉಗಿಯುತ್ತಾರೆ. ನೀವು ನೋಡಿ ಗದರಲಿಲ್ಲ ಎಂದರೆ ಅದು ಪುನರಾವರ್ತನೆಯಾಗುವುದರಲ್ಲಿ ಸಂಶಯವಿಲ್ಲ. ಗುಟ್ಕಾಗಳನ್ನು ಸೇವಿಸಿ ಇತರರಿಗೆ ಇರಿಸು ಮುರಿಸು ಮಾಡುವಂತೆ ಉಗುಳುವ ಈ ಬುದ್ಧಿ ಅವರಿಗೆ "ಉಗುದ್ರೂ ಹೋಗಲ್ಲ ಬಿಡಿ"

ಕಳ್ಳ ಭಿಕ್ಷುಕರು
ಭಿಕ್ಷೆ ಬೇಡುವುದು ಸಹ ನಮ್ಮಲಿ ಒಂದು ದೊಡ್ಡ ದಂಧೆ. ಅದರಲ್ಲೂ ವಿದೇಶಿಯರು ಅವರ ಕಣ್ಣಿಗೆ ಬಿದ್ದರೆ ಮುಗಿಯಿತು, ಅವರಿಂದ ದೊಡ್ಡ ಮಟ್ಟದ ಹಣ ಪೀಕುವವರೆಗೆ ಇವರು ಬಿಡುವುದಿಲ್ಲ. ಹಿಂದೆ ದೈನ್ಯತೆಯಿಂದ ಭಿಕ್ಷೆ ಬೇಡುತ್ತಿದ್ದರು, ಆದರೆ ಇಂದು ಜಬರ್‌ದಸ್ತ್ ಮಾಡಿ ಭಿಕ್ಷೆ ಬೇಡುತ್ತಾರೆ. ಭಿಕ್ಷಾಟನೆ ಮಾಡುವ ಜನರು ಅದನ್ನು ಬಿಟ್ಟು ಹೊಸ ಬದುಕು ಆರಂಭಿಸಬೇಕು ಎಂದು ಕನಸು ಮನಸಿನಲ್ಲು ಬಯಸುವುದಿಲ್ಲ.

ಪಾರ್ಕಿಂಗ್ ಸಮಸ್ಯೆ
ನೀವು ಎಲ್ಲೇ ಇರಿ ನಿಮ್ಮಲ್ಲಿ ವಾಹನವಿದ್ದರೆ ಪಾರ್ಕಿಂಗ್ ಸಮಸ್ಯೆ ತಪ್ಪಿದ್ದಲ್ಲ. ಜನ ಎಲ್ಲೆಂದರಲ್ಲಿ ಕಾರುಗಳನ್ನು ನಿಲ್ಲಿಸುತ್ತಾರೆ. ಎಲ್ಲಿ ನೋ ಪಾರ್ಕಿಂಗ್ ಇರುವುದೋ, ಅಲ್ಲಿಯೂ ನಿಲ್ಲಿಸುತ್ತಾರೆ. ಅಬ್ಬಾ, ನನ್ನ ವಾಹನಕ್ಕೆ ಪಾರ್ಕಿಂಗ್ ಸಿಕ್ಕಿತಲ್ಲ ಸಾಕು ಎಂದು ಪಾರ್ಕ್ ಮಾಡಿ ಹೊರಡುತ್ತಾರೆ. ಇನ್ನೂ ಕೆಲವರು ದರ್ಶಿನಿ ಹೋಟೆಲ್‍ನಲ್ಲಿ ನಿಂತು ತಿನ್ನಲಾಗದೆ ಕಾರಿಗೆ ತರಿಸಿಕೊಂಡು ತಿನ್ನುತ್ತಾರೆ. ಅದೂ ರಸ್ತೆಯಲ್ಲಿ ಪಾರ್ಕ್ ಮಾಡಿಕೊಂಡು!!.



Click it and Unblock the Notifications











