Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪ್ರತಿ ಮಹಿಳೆಯೂ ತಿಳಿದಿರಲೇಬೇಕಾದ ಕಾನೂನು ಬದ್ಧ ಹಕ್ಕುಗಳು
ಪ್ರತಿ ವರ್ಷ ಮಾರ್ಚ್ 8ನೇ ತಾರೀಖು, ಮಹಿಳೆಯರಿಗೆ ಅತ್ಯಂತ ಆನಂದಕರ ದಿನವಾಗಿರುತ್ತದೆ. ಏಕೆಂದರೆ ಇದನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಮಹಿಳೆಯರು ಮಾನವರ ತಾಯಿ. ಆದರೂ ಸಹ ಈ ತಾಯಿಯನ್ನು ಅನಾದಿ ಕಾಲದಿಂದಲೂ ಎರಡನೆ ಸ್ಥಾನದಲ್ಲಿ ನಿಲ್ಲಿಸಿ, ಕೆಳ ಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಹಿಂದಿನ ಕಾಲದಲ್ಲಿ ಅಂದರೆ ವೇದಗಳ ಕಾಲದಲ್ಲಿ ಸ್ತ್ರೀಯರನ್ನು ಸಹ "ಕರಣೇಷು ಮಂತ್ರಿ" ಎಂದು ಕರೆದು ಅವರನ್ನು ಗಂಡಸಿನ ಮಂತ್ರಿಯ ಸ್ಥಾನದಲ್ಲಿ ನಿಲ್ಲಿಸಿದ್ದೇನೋ ಸತ್ಯ, ಆದರೆ ರಾಣಿಯಾಗಿ ನಿಲ್ಲಿಸಲು ಹಿಂದೇಟು ಹಾಕಿದರು.
ಹಲವು ರಾಜರ ಹಿಂದೆ ಇವರ ಪ್ರಜ್ಞೆ ಕೆಲಸ ಮಾಡಿತ್ತು, ಹಲವು ನಾಯಕರ ಹಿಂದಿನ ಸ್ಫೂರ್ತಿ ಮಹಿಳೆಯಾಗಿದ್ದರು. ಹಲವಾರು ನಾಯಕರು, ರಾಜರು ನಿರ್ಮಾಣಗೊಳ್ಳಲು ಯಾರಾದರು ಸ್ತ್ರೀ ಅವರ ಬಾಳಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಸ್ತ್ರೀಗಾಗಿ ಯುದ್ಧಗಳು ನಡೆದವು, ಚರಿತ್ರೆಗಳು ಸೃಷ್ಟಿಯಾದವು. ಆದರೂ ಸ್ತ್ರೀಯರ ಜೀವನ ಏಳಿಗೆ ಕಾಣಲಿಲ್ಲ. ಕ್ರಿ.ಪೂ ಹೋಗಿ ಕ್ರಿ.ಶ.2016 ರಲ್ಲೂ ಸಹ ಸ್ತ್ರೀ ಸಮಾನತೆ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ನಾವು ಇನ್ನೂ ಎಲ್ಲಿದ್ದೇವೆ ತಿಳಿದುಕೊಳ್ಳಲು ಕಷ್ಟಪಡಬೇಕಿಲ್ಲ. 21 ನೇ ಶತಮಾನದ ಸ್ತ್ರೀಯಾದರು ಈ ಕೊರತೆಯನ್ನು ನೀಗಿಸಿಕೊಳ್ಳುತ್ತಿದ್ದಾಳಾ? ಆಕೆಯಾದರು ಇತ್ತೀಚೆಗೆ ಸ್ವಾವಲಂಬಿಯಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾಳೆ. ಆದರೆ ಆಕೆಯನ್ನು ಹಣಿಯುವ ಹೆಣ್ಣೆಂದು ತಡೆಯುವ, ಮೂದಲಿಸುವ, ಆಕೆಯ ಅಬಲೆತನವನ್ನು ದುರುಪಯೋಗ ಪಡಿಸಿಕೊಳ್ಳುವ ಅವಕಾಶಕ್ಕಾಗಿ ಗಂಡಸರು ಈಗಲೂ ಕಾಯುತ್ತಿದ್ದಾರೆ.
ಹಾಗೆಂದು ಆಕೆ ಯಾರೂ ತನಗೆ ರಕ್ಷಣೆ ನೀಡೊಲ್ಲ ಎಂದು ಹೆದರಬೇಕಿಲ್ಲ. ಭಾರತದ ಸಂವಿಧಾನವು ಆಕೆಯ ಬೆಂಬಲಕ್ಕೆ ಯಾವಾಗಲು ನಿಂತಿರುತ್ತದೆ. ಆಕೆಯನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯ ಮಾಡದಂತೆ, ಆಕೆಯನ್ನು ಲಿಂಗ ತಾರತಮ್ಯವೆಂಬ ತಕ್ಕಡಿಯಲ್ಲಿ ತೂಗದಂತೆ ಅದು ಒತ್ತಿ ಒತ್ತಿ ಹೇಳಿದೆ. ಅದಕ್ಕಾಗಿ ಆಕೆಗೆ ಕೆಲವು ಹಕ್ಕುಗಳನ್ನು ಅದು ನೀಡಿದೆ. ಬನ್ನಿ ಆಕೆಗೆ ಸಂವಿಧಾನ ನೀಡಿರುವ ಹಕ್ಕುಗಳು ಯಾವುವು ಎಂದು ನಾವು ಸಹ ತಿಳಿದುಕೊಳ್ಳೋಣ...

ಸಮಾನ ವೇತನ ಹಕ್ಕು
ಸಮಾನ ವೇತನ ಕಾಯ್ದೆಯ ಪ್ರಕಾರ ಮಹಿಳೆಯರನ್ನು ಲಿಂಗ ತಾರತಮ್ಯ ಮಾಡಿ, ಕಡಿಮೆ ವೇತನ ಅಥವಾ ಸಂಬಳಕ್ಕೆ ದುಡಿಸಿಕೊಳ್ಳುವಂತಿಲ್ಲ. ಇಲ್ಲಿ ಹೆಣ್ಣು ಮತ್ತು ಗಂಡು ಇಬ್ಬರಿಗೂ ಒಂದೇ ವೇತನ.

ಕೆಲಸದ ಸ್ಥಳದಲ್ಲಿ ಕಿರುಕುಳದ ವಿರುದ್ಧದ ಹಕ್ಕು
ಮಹಿಳೆಯರ ಮೇಲೆ ಕೆಲಸ ಸ್ಥಳದಲ್ಲಿ ಕಿರುಕುಳದ ವಿರುದ್ಧದ ಶಾಸನವು ಆಕೆಗೆ, ಈ ಕಿರುಕುಳದ ವಿರುದ್ಧ ಕಾನೂನು ನೆರವು ಪಡೆಯುವ ಹಕ್ಕನ್ನು ನೀಡಿದೆ. ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದವರಿಗೆ ಉಗ್ರ ದಂಡನೆಯನ್ನು ನೀಡಲಾಗುತ್ತದೆ.

ಅನಾಮಧೇಯತ್ವದ ಹಕ್ಕು
ಅತ್ಯಾಚಾರ ಮುಂತಾದ ಲೈಂಗಿಕ ದೌರ್ಜನ್ಯಗಳಿಗೆ ಒಳಗಾದವರು ಅನಾಮಧೇಯತ್ವದ ಹಕ್ಕನ್ನು ಹೊಂದಿರುತ್ತಾರೆ. ಆಕೆಯ ಗೌಪ್ಯತೆಯನ್ನು ಕಾಪಾಡುವ ಹೊಣೆಯನ್ನು ನ್ಯಾಯಾಂಗ ಹೊಂದಿರುತ್ತದೆ. ಮೊಕದ್ದಮೆ ನಡೆಯುವಾಗ ಆಕೆಯ ಹೇಳಿಕೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಬಹುದು, ಅದು ಆಕೆ ಒಬ್ಬಳೇ. ಅಥವಾ ಆ ಸಮಯದಲ್ಲಿ ಆಕೆಯೊಂದಿಗೆ ಒಬ್ಬ ಮಹಿಳಾ ಪೋಲಿಸ್ ಅಧಿಕಾರಿ ಇರಬಹುದು.

ಗೃಹ ಹಿಂಸೆಯ ವಿರುದ್ಧ ಹಕ್ಕು
ಇದು ಸಾಮಾನ್ಯವಾಗಿ ಸೊಸೆಯಾಗಿ ಅಥವಾ ಒಬ್ಬರ ಮಡದಿಯಾಗಿ ಅಥವಾ ಸಂಗಾತಿಯಾಗಿ ಇನ್ನೊಂದು ಮನೆಗೆ ಕಾಲಿರಿಸಿದ ಹೆಂಗಸರಿಗಾಗಿ ಇರುತ್ತದೆ. ತನ್ನ ಮನೆಯಲ್ಲಿರುವ ಹೆಂಗಸರನ್ನು ಹಿಂಸಿಸಿದವರಿಗೆ ಶಿಕ್ಷೆ ನೀಡುವ ಕಾನೂನು ಇದಾಗಿದೆ. ಈ ಹಿಂಸೆಯ ವಿರುದ್ಧ ದನಿ ಎತ್ತುವ ಮತ್ತು ನ್ಯಾಯಾಂಗದ ಸಹಾಯ ಪಡೆಯುವ ಹಕ್ಕು ಮಹಿಳೆಯರಿಗೆ ಇರುತ್ತದೆ.

ಹೆರಿಗೆಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯುವ ಹಕ್ಕುಗಳು
ಗರ್ಭಿಣಿಯಾಗುವುದು ಪ್ರತಿ ಮಹಿಳೆಯ ಕನಸು ಆಗಿರುತ್ತದೆ. ತಾಯಿಯಾಗುವ ಭಾಗ್ಯ ಮತ್ತು ಸಂತೋಷ ಅನುಭವಿಸಿದವರಿಗೆ ಗೊತ್ತು. ಅದಕ್ಕಾಗಿ ಕೆಲಸಕ್ಕೆ ಹೋಗುವವರಿಗೂ ಸಹ ಈ ಆನಂದವನ್ನು ಅನುಭವಿಸಲು ಅವರಿಗೆ ಹೆರಿಗೆ ರಜೆಯನ್ನು ವೇತನ ಸಹಿತ ನೀಡಲಾಗುತ್ತದೆ. ಹೆರಿಗೆಯ ನಂತರ 12 ವಾರಗಳ ವೇತನ ಸಹಿತ ರಜೆಯನ್ನು ಆಕೆ ಪಡೆದು, ನಂತರ ತನ್ನ ಕೆಲಸಕ್ಕೆ ಹಾಜರಾಗುವ ಹಕ್ಕನ್ನು ಆಕೆಗೆ ವಿಶೇಷವಾಗಿ ನೀಡಲಾಗಿದೆ.

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಹಕ್ಕು
ಪ್ರತಿಯೊಬ್ಬ ಭಾರತೀಯನಿಗೂ ಸಹ ಈ ಹಕ್ಕು ಇರುತ್ತದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಸಲುವಾಗಿ ಭ್ರೂಣ ಲಿಂಗ ಪತ್ತೆಯನ್ನೆ ನಿರ್ಮೂಲನೆ ಮಾಡುವ ಶಾಸನವನ್ನು ಜಾರಿಗೆ ತರಲಾಗಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ಖಂಡಿಸಿ, ಅದಕ್ಕಾಗಿ ಕಾನೂನು ನೆರವು ಪಡೆಯುವ ಹಕ್ಕನ್ನು ಇವರಿಗಾಗಿ ನೀಡಲಾಗಿದೆ.

ಉಚಿತ ಕಾನೂನು ನೆರವು
ಎಲ್ಲಾ ಮಹಿಳೆಯರು ಸಹ ತಮಗೆ ಅವಶ್ಯಕತೆ ಬಿದ್ದಾಗ ಅಗತ್ಯ ಕಾನೂನು ನೆರವನ್ನು ಪಡೆಯಬಹುದು, ಅದು ಉಚಿತವಾಗಿ!. ಅದಕ್ಕಾಗಿ ಕಾನೂನು ಸೇವೆ ಪ್ರಾಧಿಕಾರ ಕಾಯ್ದೆ ಎಂಬ ಕಾನೂನು ಇದೆ. ಸ್ಟೇಷನ್ ಹೌಸ್ ಆಫೀಸರ್ ಎಂಬ ಅಧಿಕಾರಿಯು ನೊಂದವರಿಗಾಗಿ ಈ ಬಗೆಯ ಕಾನೂನು ನೆರವನ್ನು ಪಡೆಯಬಹುದಾದ ವಿಷಯವನ್ನು ತಿಳಿಸಿ, ಅವರಿಗಾಗಿ ಒಬ್ಬ ವಕೀಲರನ್ನು ನೇಮಿಸುತ್ತಾರೆ.

ರಾತ್ರಿಯ ಹೊತ್ತು ಬಂಧನಕ್ಕೆ ಒಳಗಾಗುವಿಕೆಯ ವಿರುದ್ಧದ ಹಕ್ಕು
ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕಿಂತ ಮುನ್ನ ಮಹಿಳೆಯರನ್ನು ಬಂಧಿಸಬಾರದು. ಒಂದು ವೇಳೆ ಬಂಧಿಸಬೇಕಾದಲ್ಲಿ, ಅದಕ್ಕೆ ಮೊದಲ ದರ್ಜೆಯ ಮ್ಯಾಜಿಸ್ಟ್ರೇಟ್‌ರವರ ವಿಶೇಷ ಆದೇಶವಿರಬೇಕಾದ ಅಗತ್ಯವಿರುತ್ತದೆ.

ಘನತೆ ಮತ್ತು ಸಭ್ಯತೆಯ ಹಕ್ಕು
ಒಂದು ವೇಳೆ ಒಬ್ಬ ಮಹಿಳೆಯನ್ನು ಆರೋಪಿ ಎಂದು ಪರಿಗಣಿಸಿ, ಆಕೆಯನ್ನು ಕೆಲವೊಂದು ವೈದ್ಯಕೀಯ ತಪಾಸಣೆಗಳಿಗೆ ಒಳಪಡಿಸಬೇಕಾದಾಗ, ಆಕೆಯ ಘನತೆ ಮತ್ತು ಸಭ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಅದನ್ನು ಮಹಿಳೆಯರಿಂದಲೆ ಮಾಡಿಸಬೇಕು ಅಥವಾ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಇರಿಸಿಕೊಳ್ಳಬೇಕಾಗುತ್ತದೆ.

ಆಸ್ತಿಯ ಹಕ್ಕು
ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಮಹಿಳೆಯರು ಸಹ ಪುರುಷರಷ್ಟೇ ಸಮಾನ ಹಕ್ಕನ್ನು ಪಿತ್ರಾರ್ಜಿತ ಆಸ್ತಿಯಲ್ಲಿ ಹೊಂದಿರುತ್ತಾರೆ. ಆದ್ದರಿಂದ ಅವರಿಗಾಗಿ ಹೊಸ ಕಾನೂನು ಮತ್ತು ನಿಯಮಗಳನ್ನು ರೂಪಿಸಲಾಗುತ್ತಿದೆ.



Click it and Unblock the Notifications











