ಆತ ಸಿಟ್ಟಿನ ಭರದಲ್ಲಿ ಪತ್ನಿಯನ್ನೇ ಚಾಕು ಇರಿದು ಕೊಂದ!

By: Hemanth
Subscribe to Boldsky

ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡಬಾರದು ಎಂದು ಹಿರಿಯರು ಹೇಳುತ್ತಾ ಇರುತ್ತಾರೆ. ಸಿಟ್ಟಿನ ಭರದಲ್ಲಿ ನಾವು ಏನು ಮಾಡುತ್ತೇವೆಂದು ತಿಳಿಯಲ್ಲ. ಸಿಟ್ಟು ಇಳಿದ ಬಳಿಕ ಆದ ಘಟನೆಯ ಬಗ್ಗೆ ಪಶ್ಚಾತ್ತಾಪವಾದರೂ ಸಮಯ ಕೈಮೀರಿ ಹೋಗಿರುತ್ತದೆ. ಸಿಟ್ಟಿನಿಂದ ಎಂತಹ ದುರ್ಘಟನೆ ನಡೆದು ಹೋಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.   ಕೆಂಡದಂತಹ ಕೋಪ, ನಿಮ್ಮನ್ನೇ ಸುಟ್ಟು ಬಿಡಬಹುದು!

ದಂತವೈದ್ಯನಾಗಿರುವ ಉಮೇಶ್ ಬೊಬಾಲೆ ಎನ್ನುವಾತ ತನ್ನ 36ರ ಹರೆಯದ ಪತ್ನಿಯನ್ನು ಸಿಟ್ಟಿನ ಭರದಲ್ಲಿ ಕೊಲೆ ಮಾಡಿದ್ದಾನೆ. ಇದಕ್ಕೂ ಮಿಗಿಲಾಗಿ ಆತ ಕೊಲೆಯ ಬಳಿಕ ಮಾಡಿದಂತಹ ಕೆಲಸ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ. ಪತ್ನಿಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ ಮತ್ತು ಕೊಲೆಯ ಬಳಿಕ ಏನು ಮಾಡಿದ ಎಂದು ತಿಳಿದುಕೊಳ್ಳುವ.....   

ಅಪರಾಧಿ

ಅಪರಾಧಿ

40ರ ಹರೆಯದ ದಂತವೈದ್ಯ ಉಮೇಶ್ ಬೊಬಾಲೆ ಎನ್ನುವಾತ ತನ್ನ 4ರ ಹರೆಯದ ಮಗುವಿನ ಎದುರೇ ಪತ್ನಿಯನ್ನು ಕೊಲೆ ಮಾಡಿದ.

ಅವರಿಗೆ ಏನಾಗಿತ್ತು?

ಅವರಿಗೆ ಏನಾಗಿತ್ತು?

ಪತಿಪತ್ನಿ ನಡುವೆ ಕಳೆದ ಕೆಲವು ತಿಂಗಳಿಂದ ಮನಸ್ತಾಪವಿತ್ತು ಮತ್ತು ಅವರಿಬ್ಬರು ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದರು.

ಪತಿಯ ವಿರುದ್ಧ ದೂರು ನೀಡಿದ್ದಳು

ಪತಿಯ ವಿರುದ್ಧ ದೂರು ನೀಡಿದ್ದಳು

ಪತ್ನಿಯು ತನ್ನ ಪತಿ ದೈಹಿಕ ಹಿಂಸೆ ನೀಡುತ್ತಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಇದರ ಬಳಿಕ ಅವರಿಬ್ಬರು ಬೇರ್ಪಟ್ಟಿದ್ದರು.

ಮತ್ತೆ ಒಂದಾಗಿಸಲು ಕುಟುಂಬ ಹಾಗೂ ಸ್ನೇಹಿತರ ಪ್ರಯತ್ನ

ಮತ್ತೆ ಒಂದಾಗಿಸಲು ಕುಟುಂಬ ಹಾಗೂ ಸ್ನೇಹಿತರ ಪ್ರಯತ್ನ

ನಿಮ್ಮಿಬ್ಬರ ಮನಸ್ತಾಪವನ್ನು ಮರೆತು ಮತ್ತೆ ಜತೆಯಾಗಿ ವಾಸಿಸಬೇಕೆಂದು ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಒತ್ತಾಯಿಸಿದ್ದರು. ಆದರೆ ಅವರು ಮಾತನ್ನೇ ಕೇಳಲಿಲ್ಲ.

ಕೆಟ್ಟ ಘಟನೆ ನಡೆಯಿತು

ಕೆಟ್ಟ ಘಟನೆ ನಡೆಯಿತು

ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಮಹಿಳೆಯು ತನ್ನ ಪತಿಯ ಜತೆ ವಾದಕ್ಕೆ ಇಳಿದಳು. ಈ ವೇಳೆ ತಾಳ್ಮೆ ಕಳೆದುಕೊಂಡ ಆತ ಕೊಲೆ ಮಾಡಿಬಿಟ್ಟ.

ಮಗುವಿನ ಎದುರೇ ಆಕೆಯನ್ನು ಇರಿದು ಕೊಂದ

ಮಗುವಿನ ಎದುರೇ ಆಕೆಯನ್ನು ಇರಿದು ಕೊಂದ

ಉಮೇಶ್ ಪತ್ನಿಯ ಕಾಲುಗಳು, ಎದೆ ಮತ್ತು ಹೊಟ್ಟೆಗೆ ಹಲವಾರು ಬಾರಿ ಇರಿದ. ಇದನ್ನು ಮಗು ಕಣ್ಣಾರೇ ನೋಡುತ್ತಲೇ ಇತ್ತು. ಕೊಲೆಯ ಬಳಿಕ ಶವದ ಬಳಿಯಲ್ಲೇ ಆತ ಸುಮಾರು 3 ಗಂಟೆಗಳ ಕಾಲ ಕುಳಿತುಕೊಂಡ.

ಪೊಲೀಸರನ್ನು ತಾನೇ ಕರೆದ

ಪೊಲೀಸರನ್ನು ತಾನೇ ಕರೆದ

ಪತ್ನಿಯ ಶವದ ಬಳಿ ಸುಮಾರು ಮೂರು ಗಂಟೆಗಳ ಕಾಲ ಕುಳಿತುಕೊಂಡ ಆತ ಪೊಲೀಸರಿಗೆ ಕರೆ ಮಾಡಿ ಶರಣಾದ. ಓಡಿ ಹೋಗದೆ ಶರಣಾಗಿರುವುದು ತುಂಬಾ ಒಳ್ಳೆಯ ವಿಚಾರವೆನ್ನಬಹುದು.

 
English summary

This Man Stabbed His Wife To Death!

Anger can make a person do anything and murdering a person in a fit of rage is not something new! Here, in this article, we are about to share the case of a dentist man named Umesh Bobale who stabbed his 36-year-old wife in front of his son. This man did the most ghastly thing that one can think of! Check out the reason on why he stabbed his wife to death and what he did after he murdered her!
Please Wait while comments are loading...
Subscribe Newsletter