Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಗೂಗಲ್‌ನಲ್ಲಿ ಏನು ಬೇಕಾದರೂ ಹುಡುಕಿ, ಆದರೆ...
ಕೆಲವೊಂದನ್ನು ಹುಡುಕಿದರೆ ಚೆನ್ನ, ಇನ್ನೂ ಕೆಲವನ್ನು ಹುಡುಕದಿದ್ದರೆ ಚೆನ್ನ, ಕೆಲವನ್ನು ತಿಳಿದುಕೊಂಡರೆ ಒಳ್ಳೆಯದು, ಇನ್ನೂ ಕೆಲವನ್ನು ಹುಡುಕದೆ ಇದ್ದರೆ ಒಳ್ಳೆಯದು. ಬನ್ನಿ ಗೂಗಲ್‌ನಲ್ಲಿ ನೀವು ಯಾವತ್ತಿಗೂ ಹುಡುಕಬಾರದಂತಹ ಕೆಲವೊಂದು ಅಂಶಗಳ ಕುರಿತಾಗಿ ನಾವು ನಿಮಗೆ ಇಂದು ತಿಳಿಸುತ್ತೇವೆ.
ಅರೆ ಇದನ್ನು ಹುಡುಕಿ ಮತ್ತು ಹುಡುಕಬೇಡಿ ಎಂದು ಹೇಳುವ ಅಧಿಕಾರ ನಿಮಗೆ ಯಾರು ಕೊಟ್ಟರು ಎಂದು ಕೇಳಬೇಡಿ. ಕೆಲವೊಂದು ಅಹಿತಕರ, ಅಸಹ್ಯಕರ ಮತ್ತು ವಾಕರಿಕೆ ಬರುವಂತಹ ಮತ್ತು ಮನಸ್ಸಿಗೆ ಘಾಸಿಯನ್ನುಂಟು ಮಾಡುವಂತಹ ಹಲವಾರು ವಿಷಯಗಳನ್ನು ಇಂಟರ್‌ನೆಟ್ ಒಳಗೊಂಡಿರುತ್ತದೆ.
ನೋಡದೆ ಇದ್ದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ ನೋಡಲೇ ಬೇಕು ಎಂದರೆ ಅದು ನಿಮ್ಮ ಸ್ವಾತಂತ್ರ್ಯ. ನಿಮಗೆ ಸ್ವಾತಂತ್ರ್ಯವನ್ನು ಬಳಸಿಕೊಂಡು ನೀವು ಹುಡುಕಾಟ ಮಾಡಿದರೆ ಅದರಿಂದ ಸ್ವಲ್ಪ ಹೊತ್ತು ಮನಸ್ಸಿಗೆ ಕಿರಿಕಿರಿಯಾಗುವುದು ನಿಮಗೆ! ಬನ್ನಿ ಅಂತಹ ಯಾವೆಲ್ಲಾ ಅಂಶಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ತಿಳಿದುಕೊಳ್ಳೋಣ....

ಕ್ಲಾಕ್ ಸ್ಪೈಡರ್
ಜೇಡಗಳ ಕುರಿತಾಗಿ ನಿಮಗೆ ಭಯವಿದ್ದಲ್ಲಿ, ಖಂಡಿತ ಈ ಜೇಡವನ್ನು ನೋಡುವ ಧೈರ್ಯವನ್ನು ನೀವು ತೆಗೆದುಕೊಳ್ಳುವುದಿಲ್ಲ. ಒಮ್ಮೆ ನೋಡಿದರೆ ರಾತ್ರಿ ಮಲಗುವುದು ಕಷ್ಟವಾಗಬಹುದು. ಏಕೆಂದರೆ ಇವು ಜಗತ್ತಿನಲ್ಲಿರುವ ಅತ್ಯಂತ ಅಪಾಯಕಾರಿ ಜೇಡಗಳು ಎಂಬ ಕುಖ್ಯಾತಿಯನ್ನು ಗಳಿಸಿವೆ.

ಟೈರೊಫೋಬಿಯಾ
ಈ ಪದವು ನಾವು ನೋಡುವ ದೃಶ್ಯಗಳನ್ನು, ಅದರಲ್ಲಿಯೂ ಮನಸ್ಸಿಗೆ ಘಾಸಿಯುಂಟು ಮಾಡುವ ದೃಶ್ಯಗಳ ಕುರಿತಾದ ಫೋಬಿಯಾ ಆಗಿರುತ್ತದೆ.ಈ ಚಿತ್ರಗಳು ಭಯವನ್ನುಂಟು ಮಾಡುವ ಸಣ್ಣ ಸಣ್ಣ ರಂಧ್ರಗಳನ್ನು ಒಳಗೊಂಡಿರುತ್ತದೆ. ನೆಮ್ಮದಿಯ ವಿಷಯವೆಂದರೆ ಇವೆಲ್ಲವು ಫೋಟೋಶಾಪ್ ಮಾಡಿದ ಚಿತ್ರಗಳು. ಇವೇ ನಿಜವಾಗಿದ್ದಲ್ಲಿ ಹೇಗಿರುತ್ತಿತ್ತು ಕತೆ ಯೋಚಿಸಿ.

"ಬಿಯರ್"
ಇದು 1976 ರಲ್ಲಿ ಬಿಡುಗಡೆಯಾದ ಒಂದು ಕಾದಂಬರಿ, ಇದರ ಲೇಖಕ ಮರಿಯನ್ ಎಂಗೆಲ್. ಇದು ಒಂದು ಹುಡುಗಿ ಕರಡಿಯ ಜೊತೆಗೆ ಮಿಲನವನ್ನು ಮಾಡುವ ಕುರಿತಾಗಿ ವಿವರಿಸುತ್ತದೆ. ಇದರ ಕುರಿತು ನೀವು ಹೇಗೆ ಆಲೋಚಿಸುವಿರಿ ಎಂದು ನಿಮಗೆ ಬಿಟ್ಟದ್ದು.

ರೋಗ ಲಕ್ಷಣಗಳು
ಯಾವುದೇ ರೋಗ ಲಕ್ಷಣಗಳನ್ನು ಹುಡುಕಲು ಹೋಗಬೇಡಿ. ಅವುಗಳು ತಿಳಿಸುವ ಕೆಲವೊಂದು ಅಂಶಗಳು ನಿಮ್ಮಲ್ಲೂ ಸಹ ಕಾಣಿಸಿಕೊಳ್ಳಬಹುದು. ನಿಮಗೆ ರೋಗವಿಲ್ಲದೆ ಇದ್ದರು ಸಹ, ಇವು ನಿಮಗೆ ಭೀತಿಯುಂಟು ಮಾಡಬಹುದು. ಆದ್ದರಿಂದ ಇದನ್ನು ಗೂಗಲ್ ಮಾಡಲು ಹೋಗಬೇಡಿ.

ವೆಟ್ ಕೋಲಾ
ಈ ಚಿತ್ರವು ಅಸಹ್ಯಕರಿಯಲ್ಲವೇನು. ನೆಮ್ಮದಿಯಾಗಿರಿ, ಇದು ಫೋಟೋ-ಶಾಪ್ ಮಾಡಿದ ಚಿತ್ರ, ಹೆದರಬೇಕಾಗಿಲ್ಲ. Image courtesy

ಪೀನಟ್
ವಿಶ್ವದ ಅತ್ಯಂತ ಅಸಹ್ಯಕರ ನಾಯಿ. ಇದನ್ನು ಕೊಂಡುಕೊಳ್ಳುವ ಧೈರ್ಯ ಮಾಡಬೇಡಿ!, ಹಾಲಿವುಡ್‌ನ ಹಾರರ್ ಸಿನಿಮಾದಲ್ಲೂ ಸಹ ಈ ಬಗೆಯ ನಾಯಿಯನ್ನು ನೀವು ನೋಡಿರುವುದಿಲ್ಲ. ಇದನ್ನು ನೋಡಲು ಹೋಗಬೇಡಿ, ಕನಸಿನಲ್ಲಿ ಬರುತ್ತದೆ.

ತಿಗಣೆಗಳು
ಹಾಸಿಗೆ ಮೇಲೆ ಇರುವ ತಿಗಣೆಯನ್ನು, ಜೂಮ್ ಮಾಡಿ ತೆಗೆದ ಫೋಟೋವನ್ನು ನೋಡಿದರೆ ತಿಂದದ್ದು ಕೆಲವರಿಗೆ ವಾಂತಿಯಾಗುತ್ತದೆ. ನೋಡುವ ಇಷ್ಟವಿದ್ದರೆ ನೋಡಿ. ಅದರ ಬಗ್ಗೆ ನಾವು ಹೆಚ್ಚಾಗಿ ತಿಳಿಸಲು ಹೋಗುವುದಿಲ್ಲ!.

ತ್ವಚೆಯ ಸ್ಥಿತಿಗಳು
ಇವುಗಳ ಕುರಿತಾಗಿ ನೀವು ನಿರ್ದಿಷ್ಟವಾಗಿರಬೇಕಾದ ಅಗತ್ಯವಿಲ್ಲ. ನೀವು ಹುಡುಕುವ ಸ್ಥಿತಿಯ ಕುರಿತಾಗಿ ಗೂಗಲ್ ಲಕ್ಷಾಂತರ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಇದನ್ನು ನೋಡಿದರೆ ನಿಮ್ಮ ತ್ವಚೆಯ ಕುರಿತಾಗಿ ನಿಮಗೆ ಭಯ ಭೀತಿಯುಂಟಾಗುವುದು ಖಂಡಿತ. ಆದ್ದರಿಂದ ನಮ್ಮ ಸಲಹೆ, ಇದನ್ನು ನೋಡಬೇಡಿ.



Click it and Unblock the Notifications