Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಲ್ಲಿನ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳು
ಆರೋಗ್ಯವಾಗಿರಬೇಕೆಂದರೆ ತಿಂದ ಆಹಾರವು ಸರಿಯಾಗಿ ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರಿಕೊಳ್ಳಬೇಕು. ಇದನ್ನು ಮಾಡಲು ಜೀರ್ಣಾಂಗ ವ್ಯವಸ್ಥೆ ಇರುತ್ತದೆ. ಆಹಾರವು ಹೊಟ್ಟೆಯನ್ನು ಸೇರುವ ಮೊದಲು ಅದು ಸರಿಯಾಗಿ ತುಂಡಾಗುವಂತೆ ಮಾಡುವುದು ಹಲ್ಲುಗಳು. ಹಲ್ಲುಜ್ಜುವಾಗ ನೀವು ಏನೆಲ್ಲಾ ತಪ್ಪು ಮಾಡ್ತೀರ ಗೊತ್ತಾ?
ಆಹಾರ ಜೀರ್ಣಕ್ರಿಯೆಯಲ್ಲಿ ಹಲ್ಲುಗಳ ಪಾತ್ರ ತುಂಬಾ ಮಹತ್ವದ್ದಾಗಿದೆ ಎನ್ನಬಹುದು. ಯಾಕೆಂದರೆ ಹಲ್ಲುಗಳು ಆಹಾರವನ್ನು ಸರಿಯಾಗಿ ಜಗಿಯದೆ ಇದ್ದರೆ ಆಗ ಜೀರ್ಣಕ್ರಿಯೆಗೆ ಅದರಿಂದ ತೊಂದರೆಯಾಗುತ್ತದೆ. ಹಲ್ಲುಗಳು ಆಹಾರವನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಜಗಿಯುವ ಕಾರಣ ಜೀರ್ಣಕ್ರಿಯೆಯು ವೇಗವಾಗಿ ಆಗಿ ಅದರಲ್ಲಿನ ಪೋಷಕಾಂಶಗಳು ದೇಹವನ್ನು ಸೇರುವಂತಾಗುತ್ತದೆ. ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು
ದೇಹದ ಆರೋಗ್ಯವು ಸರಿಯಾಗಿರಬೇಕೆಂದರೆ ಹಲ್ಲುಗಳು ಕೂಡ ಆರೋಗ್ಯದಿಂದ ಇರಬೇಕು. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಹಲ್ಲು ಅಥವಾ ಒಸಡಿನ ನೋವಿದ್ದರೆ ಆಗ ಆಹಾರ ಸೇವನೆ ಕೂಡ ಕಷ್ಟವಾಗುತ್ತದೆ. ಇದರಿಂದ ದೇಹ ನಿಶ್ಯಕ್ತಿಗೆ ಒಳಗಾಗಬಹುದು. ಹಲ್ಲುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ವಿಚಾರಗಳು ಈ ಲೇಖನದಲ್ಲಿದೆ. ಇದನ್ನು ಓದಿಕೊಳ್ಳಿ.

ಬಲಿಷ್ಠ ಹಲ್ಲುಗಳ ರಹಸ್ಯ
ಬಲಿಷ್ಠವಾಗಿರುವ ಹಲ್ಲುಗಳಿಗೆ ಫ್ಲೋರೈಡ್ ಕಾರಣವಾಗಿದೆ. ಹಲ್ಲುಗಳು ಕೆಡುವುದು ಮತ್ತು ಬೇಗನೆ ಉದುರುವುದನ್ನು ಇದು ನಿಯಂತ್ರಿಸುತ್ತದೆ. ಇದರಿಂದಾಗಿ ಹೆಚ್ಚಿನ ಹಲ್ಲುಜ್ಜುವ ಪೇಸ್ಟ್ ಮತ್ತು ಮೌತ್ ವಾಶ್‌ಗಳಲ್ಲಿ ಫ್ಲೋರೇಡ್ ಅನ್ನು ಬಳಸಲಾಗುತ್ತದೆ.

ಪದರಗಳು ಗಟ್ಟಿಯಾದರೆ
ಹಲ್ಲುಗಳ ಮಧ್ಯೆ ಸಿಲುಕುವ ಆಹಾರ, ಬ್ಯಾಕ್ಟೀರಿಯಾ, ಆಮ್ಲಾ ಮತ್ತು ಸಾಲಿವಾದಿಂದಾಗಿ ಪದರವು ನಿರ್ಮಾಣವಾಗುತ್ತದೆ. ಪದರವನ್ನು ತೆಗೆಯಲು ದಿನಾಲೂ ಬ್ರಶ್ ಮಾಡಿಕೊಳ್ಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪದರಗಳು ಗಟ್ಟಿಯಾದರೆ
ಪದರವನ್ನು ನಿಯಮಿತವಾಗಿ ತೆಗೆಯದೆ ಇದ್ದರೆ ಅದು ಗಟ್ಟಿ ಆಗಿ ಹಲ್ಲುಗಳಲ್ಲಿ ಕಲೆಯನ್ನು ಉಂಟು ಮಾಡುತ್ತದೆ.

ಸಕ್ಕರೆಯಿಂದ ಹಲ್ಲುಗಳಿಗೆ ಹಾನಿ
ಸಕ್ಕರೆ ಸೇವನೆ ಮಾಡಿದರೆ ಅದರಿಂದ ಹಲ್ಲುಗಳು ಕೊಳೆಯುತ್ತದೆ ಎಂದು ಇಂಗ್ಲೆಂಡಿನಲ್ಲಿ ಮಾಡಿರುವ ಅಧ್ಯಯನವೊಂದು ಹೇಳಿದೆ.

ಸಕ್ಕರೆಯಿಂದ ಹಲ್ಲುಗಳಿಗೆ ಹಾನಿ
ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಬಳಸಿಕೊಂಡು ಆಮ್ಲವನ್ನು ಉಂಟುಮಾಡುತ್ತದೆ. ಇದರಿಂದ ಹಲ್ಲುಗಳಲ್ಲಿ ಗುಳಿ ನಿರ್ಮಾಣವಾಗುತ್ತದೆ.

ಪದೇ ಪದೇ ತಿನ್ನುವುದು
ಪದೇ ಪದೇ ತಿನ್ನುವ ಕಾರಣದಿಂದಾಗಿ ಹಲ್ಲುಗಳಿಗೆ ಆಹಾರದ ಸಂಪರ್ಕವಾಗಿ ಅದರಿಂದ ಬ್ಯಾಕ್ಟೀರಿಯಾ ನಿರ್ಮಾಣವಾಗುತ್ತದೆ. ಎಷ್ಟು ಸಲ ಆಹಾರದ ಸಂಪರ್ಕ ಹಲ್ಲಿನೊಂದಿಗೆ ಆಗುತ್ತದೆಯಾ ಅಷ್ಟು ಬ್ಯಾಕ್ಟೀರಿಯಾ ಸಂಗ್ರಹವಾಗುತ್ತದೆ. ಇದರಿಂದ ಹಲ್ಲುಗಳು ದುರ್ಬಲವಾಗುವುದು.

ಬಾಯಿಯ ಎಂಜಲು
ಎಂಜಲಿನ ಬಗ್ಗೆ ಹೆಚ್ಚಾಗಿ ಅಸಹ್ಯ ಪಟ್ಟುಕೊಳ್ಳುತ್ತೇವೆ. ಆದರೆ ಇದು ಮಾಡುವಂತಹ ಕೆಲಸ ಮಾತ್ರ ಅದ್ಭುತವಾಗಿದೆ. ಇದು ಆಹಾರವನ್ನು ತುಂಡು ಮಾಡಿ ಅದು ಸುಲಭವಾಗಿ ಕರಗುವಂತೆ ಮಾಡುವುದು. ಇದು ಬಾಯಿಯನ್ನು ತೇವಾಂಶದಿಂದ ಇಡುತ್ತದೆ ಮತ್ತು ಕೆಟ್ಟ ದುರ್ವಾಸನೆಯನ್ನು ತಡೆಯುತ್ತದೆ.



Click it and Unblock the Notifications
