Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗರಿಗೂ ಆಸೆಗಳಿವೆ, ಆದರೆ ಬಾಯಿ ಬಿಡುವುದಿಲ್ಲ ಅಷ್ಟೇ!
ನಮ್ಮ ಸುತ್ತಲಿನ ಸಮಾಜವೇ ಹಾಗೆ. ಏನೇ ಮಾಡಿದರೂ ಅದಕ್ಕೊಂದು ಮಾತು ಬಂದೇ ಬರುತ್ತದೆ. ಒಳ್ಳೆಯದು ಮಾಡಲಿ ಅಥವಾ ಕೆಟ್ಟದು ಮಾಡಲಿ, ಅಲ್ಲಿ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಸಮಾಜದ ಕಣ್ಣು ತಪ್ಪಿಸಿ ಏನಾದರೂ ಮಾಡಲು ಎಲ್ಲರೂ ಪ್ರಯತ್ನಿಸುತ್ತಾ ಇರುತ್ತಾರೆ. ಪುರುಷರು ಇದರಲ್ಲಿ ಮುಂದಿರುತ್ತದೆ. ಮಹಿಳೆಯರು ಮಾಡುವಂತಹ ಕೆಲವೊಂದು ವಿಷಯಗಳನ್ನು ಪುರುಷರು ಕೂಡ ಮಾಡಲು ಬಯಸುತ್ತಾರೆ.
ಆದರೆ ಇದನ್ನು ಕೇಳಿಕೊಳ್ಳಲು ಅವರಿಗೆ ಬಿಗುಮಾನ. ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆಯಾ ಎಂದು. ಕೆಲವು ಪುರುಷರಿಗೆ ಪಿಂಕ್ ಬಣ್ಣದ ಬಟ್ಟೆ ಇಷ್ಟವಿರುತ್ತದೆ. ಆದರೆ ಇದು ಮಹಿಳೆಯರ ಬಣ್ಣ ಎಂದು ಭಾವಿಸುತ್ತಾರೆ. ಅದೇ ಇನ್ನು ಕೆಲವರಿಗೆ ಪಾರ್ಟಿಯಲ್ಲಿ ಕಾಕ್ ಟೇಲ್ ಕುಡಿಯಲು ಇಷ್ಟವಿರುತ್ತದೆ. ಇಂತಹ ಹಲವಾರು ವಿಷಯಗಳನ್ನು ಪುರುಷರು ಮಾಡುತ್ತಾರೆ. ಪುರುಷರು ಹೇಳಲು ಬಯಸದೆ ಮಾಡುವಂತಹ ವಿಷಯಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.....

ಗಾಸಿಪ್
ಮಹಿಳೆಯರು ಮಾತ್ರ ಗಾಸಿಪ್ ಮಾಡುತ್ತಾರೆ ಎಂದು ಅಂದುಕೊಳ್ಳಬೇಡಿ. ಯಾಕೆಂದರೆ ಪುರುಷರು ಕೂಡ ಮಹಿಳೆಯರಷ್ಟೇ ಗಾಸಿಪ್ ಮಾಡುತ್ತಾರೆ. ಇದು ಕೆಲವೊಂದು ಸಿನಿಮಾಗಳ ಬಗ್ಗೆ ಆಗಿರಬಹುದು ಅಥವಾ ಹಾಸ್ಯ ಚಟಾಕಿಯಾಗಿರಬಹುದು. ಆದರೆ ಗಾಸಿಪ್ ಮಾತ್ರ ಇದ್ದೇ ಇದೆ.

ಕಾಕ್ ಟೇಲ್
ಪಾರ್ಟಿಗೆ ಹೋದರೆ ಕುಡಿಯಲು ಆರಂಭಿಸಿದರೆ ಅದು ನಮಗೆ ಇಷ್ಟವಾಗಬೇಕು. ಅಂತಹ ಮದ್ಯವನ್ನು ಮಾತ್ರ ಸೇವಿಸುತ್ತೇವೆ. ಆದರೆ ಬಣ್ಣಬಣ್ಣದ ವಿವಿಧ ರೀತಿಯ ಮದ್ಯವನ್ನು ಒಂದೇ ಗ್ಲಾಸ್ ನಲ್ಲಿ ಹಾಕಿಕೊಂಡು ಕುಡಿಯುವುದು ಒಳ್ಳೆಯ ಅನುಭವ ನೀಡುವುದು. ಪುರುಷರು ಹೆಚ್ಚಾಗಿ ಇದನ್ನೇ ಬಯಸುವುದು.

ಶಾಂಪೂ
ಕೂದಲಿನ ಆರೈಕೆ ಬಗ್ಗೆ ಮಹಿಳೆಯರಿಗೆ ಮಾತ್ರ ಕಾಳಜಿ ಇರುವುದು ಎಂದು ತಿಳಿದಿದ್ದರೆ ಅದು ಖಂಡಿತವಾಗಿಯೂ ತಪ್ಪು. ಹೆಚ್ಚಿನ ಪುರುಷರು ಶಾಂಪೂ ಮತ್ತು ಕೂದಲಿನ ಆರೈಕೆಯ ಸಾಧನಗಳಿಗೆ ಹಣ ವ್ಯಯಿಸುತ್ತಾರೆ.

ಅಡುಗೆ ಮಾಡುವುದು
ಅಡುಗೆಕೋಣೆಗೆ ಮಹಿಳೆಯರು ಮಾತ್ರ ಹೋಗಬೇಕೆನ್ನುವ ನಿಯಮ ತುಂಬಾ ಹಳೆಯದಾಗಿದೆ. ಆಹಾರವನ್ನು ಇಷ್ಟಪಡುವ ಪ್ರತಿಯೊಬ್ಬ ಪುರುಷನು ಅಡುಗೆಮನೆಗೆ ಹೋಗಿ ಏನಾದರೂ ಆಹಾರ ತಯಾರಿಸಬೇಕೆಂದು ಬಯಸುತ್ತಾನೆ. ಅದರಲ್ಲೂ ಅಡುಗೆ ಮಾಡುವಂತಹ ಪುರುಷರು ಮಹಿಳೆಯರಿಗೆ ಸೆಕ್ಸಿಯಾಗಿ ಕಾಣುತ್ತಾರಂತೆ!

ಫ್ಯಾಷನ್
ಮಹಿಳೆಯರು ಮಾತ್ರ ಬಟ್ಟೆ ಅಂಗಡಿಗಳಿಗೆ ಹೋಗಿ ಗಂಟೆಗಟ್ಟಲೆ ಕಳೆಯುತ್ತಾರೆ ಎಂದು ನಿಮಗನಿಸಿದರೆ ಅದು ಖಂಡಿತವಾಗಿಯೂ ತಪ್ಪು. ಯಾಕೆಂದರೆ ಇಂದಿನ ದಿನಗಳಲ್ಲಿ ಮಾಲ್‌ಗಳಲ್ಲಿ ಹೋಗಿ ನೋಡಿದರೆ ಮಹಿಳಯರಷ್ಟೇ ಪುರುಷರು ಶಾಪಿಂಗ್ ಮಾಡುವುದನ್ನು ಕಾಣಬಹುದು.

ತುಂಬಾ ಹೊತ್ತು ಸ್ನಾನ ಮಾಡುವುದು!
ಕಚೇರಿ ಮತ್ತು ಟ್ರಾಫಿಕ್‌ನ ಒತ್ತಡದಿಂದ ಮನೆಗೆ ಮರಳಿದ ಬಳಿಕ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಅದರಿಂದ ಸಿಗುವ ಆನಂದವೇ ಬೇರೆ. ಬಿಸಿ ನೀರು ಸ್ನಾಯುಗಳಿಗೆ ಆರಾಮ ನೀಡುತ್ತದೆ. ಇದರಿಂದಾಗಿ ಪುರುಷರು ಕೂಡ ಸ್ನಾನಗೃಹದಲ್ಲಿ ಮಹಿಳೆಯರಷ್ಟೇ ಹೊತ್ತು ಕಳೆಯುತ್ತಾರೆ.

ರೋಮ್ಯಾಂಟಿಕ್ ಕಾಮಿಡಿ
ಇಂತಹ ಸಿನಿಮಾಗಳನ್ನು ನೋಡಲು ಗೆಳತಿ ಅಥವಾ ಪತ್ನಿ ಒತ್ತಾಯ ಮಾಡಿದ್ದರಿಂದ ನಾನು ನೋಡಿದೆ ಎಂದು ಹೆಚ್ಚಿನ ಪುರುಷರು ಹೇಳಿಕೊಳ್ಳುತ್ತಾರೆ. ಆದರೆ ನಿಜವೇ ಬೇರೆ. ಇಂತಹ ಸಿನಿಮಾಗಳು ಪುರುಷರಿಗೆ ಕೂಡ ಇಷ್ಟ. ಹೇಳಲು ನಾಚಿಕೆಯಷ್ಟೇ.

ಗುಲಾಬಿ ಉಡುಪುಗಳು
ರೂಪದರ್ಶಿಗಳು ಟಿವಿಯಲ್ಲಿ ಗುಲಾಬಿ ಬಣ್ಣದ ಬಟ್ಟೆಯನ್ನು ಹಾಕಿಕೊಂಡು ನಡೆದಾಡುವಾಗ ಪುರುಷರು ಕೂಡ ಮನಸ್ಸಿನಲ್ಲೇ ಇದು ಚೆನ್ನಾಗಿದೆ ಅಂದುಕೊಳ್ಳುತ್ತಾರೆ. ಆದರೆ ಹೆಚ್ಚಿನ ಪುರುಷರು ನಾಚಿಕೆಯಿಂದ ಗುಲಾಬಿ ಬಣ್ಣದ ಬಟ್ಟೆ ಧರಿಸಲು ಹಿಂಜರಿಯುತ್ತಾರೆ. ಗುಲಾಬಿ ಕೇವಲ ಮಹಿಳೆಯರಿಗೆ ಮಾತ್ರ ಎಂದು ಭಾವಿಸಿರುತ್ತಾರೆ.

ಕ್ಯಾಂಡಿ
ಬಾಲ್ಯದಲ್ಲಿ ತಿಂದ ಪ್ರತಿಯೊಂದು ಕ್ಯಾಂಡಿಯ ಬಣ್ಣ ನಮ್ಮೆಲ್ಲರ ಮನದಲ್ಲಿ ಇರುತ್ತದೆ. ಆದರೆ ವಯಸ್ಸಾದಂತೆ ಇದನ್ನು ತಿಂದರೆ ಬೇರೆಯವರು ಏನಂದುಕೊಳ್ಳುತ್ತಾರೆಯಾ ಎನ್ನುವ ಭಯ. ಬಾಲ್ಯದಲ್ಲಿ ತಿನ್ನುತ್ತಿದ್ದಂತಹ ಕ್ಯಾಂಡಿಯನ್ನು ಹೆಚ್ಚಿನ ಪುರುಷರು ಈಗಲೂ ಇಷ್ಟಪಡುತ್ತಾರೆ.



Click it and Unblock the Notifications
