For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಈ ರೀತಿ ಮನಸ್ಸಿಗೆ ಹಚ್ಚಿಕೊಂಡರೆ ಏನು ಗತಿ?

By Arshad
|

ಜೀವನದಲ್ಲಿ ಅತಿ ಮಹತ್ವದ ಸಂಗತಿ ಏನು ಎಂದರೆ ಇಂದಿನವರು 'ಹಣ' ಎಂಬ ಉತ್ತರವನ್ನು ನೀಡಬಹುದು. ಏಕೆಂದರೆ ಇಂದಿನ ದಿನದಲ್ಲಿ ಹಣದ ಹೊರತಾದ ಯೋಚನೆಗಳೇ ಕಡಿಮೆ. ಪ್ರತಿಯೊಂದೂ ಹಣಕ್ಕೇ ತಗುಲಿಕೊಂಡಿದೆ. ಅಂತೆಯೇ ಹೆಚ್ಚು ಹಣವಿದ್ದವರು ಅತಿ ಸುಖಿಗಳು ಎಂಬ ನಂಬಿಕೆ ನಮ್ಮೆಲ್ಲರಲ್ಲಿ ಮೂಡಿಬಿಟ್ಟಿದೆ. ಅಂದರೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಹೋಲಿಸಿಕೊಳ್ಳುತ್ತಾ ಇರುತ್ತೇವೆ.

ಹಣವಿಲ್ಲದವರು ಹಣವಿಲ್ಲವೆಂದು ಕೊರಗಿದ್ದರೆ ಹಣವಿದ್ದವರು ಆರೋಗ್ಯವಿಲ್ಲವೆಂದು ಕೊರಗುತ್ತಾರೆ. ಆದರೆ ಜೀವನದ ಅತಿ ಮಹತ್ವ ಎಲ್ಲಿದೆ ಎಂದು ಹಿರಿಯರನ್ನು ಮತ್ತು ಜೀವನದ ಮಹತ್ವವನ್ನು ಅರಿತವರಲ್ಲಿ ಕೇಳಿದರೆ 'ನೆಮ್ಮದಿ' ಎಂಬ ಉತ್ತರ ದೊರಕುತ್ತದೆ. ಹೌದು, ನಾವು ಯಾವುದೇ ಸ್ಥಿತಿಯಲ್ಲಿದ್ದರೂ ನೆಮ್ಮದಿಯಿಂದಿರುವುದೇ ನಿಜವಾದ ಸುಖ. ಆದರೆ ಜೀವನದಲ್ಲಿ ಇಂದು ಸೌಲಭ್ಯಗಳು ಹೆಚ್ಚಿತ್ತಿದ್ದಂತೆಯೇ ಹೋಲಿಸಿಕೊಳ್ಳುವ ಮಟ್ಟವೂ ಹೆಚ್ಚುತ್ತಾ ನೆಮ್ಮದಿಯೂ ಕದಡುತ್ತಿದೆ. ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

ಸಾಮಾನ್ಯವಾಗಿ ನಾವು ಯಾವ ವಿಷಯನ್ನು ಕುರಿತು ಹೆಚ್ಚು ಹೋಲಿಸಿಕೊಳ್ಳುತ್ತೇವೆಯೋ ಅಷ್ಟೂ ನೆಮ್ಮದಿ ಕಳೆದುಕೊಳ್ಳುತ್ತೇವೆ. ಇಂತಹ ಏಳು ಸಂಗತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದ್ದು ಈ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಕೇವಲ ಮುಂದೆ ಸಾಗುವ ಬಗ್ಗೆ, ಇನ್ನಷ್ಟು ಉತ್ತಮರೀತಿಯಲ್ಲಿ ಸಾಧನೆ ಸಾಧಿಸುವ ಬಗ್ಗೆ ಯೋಚಿಸುವ, ಅದರಂತೆ ನಡೆಯುವ ಮೂಲಕ ನೆಮ್ಮದಿಯನ್ನು ಪಡೆದುಕೊಳ್ಳಬಹುದು.

ಏಕೆಂದರೆ ಪ್ರತಿಯೊಬ್ಬರಿಗೂ ಪ್ರತಿ ವಿಷಯದಲ್ಲಿಯು ಒಳ್ಳೆಯ ಮತ್ತು ಕೆಟ್ಟ ಅನುಭವಗಳು ಆಗುತ್ತಲೇ ಇರುತ್ತವೆ. ಒಳ್ಳೆಯದನ್ನು ಗಮನದಲ್ಲಿಟ್ಟುಕೊಂಡು ಕೆಟ್ಟದ್ದರ ಬಗ್ಗೆ ಹೆಚ್ಚು ಯೋಚಿಸದೇ ಇದರಿಂದ ಪಾಠ ಕಲಿತು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಮೂಲಕ ಮುಂದೆ ಸಾಗುವುದೇ ನಿಜವಾದ ಜೀವನದ ಸಾರವಾಗಿದೆ. ನೀನು ನಕ್ಕರೆ ಜಗವೇ ನಗುವುದು, ನೀನು ಅತ್ತರೆ ಒಂಟಿಯಾಗಿಯೇ ಅಳಬೇಕು ಎಂಬ ಸುಭಾಷಿತವೊಂದಿದೆ.

ಅಂತೆಯೇ ಹಿಂದಿನ ಯಾವುದೋ ನೋವನ್ನು ನೆನೆಸಿಕೊಂಡು ಇಂದು ಅಳುವುದರಿಂದ ಮುಂದಿನ ದಿನಗಳು ಇನ್ನಷ್ಟು ದುಃಖಭರಿತವಾಗುತ್ತವೆ. ಈ ನೋವಿನ ವಿಷಯಗಳನ್ನು ನೆನೆಸಿಕೊಳ್ಳದೇ ಜೀವನದಲ್ಲಿ ಸಿಗಬಹುದಾದ ಆನಂದಗಳನ್ನು ಮತ್ತು ಹೊಸ ಸವಾಲುಗಳನ್ನು ಎದುರಿಸುವಲ್ಲಿಯೇ ಸಾರ್ಥಕತೆ ಅಡಗಿದೆ. ಯಾವಾಗ ಈ ನಿಟ್ಟಿನಲ್ಲಿ ನಿಮ್ಮ ಯೋಚನೆಗಳು ಧನಾತ್ಮಕ ರೂಪ ಪಡೆದವೋ, ಆಗ ಜಗತ್ತು ಸುಂದರವಾಗುತ್ತಾ ಹೋಗುತ್ತದೆ. ಆದ್ದರಿಂದ ಕೆಳಗೆ ವಿವರಿಸಿರುವ ವಿಷಯಗಳ ಬಗ್ಗೆ ಹೆಚ್ಚು ಚಿಂತಿಸದೇ ಮುಂದುವರೆಯುವುದರಿಂದ ಜೀವನದಲ್ಲಿ ಸುಖ ನೆಮ್ಮದಿ ಕಾಣಬಹುದು..

ಕೆಟ್ಟ ನೆನಪುಗಳು

ಕೆಟ್ಟ ನೆನಪುಗಳು

ನಾನು ಮರೆಯಬೇಕೆನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲವಲ್ಲ ಎಂದು ಅ.ನ.ಕೃ ರವರು ಎಂದೋ ತಮ್ಮ ಕಥೆಯಲ್ಲಿ ಹೇಳಿದ್ದಾರೆ. ನಮ್ಮ ಮನಸ್ಸು ಒಂದು ಮರ್ಕಟವಿದ್ದಂತೆ. ಮರೆಯಲೇಬಾರದೆನ್ನುವುದನ್ನು ಸುಲಭವಾಗಿ ಮರೆತು ಬಿಡುತ್ತೇವೆ. ಆದರೆ ಮರೆತುಬಿಡಬೇಕೆನ್ನುವುದನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹಿಂದೆ ನಡೆದಿದ್ದ ಕಹಿಘಟನೆಗಳನ್ನು ಮರೆಯಬೇಕೆಂದರೆ ಅದು ಅಷ್ಟು ಸುಲಭವಲ್ಲ. ಅಂತೆಯ ಅಸಾಧ್ಯವೂ ಅಲ್ಲ. ಇದಕ್ಕೆ ಒಂದು ಸುಲಭ ಉಪಾಯವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಟ್ಟ ನೆನಪುಗಳು

ಕೆಟ್ಟ ನೆನಪುಗಳು

ನಿಮಗೆ ಇಷ್ಟವಾದ ವಿಷಯಗಳ ಕುರಿತೇ ಹೆಚ್ಚು ಯೋಚಿಸುವುದನ್ನು, ಇದೇ ನಿಟ್ಟಿನಲ್ಲಿ ನಿಮ್ಮ ಯೋಚನಾಲಹರಿ ಹರಿಯುವುದನ್ನು, ಸಾಧ್ಯವಾದರೆ ಹೊಸ ವಿಷಯ ಕಲಿಯುವುದನ್ನು ಪ್ರಾರಂಭಿಸುವ ಮೂಲಕ ಹಳೆಯ ನೆನೆಪುಗಳು ಬಾರದಂತೆ ನೋಡಿಕೊಳ್ಳಬಹುದು. ಎಷ್ಟೋ ಸಲ, ಇಂತಹ ಪ್ರಯತ್ನಗಳಲ್ಲಿ ಜಯಶೀಲರಾಗಿ ಇಂದು ಅತ್ಯುನ್ನತ ಸ್ಥಾನಗಳಲ್ಲಿರುವವರು ನಮಗೆ ಮಾದರಿಯಾಗಿದ್ದಾರೆ.

ಸಿಟ್ಟು

ಸಿಟ್ಟು

ಎಂತಹ ಒಳ್ಳೆಯ ಮನುಷ್ಯರಾದರೂ ಸಿಟ್ಟಿನ ಭರದಲ್ಲಿ ತಪ್ಪು ಮಾಡಿಬಿಡಬಹುದು. ಸಿಟ್ಟಿನಲ್ಲಿ ಕೈಗೊಂಡ ನಿರ್ಣಯಗಳು ಎಂದಿಗೂ ತಪ್ಪೇ ಆಗಿರುತ್ತವೆ. ಆದ್ದರಿಂದ ಸಿಟ್ಟು ಬಂದಾಗ ಯಾವುದೇ ತೀರ್ಮಾನ ಕೈಗೊಳ್ಳದೇ ಸಿಟ್ಟನ್ನು ಶಮನ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಂದರೆ ಸಿಟ್ಟಿಗೆ ಕಾರಣವಾದ ವಿಷಯಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ತೊಂದರೆಗೆ ಪರಿಹಾರ ಪಡೆಯಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಿಟ್ಟು

ಸಿಟ್ಟು

ನೆನಪಿರಲಿ, ನಿಮಗೆ ಸಿಟ್ಟು ಬರಿಸಿಯೇ ತಮ್ಮ ಕೆಲಸ ಮಾಡಿಸಿಕೊಳ್ಳುವ ಹಿತಶತ್ರುಗಳು, ದುರುಳರು ನಮ್ಮ ಸುತ್ತ ಮುತ್ತಲೆಲ್ಲಾ ಇದ್ದಾರೆ. ಸಿಟ್ಟಿನಿಂದ ನಿಮ್ಮ ದೈಹಿಕ ಆರೋಗ್ಯದ ಸಹಿತ ಮಾನಸಿಕ ಆರೋಗ್ಯವೂ ಹಾಳಾಗುತ್ತದೆ.

ಹೊಟ್ಟೆಕಿಚ್ಚು

ಹೊಟ್ಟೆಕಿಚ್ಚು

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಎಂದು ಕುವೆಂಪು ರವರು ತಮ್ಮ ಬಾರಿಸು ಕನ್ನಡ ಡಿಂಡಿಮವ ಕವನದಲ್ಲಿ ಹೇಳಿದ್ದಾರೆ. ಈ ನಾಲ್ಕು ಪದಗಳಲ್ಲಿ ಎಷ್ಟೊಂದು ಗೂಢಾರ್ಥ ಅಡಗಿದೆ ಗಮನಿಸಿ. ನಾಲ್ಕು ಜನರ ಒಟ್ಟಿಗೆ ಇದ್ದಾಗ ಇನ್ನೊಬ್ಬರ ಏಳ್ಗೆಯನ್ನು ಸಹಿಸದೇ ಆಗುವ ಹೊಟ್ಟೆಕಿಚ್ಚು ಅಥವಾ ಮತ್ಸರ ಆ ವ್ಯಕ್ತಿಯ ಯೋಚನೆಯನ್ನೇ ಬದಲಿಸಿಬಿಡಬಹುದು. ವಾಸ್ತವವಾಗಿ ಈ ಯೋಚನೆಗಳೆಲ್ಲಾ ಋಣಾತ್ಮಕವಾಗಿದ್ದು ಮಾನಸಿಕವಾಗಿ ವ್ಯಕ್ತಿಯನ್ನು ಶಿಥಿಲವಾಗಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆಕಿಚ್ಚು

ಹೊಟ್ಟೆಕಿಚ್ಚು

ಆದ್ದರಿಂದ ಯಾವುದೇ ವ್ಯಕ್ತಿಯ ಏಳ್ಗೆಯನ್ನು ಶ್ಲಾಘಿಸಿ ತಾವೂ ಸಂಭ್ರಮಿಸುವ ಮೂಲಕ ನೆಮ್ಮದಿಯನ್ನು ಪಡೆಯಬಹುದು. ವ್ಯಕ್ತಿಯ ಏಳ್ಗೆಗೆ ಮತ್ಸರವನ್ನು ವ್ಯಕ್ತಪಡಿಸದೇ ಸಂತೋಷ ವ್ಯಕ್ತಪಡಿಸಿ ಇದರಿಂದ ಪ್ರೇರಣೆ ಪಡೆಯುವುದೇ ನಿಜವಾದ ನೆಮ್ಮದಿಯಾಗಿದೆ.

ಭವಿಷ್ಯದ ಬಗ್ಗೆ ಅತಿಯಾದ ಕಾಳಜಿ

ಭವಿಷ್ಯದ ಬಗ್ಗೆ ಅತಿಯಾದ ಕಾಳಜಿ

yesterday is history, tomorros is mystery, today is present, so enjoy this present ಎಂಬ ಅಂಗ್ಲ ಸುಭಾಷಿತದಂತೆ ಇಂದಿನ ದಿನ ದೇವರಿಂದ ನಮಗೆ ದೊರಕಿರುವ ಉಡುಗೊರೆಯಾಗಿದ್ದು ಇಂದಿನ ದಿನವನ್ನು ಎಷ್ಟು ಸಂತೋಷವಾಗಿ ಕಳೆದೆವು ಎಂಬುದೇ ಜೀವನದ ನೆಮ್ಮದಿಗೆ ಕಾರಣವಾಗಿದೆ. ಅಂದರೆ ಇದರರ್ಥ ಭವಿಷ್ಯದ ಬಗ್ಗೆ ಚಿಂತನೆ ಮಾಡಲೇಬಾರದು ಎಂದಲ್ಲ. ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು, ಹೇಗೆ ಬಾಳಬೇಕು ಎಂಬುದರ ಬಗ್ಗೆ ಖಂಡಿತಾ ಚಿಂತಿಸಿ, ಅದಕ್ಕಾಗಿ ಇಂದು ಹೇಗೆ ಜೀವಿಸಬೇಕು, ಹೇಗೆ ಮುಂದುವರೆಯಬೇಕು ಎಂಬ ಯೋಚನೆ ನೆಮ್ಮದಿಗೆ ಕಾರಣವಾಗಿದೆ.

ಋಣಾತ್ಮಕ ಚಿಂತನೆಯ ವ್ಯಕ್ತಿಗಳು

ಋಣಾತ್ಮಕ ಚಿಂತನೆಯ ವ್ಯಕ್ತಿಗಳು

ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳ ಚಿಂತನೆಗಳೂ ಬೇರೆಬೇರೆಯಾಗಿರುತ್ತವೆ. ಇವರಲ್ಲಿ ಕೆಲವರು ಋಣಾತ್ಮಕವಾಗಿ ಯೋಚಿಸುತ್ತಿದ್ದು ತಮ್ಮ ಯೋಚನಾಲಹರಿಯಲ್ಲಿ ನಿಮ್ಮ ವಿಚಾರಗಳನ್ನೂ ಬದಲಿಸಿಬಿಡಬಹುದು. ಇಂತಹವರು ನಿಮ್ಮ ಆತ್ಮೀಯರಲ್ಲಿ, ಸಹೋದ್ಯೋಗಿಗಳಲ್ಲಿ, ನೆರೆಹೊರೆಯವರಲ್ಲಿ ಒಟ್ಟಾರೆ ಎಲ್ಲಾ ಕಡೆ ಇರುತ್ತಾರೆ. ಆದರೆ ನಿಮ್ಮ ವಿವೇಕವನ್ನು ಬಳಸಿ ಇವರ ಮಾತುಗಳಲ್ಲಿ ಎಷ್ಟು ಹುರುಳಿದೆ ಎಂಬುದನ್ನು ಪರಿಗಣಿಸಿ ಇದರಲ್ಲಿ ನಿಮಗೆ ಸಕಾರಾತ್ಮಕವಾದುದನ್ನು ಮಾತ್ರ ಪರಿಗಣಿಸಿ ಉಳಿದುದನ್ನು ನಿರ್ಲಕ್ಷಿಸುವುದೇ ಉತ್ತಮ.

ಉದ್ಯೋಗದ ತೊಂದರೆಗಳು

ಉದ್ಯೋಗದ ತೊಂದರೆಗಳು

ಯಾವುದೇ ಉದ್ಯೋಗದಲ್ಲಿ ಕೆಲವು ತೊಂದರೆಗಳು ಇದ್ದೇ ಇರುತ್ತವೆ. ಏಕೆಂದರೆ ನಿಮ್ಮ ಉದ್ಯೋಗದಾತ ನಿಮಗೆ ನೀಡುವ ವೇತನಕ್ಕೆ ಪ್ರತಿಯಾಗಿ ಪೂರ್ಣಪ್ರಮಾಣದ ಕೆಲಸವನ್ನು ಅಪೇಕ್ಷಿಸುತ್ತಾರೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲಿ ಸಾಧ್ಯವಿಲ್ಲ. ಚಿಕ್ಕಪುಟ್ಟ ತೊಂದರೆ, ಕಲಹ, ಸಹೋದ್ಯೋಗಿಗಳೊಂದಿಗೆ ವಿರಸ ಎಲ್ಲವೂ ನಡೆಯುತ್ತಲೇ ಇರುತ್ತವೆ. ಇವೆಲ್ಲವೂ ಉದ್ಯೋಗದಲ್ಲಿ ಸಾಮಾನ್ಯ ಎಂದು ತಿಳಿದು ಆ ಕಹಿಕ್ಷಣಗಳನ್ನು ಅಂದೇ ಮರೆತು ಬಿಡುವುದೇ ಉತ್ತಮ ಮತ್ತು ವೃತ್ತಿಜೀವನಕ್ಕೂ ಪೂರಕ.

ಒತ್ತಡ

ಒತ್ತಡ

ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡ ಬಲು ಹೆಚ್ಚಾಗಿದೆ. ಆದರೆ ಈ ಒತ್ತಡಕ್ಕೆ ಬಲಿಯಾಗದೇ ನಿಮ್ಮ ಸಾಮರ್ಥಕ್ಕೆ ತಕ್ಕಂತೆ ಸ್ಪಂದಿಸುವುದೇ ಜಾಣತನದ ಮಾರ್ಗವಾಗಿದೆ. ಎಷ್ಟೇ ಒತ್ತಡವಿದ್ದರೂ ಇದನ್ನು ಮನಸ್ಸಿಗೆ ಹೆಚ್ಚಾಗಿ ಹಚ್ಚಿಕೊಳ್ಳದೇ ಇರುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಇದಕ್ಕೆ ಒಂದು ಪರ್ಯಾಯ ಮಾರ್ಗವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒತ್ತಡ

ಒತ್ತಡ

ಒತ್ತಡದ ಸಂದರ್ಭಗಳಲ್ಲಿ ನಿಮ್ಮ ಯೋಚನಾ ಲಹರಿ ಹೇಗೆ ಹರಿಯಿತು ಎಂಬುದನ್ನು ಅವಲೋಕಿಸಿ ಮುಂದಿನ ಬಾರಿ ಇಂತಹ ಪ್ರಸಂಗ ಬಂದಾಗ ಇದಕ್ಕೆ ಭಿನ್ನವಾದ, ಆದರೆ ಹೆಚ್ಚು ಫಲಪ್ರದವಾದ ನಿಟ್ಟಿನಲ್ಲಿ ಸ್ಪಂದಿಸುವ ಮೂಲಕ ನೆಮ್ಮದಿಯಿಂದಿರಬಹುದು. ಉದಾಹರಣೆಗೆ ಅಂಗಡಿ ಮುಚ್ಚುವ ಐದು ನಿಮಿಷದ ಮುನ್ನ ಬರುವ ಗಿರಾಕಿ ಕೊಳ್ಳುವುದಿಲ್ಲ ಎಂದು ಗೊತ್ತಿದ್ದರೂ ತೋರಿಸಲೇಬೇಕಾದ ಅನಿವಾರ್ಯತೆ ಇದ್ದರೆ ಅಂಗಡಿಯವನು ಏನು ಮಾಡಬೇಕು? ಒಂದೇ ಮುಚ್ಚುವ ಸಮಯವಾಯಿತು ಎಂದು ನಯವಾಗಿ ಹೇಳಬೇಕು ಇಲ್ಲವೇ ಕೊಂಚ ತಡವಾದರೂ ಬೇರೆ ಸಮಯದಲ್ಲಿದ್ದಂತೆಯೇ ವರ್ತಿಸಿ ನಯವಾಗಿ ಬೀಳ್ಕೊಡಬೇಕು. ಯಾರಿಗೆ ಗೊತ್ತು, ನಾಳೆ ಅದೇ ಗಿರಾಕಿ ಮತ್ತೊಮ್ಮೆ ಬಂದು ಹೆಚ್ಚಿನ ಖರೀದಿ ಮಾಡಬಹುದು. ಈ ಯೋಚನೆ ಹೆಚ್ಚಿನ ನೆಮ್ಮದಿ ನೀಡುತ್ತದೆ.

English summary

Things In Life You Shouldn't Take To Heart

Life is a mix of experiences and memories. You have to go through emotions of varying types, people of different kinds, thoughts of diverse grades and experiences that teaches different lessons. While we have to keep everything good in our heart, there are few things in life you shouldn't take to heart. Taking these along with your life will affect you seriously in the future. These can be any bad memories, irritating experiences or die hard philosophies.
X
Desktop Bottom Promotion