For Quick Alerts
ALLOW NOTIFICATIONS  
For Daily Alerts

ಹೆಣ್ಣಿಗೆ ತನ್ನ ತಾಯಿಯೇ ಮೊದಲ ಗುರು

By Deepu
|

ಹೆಣ್ಣು ಮನೆಯ ಕಣ್ಣು ಸುಖ ಸಂಪತ್ತಿಗೆ ಆಕೆಯೇ ಮೂಲ ಎಂಬ ಮಾತಿದೆ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ ಗೌರವವಿದ್ದು ಆಕೆ ಕಾಲಿಟ್ಟ ನೆಲದಲ್ಲಿ ಆರ್ಥಿಕತೆ ತುಂಬಿ ತುಳುಕುತ್ತದೆ. ಬಲಗಾಲಿಟ್ಟು ಮನೆಗೆ ಅಡಿ ಇಟ್ಟ ಭಾಗ್ಯದೇವತೆ ಹೆಣ್ಣು ಎಂಬುದು ಸರ್ವ ಕಾಲದಲ್ಲೂ ವಿಧಿತವಾದುದು. ಎಷ್ಟೇ ಗಂಡುಮಕ್ಕಳಿದ್ದರೂ ಹೆಣ್ಣು ಮಗು ಇರಬೇಕು ಎಂಬ ಬೇಡಿಕೆ ಹೆತ್ತವರಿಗೆ ಇದ್ದೇ ಇರುತ್ತದೆ. ಇಂದಿನ ಸಮಾಜ ಹಿಂದಿನಂತಿರದೇ ಎಲ್ಲದಕ್ಕೂ ಗಂಡಿಗಿಂತಲೂ ಹೆಣ್ಣನ್ನೇ ಆಶ್ರಯಿಸುವ ಕಾಲ ಬಂದಿದೆ. ಗಂಡು ಹುಡುಗರಿಗಿಂತಲೂ ಹೆಣ್ಣು ಮಗಳು ನಮ್ಮನ್ನು ಚೆನ್ನಾಗಿ ಸಾಕುತ್ತಾಳೆ ಎಂಬುದೇ ತಂದೆತಾಯಿಗಳು ಹೇಳುವ ಮಾತು. ಅಷ್ಟೊಂದು ನಂಬಿಕೆ ಇಂದು ಹೆಣ್ಣಿನ ಮೇಲಿದೆ.

ಮನೆಯ ಪ್ರತಿಯೊಬ್ಬ ಸದಸ್ಯರ ಮುದ್ದಿನ ಕಣ್ಮಣಿಯಾಗಿ ಬಾಳುವ ಹುಡುಗಿಯರು ತಾವು ಕೇಳಿದ್ದನ್ನೆಲ್ಲಾ ಕೂಡಲೇ ಪಡೆದುಕೊಳ್ಳುತ್ತಾರೆ. ಅಷ್ಟೊಂದು ಪ್ರಭಾವವನ್ನು ಅವರು ಪಡೆದುಕೊಂಡಿರುತ್ತಾರೆ. ಅಪ್ಪನ ಮುದ್ದಿನ ಕುವರಿಯಾಗಿರುವ ಹೆಣ್ಣು ಮಗಳು ಅವರನ್ನು ತನ್ನ ಸ್ನೇಹಿತನಂತೆಯೇ ಕಾಣುತ್ತಾಳೆ. ಅಮ್ಮನಾದರೂ ಕೊಂಚ ಹಿಡಿತವನ್ನು ಆಕೆಯ ಮೇಲೆ ಮಾಡಿದರೂ ಅಪ್ಪ ಮಾತ್ರ ಸ್ವತಂತ್ರ ಮನೋಭಾವದಿಂದಲೇ ಆಕೆಯನ್ನು ಕಾಣುತ್ತಾರೆ. ಅದಾಗ್ಯೂ ಆಕೆ ಹೆಚ್ಚು ಕಲಿಯಬೇಕಾಗಿರುವುದು ತನ್ನ ತಾಯಿಯಿಂದಲೇ ಆಗಿರುತ್ತದೆ. ಮನೆಯ ಅಚ್ಚುಕಟ್ಟುತನ, ಸಂಸಾರವನ್ನು ತೂಗಿಸಿಕೊಂಡು ಹೋಗುವ ಕಲೆ, ಮನೆಯ ಸದಸ್ಯರೊಂದಿಗೆ ಹೊಂದಿಕೆ ಮಾಡಿಕೊಳ್ಳುವುದು ಹೀಗೆ ಪ್ರತಿಯೊಂದನ್ನು ಹೇಳಿಕೊಡಲು ಆಕೆಗೆ ತಾಯಿಯೇ ಮೊದಲ ಗುರುವಾಗಿರುತ್ತಾಳೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ...

Things A Daughter Must Inherit From Her Mum

ಮನೆ ನಿಭಾಯಿಸುವ ಕೌಶಲ್ಯಗಳು
ಒಂದು ಮನೆಯನ್ನು ಕಡಿಮೆ ದುಡ್ಡಿನಲ್ಲಿ ಮತ್ತು ಅದೇ ಸಮಯಕ್ಕೆ ಯಾವುದೇ ಹೆಚ್ಚು ಕಡಿಮೆಗಳಿಲ್ಲದೆ ಹೇಗೆ ನಿಭಾಯಿಸುವುದು ಎಂಬುದನ್ನು ನಿಮ್ಮ ಅಮ್ಮನಿಗಿಂತ ಚೆನ್ನಾಗಿ ಯಾರೂ ಹೇಳಿಕೊಡಲಾರರು. ಹುಡುಗಿ ಮದುವೆಯಾಗಿ ತನ್ನ ಸಂಸಾರವನ್ನು ಆರಂಭಿಸಲು ಶುರು ಮಾಡಿದಾಗ ಇದು ಆಕೆಗೆ ವರದಾನವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಮನೆಯನ್ನು ನಿಭಾಯಿಸುವಾಗ ನಿಮಗೆ ಹಲವಾರು ಸಮಸ್ಯೆಗಳು ಎದುರಾದಾಗ ನಿಮ್ಮ ಅಮ್ಮ ನಿಮಗೆ ತರಬೇತುದಾರರಂತೆ ಕೌಶಲ್ಯಗಳನ್ನು ಹೇಳಿಕೊಡುತ್ತಾರೆ. ಮದುವೆಯ ಸಂದರ್ಭದಲ್ಲಿ ಮಗಳಿಗೆ ನಮ್ಮ ಭಾರತೀಯರು ಹಲವಾರು ಬೆಲೆಬಾಳುವ ಒಡವೆ-ಆಭರಣಗಳನ್ನು ಹಾಕಿ ಕಳುಹಿಸುತ್ತಾರೆ. ಆದರೆ ಈ ಕೌಶಲ್ಯಗಳು ಆಕೆಯ ಜೀವನದಲ್ಲಿ ಬೆಲೆ ಕಟ್ಟಲಾಗದಂತಹವು ಎಂಬುದನ್ನು ಮರೆಯಬಾರದು.

ಸೀರೆ ಬಾಂಧವ್ಯ
ತಾಯಿಯು ಮಗಳಿಗೆ ಸೀರೆ ಉಡುವುದನ್ನು ಸಹ ತಿಳಿಸಿಕೊಡುವ ಗುರು. ಜೊತೆಗೆ ಆಕೆಗೆ ಹಬ್ಬಕ್ಕೆ, ಇತರೆ ಶುಭ ಸಮಾರಂಭಗಳ ನೆಪದಲ್ಲಿ ಉಡುಗೊರೆಯಾಗಿ ಸೀರೆಗಳನ್ನು ಕೊಡುವ ಪದ್ಧತಿ ನಮ್ಮಲ್ಲಿದೆ. ಮಗಳ ನೆಚ್ಚಿನ ಬಣ್ಣದ ಸೀರೆಯನ್ನು ನೀಡಿ ಮಗಳ ಮುಖದಲ್ಲಿ ಸಂತೋಷವನ್ನು ಕಾಣುವ ಈಕೆಯ ಗುಣವನ್ನು ಸಹ ನೀವು ಕಲಿಯಬೇಕು.

ಅಡುಗೆ ಸಲಹೆಗಳು
ಆಕೆ ನಿಮ್ಮ ಪಾಲಿನ ಅದ್ಭುತ ಶೆಫ್ ಎಂಬುದನ್ನು ಮರೆಯಬಾರದು. ಅಮ್ಮನ ಕೈ ಅಡುಗೆಯ ರುಚಿಯನ್ನು ಮೀರಿಸುವುದು ಯಾವುದು ಇಲ್ಲ. ಆಕೆಯ ಅಡುಗೆಯ ರಹಸ್ಯಗಳನ್ನು ನೀವು ಸಹ ಕಲಿಯಿರಿ.

ತಾಯ್ತನದ ಸಲಹೆಗಳು
ಪ್ರತಿಯೊಬ್ಬ ಹೆಣ್ಣು ತಾಯಿಯಾಗಲು ಹಂಬಲಿಸುತ್ತಾಳೆ. ಮಗಳು ಗರ್ಭಿಣಿ/ಬಾಣಂತಿಯಾಗಿರುವಾಗ ತಾಯಿಯೇ ಮೊದಲ ಪ್ರಸೂತಿ ತಜ್ಞೆಯಾಗಿರುತ್ತಾಳೆ. ಬಹುತೇಕ ಸಂದರ್ಭದಲ್ಲಿ ಮಗಳ ಸಮಸ್ಯೆಗಳನ್ನು ವೈದ್ಯರಿಗಿಂತ ಚೆನ್ನಾಗಿ ತಾಯಿ ಪರಿಹರಿಸಿಬಿಡುತ್ತಾಳೆ. ಈ ಕಲೆಯನ್ನು ಆಕೆಯಿಂದ ಮೊದಲು ಕಲಿಯಿರಿ.

ಮಕ್ಕಳನ್ನು ಬೆಳೆಸುವ ಕಲೆ
ಮಕ್ಕಳನ್ನು ಬೆಳೆಸುವುದು ಒಂದು ಕಲೆ. ಅದನ್ನು ನಿಮ್ಮ ತಾಯಿಯಿಂದ ಮೊದಲು ಕಲಿಯಿರಿ. ಮಕ್ಕಳ ಲಾಲನೆ-ಪಾಲನೆ, ಜೊತೆಗೆ ಅವರಿಗೆ ಅವಶ್ಯಕವಾಗಿ ನೀಡಬೇಕಾಗಿರುವ ಶಿಕ್ಷಣದ ಗುಟ್ಟುಗಳನ್ನು ಸಹ ತಿಳಿದುಕೊಳ್ಳಿ.

English summary

Things A Daughter Must Inherit From Her Mum

It is always said that daughters are father's pets, agree? If you are your daddy's little girl you will totally agree with this. However, we think that in life there are a few things a girl or a daughter must inherit from her mother in her years of life. The relationship which a mother and daughter share is very special and unlike any other.
Story first published: Monday, January 4, 2016, 11:26 [IST]
X
Desktop Bottom Promotion