For Quick Alerts
ALLOW NOTIFICATIONS  
For Daily Alerts

ನಲವತ್ತು ವರ್ಷಗಳಿಂದ ನಿದ್ದೆಯನ್ನೇ ಮಾಡದ ವಿಚಿತ್ರ ವ್ಯಕ್ತಿ!

By Manu
|

ಉತ್ತಮ ಆರೋಗ್ಯಕ್ಕೆ ಸಾಕಷ್ಟು ನಿದ್ರೆಯೂ ಅವಶ್ಯ. ದಿನಕ್ಕೆ ಮೂರು ಹೊತ್ತಿನ ಊಟ ಮತ್ತು ಆರರಿಂದ ಎಂಟು ಘಂಟೆ ನಿದ್ದೆ ನಮ್ಮೆಲ್ಲರಿಗೆ ಅವಶ್ಯವಾಗಿದೆ. ಬೆಳೆಯುತ್ತಿರುವ ಮಕ್ಕಳಿಗೆ ಇನ್ನೂ ಹೆಚ್ಚಿನ ನಿದ್ದೆ ಬೇಕು. ನಿದ್ದೆಯಲ್ಲಿ ಕಾಣುವ ಕನಸಿನ ಕುರಿತು ಇಂಟರೆಸ್ಟಿಂಗ್ ಕಹಾನಿ!

ಆಹಾರವಿಲ್ಲದೇ ಕೇವಲ ನೀರು ಕುಡಿದು ಸುಮಾರು ಆರು ದಿನ ಕಷ್ಟಪಟ್ಟು ಬದುಕಿರಬಹುದು. ನೀರೂ ಇಲ್ಲದೇ ಮೂರು ದಿನ ಬದುಕಿರಬಹುದು. ಆದರೆ ಅನ್ನಾಹಾರ ಮತ್ತು ನಿದ್ದೆ ಇಲ್ಲದೇ ಎರಡು ದಿನಕ್ಕಿಂತ ಹೆಚ್ಚು ಕಾಲ ಬದುಕಿ ಇರಲು ಸಾಧ್ಯವಿಲ್ಲ.

ಸಾಕಷ್ಟು ಅನ್ನಾಹಾರಗಳಿದ್ದರೂ ನಿದ್ದೆ ಇಲ್ಲದೇ ಹನ್ನೊಂದು ದಿನಗಳಿಂದ ಅರವತ್ತೈದು ದಿನಗಳವರೆಗೆ ಬದುಕಿದ್ದ ನಿದರ್ಶನಗಳಿವೆ. ಆದರೆ ಇವೆಲ್ಲಾ ಒಂದು ದಾಖಲೆಗಾಗಿಯೇ ಕಷ್ಟಪಟ್ಟು ನಿದ್ದೆಗೆಟ್ಟವರೇ ಹೊರತು ನಿದ್ದೆಗೆಡುವುದು ಸರ್ವಥಾ ಆರೋಗ್ಯಕರವಲ್ಲ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ಆದರೆ ಒಂದು ವಿಚಿತ್ರ ಕಾರಣದ ಮೂಲಕ ಓರ್ವ ವ್ಯಕ್ತಿ ನಿದ್ದೆ ಮಾಡುವ ಶಕ್ತಿಯನ್ನೇ ಕಳೆದುಕೊಂಡು ನಲವತ್ತು ವರ್ಷ ಕಾಲ ಜೀವಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ವ್ಯಕ್ತಿ ಯಾರು? ಹೇಗೆ ಇಷ್ಟು ಕಾಲ ಎಚ್ಚರಿರಲು ಸಾಧ್ಯವಾಯಿತು ಎಂಬೆಲ್ಲಾ ಪ್ರಶ್ನೆಗಳ ಮೂಲಕ ಕುತೂಹಲ ಮೂಡಿತೇ? ಮುಂದೆ ಓದಿ....

ಈ ವ್ಯಕ್ತಿ ಯಾರು?

ಈ ವ್ಯಕ್ತಿ ಯಾರು?

ಈ ವ್ಯಕ್ತಿಯ ಹೆಸರು ಪೌಲ್ ಕರ್ನ್ (Paul Kern). ಹಂಗರಿ ದೇಶನ ನಾಗರಿಕರಾಗಿದ್ದ ಇವರು ಮೊದಲ ಮಹಾಯುದ್ಧದ ಸಮಯದಲ್ಲಿ ಜೀವಿಸಿದ್ದು ಯುದ್ಧದಲ್ಲಿ ಭಾಗವಹಿಸಿದ್ದ ಅಧಿಕಾರಿಯಾಗಿದ್ದರು.

ನಿದ್ದೆ ಹೋಗಲು ಏನಾಯಿತು?

ನಿದ್ದೆ ಹೋಗಲು ಏನಾಯಿತು?

1915ರಲ್ಲಿ ಪೂರ್ವ ರಾಷ್ಟ್ರಗಳ ಪರವಾಗಿ ಯುದ್ಧದಲ್ಲಿ ಭಾಗವಹಿಸಿದ್ದ ಇವರು ಸರ್ಕಾರಿ ಅಧಿಕಾರಿಯಾಗಿದ್ದು ಒಂದು ದಿನ ರಷ್ಯನ್ ಯೋಧನೊಬ್ಬ ಹಾರಿಸಿದ ಗುಂಡು ನೇರವಾಗಿ ತಲೆಗೆ ಹೊಕ್ಕಿತ್ತು. ಗುಂಡು ತಲೆಬುರುಡೆಯ ಮುಂಭಾಗ (ಕ್ರೇನಿಯಂ) ವನ್ನು ಹಾದು ಮೆದುಳಿನ ಪ್ರಮುಖ ಭಾಗವನ್ನು ಘಾಸಿಗೊಳಿಸಿತ್ತು. ತಕ್ಷಣ ಇವರನ್ನು ಆಸ್ಪತ್ರೆಗೆ ಸಾಗಿಸಿ ಶಸ್ತ್ರಚಿಕಿತ್ಸೆಯ ಮೂಲಕ ಗುಂಡನ್ನು ತೆಗೆಯಲಾಯಿತು.

ನಿದ್ದೆ ಹೋಗಲು ಏನಾಯಿತು?

ನಿದ್ದೆ ಹೋಗಲು ಏನಾಯಿತು?

ಕೆಲವು ದಿನಗಳ ನಂತರ ಪ್ರಜ್ಞೆ ಮರಳಿತು. ಕೊಂಚ ವಿಶ್ರಾಂತಿಯ ಬಳಿಕ ಮನೆಗೆ ತೆರಳಲು ವೈದ್ಯರು ತಿಳಿಸಿದರು. ಆದರೆ ಮೊದಲ ಕೆಲವು ದಿನ ನಿದ್ದೆಯೇ ಬರಲಿಲ್ಲ. ಕೆಲವಾರು ದಿನಗಳು ಕಳೆದರೂ ನಿದ್ದೆಯ ಸುಳಿವೇ ಇಲ್ಲ.

ಬಳಿಕ ಏನಾಯಿತು?

ಬಳಿಕ ಏನಾಯಿತು?

ಆ ದಿನದಿಂದ ಅವರು ವಯೋಸಹಜವಾಗಿ 1955ರಲ್ಲಿ ದೈವಾಧೀನರಾಗುವವರೆಗೂ ಒಂದೂ ದಿನ ನಿದ್ದೆಯನ್ನೇ ಮಾಡಿಲ್ಲ. ನಿದ್ದೆ ಕಣ್ಮರೆಯಾಗಲು ಕಾರಣವೇನು ಎಂಬುದನ್ನು ಅಭ್ಯಸಿಸಲು ವಿಶ್ವದ ಹಲವಾರು ಪ್ರಖ್ಯಾತ ವೈದ್ಯರಿಗೆ ಇವರೊಂದು ಬಿಡಿಸಲಾರದ ಕಗ್ಗಂಟಾದರು.

ರಹಸ್ಯ ಬಿಡಿಸಲು ಸಾಧ್ಯವಾಗದೇ ಕೈಚೆಲ್ಲಿದ ಸಂಶೋಧಕರು

ರಹಸ್ಯ ಬಿಡಿಸಲು ಸಾಧ್ಯವಾಗದೇ ಕೈಚೆಲ್ಲಿದ ಸಂಶೋಧಕರು

ನಿದ್ದೆ ಇಲ್ಲದ ಈ ಪರಿ ಅತ್ಯಂತ ಅಪರೂಪವಾಗಿದ್ದು ಪ್ರಾಯಶಃ ವಿಶ್ವದ ಇತಿಹಾಸದಲ್ಲಿಯೇ ಏಕಮಾತ್ರವಿರಬಹುದು. ಹಲವಾರು ಖ್ಯಾತ ಸಂಶೋಧಕರು ಮತ್ತು ವೈದ್ಯರು ಇವರ ಆರೋಗ್ಯವನ್ನು ಪರಿಶೀಲಿಸಿ ನಿದ್ದೆ ಇಲ್ಲದೇ ಇರಲು ಕಾರಣವನ್ನು ಹುಡುಕಿದರೂ ಯಾವುದೇ ಸ್ಪಷ್ಟ ಸಮರ್ಥನೆ ನೀಡಲು ವಿಫಲರಾದರು.

ಇವರಿಗೆ ಹಾಸಿಗೆಯಲ್ಲಿದ್ದರೇ ಹೆಚ್ಚು ಸುಸ್ತು

ಇವರಿಗೆ ಹಾಸಿಗೆಯಲ್ಲಿದ್ದರೇ ಹೆಚ್ಚು ಸುಸ್ತು

ನಮಗೆಲ್ಲಾ ನಡೆದಾಡುವಾಗ ಸುಸ್ತಾಗಿ ಹಾಸಿಗೆ ಸಿಕ್ಕರೆ ಸಾಕಾಗಿರುತ್ತದೆ. ಆದರೆ ಇವರಿಗೆ ಹಾಸಿಗೆಯಲ್ಲಿ ಪವಡಿಸುವುದೆಂದರೆ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ನಿದ್ದೆಗೆ ಓಲೈಸುವ ಯಾವುದೇ ಪ್ರಯತ್ನಗಳು ಇವರನ್ನು ಅತೀವವಾಗಿ ಸುಸ್ತು ಮಾಡುತ್ತಿತ್ತು.

ಇವರಿಗೆ ಹಾಸಿಗೆಯಲ್ಲಿದ್ದರೇ ಹೆಚ್ಚು ಸುಸ್ತು

ಇವರಿಗೆ ಹಾಸಿಗೆಯಲ್ಲಿದ್ದರೇ ಹೆಚ್ಚು ಸುಸ್ತು

ಅಂದರೆ ಹಾಸಿಗೆಯಲ್ಲಿ ಮೈ ಚೆಲ್ಲಿದ ಬಳಿಕ ಸುಸ್ತು ಆವರಿಸತೊಡಗುತ್ತಿತ್ತು. ಆದರೆ ಎಚ್ಚೆತ್ತು ನಡೆದಾಡುತ್ತಾ ಇದ್ದರೆ ಏನೂ ತೊಂದರೆ ಇಲ್ಲ. ಅಂತೆಯೇ ಅವರು ತಮ್ಮ ಮುಂದಿನ ಜೀವಿತಾವಧಿಯನ್ನು ಒಂದಿನಿತೂ ಮಲಗದೇ ಚಟುವಟಿಕೆಯಿಂದಿದ್ದೇ ಕಳೆದರು.

ಬಲವಂತವಾಗಿ ಮಲಗಿಸಲು ಸಾಧ್ಯವಾಗಿದ್ದು ಎರಡೇ ಗಂಟೆ

ಬಲವಂತವಾಗಿ ಮಲಗಿಸಲು ಸಾಧ್ಯವಾಗಿದ್ದು ಎರಡೇ ಗಂಟೆ

ಒಂದು ಸಂಶೋಧನೆಯಲ್ಲಿ ಇವರನ್ನು ಹೇಗಾದರೂ ಮಲಗಿಸಲೇಬೇಕೆಂದು ನಡೆಸಿದ ಪ್ರಯತ್ನವೊಂದರಲ್ಲಿ ಎರಡು ಗಂಟೆಗಳ ಕಾಲ ಕಣ್ಣುಮುಚ್ಚಿ ಮಲಗಿಸಲು ಸಾಧ್ಯವಾದರೂ ಇವರ ಮೆದುಳು ಮಾತ್ರ ಎಚ್ಚರಾಗಿದ್ದು ಸುತ್ತಮುತ್ತಲ ಎಲ್ಲಾ ವಿಷಯಗಳನ್ನು ಗ್ರಹಿಸುತ್ತಿತ್ತು. ಸಂಶೋಧನೆಗಳಿಗೂ ಇವರನ್ನು ಮಲಗಿಸಲು ಸಾಧ್ಯವಾಗದ ಬಳಿಕ ಇವರು ಬುಡಾಪೆಸ್ಟ್ ನಗರದಲ್ಲಿ ಪಿಂಚಣಿ ವಿಭಾಗದಲ್ಲಿ ನೌಕರಿ ನಡೆಸುತ್ತಾ ಸಹಜಜೀವನ ನಡೆಸಿ ಇಹಯಾತ್ರೆ ಮುಗಿಸಿದರು. ಆದರೆ ಇಷ್ಟು ದೀರ್ಘ ಕಾಲ ನಿದ್ದೆಯಿಲ್ಲದೇ ಹೇಗೆ ಬದುಕಿದ್ದರು ಎಂಬುದು ಇಂದಿಗೂ ಬಿಡಿಸಲಾಗದ ಚಿದಂಬರ ರಹಸ್ಯವಾಗಿದೆ.

English summary

The Strange Story Of The ‘Sleepless Man’

Here, in this article, we are about to share a story of a man who could not sleep for 40 long years. This is something that has not happened to anyone before. Find out about this amazing story of the 'sleepless man' who did not sleep for 40 long years...
X
Desktop Bottom Promotion