For Quick Alerts
ALLOW NOTIFICATIONS  
For Daily Alerts

ಆಫೀಸ್‌ನಲ್ಲಿ ಚಾಕೊಲೇಟ್ ಕದಿಯುವ ಖತರ್ನಾಕ್ ಕಳ್ಳನ ಸ್ಟೋರಿ!

|

ಕೆಲವರಿಗೆ ಅಂಗಡಿ, ಹೋಟೆಲ್‌ಗೆ ಹೋದರೆ ಏನಾದರೂ ಸಣ್ಣ ವಸ್ತುವನ್ನು ಕದ್ದು ತರುವ ಅಭ್ಯಾಸ. ಕೆಲವು ಶ್ರೀಮಂತ ಮನೆತನದವರು ಕೂಡ ಹೋಟೆಲ್‌ಗೆ ಹೋದರೆ ಅಲ್ಲಿಂದ ಕೆಲವು ಸಾಮಾನುಗಳನ್ನು ಕದ್ದು ತರುತ್ತಾರಂತೆ. ಅವರಿಗೆ ಅದನ್ನು ಕೊಂಡುಕೊಳ್ಳುವ ಸಾಮರ್ಥ್ಯ ಇಲ್ಲವೆಂದಲ್ಲ. ಆದರೆ ಅದೊಂದು ರೋಗವೆನ್ನುತ್ತದೆ ವೈದ್ಯಕೀಯ ಲೋಕ. ಅದರಲ್ಲೂ ಕೆಲವರಿಗೆ ತಿಂಡಿಗಳೆಂದರೆ ತುಂಬಾ ಇಷ್ಟ. ಅದನ್ನು ಕದಿಯುತ್ತಾರೆ.

ಕೆಲವು ಕಚೇರಿಗಳಲ್ಲಿ ಚಾಕೊಲೇಟ್ ಅನ್ನು ಕದಿಯುವವರು ಇರುತ್ತಾರೆ. ಹಣ ಕದಿಯುವವರನ್ನು ಕೇಳಿದ್ದೇವೆ. ಇನ್ನು ಚಾಕೊಲೇಟ್ ಕೂಡ ಕದಿಯುತ್ತಾರೆಯಾ ಎಂದು ಪ್ರಶ್ನಿಸಬೇಡಿ. ಇದು ನಿಜ. ಯಾರಾದರೂ ತಂದಿಟ್ಟ ಅಥವಾ ಫ್ರಿಡ್ಜ್ ನಲ್ಲಿಟ್ಟ ಚಾಕೊಲೇಟ್ ಅನ್ನು ಕದಿಯುವುದು ಕಚೇರಿಗಳಲ್ಲಿ ಸಾಮಾನ್ಯ. ಈ ಲೇಖನದಲ್ಲಿ ಚಾಕೊಲೇಟ್ ಕಳ್ಳನಿಂದ ತುಂಬಾ ನಿರಾಶೆಗೊಂಡ ಹುಡುಗಿಯೊಬ್ಬಳು ಬರೆದಿರುವ ಪತ್ರವನ್ನು ಫೋಟೋಗಳ ಮೂಲಕ ವಿವರಿಸಲಾಗಿದೆ. ಓದಿಕೊಳ್ಳಿ....

1ನೇ ದೃಶ್ಯ

1ನೇ ದೃಶ್ಯ

ಆಕೆಗೆ ಚಾಕೊಲೇಟ್ ಎಂದರೆ ಇಷ್ಟ. ಅದಕ್ಕಾಗಿ ಪ್ರತೀ ದಿನ ಕಚೇರಿಗೆ ಹೋಗುವಾಗ ಚಾಕೊಲೇಟ್ ತೆಗೆದುಕೊಂಡು ಹೋಗುತ್ತಿದ್ದಳು. ಆದರೆ ಪ್ರಿಡ್ಜ್‌ನಲ್ಲಿಟ್ಟ ಚಾಕೊಲೇಟ್ ಮಾತ್ರ ಪ್ರತೀ ಸಲ ಮಾಯವಾಗುತ್ತಿತ್ತು. ಇದರಿಂದ ನಿರಾಶೆಗೊಂಡ ಆಕೆ ಚಾಕಲೇಟ್ ಕಳ್ಳನಿಗೊಂದು ಪತ್ರ ಬರೆದಿಟ್ಟಳು.

2ನೇ ದೃಶ್ಯ

2ನೇ ದೃಶ್ಯ

ಈ ಪತ್ರಕ್ಕೆ ಉತ್ತರಿಸಲು ಕಳ್ಳನಿಗೆ ತುಂಬಾ ಸಮಯ ಹಿಡಿಯಿತು. ಆತನ ಒರಟು ಉತ್ತರದಿಂದ ತನ್ನ ಅಭ್ಯಾಸವನ್ನು ಬಿಡುವುದಿಲ್ಲವೆಂದು ಖಚಿತವಾಗಿತ್ತು.

3ನೇ ದೃಶ್ಯ

3ನೇ ದೃಶ್ಯ

ಅನಿರೀಕ್ಷಿತ ಉತ್ತರದಿಂದಾಗಿ ಪಾಪದ ಹುಡುಗಿ ಮತ್ತಷ್ಟು ಗೊಂದಲಕ್ಕೆ ಒಳಗಾದಳು. ಹೀಗೆ ಮಾಡಿದರೆ ಮುಂದೆ ನಾನು ಎಚ್ ಆರ್‌ಗೆ ದೂರು ಸಲ್ಲಿಸುತ್ತೇನೆ ಎಂದು ಬೆದರಿಸಿದಳು.

4ನೇ ದೃಶ್ಯ

4ನೇ ದೃಶ್ಯ

ಆತ ತುಂಬಾ ಚಾಲಕಿ. ಚಾಕೊಲೇಟ್‌ನ ಫೋಟೊ ತೆಗೆದು ಆಕೆಯ ಪತ್ರಕ್ಕೆ ಉತ್ತರ ನೀಡಿದ. ಇದು ಹುಡುಗಿಯ ಪಿತ್ತ ನೆತ್ತಿಗೇರುವಂತೆ ಮಾಡಿತು.

5ನೇ ದೃಶ್ಯ

5ನೇ ದೃಶ್ಯ

ಇದು ನಮಗೆ ನಗುವನ್ನು ತರಿಸುತ್ತದೆ. ಆದರೆ ಪಾಪದ ಹುಡುಗಿ ಮಾತ್ರ ಇದರಿಂದ ಮತ್ತಷ್ಟು ಕ್ರೋಧಗೊಂಡಳು. ಇದು ಮಕ್ಕಳಾಟವೆಂಬಂತೆ ಅನಿಸಲು ಆರಂಭಿಸಿತು.

6ನೇ ದೃಶ್ಯ

6ನೇ ದೃಶ್ಯ

ಹುಡುಗಿಯ ಕೋಪವನ್ನು ಪರೀಕ್ಷಿಸಲು ಹೊರಟಂತೆ ಇತ್ತು ಆತನ ಉತ್ತರಗಳು. ಇದರ ಬಳಿಕ ಆಕೆ ಬೇರೆ ಉಪಾಯವಿಲ್ಲದೆ ಎಚ್ ಆರ್‌ನನ್ನು ಭೇಟಿಯಾಗಲು ನಿರ್ಧರಿಸಿದಳು.

7ನೇ ದೃಶ್ಯ

7ನೇ ದೃಶ್ಯ

ದೂರು ಆಲಿಸಿಕೊಂಡು ಎಚ್ ಆರ್ ಒಂದು ಪತ್ರವನ್ನು ಬರೆದು ಅದರಲ್ಲಿ ಚಾಕಲೇಟ್ ಕಳ್ಳನನ್ನು ಎಚ್ಚರಿಸಿದಳು.

8ನೇ ದೃಶ್ಯ

8ನೇ ದೃಶ್ಯ

ಹುಡುಗಿ ಅಥವಾ ಎಚ್ ಆರ್ ಮಾತಿಗೆ ಚಾಕೊಲೇಟ್ ಕಳ್ಳ ಬೆಲೆಯೇ ಕೊಡಲಿಲ್ಲ. ಪ್ರಿಡ್ಜ್‌‌ನಲ್ಲಿ ಚಾಕೊಲೇಟ್ ಇಡಬೇಕೆಂದು ಆತ ಉತ್ತರಿಸುತ್ತಲೇ ಇದ್ದ.

9ನೇ ದೃಶ್ಯ

9ನೇ ದೃಶ್ಯ

ಈ ಉತ್ತರವನ್ನು ನೋಡಿದ ಬಳಿಕ ಹುಡುಗಿ ಖಂಡಿತವಾಗಿಯೂ ಚಾಕೊಲೇಟ್ ಕಳ್ಳನನ್ನು ಗುಂಡಿಕ್ಕಿ ಕೊಲ್ಲಲು ಬಯಸಿರಬಹುದು.

10ನೇ ದೃಶ್ಯ

10ನೇ ದೃಶ್ಯ

ಅಂತಿಮವಾಗಿ ಕಳ್ಳನನ್ನು ಹಿಡಿಯಲಾಯಿತು. ಆದರೆ ಎಚ್ ಆರ್ ಗೆ ನೀಡಿದ ಉತ್ತರಕ್ಕೆ ಆತ ಅಂಟಿಕೊಂಡಿದ್ದ. ಆದರೆ ಎಚ್ ಆರ್‌ನ್ನು ಭೇಟಿಯಾದ ಬಳಿಕ ಚಾಕೊಲೇಟ್ ಕಳ್ಳನಿಗೆ ಯಾವ ಶಿಕ್ಷೆಯಾಗಿರಬಹುದು ಎನ್ನುವುದನ್ನು ಉಳಿಸಲು ಸಾಧ್ಯವಾಗುತ್ತಿಲ್ಲ.

English summary

The Office Guy Who Stole Chocolates!!

There are times when things get misplaced at office, but do you know there can be a few people who actually steal chocolates from office? Well, there are a few shameless nuts out there who would steal even small things like chocolates and other eatables from office desks or refrigerators!
X
Desktop Bottom Promotion