Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಚ್ಚರಿಗೆ ತಳ್ಳುವ ವಿಶ್ವದ ವಿಚಿತ್ರ ವಸ್ತು ಸಂಗ್ರಹಾಲಯಗಳು
ಪುರಾತನ ಕಾಲದ ಅತ್ಯಂತ ಬೆಲೆಬಾಳುವಂತಹ ವಸ್ತುಗಳನ್ನು ನೋಡಬೇಕಿದ್ದರೆ ನಾವು ವಸ್ತುಸಂಗ್ರಹಾಲಯಕ್ಕೆ ಹೋಗಬೇಕು. ಹಿಂದೆ ಪ್ರತಿಯೊಂದು ಶಾಲೆಯ ಮಕ್ಕಳನ್ನು ಯಾವುದಾದರೊಂದು ವಸ್ತುಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ವಸ್ತುಗಳ ಪ್ರಾಮುಖ್ಯತೆ ಮತ್ತು ಅದು ಯಾವ ಕಾಲದಲ್ಲಿ ಸಿಕ್ಕಿದ ವಸ್ತುಗಳು ಎನ್ನುವುದನ್ನು ವಿವರಿಸಲಾಗುತ್ತಿತ್ತು. ಆದರೆ ಈಗ ಶಾಲಾ ಮಕ್ಕಳನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಹೋಗುವುದೇ ಅಪರೂಪವಾಗಿದೆ.
ನಮಗೆ ಒಂದೇ ಸ್ಥಳದಲ್ಲಿ ವಿವಿಧ ರೀತಿಯ ಜ್ಞಾನವನ್ನು ನೀಡುವ ಸ್ಥಳವೆಂದರೆ ಅದು ವಸ್ತುಸಂಗ್ರಹಾಲಯ. ಇಂತಹ ವಸ್ತುಸಂಗ್ರಹಾಲಯಗಳು ವಿಶ್ವದೆಲ್ಲೆಡೆ ಇದೆ. ಇವುಗಳಲ್ಲಿ ಕೆಲವು ಅಸಾಮಾನ್ಯ ಹಾಗೂ ವಿಚಿತ್ರವಾಗಿದೆ. ಕೆಲವೊಂದು ವಸ್ತುಸಂಗ್ರಹಾಲಯಗಳಲ್ಲಿ ವಿಚಿತ್ರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇನ್ನು ಒಂದು ಕಡೆ ವಸ್ತುಸಂಗ್ರಹಾಲಯದಲ್ಲಿ ವಿಶ್ವದೆಲ್ಲೆಡೆಯ ಪ್ರಾಣಿಗಳ ಜನನಾಂಗವನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದೇ ರೀತಿಯ ವಿಚಿತ್ರಗಳು ಇನ್ನೂ ಇದೆ. ಇದರ ಬಗ್ಗೆ ನೀವಿಲ್ಲಿ ಓದಿ ತಿಳಿದುಕೊಳ್ಳಿ...

ಸುಲಭ ಶೌಚಾಲಯಗಳ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ
ನಾವು ಪ್ರತಿಯೊಂದರ ಮೂಲವನ್ನು ಹುಡುಕಿ ಅದು ಹೇಗಾಯಿತು ಎನ್ನುವುದನ್ನು ತಿಳಿದುಕೊಳ್ಳುತ್ತೇವೆ. ಇದರ ಬಗ್ಗೆ ನಮಗೆ ಹೆಚ್ಚಿನ ಆಸಕ್ತಿ ಕೂಡ. ಆದರೆ ಶೌಚಾಲಯ ಮೊದಲ ಸಲ ಹೇಗೆ ನಿರ್ಮಾಣವಾಯಿತು ಎನ್ನುವುದು ಯಾರಿಗಾದರೂ ತಿಳಿದಿದೆಯಾ? ಇಂತಹ ಶೌಚಾಲಯಗಳ ಇತಿಹಾಸವನ್ನುತೋರಿಸುವಂತಹ ವಸ್ತುಸಂಗ್ರಹಾಲಯವಿರುವುದು ಭಾರತದಲ್ಲಿ. ಸುಮಾರು 4,500 ವರ್ಷಗಳಿಗೂ ಹಿಂದೆ ಶೌಚಾಲಯವನ್ನು ಯಾವ ರೀತಿ ಉಪಯೋಗಿಸಲಾಗುತ್ತಿತ್ತು ಎನ್ನುವ ಬಗ್ಗೆ ಇಲ್ಲಿ ವಿವರವಿದೆ. ಶೌಚಾಲಯದ ಬಗ್ಗೆ ಒಂದು ಪುಸ್ತಕವೇ ಇದೆ. ಇದನ್ನು ತೆಗೆದುಕೊಂಡು ಓದಬಹುದು. Image courtesy

ಐಸ್ಲ್ಯಾಂಡಿಕ್ ಫಲ್ಲೋಜಿಕಲ್ ಮ್ಯೂಸಿಯಮ್
ವಿಶ್ವದಲ್ಲಿರುವ ಅತ್ಯಂತ ವಿಚಿತ್ರವಾಗಿರುವ ಮ್ಯೂಸಿಯಂಗಳಲ್ಲಿ ಇದು ಒಂದಾಗಿದೆ. ಈ ಮ್ಯೂಸಿಯಂನಲ್ಲಿ ನಮಗೆ ಹಲವಾರು ಜಾತಿಯ ಪ್ರಾಣಿಗಳ ಜನನಾಂಗಗಳು ಕಾಣಲು ಸಿಗುವುದು. ಈ ಮ್ಯೂಸಿಯಂನ್ನು ಅದಕ್ಕಾಗಿಯೇ ಮೀಸಲಿಡಲಾಗಿದೆ. ಇಲ್ಲಿ ಸುಮಾರು 215ಕ್ಕೂ ಹೆಚ್ಚಿನ ಜನನಾಂಗಗಳಿವೆ. ಸಮುದ್ರ ಸಸ್ತನಿಗಳಿಂದ ಹಿಡಿದು ಕಾಡುಪ್ರಾಣಿಗಳ ತನಕ ಎಲ್ಲಾ ರೀತಿಯ ಪ್ರಾಣಿಗಳ ಜನನಾಂಗಗಳು ಇವೆ. Image courtesy

ಕೆಟ್ಟ ಕಲಾಕೃತಿಗಳ ಮ್ಯೂಸಿಯಮ್
ಒಳ್ಳೆಯ ಕಲಾಕೃತಿಗಳಿಗೆ ಬೇಕಾದಷ್ಟು ಮ್ಯೂಸಿಯಮ್ ಗಳಿವೆ. ಆದರೆ ಕೆಟ್ಟ ಕಲಾಕೃತಿಗಳನ್ನು ರಚಿಸಿದವರಿಗೆ ತಮ್ಮ ಕಲೆಯನ್ನು ತೋರಿಸುವ ಆಸೆಯಿರುವುದಿಲ್ಲವೇ? ಅದಕ್ಕಾಗಿಯೇ ಈ ಮ್ಯೂಸಿಯಂನಲ್ಲಿ ಕೆಟ್ಟ ಕಲಾಕೃತಿಗಳ ಪ್ರದರ್ಶನ, ಸಂಗ್ರಹ ಮಾಡಲಾಗುತ್ತದೆ. ಚುಟುಕಾಗಿ ಇದನ್ನು ಮೊಬಾ ಎಂದು ಕರೆಯಲಾಗುತ್ತದೆ. ಈ ಮ್ಯೂಸಿಯಂಗೆ ಭೇಟಿ ನೀಡಿದಾಗ ನೀವು ಕಲೆಗಾರರು ಅಲ್ಲದಿದ್ದರೂ ನಿಮ್ಮದೇ ಆದ ಕಲಾಕೃತಿಯನ್ನು ರಚಿಸಬಹುದಾಗಿದೆ. Image courtesy

ಕುನಸ್ತ್ಕಮೆರಾ, ರಷ್ಯಾ
ಇದು ಮ್ಯೂಸಿಯಂಗಳಲ್ಲಿ ಅತ್ಯಂತ ವಿಚಿತ್ರವಾದ ಮ್ಯೂಸಿಯಂ. ಇಲ್ಲಿ ಭ್ರೂಣದಿಂದ ಹಿಡಿದು ಮಾನವನ ತಲೆಯ ಭಾಗಗಳನ್ನು ವಿನೇಗರ್ ನಲ್ಲಿ ಸಂಗ್ರಹಿಸಿಡಲಾಗಿದೆ. ನೀವಿಲ್ಲಿ ಏನು ಬೇಕಿದ್ದರೂ ನೋಡಬಹುದು. ಅದು ತುಂಬಾ ವಿಚಿತ್ರವಾಗಿರುವಂತದ್ದು! Image courtesy

ಅವನೊಸ್ ಹೇರ್ ಮ್ಯೂಸಿಯಮ್
ಇದು ವಿಶ್ವದಲ್ಲಿ ಅತಿ ಗಾಬರಿಯನ್ನು ಉಂಟುಮಾಡುವಂತಹ ಕೂದಲಿನ ಮ್ಯೂಸಿಯಂ. ಸಣ್ಣ ಗುಹೆಯೊಂದರಲ್ಲಿ ಈ ವಿಚಿತ್ರವಾದ ಮ್ಯೂಸಿಯಂ ಇದೆ. ವಿಶ್ವದ 16 ಸಾವಿರ ಮಹಿಳೆಯರಿಂದ ಸಂಗ್ರಹಿಸಿದ ಕೂದಲುಗಳು ಈ ಮ್ಯೂಸಿಯಂನಲ್ಲಿದೆ. ಇದನ್ನು ನೋಡದೇ ಇರಲು ಸಾಧವೇ? Image courtesy

ಅಂತಾರಾಷ್ಟ್ರೀಯ ಗುಪ್ತ ಪ್ರಾಣಿಶಾಸ್ತ್ರ ಮ್ಯೂಸಿಯಮ್
ಈ ಮ್ಯೂಸಿಯಮ್ ನಲ್ಲಿ ಪೌರಾಣಿಕವಾಗಿ ಬರುವ ಜೀವಿಗಳ ಮಾದರಿಗಳು ಹಾಗೂ ಅವುಗಳ ಹಸ್ತಕೃತಿಗಳಿಗೆ ಸಮರ್ಪಿತವಾಗಿದೆ. ಪ್ರದರ್ಶನ ವಿಭಾಗದಲ್ಲಿ ಕೂದಲಿನ ಸಂಗ್ರಹಗಳು, ಈ ಮ್ಯೂಸಿಯಂನಲ್ಲಿರುವ ವಸ್ತುಗಳನ್ನು ನೋಡುತ್ತಲಿದ್ದರೆ ಇವುಗಳ ಪುಣ್ಯಕ್ಕೆ ಜೀವಂತವಾಗಿಲ್ಲವಲ್ಲ ಎನ್ನುವ ಭಾವನೆ ಮೂಡುವುದು. Image courtesy

ಮಧ್ಯಕಾಲೀನ ಚಿತ್ರಹಿಂಸೆ ಸಾಧನಗಳ ಮ್ಯೂಸಿಯಮ್
ಮಧ್ಯಕಾಲೀನದಲ್ಲಿ ರಾಜರು ಜನರಿಗೆ ನೀಡುತ್ತಿದ್ದ ಚಿತ್ರಹಿಂಸೆಯ ಸಾಧನಗಳ ಸಂಗ್ರಹವು ಈ ಮ್ಯೂಸಿಯಂನಲ್ಲಿದೆ. ಸುಮಾರು 100ಕ್ಕೂ ಹೆಚ್ಚಿನ ಚಿತ್ರಹಿಂಸೆ ಸಾಧನಗಳು ಇದರಲ್ಲಿದೆ. ಕೆಲವೊಂದು ಸಾಧನಗಳನ್ನು ಅರ್ಥ ಮಾಡಿಕೊಳ್ಳಬಹುದು. ಮತ್ತೆ ಕೆಲವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಮಧ್ಯಕಾಲೀನ ಯುಗಕ್ಕೆ ವಾಪಸ್ಸು ಹೋಗಬೇಕಾಗಬಹುದು. Image courtesy

ಕಾನಾಸ್ ಮುಳ್ಳುತಂತಿ ಮ್ಯೂಸಿಯಮ್
ಈ ಮ್ಯೂಸಿಯಂ ಕೇವಲ ಮುಳ್ಳುತಂತಿಗಳ ಪ್ರದರ್ಶನಕ್ಕೆ ರಚಿಸಲಾಗಿದೆ ಎಂದರೆ ಅಚ್ಚರಿಯಾಗಬಹುದು ಅಲ್ಲವೇ? ಆದರೆ ಈ ವಸ್ತುಸಂಗ್ರಹಾಲಯದಲ್ಲಿ ಅಮೆರಿಕಾದ ಸುಮಾರು 2400ಕ್ಕೂ ಹೆಚ್ಚಿನ ವಿವಿಧ ರೀತಿಯ ಮುಳ್ಳುತಂತಿಗಳಿವೆ. Image courtesy



Click it and Unblock the Notifications









