Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಿಸ್ಮಯ: ಈ ಕಾಲೇಜುಗಳಲ್ಲಿ ಪ್ರೇತಾತ್ಮಗಳದ್ದೇ ಕಾರುಬಾರು!
ನಮ್ಮ ಶಾಲಾ ದಿನಗಳನ್ನು ಕಳೆದು ಕಾಲೇಜು ಸೇರುವುದೆಂದರೆ ಅದೇನೋ ನಮಗೆ ತುಂಬಾ ಖುಷಿಯ ವಿಚಾರ. ಕಾಲೇಜು ಜೀವನ ಹಾಗಿರುತ್ತದೆ, ಹೀಗಿರುತ್ತದೆ ಎಂದು ನಮಗೆ ಹಲವಾರು ಕಥೆಗಳನ್ನು ಸೀನಿಯರ್‌ಗಳು ಹೇಳಿರುತ್ತಾರೆ. ಅದೇ ಗುಂಗಿನಲ್ಲಿ ನಾವು ಕನಸು ಕಾಣಲು ಆರಂಭಿಸುತ್ತೇವೆ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?
ಕಾಲೇಜ್ ಲೈಫ್ ಇಸ್ ಗೋಲ್ಡನ್ ಲೈಫ್ ಎನ್ನುವ ಮಾತಿದೆ. ಈ ಮಾತು ನಿಜ ಎನ್ನುವುದು ಕಾಲೇಜು ಸೇರಿ ನಾವು ಸಹಪಾಠಿಗಳೊಂದಿಗೆ ಜೀವನವನ್ನು ಆನಂದಿಸಲು ಆರಂಭಿಸಿದಾಗ ತಿಳಿಯುತ್ತದೆ. ಆದರೆ ನೀವು ತೆರಳುತ್ತಿರುವ ಕಾಲೇಜು ಭಾರತದಲ್ಲಿ ಪಿಶಾಚಿಗ್ರಸ್ತ ಕಾಲೇಜುಗಳಲ್ಲಿ ಒಂದಾಗಿದೆ ಎಂದರೆ ನಿಮಗೆ ಹೇಗನಿಸಬಹುದು. ಇದನ್ನು ಕೇಳಿ ನಿಮಗೆ ಸ್ವಲ್ಪ ಆಘಾತವಾಗಬಹುದು. ಸ್ವಲ್ಪ ಸುಧಾರಿಸಿಕೊಳ್ಳಿ. ಈ ಲೇಖನದಲ್ಲಿ ನಾವು ಪ್ರೇತಾತ್ಮ ಕಾಡುವ ಕೆಲವೊಂದು ಕಾಲೇಜುಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಇದನ್ನು ಸರಿಯಾಗಿ ಓದಿಕೊಂಡು ಬಳಿಕ ನೀವು ಕಾಲೇಜು ಸೇರುವ ನಿರ್ಧಾರವನ್ನು ಮಾಡಿಕೊಳ್ಳಿ!!

ಎನ್ ಐಟಿ, ಹಮಿಪುರ
ಈ ಕಾಲೇಜಿನ ಕೈಲಾಸ್ ಹುಡುಗರ ಹಾಸ್ಟೆಲ್ ನಲ್ಲಿರುವ ಬ್ಲಾಕ್ ಸಿಯಲ್ಲಿ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಇಲ್ಲಿ ಪಿಶಾಚಿ ಕಾಟವಿದೆಯೆನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡು ರೂಮ್ ನಲ್ಲಿ ಎಷ್ಟರಮಟ್ಟಿಗೆ ಪಿಶಾಚಿ ಕಾಟವಿದೆಯೆಂದರೆ ನೀವು ಹೋಗಿ ಇಲ್ಲಿ ಬ್ಲೂ ಟೂತ್ ಆನ್ ಮಾಡಿದರೆ ಸತ್ತ ಹುಡುಗ ಎನ್ನುವ ಸಂದೇಶ ತೋರಿಸುತ್ತದೆ. ರೂಮ್ ನಿಂದ ಹೊರಬಂದ ಕೂಡಲೇ ಸಂಪರ್ಕವೂ ಕಡಿತಗೊಳ್ಳುವುದು. Image courtesy

ಮಹಿಳಾ ಕಾಲೇಜು, ಕೊಲ್ಕತ್ತಾ
ಸರ್ ವಾರೆನ್ ಹಾಸ್ಟಿಂಗ್ ತನ್ನ ಮನೆಯಾಗಿ ಈ ಕಾಲೇಜನ್ನು ಬಳಸುತ್ತಿದ್ದರು. ಆದರೆ ಈಗಲೂ ಅವರು ಅಲ್ಲೇ ಇದ್ದಾರೆ ಎನ್ನಲಾಗುತ್ತಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ವಾರೆನ್ ಹಾಸ್ಟಿಂಗ್ ಕಾಣಿಸಿಕೊಂಡಿದ್ದರು ಎಂದು ಹೆಚ್ಚಿನ ವಿದ್ಯಾರ್ಥಿಗಳು ಹೇಳಿದ್ದಾರೆ. ಲಂಚದ ಆರೋಪವನ್ನು ಎದುರಿಸಿದ್ದ ವಾರೆನ್ ಆತ್ಮವು ತನ್ನ ದಾಖಲೆಗಳನ್ನು ಹುಡುಕುತ್ತಾ ಮೆಟ್ಟಿಲುಗಳನ್ನು ಹತ್ತುತ್ತದೆ ಎನ್ನಲಾಗುತ್ತಿದೆ. Image courtesy

ಖೈರತ್ಬಾದ್ ವಿಜ್ಞಾನ ಕಾಲೇಜು, ಹೈದರಾಬಾದ್
ಈ ಕಾಲೇಜು ಮೋಡಗಳಲ್ಲಿ ಆವರಿಸಿಕೊಂಡಂತೆ ಕಾಣಿಸುವುದರಿಂದ ಇದನ್ನು ನೋಡಿದಾಗ ಯಾರಿಗೂ ಭಯ ಉಂಟಾಗಬಹುದು. ಕಾಲೇಜು ಆವರಣದಲ್ಲಿ ಹಲವಾರು ನಿಗೂಢ ಸಾವುಗಳು ಸಂಭವಿಸಿದ್ದು, ಶವಗಳನ್ನು ಸರಿಯಾಗಿ ಅಂತ್ಯಸಂಸ್ಕಾರ ಮಾಡಿಲ್ಲವೆಂದು ಹೇಳಲಾಗಿದೆ. ಕಾಲೇಜು ಆವರಣದಲ್ಲಿ ಕೂಗುವ ಸದ್ದು, ಅಸ್ಥಿಪಂಜರ ನಡೆದಾಡಿದಂತಾಗುವುದು ಮುಂತಾದವುಗಳನ್ನು ವಿದ್ಯಾರ್ಥಿಗಳು ಇಲ್ಲಿ ನೋಡಿದ್ದಾರೆ. ಇಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದಾನೆ. Image courtesy

ಕ್ರಿಶ್ಚಿಯನ್ ಕಾಲೇಜು ಮದ್ರಾಸ್
ಭಾರತದಲ್ಲಿರುವ ಪಿಶಾಚಿಗ್ರಸ್ತ ಕಾಲೇಜುಗಳಲ್ಲಿ ಇದು ಒಂದಾಗಿದೆ. ಇಲ್ಲಿನ ಕೆಮೆಸ್ಟ್ರೀ ಲ್ಯಾಬ್ ನಿಂದ ಯಾವಾಗಲೂ ವಿಚಿತ್ರ ಶಬ್ದಗಳು ಬರುತ್ತದೆ ಎನ್ನಲಾಗುತ್ತಿದೆ. ಯಾರೋ ಕೆಮಿಸ್ಟ್ರಿ ಪಾಠ ಮಾಡಿದಂತೆ ಶಬ್ದ ಕೇಳಿಬರುತ್ತದೆ. ಇಹಲೋಕ ತ್ಯಜಿಸಿದರೂ ಉಪನ್ಯಾಸಕರಿಗೆ ತನ್ನ ವಿಷಯದ ಬಗ್ಗೆ ಈಗಲೂ ಪ್ರೀತಿಯಿದ್ದು, ಖಾಲಿ ಕೋಣೆಗಳಿಗೆ ಪಾಠ ಮಾಡುತ್ತಿರಬಹುದು. Image courtesy

ಪುಣೆ ವಿಶ್ವವಿದ್ಯಾನಿಲಯ
ಇದು ಶಿಕ್ಷಣಕ್ಕೆ ಹೇಳಿ ಮಾಡಿಸಿದಂತಹ ವಿಶ್ವವಿದ್ಯಾನಿಲಯ. ಆದರೆ ಒಳಗೆ ಮಾತ್ರ ಪಿಶಾಚಿ ಕಾಟ ಇದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. 1886ರಲ್ಲಿ ಕಾಲರಾ ರೋಗದಿಂದ ಆಸ್ಟ್ರೇಲಿಯಾದ ಅಲಿಸ್ ರಿಚ್ಮೆನ್ ಎಂಬಾಕೆ ಸಾವನ್ನಪ್ಪಿದ್ದಳು. ಆಕೆಯ ಆತ್ಮ ಇಲ್ಲಿ ಕಾಡುತ್ತಿದೆ ಎಂದು ನಂಬಲಾಗಿದೆ. Image courtesy

ಎನ್ ಐಟಿ ರೌಕೆಲಾ
ಈ ಕಾಲೇಜನ್ನು ಸ್ಮಶಾನವೊಂದರಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕ್ಯಾಂಪಸ್ ನಲ್ಲಿ ಪಾತ್ರೆಗಳು ತಮ್ಮಷ್ಟಕ್ಕೆ ಬೀಳುವುದನ್ನು ನೋಡಿರುವ ವಿದ್ಯಾರ್ಥಿಗಳು ಕಾಲೇಜು ಮೈದಾನದಲ್ಲಿ ತಲೆಬುರುಡೆಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಎಲ್ಲವೂ ಸ್ಮಶಾನದ ಮಹಿಮೆ. Image courtesy

ಸೇಂಟ್ ಬೇಡೆ ಕಾಲೇಜು, ಶಿಮ್ಲಾ
ಬಾಲಿವುಡ್ ನಟಿ ಪ್ರೀತಿ ಜಿಂಟಾ ಇದೇ ಕಾಲೇಜಿನಿಂದ ಪದವಿ ಪಡೆದಿರುವ ಕಾರಣ ಈ ಕಾಲೇಜು ತುಂಬಾ ಜನಪ್ರಿಯವಾಗಿದೆ. ವಿಷಲ್ ಹಾಕುವುದು ಮತ್ತು ಇತರ ಕೆಲವೊಂದು ಶಬ್ದಗಳು ಡೈನಿಂಗ್ ಹಾಲ್ ನಿಂದ ಕೇಳಿಬರುತ್ತಿರುತ್ತದೆ. ಆದರೆ ಕಾಲೇಜು ಆಡಳಿತವು ಇದನ್ನು ನಿರಾಕರಿಸಿದೆ. Image courtesy

ಐಐಟಿ ರೂರ್ಕೆ
ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ಕಾಲೇಜು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಇಲ್ಲಿ ಪೇತಾತ್ಮದ ಕಾಟವು ಶುರುವಾಗಿದೆ ಎನ್ನಲಾಗಿದೆ. ಇದನ್ನು ಕೂಡ ಪ್ರೇತಾತ್ಮ ಕಾಡುವ ಕಾಲೇಜುಗಳ ಪಟ್ಟಿಗೆ ಸೇರಿಸಬಹುದಾಗಿದೆ. Image courtesy



Click it and Unblock the Notifications
