Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ಇದು ಸೆಲ್ಫಿ ಕ್ರೇಜಿನಿಂದಾದ, ಅವಾಂತರ ನೀವು ನಂಬಲೇಬೇಕು!
ಮೊಬೈಲ್ ಮಾಯೆ ಹುಷಾರು ಕಣೋ ಎನ್ನುವ ಸಮಯ ಬಂದಿದೆ. ಯಾರನ್ನು ನೋಡಿದರೂ ಸಹ ಮೊಬೈಲ್‌ನಲ್ಲೇ ಮುಳುಗಿ ಹೋಗಿರುತ್ತಾರೆ. ಮೊಬೈಲ್ ಮಾಯೆಯ ಮುಂದೆ ಏನೂ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ಯುವಜನರನ್ನು ಮೊಬೈಲ್ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಈಗೀಗ ಸೆಲ್ಫಿ ಎನ್ನುವುದು ಸಾಮಾನ್ಯವಾಗಿ ಹೋಗಿದೆ. ಸೆಲ್ಫಿ ಇಲ್ಲದ ಜೀವನ ಯಾತಕೆ ಎಂದು ಮೊಬೈಲ್ ದಾಸರೊಬ್ಬರು ಹೇಳಿದ್ದಾರಂತೆ...! ಅದರಲ್ಲೂ ಸೆಲ್ಫಿ ಸ್ಟಿಕ್‌ಗಳು ಬಂದ ಬಳಿಕ ಸೆಲ್ಫಿ ತೆಗೆದುಕೊಳ್ಳುವ ವಿಧಾನವೇ ಬದಲಾಗಿದೆ.
ಆದರೆ ಈ ಸೆಲ್ಫಿ ಸ್ಟಿಕ್ ನಿಂದ ಹಲವಾರು ರೀತಿಯ ಅವಘಡಗಳು ಸಂಭವಿಸಿದೆ. ಎಲ್ಲಾ ಕಡೆಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಅಷ್ಟು ಸಮಂಜಸವಲ್ಲ. ಅತ್ಯಂತ ಆಘಾತವನ್ನು ಉಂಟುಮಾಡುವ ಸೆಲ್ಫಿ ಕಥೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ. ಇದನ್ನು ಓದಿಕೊಳ್ಳಿ. ಈ ಲೇಖನದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಮಸ್ಯೆಗೆ ಸಿಲುಕಿದ ಬಗ್ಗೆ ಹೇಳಿಲಿದ್ದೇವೆ. ಇದರಲ್ಲಿ ಕೆಲವೊಂದು ಕಥೆಗಳು ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಆದರೂ ಜನರು ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆದುಕೊಳ್ಳುವುದನ್ನು ಮರೆತಿಲ್ಲ.

ರೋಲರ್ ಕೋಸ್ಟರ್ ನಿಲ್ಲಿಸಿದ ವ್ಯಕ್ತಿ
ಸಿಡ್ನಿ ಕ್ಯಾಲಿಫೋರ್ನಿಯಾದ ಅಡ್ವೆಂಚರ್ ನಲ್ಲಿ ರೋಲರ್ ಕೋಸ್ಟರ್ ನಲ್ಲಿದ್ದ ಜನರು ಒಂದು ಗಂಟೆಗಳ ಕಾಲ ಉಸಿರು ಬಿಗಿಹಿಡಿದು ಕುಳಿತುಕೊಳ್ಳಬೇಕಾಯಿತು. ಯಾಕೆಂದರೆ ಅದರಲ್ಲಿದ್ದ ಮಹಾನುಭಾವನೊಬ್ಬ ಸೆಲ್ಫಿ ಸ್ಟಿಕ್ ಬಳಸಿದ್ದ. ಇದರಿಂದ ರೋಲರ್ ಕೋಸ್ಟರ್ ಅಲ್ಲಿಯೇ ನಿಂತುಹೋಗಿತ್ತು. ಇದನ್ನು ಸರಿಪಡಿಸಲು ಒಂದು ಗಂಟೆ ಬೇಕಾಯಿತು. Image courtesy

ಸೆಲ್ಫಿ ಸ್ಟಿಕ್ ಅನ್ವೇಷಣೆ
ಕಲಾವಿದರಾದ ಅರಿಕ್ ಸನೆ ಮತ್ತು ಜಸ್ಟಿನ್ ಕ್ರೊವ್ ಅವರು ಹೊಸ ಅನ್ವೇಷಣೆಯಾದ ಸೆಲ್ಫಿ ಆರ್ಮ್ ತಯಾರಿಸಿದ್ದಾರೆ. ಸೆಲ್ಫಿ ಪಡೆಯುವಾಗ ಬಿಸಿಯಾದ ಅನುಭವ ಪಡೆಯಲು ಒಳ್ಳೆಯ ಮಾರ್ಗವನ್ನು ಇವರು ಕಂಡು ಹುಡುಕಿದ್ದಾರೆ. ಇದರಲ್ಲಿ ಸೆಲ್ಫಿ ಪಡೆಯಲು ವ್ಯಕ್ತಿಯೊಬ್ಬ ಒಂದು ತೋಳನ್ನು ಹಿಡಿದುಕೊಳ್ಳಬೇಕು. Image courtesy

ಇದು ಅಸಾಧ್ಯವಾದ ಸೆಲ್ಫಿ ಫೋಟೋ
ಸಾಗಾಟ ವಿಮಾನವೊಂದರ ತುದಿಯಲ್ಲಿ ಅಮೆರಿಕಾದ ವಾಯುಸೇನಾ ಸಿಬ್ಬಂದಿಗಳು ಕುಳಿತುಕೊಂಡು ತೆಗೆಸಿಕೊಂಡಿರುವ ಸೆಲ್ಫಿ ಇದು. ಅವರು ಎಷ್ಟು ಸುಲಭವಾಗಿ ಯಾವುದೇ ಆತಂಕವಿಲ್ಲದೆ ಇಲ್ಲಿ ಕುಳಿತುಕೊಂಡಿದ್ದಾರೆ ಎಂದು ಫೋಟೊ ನೋಡಿದರೆ ತಿಳಿಯುವುದು. ಇದು ಸೆಲ್ಫಿ ಸ್ಟಿಕ್‌ನ ಗೆಲುವು ಎಂದು ಫೋಟೋಗ್ರಾಫರ್ ಅಂಥೋನಿ ಲವ್ಲೆಸ್ ಟ್ವೀಟ್ ಮಾಡಿದ್ದಾರೆ. Image courtesy

ಸೆಲ್ಫಿಯಿಂದಾಗಿ ಪಕ್ಷದಿಂದ ಹೊರಹಾಕಲ್ಪಟ್ಟ ರಾಜಕಾರಣಿ
ಅರ್ಮಾನ್ ಹುಸೇನ್ ಎಂಬ ಯುವ ರಾಜಕಾರಣಿ ಟ್ಯುನಿಶ್ ಬೀಚ್‌ನಲ್ಲಿ ಸೆಲ್ಫಿ ತೆಗೆದುಕೊಂಡಿರುವುದು ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ಯಾಕೆಂದರೆ ಆತ ಸೆಲ್ಫಿ ತೆಗೆದುಕೊಂಡ ಮೂರು ದಿನ ಮೊದಲು ಇಲ್ಲಿ ಹತ್ಯಾಕಾಂಡ ನಡೆದಿತ್ತು. ಆತನನ್ನು ಪಕ್ಷದಿಂದ ಹೊರಹಾಕಲಾಯಿತು ಮತ್ತು ಕ್ಷಮೆಯಾಚಿಸಲು ಕೋರಲಾಯಿತು. Image courtesy

ರೋಮ್‌ನ ಕೊಲೊಸಿಯಮ್ ನಲ್ಲಿ ಸೆಲ್ಫಿ ಸ್ಟಿಕ್ ನಿಷೇಧ
ರೋಮ್‌ನ ಕೊಲೊಸಿಯಮ್ ಸಾವಿರಾರು ವರ್ಷಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದರ ಗೋಡೆಗೆ ಅಂಟಿಕೊಂಡು ಅಮೆರಿಕಾದ ಜೋಡಿಯೊಂದು ಸೆಲ್ಫಿ ಕ್ಲಿಕ್ಕಿಸಿತ್ತು. ಫೋಟೊವನ್ನು ಇಂಟರ್ನೆಟ್ ನಲ್ಲಿ ಹಾಕಿದ ಬಳಿಕ ಜೋಡಿಯನ್ನು ಬಂಧಿಸಲಾಗಿತ್ತು. ಜೋಡಿಯು ತಪ್ಪಿನ ಬಗ್ಗೆ ಕ್ಷಮೆಯಾಚಿಸಿತ್ತು. Image courtesy

ವರದಿಗಾರರಿಗೆ ಸೆಲ್ಫಿ ಸ್ಟಿಕ್
ವರದಿಗಾರರೊಂದಿಗೆ ಯಾವುದೇ ವರದಿ ಮಾಡಲು ಹೋಗುವಾಗ ಫೋಟೊಗ್ರಾಫರ್ ಬೇಕೆಂದಿಲ್ಲ. ಯಾಕೆಂದರೆ ಸೆಲ್ಫಿ ಸ್ಟಿಕ್ ಬಳಸಿ ಫೋಟೊ ತೆಗೆದುಕೊಳ್ಳಬಹುದಾಗಿದೆ. ಆದರೆ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಸೆಲ್ಫಿ ಸ್ಟಿಕ್ ನಿಂದಾಗಿ ಫೋಟೊಗ್ರಾಫರ್ ಗಳ ಕೆಲಸಕ್ಕೆ ಕತ್ತರಿ ಬೀಳುವ ಸಮಯ ಬರಬಹುದು. Image courtesy



Click it and Unblock the Notifications