ಅರೆ ಇವೆಲ್ಲಾ ಚೀನಾದ ಉತ್ಪನ್ನಗಳೇ? ನಂಬಿಕೆಯೇ ಬರುತ್ತಿಲ್ಲ!

By: Arshad
Subscribe to Boldsky

ವಸ್ತುಗಳು ಯಾವ ದೇಶದಲ್ಲಿ ತಯಾರಾಗಿದ್ದೆಂದು ನೋಡಿಯೇ ಗುಣಮಟ್ಟ ಅಳೆಯುವುದು ನಾವು ಭಾರತೀಯರಿಗೆ ರಕ್ತದಲ್ಲಿಯೇ ಬಂದ ಗುಣವಾಗಿದೆ. ಜಪಾನ್ ನಿರ್ಮಿತ ಅಂದರೆ ಅತ್ಯುತ್ತಮ, ಚೀನಾ ನಿರ್ಮಿತ ಅಂದರೆ ಅತ್ಯಂತ ಕಳಪೆ, ಭಾರತದ್ದು ಎಂದರೆ ಕಳಪೆಗಿಂತ ಕೊಂಚ ಮೇಲಿನದ್ದು ಎಂಬ ಭಾವನೆ ಭಾರತೀಯರಲ್ಲಿ ಮೂಡಿದೆ. ಆಡು ಮುಟ್ಟದ ಸೊಪ್ಪಿಲ್ಲ, ಚೀನೀಯರು ತಿನ್ನದ ಆಹಾರವಿಲ್ಲ! 

ಕಳಪೆ ಎಂದು ಗೊತ್ತಿದ್ದೂ ಭಾರತೀಯರು ಭಾರೀ ಪ್ರಮಾಣದಲ್ಲಿ ಚೀನಾ ಉತ್ಪನ್ನಗಳನ್ನು ಖರೀದಿಸಲು ಏಕಮಾತ್ರ ಕಾರಣವೆಂದರೆ ಇವುಗಳು ತೀರಾ ಅಗ್ಗವಾಗಿ ದೊರಕುವುದು. ವಾಸ್ತವವಾಗಿ ಚೀನಾದಲ್ಲಿ ಒಂದು ವಸ್ತುವನ್ನು ಅತ್ಯುತ್ತಮ ಗುಣಮಟ್ಟದಿಂದ ಪ್ರಾರಂಭಿಸಿ ಅತಿ ಕಳಪೆಯವರೆಗೆ ಇಪ್ಪತ್ತು ಹಂತಗಳ ಗುಣಮಟ್ಟದವರೆಗೆ ತಯಾರಿಸಲಾಗುತ್ತದೆ. ಇದರ ಪ್ರಕಾರ ಬೆಲೆಯೂ ಏರುಪೇರಾಗುತ್ತದೆ. ವಿಷಭರಿತ ಚೀನಾ ಆಹಾರಗಳು ಮಾರುಕಟ್ಟೆಗೆ ಬಂದುಬಿಟ್ಟಿವೆ!

ಸಾಮಾನ್ಯವಾಗಿ ಕಡಿಮೆ ಬೆಲೆಯದ್ದನ್ನೇ ಬಯಸುವ ಭಾರತೀಯ ಗ್ರಾಹಕನಿಗಾಗಿ ಅತಿ ಕಳಪೆ ಮಟ್ಟದ ವಸ್ತುಗಳೇ ಭಾರತಕ್ಕೆ ಬರುತ್ತವೆ. ಎಷ್ಟು ಅಗ್ಗ ಎಂದರೆ ಭಾರತದ ವಸ್ತುವಿನ ಕಾಲು ಭಾಗದಷ್ಟು. ಇದರಲ್ಲಿ ಲಾಭವೂ ಹೆಚ್ಚಿರುವುದರಿಂದ ವರ್ತಕರೂ ಚೀನಾ ವಸ್ತುಗಳಿಗೆ ಹೆಚ್ಚಿನ ಒಲವು ತೋರುತ್ತಾರೆ.

ಆದರೆ ಕೆಲವು ವಸ್ತುಗಳು ಅತ್ಯುತ್ತಮ ಗುಣಮಟ್ಟ ಹೊಂದಿದೆ. ಏಕೆಂದರೆ ಭಾರತದ ಹೊರತಾಗಿ ಇತರ ರಾಷ್ಟ್ರಗಳಿಗೆ ಈ ವಸ್ತುಗಳನ್ನು ರಫ್ತು ಮಾಡಬೇಕಾದರೆ ಆ ದೇಶದ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಲೇಬೇಕಾದುದರಿಂದ ಚೀನಾ ಸಹಾ ಆ ಗುಣಮಟ್ಟವನ್ನು ನೀಡಲೇಬೇಕಾಗುತ್ತದೆ. ಭಾರತದ ನಿತ್ಯದ ಹಲವು ವಸ್ತುಗಳು ಚೀನಾದಿಂದ ಹಿಂದಿನಿಂದಲೂ ಬರುತ್ತಿದ್ದು ಭಾರತದ ಇತಿಹಾಸವನ್ನು ಬದಲಿಸಿವೆ.ಬನ್ನಿ, ಇಂತಹ ಕೆಲವು ಚೀನಾದಿಂದ ಭಾರತಕ್ಕೆ ಆಗಮಿಸಿದ ವಸ್ತುಗಳ ಬಗ್ಗೆ ಅರಿಯೋಣ....

ಸಕ್ಕರೆ

ಸಕ್ಕರೆ

ಬಿಳಿಯ ಚಿಕ್ಕ ಚಿಕ್ಕ ಕಣಗಳಾದ ಸಕ್ಕರೆ ಈಗ ನಮ್ಮಲ್ಲೂ ತಯಾರಾಗುತ್ತಿದ್ದರೂ ಚೀನಾದಲ್ಲಿ ಇದು ಮೊದಲಿಗೆ ಪ್ರಾರಂಭವಾಯಿತು. ಭಾರತದಲ್ಲಿ ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸುವ ಬೆಲ್ಲವನ್ನೇ ಬಳಸಲಾಗುತ್ತಿತ್ತು.

ಸಕ್ಕರೆ

ಸಕ್ಕರೆ

ಬ್ರಿಟಿಷರು ಭಾರತಕ್ಕೆ ಬಂದಾಗ ಚೀನಾದಿಂದ ಸಕ್ಕರೆಯನ್ನೂ ತರಿಸುವ ಮೂಲಕ ಸಕ್ಕರೆಯನ್ನು ತಂದರು. ಚೀನಾದಿಂದ ತಂದಿದ್ದು ಎಂಬುದನ್ನು ಭಾರತೀಯರು 'ಚೀನೀ' ಎಂದು ಕರೆದರು. ಇಂದಿಗೂ ಹಿಂದಿಯಲ್ಲಿ ಸಕ್ಕರೆಗೆ ಚೀನೀ ಎಂದೇ ಕರೆಯಲಾಗುತ್ತದೆ.

ಟೀ

ಟೀ

ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಟೀ ಇರಲೇ ಇಲ್ಲ. ಭಾರತೀಯರು ಕಷಾಯವನ್ನು ಹೆಚ್ಚು ಸೇವಿಸುತ್ತಿದ್ದರು. ವಿಶ್ವದಲ್ಲಿ ಟೀ ಯನ್ನು ಮೊದಲು ಚೀನಾದಲ್ಲಿ ಬಳಸಲು ಪ್ರಾರಂಭವಾಗಿತ್ತು. ಬ್ರಿಟಿಷರೊಂದಿಗೆ ಟೀ ಸಹಾ ಭಾರತಕ್ಕೆ ಬಂದು ಇಂದು ಭಾರತದ ರಾಷ್ಟ್ರೀಯ ಪೇಯದ ರೂಪ ಪಡೆದಿದೆ. ಇಂದು ಟೀ ಕುದಿಯದ ಒಂದೂ ಮನೆ ಭಾರತದಲ್ಲಿಲ್ಲ.

ಚೀನಾದ ವರ್ಣಚಿತ್ರಗಳು

ಚೀನಾದ ವರ್ಣಚಿತ್ರಗಳು

ಮುದ್ರಣ ತಂತ್ರಾಂಶ ಪ್ರಾರಂಭವಾಗುವುದಕ್ಕಿಂತಲೂ ಮೊದಲೇ ಚೀನಾದಿಂದ ತೆಳು ಚರ್ಮದಂತೆ ಕಾಣುವ ಉತ್ತಮ ಕಾಗದದ ಮೇಲೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಚಿತ್ರಿಸಲಾಗಿದ್ದ ವರ್ಣಚಿತ್ರಗಳು ಭಾರತಕ್ಕೆ ಆಗಮಿಸುತ್ತಿದ್ದವು. ಅಂದಿನ ದಿನಗಳಲ್ಲಿಯೇ ಪ್ರತಿದಿನ ಸಾವಿರಾರು ಪ್ರತಿಗಳನ್ನು ವರ್ಣಚಿತ್ರಕಾರರ ತಂಡವೇ ವಿವಿಧ ಕೆಲಸದ ಹಂತಗಳನ್ನು ಹಂಚಿಕೊಂಡು ತಯಾರಿಸುತ್ತಿದ್ದರು.

ನೂಡಲ್ಸ್

ನೂಡಲ್ಸ್

ಚೀನಾದ ಸಿದ್ಧ ಆಹಾರವಸ್ತುಗಳು ಇಲ್ಲದಿದ್ದರೆ ಭಾರತದ ಲಕ್ಷಾಂತರ ಜನರ ಪಾಡೇನಾಗುತ್ತಿತ್ತೋ ಗೊತ್ತಿಲ್ಲ. ಏಕೆಂದರೆ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ನೂಡಲ್ಸ್ ಚೀನಾದ ಕೊಡುಗೆಯಾಗಿದ್ದು ಇಂದು ನಾವು ಇದರ ಮೂಲವನ್ನೇ ಮರೆತುಬಿಟ್ಟಿದ್ದೇವೆ.

ನೂಡಲ್ಸ್

ನೂಡಲ್ಸ್

ಚೀನಾದ ನೂಡಲ್ಸ್‌ನಲ್ಲಿ ಮಸಾಲೆ ಇರುವುದಿಲ್ಲ. ಆದರೆ ಇದಕ್ಕೆ ನಮ್ಮ ರುಚಿಗೆ ತಕ್ಕಂತೆ ಮಸಾಲೆಗಳನ್ನು ಸೇರಿಸಿ ನೂಡಲ್ಸ್‌ಗಳನ್ನು ಬದಲಿಸಿಕೊಂಡಿದ್ದೇವೆ.

ಹಲ್ಲುಜ್ಜುವ ಬ್ರಶ್

ಹಲ್ಲುಜ್ಜುವ ಬ್ರಶ್

ಚೀನಾದಿಂದ ಬಂದ ವಸ್ತುಗಳ ಬಗ್ಗೆ ಅಚ್ಚರಿ ಇನ್ನೂ ಮುಗಿದಿಲ್ಲ. ಈ ಪಟ್ಟಿಯಲ್ಲಿ ಕಡೆಯದಾಗಿ ಬರುವ ವಸ್ತು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಬಹುದು. ಹಲ್ಲುಜ್ಜುವ ಬ್ರಶ್ ಸಹಾ ಚೀನಾದಿಂದಲೇ ಬಂದಿದೆ. ಇಂದಿನ ಆಧುನಿಕ ಬ್ರಶ್ ನ ಮೂಲ ಚೀನಾದಲ್ಲಿ ಸುಮಾರು 1400ನೇ ಇಸವಿಯಿಂದ ಬಳಕೆಯಲ್ಲಿತ್ತು. ಅಂದು ಮೂಳೆಯ ತುಂಡಿನ ತುದಿಗೆ ಹಂದಿಯ ಕೂದಲನ್ನು ಕಟ್ಟಿ ಬ್ರಶ್ ರೂಪ ನೀಡಲಾಗಿತ್ತು.

ಇನ್ನೂ ನೂರಾರು ವಸ್ತುಗಳು ವಿಶ್ವಕ್ಕೆ ಪರಿಚಯಿಸಲ್ಪಟ್ಟಿದೆ

ಇನ್ನೂ ನೂರಾರು ವಸ್ತುಗಳು ವಿಶ್ವಕ್ಕೆ ಪರಿಚಯಿಸಲ್ಪಟ್ಟಿದೆ

ಇಷ್ಟೇ ಅಲ್ಲ, ಚೀನಾದಿಂದ ಇನ್ನೂ ನೂರಾರು ವಸ್ತುಗಳು ವಿಶ್ವಕ್ಕೆ ಪರಿಚಯಿಸಲ್ಪಟ್ಟಿದ್ದು ಇಂದು ವಿಶ್ವ ಇದರ ಉಪಯುಕ್ತತೆಯನ್ನು ಕಂಡುಕೊಂಡು ನಿತ್ಯ ಜೀವನದ ಬಳಕೆಯಲ್ಲಿ ಬಳಸುತ್ತಿದೆ.

 
English summary

Surprising facts: Unbelievable Things Made In China

Usually, we have a perception that things made in China are low in quality and price. However, some of the Chinese things have actually undergone the test of time. In fact, there are some really bizarre things that you would never believe came from China. Here are some of the most unbelievable things that are originally made in China.
Subscribe Newsletter