Latest Updates
-
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ!
ದೀರ್ಘಾಯುಷ್ಯವನ್ನು ಪಡೆಯಲು ಮನಬಿಚ್ಚಿ ನಕ್ಕುಬಿಡಿ
ಸಕಲ ನೋವಿಗೆ ನಗುವೆಂಬ ಸಿದ್ಧೌಷಧ ಮದ್ದು ಎಂಬ ಮಾತಿದೆ. ಅಂದರೆ ನೀವು ಯಾವುದೇ ಪರಿಸ್ಥಿತಿಯಲ್ಲಿದ್ದರೂ ಸುಂದರವಾದ ನಗು ನಿಮ್ಮನ್ನು ಆ ಪರಿಸ್ಥಿತಿಯ ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ. ಹಾಗೂ ನಿಮ್ಮಲ್ಲಿ ಧನಾತ್ಮಕ ಯೋಚನಾ ಶಕ್ತಿಯನ್ನು ಹೆಚ್ಚಿಸಿ ಪರಿಹಾರ ಕಂಡುಹುಡುಕಲು ನೆರವಾಗುತ್ತದೆ. ಭಗವಂತ ಮನುಷ್ಯನಿಗೆ ಕೊಟ್ಟಿರುವ ವರಗಳಲ್ಲಿ ನಗುವೂ ಒಂದು. ದಿನವಿಡೀ ಅಳುಮುಂಜಿ ಮುಖವನ್ನು ಹೊರುವುದರ ಬದಲು ಮಂದಸ್ಮಿತ ಮುಗುಳ್ನಗೆಯನ್ನು ನೀವು ಮೊಗದಲ್ಲಿ ಅಳವಡಿಸಿಕೊಂಡಲ್ಲಿ ಇಡಿಯ ವಿಶ್ವವೇ ಬದಲಾದಂತೆ ನಿಮಗೆ ಕಾಣುತ್ತದೆ. ಎಷ್ಟೇ ಕಷ್ಟವಾಗಿದ್ದರೂ ಏನೇ ಬಂದರೂ ನಾನು ಸಾಧಿಸಬಲ್ಲೆ ಹೋರಾಡಬಲ್ಲೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿ ಉತ್ಪತ್ತಿಯಾಗುತ್ತದೆ.
ಟಿವಿಗಳಲ್ಲಿ ಬರುವ ಎಷ್ಟೋ ಹಾಸ್ಯಕಾರ್ಯಕ್ರಮಗಳನ್ನು ನೀವು ನೋಡಿರುತ್ತೀರಿ ಅಂತೆಯೇ ಪುಸ್ತಕಗಳಲ್ಲಿರುವ ಹಾಸ್ಯ ನಗೆಹನಿಗಳು, ಅಂತೆಯೇ ನಿಮ್ಮ ಸ್ನೇಹಿತರೊಂದಿಗೆ ನೀವು ಸಂವಾದ ನಡೆಸುವಾಗ ಹುಟ್ಟುವ ಹಾಸ್ಯಚಟಾಕಿಗಳು ನಿಮ್ಮಲ್ಲಿ ಹೊಟ್ಟೆ ಹುಣ್ಣಾಗುವ ನಗುವನ್ನು ತರುವುದು ಮಾತ್ರವಲ್ಲದೆ ನಿಮ್ಮ ಮನದ ದುಗುಡವನ್ನು ಸ್ವಲ್ಪ ಕಾಲ ಮರೆಮಾಚಲು ನೆರವಾಗುತ್ತದೆ. ಇನ್ನು ಬಾಯಿ ತುಂಬಾ ನಗುವುದಿಂದ ದವಡೆಯ ಆರೋಗ್ಯ ವೃದ್ಧಿಸುವುದರ ಜೊತೆಗೆ ಸಂಪೂರ್ಣ ದೇಹಾರೋಗ್ಯಕ್ಕೂ ಅತ್ಯುತ್ತಮ ಎಂಬುದಾಗಿ ವೈದ್ಯಲೋಕ ತಿಳಿಸಿದೆ.
ಮುಖಗಂಟಿಕ್ಕಿಕೊಂಡು ಮಾತನಾಡುವ ವ್ಯಕ್ತಿಗಿಂತಲೂ ನಗುನಗುತ್ತಾ ಮಾತನಾಡುವ ವ್ಯಕ್ತಿಗಳು ನಿಮಗೆ ಹೆಚ್ಚು ಇಷ್ಟವಾಗುತ್ತಾರೆ ಹಾಗೂ ಅವರ ಸನಿಹವನ್ನು ನೀವು ಬಯಸುತ್ತೀರಿ ಕೂಡ. ಆದ್ದರಿಂದ ನಗುವು ಒಂದು ದಿವ್ಯವಾದ ಔಷಧಿಯಾಗಿದೆ. ಅದಕ್ಕೆ ತಾನೇ ಹೇಳುವುದು ನಗು ನಗುತಾ ನಲಿ ನಲಿ ಏನೇ ಆಗಲಿ ಎಂದು.
ಹಾಗಾಗಿ ನಗುವುದು ನಿಮ್ಮ ಅಂತರಾತ್ಮಕ್ಕೆ ಕನ್ನಡಿ ಹಿಡಿದಂತೆ. ನಿಮ್ಮ ನಗು ನಿಮ್ಮ ವ್ಯಕ್ತಿತ್ವದ ಮಾಪನವನ್ನು ಮಾಡುತ್ತದೆ. ಸರಳ ಸುಂದರವಾದ ನಗು ನಿಮ್ಮಲ್ಲಿರುವ ಹೃದಯ ಶ್ರೀಮಂತಿಕೆಯನ್ನು ಹೊರಸೂಸುತ್ತದೆ. ಕುಹಕ ನಗು, ವ್ಯಂಗ್ಯ ನಗು, ಜಂಭದ ನಗು, ನಿಮ್ಮ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಪ್ರದರ್ಶಿಸುತ್ತದೆ. ಪ್ರಾಣಿಗಳಿಗೂ ನಗುವ ಗುಣವಿದ್ದು ಇದನ್ನು ಸಾಧಿಸಲು ವೈಜ್ಞಾನಿಕ ದಾಖಲೆಗಳಿಲ್ಲ ಆದರೆ ನಮ್ಮ ನಗು ತೋರ್ಪಡಿಕೆಯನ್ನು ಹೊಂದಿರುವುದರಿಂದ ನಗುವಿನ ಶಕ್ತಿ ಹೇಗಿದೆ ಎಂಬುದು ನಮಗೆ ತಿಳಿದಿದೆ. ಇಂದಿನ ಲೇಖನದಲ್ಲಿ ನಗುವಿನ ಕುರಿತಾದ ಕೆಲವೊಂದು ಆರೋಗ್ಯ ಗುಟ್ಟುಗಳನ್ನು ಹೇಳಲಿದ್ದೇವೆ. ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ.

ನಿರಂತರ ಕ್ರಿಯೆ
ರೋಗದಂತೆ, ನಗುವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ನೀವು ಇನ್ನೊಬ್ಬರನ್ನು ನೋಡಿ ನಕ್ಕರೆ ಇನ್ನೊಬ್ಬ ನಿಮ್ಮನ್ನು ನೋಡಿ ನಗುತ್ತಿರುತ್ತಾನೆ.

ಆಕರ್ಷಕರಾಗಿ ಕಾಣುತ್ತೀರಿ
ನಗು ನಗುತ್ತಾ ಇರುವ ಮಹಿಳೆಯರಿಗೆ ಸಂಗಾತಿಗಳು ಬೇಗನೇ ಸಿಗುತ್ತಾರೆ ಏಕೆಂದರೆ ಇವರು ನಗು ಅವರನ್ನು ಇವರತ್ತ ಆಕರ್ಷಿಸಿರುತ್ತದೆ. ನಿಮ್ಮ ಸೌಂದರ್ಯವನ್ನು ವೃದ್ಧಿಸುವಲ್ಲಿ ನಗು ಸಹಕಾರಿ.

ಸ್ನೇಹಿತರಂತೆ ಕಾಣುವುದು
ನೀವು ನಕ್ಕಾಗ, ನಿಮ್ಮನ್ನು ಇತರರು ನೀವೊಬ್ಬ ಒಳ್ಳೆಯ ವ್ಯಕ್ತಿ ಎಂದು ಗೌರವಿಸುತ್ತಾರೆ. ಅಂತೆಯೇ ಸ್ನೇಹಮಯ ವ್ಯಕ್ತಿತ್ವ ನಿಮ್ಮದು ಎಂದು ಅವರು ನಿಮಗೆ ಆಪ್ತರಾಗುತ್ತಾರೆ. ಇದರಿಂದ ನಿಮ್ಮ ಸಂಬಂಧ ಆರೋಗ್ಯಕರ ಹಾಗೂ ವೃದ್ಧಿಗೊಳ್ಳುತ್ತದೆ ಗಟ್ಟಿಗೊಳ್ಳುತ್ತದೆ.

ದೀರ್ಘಾಯಸ್ಸು
ನಗುತಾ ಇರುವ ವ್ಯಕ್ತಿಗೆ ಆಯಸ್ಸು ದೀರ್ಘವಾಗಿರುತ್ತದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ನಗುವುದಕ್ಕೆ ಯಾವುದೇ ದರವಿಲ್ಲ ಆದ್ದರಿಂದ ಮನಬಿಚ್ಚಿ ನಕ್ಕುಬಿಡಿ ದೀರ್ಘಕಾಲ ಬಾಳಿ.

ಬೆರೆಯುವ ಗುಣ
ಯಾವುದೇ ಪಾರ್ಟಿಗಳಿರಲಿ ಸಮಾರಂಭಗಳಿರಲಿ ನಗುವ ವ್ಯಕ್ತಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾರೆ ಅವರ ಸಾಮಿಪ್ಯ ಎಲ್ಲರಿಗೂ ಹಿತಕಾರಿ ಎಂದೆನಿಸುತ್ತದೆ. ಆದ್ದರಿಂದ ಪಾರ್ಟಿಯಲ್ಲಿ ನಗುವಿನ ಆಭರಣ ಧರಿಸಲು ಮರೆಯದಿರಿ!

ಸಂತೋಷ
ನಿಮ್ಮನ್ನು ಸಂತೋಷವಾಗಿರಿಸುವಲ್ಲಿ ನಗುವಿನ ಪಾತ್ರ ಹಿರಿದಾದುದು. ಬಾಯಿ ತುಂಬಾ ಮನಬಿಚ್ಚಿ ನಕ್ಕಾಗ ನಿಮ್ಮನ್ನು ನೀವು ತೆರೆದುಕೊಂಡಂತೆ ಕಾಣುತ್ತದೆ. ಆದ್ದರಿಂದ ನಗುವು ನಿಮ್ಮ ಮುಖದಲ್ಲಿ ಮಾಸದಿರಲಿ.



Click it and Unblock the Notifications